ಈ 10 ಕಂಪೆನಿಗಳಿಂದ ಒಂದೇ ವಾರದಲ್ಲಿ 1.37 ಲಕ್ಷ ಕೋಟಿ ಬಂಡವಾಳ ಹೆಚ್ಚಳ
ಭಾರತದ ಅತ್ಯಂತ ಮೌಲ್ಯಯುತ 10 ಕಂಪೆನಿಗಳು ಒಟ್ಟು ಸೇರಿ ಕಳೆದ ವಾರ (ಜೂನ್ 29ರಿಂದ ಜುಲೈ 3ರ ಮಧ್ಯೆ) 1,37,508.61 ಕೋಟಿ ರುಪಾಯಿಯನ್ನು ಷೇರು ಮಾರುಕಟ್ಟೆ ಮೌಲ್ಯಕ್ಕೆ ಸೇರ್ಪಡೆ ಮಾಡಿವೆ.
ಈ ಪೈಕಿ ಅತಿ ಹೆಚ್ಚಿನ ಮೌಲ್ಯ ಸೇರುವಂತೆ ಮಾಡಿರುವುದು ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್) ಹಾಗೂ ರಿಲಯನ್ಸ್ ಇಂಡಸ್ಟ್ರೀಸ್. ಇನ್ನು ಸೆನ್ಸೆಕ್ಸ್ ಸೂಚ್ಯಂಕವು ಒಟ್ಟಾರೆ 850.15 ಪಾಯಿಂಟ್ ಏರಿಕೆ ಕಂಡಿದೆ.

ಯಾವ ಕಂಪೆನಿಯ ಬಂಡವಾಳ ಮೌಲ್ಯ ಎಷ್ಟು ಹೆಚ್ಚಾಗಿದೆ ಎಂಬ ವಿವರ ಹೀಗಿದೆ:
ಟಿಸಿಎಸ್ 31,294.89 ಕೋಟಿ
ರಿಲಯನ್ಸ್ ಇಂಡಸ್ಟ್ರೀಸ್ 28,464.11 ಕೋಟಿ
ಎಚ್ ಡಿಎಫ್ ಸಿ 20,519.86 ಕೋಟಿ
ಐಟಿಸಿ 15,057.98 ಕೋಟಿ
ಭಾರ್ತಿ ಏರ್ ಟೆಲ್ 11,347.56 ಕೋಟಿ
ಎಚ್ ಡಿಎಫ್ ಸಿ ಬ್ಯಾಂಕ್ 10,211.92 ಕೋಟಿ
ಐಸಿಐಸಿಐ ಬ್ಯಾಂಕ್ 7,780.46 ಕೋಟಿ
ಇನ್ಫೋಸಿಸ್ 6,154.48 ಕೋಟಿ
ಹಿಂದೂಸ್ತಾನ್ ಯುನಿಲಿವರ್ 4,193.95 ಕೋಟಿ
ಕೊಟಕ್ ಮಹೀಂದ್ರಾ ಬ್ಯಾಂಕ್ 2,483.4 ಕೋಟಿ


Click it and Unblock the Notifications