ಚಿನ್ನದ ಬೆಲೆ ಇತ್ತೀಚೆಗೆ ದಿನೇ ದಿನೇ ಏರಿಕೆ ಕಾಣುತ್ತಲೇ ಇದೆ. ಆದ್ದರಿಂದ ದೊಡ್ಡ ದೊಡ್ಡ ಹೂಡಿಕೆದಾರರು ಭವಿಷ್ಯದ ದೃಷ್ಟಿಯಿಂದ ಈಗಲೇ ಚಿನ್ನ, ಬೆಳ್ಳಿ ಮೇಲೆ ಹೂಡಿಕೆ ಮಾಡಲು ಶುರು ಮಾಡಿದ್ದಾರೆ. ಅದರಲ್ಲೂ ಕೇಂದ್ರ ಬ್ಯಾಂಕುಗಳು (Central Banks) ಚಿನ್ನವನ್ನು ಪ್ರಮುಖ ಆಸ್ತಿಯಾಗಿ ಪರಿಗಣಿಸಿದೆ.

ಹೌದು, ಕೇಂದ್ರ ಬ್ಯಾಂಕುಗಳು ಚಿನ್ನವನ್ನು ಹೂಡಿಕೆಗೆ ಉತ್ತಮ ಆಸ್ತಿ ಎಂದು ಪರಿಗಣಿಸಿದೆ. 2025ರ ಮೂರನೇ ತ್ರೈಮಾಸಿಕದಲ್ಲಿ ತಮ್ಮ ಚಿನ್ನದ ಸಂಗ್ರಹವನ್ನು ಮತ್ತಷ್ಟು ಹೆಚ್ಚಿಸಿಕೊಂಡಿವೆ ಎಂದು ವರದಿಯಾಗಿದೆ. ಸಾಂಪ್ರದಾಯಿಕವಾಗಿ ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಿರುವ ಕೇಂದ್ರ ಬ್ಯಾಂಕ್ ಇದೀಗ ಚಿನ್ನದ ಮೇಲಿನ ಹೂಡಿಕೆ ಬೆಸ್ಟ್ ಅಂದುಕೊಂಡಿದೆ. ಇನ್ನು ಕಳೆದ ವರ್ಷದಲ್ಲಿ ಚಿನ್ನದ ಬೆಲೆ ಏರಿಕೆಗೆ ಪ್ರಮುಖ ಕಾರಣವೇ ಕೇಂದ್ರ ಬ್ಯಾಂಕುಗಳ ಹೂಡಿಕೆ. ಹಾಗಿದ್ರೆ ಚಿನ್ನದ ಮೇಲೆ ಆರ್‌ಬಿಐ ಎಷ್ಟು ಹೂಡಿಕೆ ಮಾಡಿದೆ ಎಂಬುದರ ಮಾಹಿತಿ ಇಲ್ಲಿದೆ.
ಚಿನ್ನದ ಖರೀದಿಗೆ ಮುಂದಾದ ಕೇಂದ್ರ ಬ್ಯಾಂಕ್‌ಗಳು!
ವಿಶ್ವ ಚಿನ್ನ ಮಂಡಳಿ (WGC) ತನ್ನ ಇತ್ತೀಚಿನ ಗೋಲ್ಡ್ ಡಿಮ್ಯಾಂಡ್ ಟ್ರೆಂಡ್ಸ್ Q3 2025 ವರದಿಯಲ್ಲಿ, ಕೇಂದ್ರ ಬ್ಯಾಂಕುಗಳು ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ 220 ಟನ್ ನಿವ್ವಳ ಚಿನ್ನವನ್ನು ಸಂಗ್ರಹಿಸಿಟ್ಟುಕೊಂಡಿದೆ ಎಂದು ವರದಿ ಮಾಡಿದೆ. ಇದು ಹಿಂದಿನ ತ್ರೈಮಾಸಿಕಕ್ಕಿಂತ ಶೇ 28 ರಷ್ಟು ಹೆಚ್ಚಳ ಎಂದು ಹೇಳಲಾಗಿದೆ.
ಆರ್‌ಬಿಐ ಖರೀದಿಸಿದ ಚಿನ್ನ ಎಷ್ಟು?
ಭಾರತೀಯ ರಿಸರ್ವ್ ಬ್ಯಾಂಕ್ (RBI) ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಸುಮಾರು 600 ಕೆಜಿ ಚಿನ್ನವನ್ನು ತನ್ನ ಸಂಗ್ರಹಕ್ಕೆ ಸೇರಿಸಿದೆ ಎಂದು ವರದಿಯಾಗಿದೆ. ಅದರಲ್ಲೂ ಸೆಪ್ಟೆಂಬರ್ ಅಂತಿಮ ವಾರದಲ್ಲಿ ಒಟ್ಟು ಚಿನ್ನದ ಸಂಗ್ರಹ 880 ಟನ್‌ಗಳಿಗೆ ತಲುಪಿದೆ.
ಸೆಪ್ಟೆಂಬರ್ 30ಕ್ಕೆ ತ್ರೈಮಾಸಿಕ ಅಂತ್ಯಗೊಂಡಿದ್ದು, ಚಿನ್ನದ ಖರೀದಿ ಕಳೆದ ವರ್ಷದ ಇದೇ ಅವಧಿಯ 199.5 ಟನ್‌ಗಳಿಗೆ ಹೋಲಿಸಿದರೆ ಶೇ. 10% ರಷ್ಟು ಹೆಚ್ಚಳವಾಗಿದೆ. ಸತತ ಎರಡು ತ್ರೈಮಾಸಿಕಗಳ ಇಳಿಕೆಯ ನಂತರ ಮೂರನೇ ತ್ರೈಮಾಸಿಕದಲ್ಲಿ ಈ ಏರಿಕೆ ಕಂಡಿದೆ.
ಪ್ರಸಕ್ತ ವರ್ಷದ ಸೆಪ್ಟೆಂಬರ್‌ವರೆಗೂ ಕೇಂದ್ರ ಬ್ಯಾಂಕುಗಳ ಚಿನ್ನದ ಖರೀದಿ 634 ಟನ್‌ಗಳಿಗೆ ತಲುಪಿದೆ. ಅಂದರೆ 2024ರ ಮೊದಲ ಒಂಬತ್ತು ತಿಂಗಳಲ್ಲಿ ಖರೀದಿಸಿದ 724 ಟನ್‌ಗಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆ.
ಡಿಜಿಟಲ್ ಚಿನ್ನದ ಹೂಡಿಕೆಗಳು, ಎಕ್ಸ್‌ಚೇಂಜ್ ವ್ಯಾಪಾರ ನಿಧಿಗಳಲ್ಲಿ ಗಣನೀಯ ಬೆಳವಣಿಗೆಯನ್ನು ಕಂಡಿವೆ. ಇದು 221 ಟನ್‌ಗಳಿಗೆ ತಲುಪಿದ್ದು, ವರ್ಷದಿಂದ ವರ್ಷಕ್ಕೆ ಶೇ 134 ರಷ್ಟು ಹೆಚ್ಚಳ ಮತ್ತು ಹಿಂದಿನ ತ್ರೈಮಾಸಿಕಕ್ಕಿಂತ ಶೇ 30% ರಷ್ಟು ಹೆಚ್ಚಳ ಕಂಡಿದೆ.
ವರದಿಯ ಪ್ರಕಾರ, ಮೂರನೇ ತ್ರೈಮಾಸಿಕದಲ್ಲಿ ಕಜಕಿಸ್ತಾನ್‌ನ ರಾಷ್ಟ್ರೀಯ ಬ್ಯಾಂಕ್ 18 ಟನ್ ಚಿನ್ನ ಖರೀದಿಸುವ ಮೂಲಕ ಅಗ್ರ ಸ್ಥಾನದಲ್ಲಿದ್ದರೆ, ಬ್ರೆಜಿಲ್‌ನ ಕೇಂದ್ರ ಬ್ಯಾಂಕ್ 15 ಟನ್ ಚಿನ್ನ ಖರೀದಿಸಿ ಎರಡನೇ ಸ್ಥಾನದಲ್ಲಿದೆ. ಇದು 2021ರ ನಂತರ ಅದರ ಮೊದಲ ಖರೀದಿಯಾಗಿದೆ.
ಚಿನ್ನದ ಮೇಲಿನ ಹೂಡಿಕೆ ಕೇಂದ್ರ ಬ್ಯಾಂಕುಗಳು ಮಾತ್ರವಲ್ಲ, ಜನಸಾಮಾನ್ಯರಿಂದ ಹಿಡಿದು ರಾಜಕಾರಣಿಗಳು, ಬ್ಯುಸಿನೆಸ್‌ಮ್ಯಾನ್‌ಗಳು ಹೀಗೆ ಎಲ್ಲರೂ ಹೂಡಿಕೆ ಮಾಡುತ್ತಿದ್ದಾರೆ. ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುತ್ತಾರೆ. ಆದ್ರೆ ಚಿನ್ನದ ಮೇಲೆ ಹೂಡಿಕೆ ಮಾಡುವ ಮುನ್ನ ಮಾರುಕಟ್ಟೆ ಬೆಳವಣಿಗೆಗಳನ್ನು ತಿಳಿದುಕೊಳ್ಳುವುದು ಮುಖ್ಯ.
More From GoodReturns

ಆರ್‌ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್‌ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್‌ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಹಣದುಬ್ಬರ ದರ ಏರಿಕೆ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್‌ಬಿಐ ನಿರ್ಧಾರದ ಮುನ್ನ ನಿಮ್ಮ ಹಣ ಸುರಕ್ಷಿತವೇ?

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಆರ್‌ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್‌ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!



Click it and Unblock the Notifications