ಕೊರೊನಾವೈರಸ್ ಹಾವಳಿಯಿಂದಾಗಿ ಇಡೀ ದೇಶದಲ್ಲಿ ಜನರು ವಿವಿಧ ರೀತಿಯಲ್ಲಿ ಸಾಕಷ್ಟು ನಷ್ಟವನ್ನು ಅನುಭವಿಸಿದ್ದಾರೆ. ಅನೇಕ ಕಂಪನಿಗಳು ಚೇತರಿಸಿಕೊಳ್ಳಲಾರದ ಮಟ್ಟವನ್ನು ತಲುಪಿವೆ. ಇನ್ನೂ ಕೆಲ ಕಂಪನಿಗಳು ಮುಂದುವರಿಯಲಾರದ ಪರಿಸ್ಥಿತಿಯಲ್ಲಿವೆ.
ಕೊರೊನಾ ಸಾಂಕ್ರಾಮಿಕದ ನಡುವೆ ಲಾಭಗಳಿಸಿದ ಅನೇಕ ಕಂಪನಿಗಳ ಉದಾಹರಣೆಯನ್ನು ನಾವು ನೋಡಬಹುದು. ಅಮೆರಿಕಾದಲ್ಲಿ ಅಮೆಜಾನ್, ಟೆಸ್ಲಾ ಕಂಪನಿಯು ವಿಶ್ವದಲ್ಲೇ ಅತಿ ಹೆಚ್ಚು ಲಾಭಗಳಿಸಿದವು. ಭಾರತದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಂಬಲು ಸಾಧ್ಯವಾಗದಷ್ಟು ಹೂಡಿಕೆದಾರರನ್ನು ಸೆಳೆದು ಜಿಯೋ ಪ್ಲಾಟ್‌ಫಾರ್ಮ್‌ಗಳನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ.
ಶೇಕಡಾ 178.50 ರಷ್ಟು ಲಾಭ ತಂದುಕೊಟ್ಟ ಷೇರು
ಷೇರುಪೇಟೆ ಸಾಕಷ್ಟು ಏರಿಳಿತಗಳ ನಡುವೆ ಮಾರ್ಚ್ 2021ರಲ್ಲಿ ಉತ್ತಮ ಲಾಭವನ್ನು ನೀಡಿದೆ. ಕೆಲ ಕಂಪನಿಗಳ ಷೇರುಗಳು ಒಂದೇ ತಿಂಗಳಿನಲ್ಲಿ ದುಪ್ಪಟ್ಟಾಗಿವೆ. ಇದಕ್ಕೆ ಒಂದು ಉದಾಹರಣೆಯಂತೆ ಆರ್ಕಿಡ್ ಫಾರ್ಮಾದ ಷೇರುಗಳು ಶೇಕಡಾ 178.50 ರಷ್ಟು ಲಾಭವನ್ನು ನೀಡಿವೆ. ಹೂಡಿಕೆದಾರರು 1 ತಿಂಗಳ ಹಿಂದೆ ಈ ಕಂಪನಿಯ 1 ಲಕ್ಷ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದರೆ, ಈಗ ಅವುಗಳ ಮೌಲ್ಯವು ಮೂರು ಪಟ್ಟು ಹೆಚ್ಚಾಗಿದೆ.
ಒಂದು ತಿಂಗಳಲ್ಲಿ ಈ ಕಂಪನಿಯ ಷೇರು ಬೆಲೆ 905 ರೂ.ಗಳಿಂದ 2527.90 ರೂ.ಗೆ ಏರಿದೆ. ಅಂದರೆ ಸುಮಾರು 1 ಲಕ್ಷ ರೂ.ಗಳ ಹೂಡಿಕೆ ಮಾಡಿದ್ದರೆ ಮೂರು ಲಕ್ಷ ರೂಪಾಯಿಗಳಿಗೆ ತಲುಪುತ್ತಿತ್ತು.
ಅದಾನಿ ಗ್ಯಾಸ್
ಕಳೆದ ತಿಂಗಳು ಅದಾನಿ ಗ್ಯಾಸ್ ಲಿಮಿಟೆಡ್‌ನ ಷೇರುಗಳಲ್ಲಿ ಯಾರಾದರೂ ಹೂಡಿಕೆ ಮಾಡಿದರೆ, ಅದಕ್ಕೂ ಅಪಾರ ಲಾಭವಾಗಿದೆ. ಅದಾನಿ ಗ್ಯಾಸ್ ಷೇರು 1 ತಿಂಗಳಲ್ಲಿ ಶೇಕಡಾ 101.86 ರಷ್ಟು ಲಾಭವನ್ನು ನೀಡಿದೆ. 1 ತಿಂಗಳಲ್ಲಿ ಷೇರು 516.50 ರೂ.ಗಳಿಂದ 1087.80 ರೂ.ಗೆ ಏರಿದೆ.
ಅದಾನಿ ಪವರ್
ಅದಾನಿ ಪವರ್‌ನ ಷೇರು ಒಂದು ತಿಂಗಳಲ್ಲಿ 89.3 ರೂ.ಗೆ ತಲುಪಿದೆ. ಹೀಗಾಗಿ, ಈ ಸ್ಟಾಕ್ ಒಂದು ತಿಂಗಳಲ್ಲಿ ಸುಮಾರು ಶೇಕಡಾ 60.18ರಷ್ಟು ಲಾಭವನ್ನು ನೀಡಿದೆ.
ಅದಾನಿ ಟ್ರಾನ್ಸ್‌ಮಿಷನ್
ಅದಾನಿ ಟ್ರಾನ್ಸ್‌ಮಿಷನ್‌ನ ಷೇರು ಒಂದು ತಿಂಗಳಲ್ಲಿ 999.2 ರೂ.ಗೆ ಇಳಿದಿದೆ. ಹೀಗಾಗಿ, ಈ ಷೇರು ಒಂದು ತಿಂಗಳಲ್ಲಿ ಸುಮಾರು 31.81 ಪ್ರತಿಶತದಷ್ಟು ಲಾಭವನ್ನು ನೀಡಿದೆ.
ಅದಾನಿ ಎಂಟರ್‌ಟ್ರೈನ್‌ಮೆಂಟ್
ಅದಾನಿ ಎಂಟರ್‌ಟೈನ್‌ಮೆಂಟ್‌ನ ಷೇರು ಒಂದು ತಿಂಗಳಲ್ಲಿ 1107.2 ರೂ.ಗೆ ಇಳಿದಿದೆ. ಹೀಗಾಗಿ, ಈ ಷೇರು ಒಂದು ತಿಂಗಳಲ್ಲಿ ಸುಮಾರು 30.03 ಪ್ರತಿಶತದಷ್ಟು ಲಾಭವನ್ನು ನೀಡಿದೆ.
ಇನ್ನು ಪ್ರಿಸ್ಮ್ ಜಾನ್ಸನ್‌ರ ಷೇರು ಒಂದು ತಿಂಗಳಲ್ಲಿ 134.05 ರೂ.ಗೆ ಇಳಿದಿದೆ. ಹೀಗಾಗಿ, ಈ ಷೇರು ಒಂದು ತಿಂಗಳಲ್ಲಿ ಸುಮಾರು 29.2 ಪ್ರತಿಶತದಷ್ಟು ಲಾಭವನ್ನು ನೀಡಿದೆ.


Click it and Unblock the Notifications