ಈಗಿನ ಕಾಲಮಾನದಲ್ಲಿ ಭಾರತದ ಜನರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಟ್ರಾಫಿಕ್ ಕೂಡ ಪ್ರಮುಖವೆಂದೆನಿಸಿ ಕೊಳ್ಳುತ್ತದೆ. ಹೌದು ಭಾರತದಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚಾದಂತೆ ಈ ಜನಸಂದಣಿ ಸಮಸ್ಯೆ ಕೂಡ ಹೆಚ್ಚಾಗ್ತಿದೆ. ಅದರಲ್ಲೂ ನಗರಗಳಲ್ಲಿ ಕಾಲಿಡದಷ್ಟು ಜನಸಂದಣಿಯನ್ನ ನಾವು ಕಾಣಬಹುದು. ಉದ್ಯೋಗ , ವ್ಯಾಪಾರ ಎಂದು ಹೇಳಿಕೊಂಡು ಸಾಕಷ್ಟು ಜನರು ಈಗಾಗಲೇ ಹಳ್ಳಿಗಳನ್ನ ತೊರೆದು ನಗರಗಳತ್ತ ಮುಖ ಮಾಡಿದ್ದಾರೆ. ಈ ಹಿನ್ನೆಲೆ ನಗರಗಳಲ್ಲಿ ಅತೀ ಹೆಚ್ಚು ಜನಸಂದಣಿಯನ್ನ ನಾವು ಕಾಣುವಂತಾಗಿದೆ.
ಇನ್ನು ಭಾರತದಲ್ಲಿ ಈ ಪ್ರಮುಖ ಎರಡು ನಗರಗಳು ಏಷ್ಯಾದಲ್ಲೇ ಅತ್ಯಂತ ಹೆಚ್ಚು ಟ್ರಾಫಿಕ್ ಎದುರಿಸುವ ನಗರಗಳೆಂದು ಗುರುತಿಸಿಕೊಂಡಿವೆ. ಆ ಎರಡು ನಗರಗಳು ಯಾವುವು ಎನ್ನುವುದನ್ನ ಇಲ್ಲಿ ತಿಳಿಯಿರಿ.

ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ 2023ರ ಪ್ರಕಾರ ಬೆಂಗಳೂರು ಏಷ್ಯಾದಲ್ಲೇ ಅತೀ ಹೆಚ್ಚು ಟ್ರಾಫಿಕ್ ಎದುರಿಸುವ ನಗರಗಳಲ್ಲಿ ಒಂದಾಗಿದೆ. ಇಲ್ಲಿ ಚಾಲಕ ಕೇವಲ 10 ಕಿಲೋ ಮೀಟರ್‌ಗಳು ಹೋಗಲು ಸುಮಾರು 28 ನಿಮಿಷ 10 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತಾನೆ ಎಂದು ವರದಿ ಹೇಳಿದೆ. ಅಲ್ಲದೆ ಈ ನಗರಗಳಲ್ಲಿ ಜನಸಂದಣಿ ಹೆಚ್ಚಿರುವುದರಿಂದ ಪೀಕ್ ಅವರ್‌ಗಳಲ್ಲಿ ವಾರ್ಷಿಕವಾಗಿ ಸುಮಾರು 132 ಗಂಟೆಗಳು ಈ ನಗರ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುತ್ತವೆ ಎಂದು ವರದಿ ತಿಳಿಸಿದೆ.
ಈ ವರದಿಗಳ ಪ್ರಕಾರ ಬೆಂಗಳೂರಿನಲ್ಲಿ ತೀವ್ರ ಟ್ರಾಫಿಕ್‌ನಿಂದಾಗಿ ತೊಂದರೆಗಳನ್ನ ಎದುರಿಸುತ್ತಿವೆ ಎನ್ನಲಾಗ್ತಿದೆ. ತ್ವರಿತ ಜನಸಂಖ್ಯೆಯ ಬೆಳವಣಿಗೆ ಮತ್ತು ವಿಸ್ತರಿಸುತ್ತಿರುವ ನಗರ ಮೂಲಸೌಕರ್ಯದಿಂದ ಇಲ್ಲಿ ಅತೀ ಹೆಚ್ಚು ಜನರು ಬರುವುದರಿಂದಾಗಿ ಟ್ರಾಫಿಕ್ ಸಮಸ್ಯೆ ಕೂಡ ಇಲ್ಲಿ ಉಲ್ಬಣವಾಗ್ತಿದೆ. ಟ್ರಾಫಿಕ್ ನಿರ್ವಹಣೆಯನ್ನು ಸುಧಾರಿಸಲು ಎಷ್ಟೇ ಕ್ರಮಗಳನ್ನ ತೆಗೆದುಕೊಂಡರೂ ಕೂಡ ಈ ನಗರದ ರಸ್ತೆಗಳು ಮಾತ್ರ ಎಷ್ಯಾದಲ್ಲೇ ಹೆಚ್ಚು ಜನಸಂದಣಿಯನ್ನ ಎದುರಿಸುತ್ತಿವೆ.
ಇನ್ನು ಬೆಂಗಳೂರು ನಗರವನ್ನ ಹೊರತುಪಡಿಸಿ, ಪಶ್ಚಿಮ ಭಾರತದ ಪುಣೆ ಕೂಡ ಅತ್ಯಂತ ಟ್ರಾಫಿಕ್ ಎದುರಿಸುವ ನಗರಗಳಲ್ಲಿ ಒಂದಾಗಿದೆ. 10 ಕಿಮೀಗೆ 27 ನಿಮಿಷ ಮತ್ತು 50 ಸೆಕೆಂಡುಗಳಲ್ಲಿ ದೀರ್ಘ ಪ್ರಯಾಣದ ಸಮಯದಲ್ಲಿ ಇದು ಎರಡನೇ ಸ್ಥಾನದಲ್ಲಿದೆ. ಫಿಲಿಪೈನ್ಸ್‌ನ ಮನಿಲಾ 10 ಕಿಮೀಗೆ 27 ನಿಮಿಷಗಳು ಮತ್ತು 20 ಸೆಕೆಂಡುಗಳು ಮತ್ತು ತೈವಾನ್‌ನ ತೈಚುಂಗ್ 10 ಕಿಮೀಗೆ 26 ನಿಮಿಷಗಳು ಮತ್ತು 50 ಸೆಕೆಂಡುಗಳು ತೆಗೆದುಕೊಳ್ಳುತ್ತವೆ. ಇದಲ್ಲದೆ ಇತರ ನಗರಗಳು ಸಹ ಇದೇ ರೀತಿಯ ಟ್ರಾಫಿಕ್ ಎದುರಿಸುತ್ತಿವೆ ಎಂದು ವರದಿ ತಿಳಿಸಿದೆ.
ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್, 55 ದೇಶಗಳು ಮತ್ತು 6 ಖಂಡಗಳಲ್ಲಿ 387 ನಗರಗಳನ್ನು ಒಳಗೊಂಡಿದೆ, ಸರಾಸರಿ ಪ್ರಯಾಣದ ಸಮಯ, ಇಂಧನ ವೆಚ್ಚಗಳು ಮತ್ತು CO2 ಹೊರಸೂಸುವಿಕೆಯ ಆಧಾರದ ಮೇಲೆ ನಗರಗಳನ್ನು ನಿರ್ಣಯಿಸುತ್ತದೆ. ಚಾಲಕರು, ಪಾದಚಾರಿಗಳು, ನಗರ ಯೋಜಕರು ಮತ್ತು ನೀತಿ ನಿರೂಪಕರು ದೈನಂದಿನ ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಲು ಇದು ಉಚಿತ, ಮೌಲ್ಯಯುತ ಮಾಹಿತಿಯನ್ನು ಒದಗಿಸುತ್ತದೆ.
ಜಾಗತಿಕ ಹೋಲಿಕೆಯಲ್ಲಿ, ಕಳೆದ ವರ್ಷ ವರದಿಯ ಪ್ರಕಾರ ಲಂಡನ್ ಅತ್ಯಂತ ಅತೀ ಹೆಚ್ಚು ಟ್ರಾಫಿಕ್ ಎದುರಿಸುವ ನಗರ ಕೇಂದ್ರವಾಗಿದೆ, ಪ್ರತಿ 10 ಕಿಮೀಗೆ ಸರಾಸರಿ 37 ನಿಮಿಷಗಳು ಮತ್ತು 20 ಸೆಕೆಂಡುಗಳ ಪ್ರಯಾಣದ ಸಮಯವನ್ನ ತೆಗೆದುಕೊಳ್ಳುತ್ತಿದೆ ಎಂದು ವರದಿಯಾಗಿತ್ತು.
ಬೆಂಗಳೂರಿನಲ್ಲಿ ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈವರ್ಷ ಅಪಘಾತಗಳು ಕಡಿಮೆಯಾಗಿವೆ ಎಂದು ಬೆಂಗಲೂರು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಬೆಂಗಳೂರು ಟ್ರಾಫಿಕ್ ಪೊಲೀಸ್ ಬುಧವಾರ ತನ್ನ ನಿರಂತರ ಪ್ರಯತ್ನಗಳ ನಂತರ ಮಾರಣಾಂತಿಕ ಅಪಘಾತಗಳಲ್ಲಿ ಶೇಕಡಾ 1.26 ರಷ್ಟು ಕಡಿಮೆಯಾಗಿದೆ ಮತ್ತು ಹಿಂದಿನ ವರ್ಷಕ್ಕೆ ಹೋಲಿಸಿದರೆ 2024 ರಲ್ಲಿ ಅಪಘಾತಗಳಿಂದ ಉಂಟಾದ ಸಾವುಗಳಲ್ಲಿ ಶೇಕಡಾ 1.90 ರಷ್ಟು ಇಳಿಕೆಯಾಗಿದೆ ಎಂದು ತಿಳಿಸಿದ್ದಾರೆ. ಮಾರಣಾಂತಿಕವಲ್ಲದ ಅಪಘಾತಗಳು ಶೇಕಡಾ 4.57 ರಷ್ಟು ತೀವ್ರ ಕುಸಿತವನ್ನು ಕಂಡಿದ್ದು, ಇದು 2023 ಕ್ಕೆ ಹೋಲಿಸಿದರೆ ಒಟ್ಟು ಅಪಘಾತಗಳಲ್ಲಿ ಒಟ್ಟಾರೆ ಶೇಕಡಾ 3.97 ರಷ್ಟು ಇಳಿಕೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 2024 ರಲ್ಲಿ 4,784 ಅಪಘಾತ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ 871 ಮಾರಣಾಂತಿಕ ಮತ್ತು 3,913 ಮಾರಣಾಂತಿಕವಲ್ಲದ ಪ್ರಕರಣಗಳಾಗಿವೆ. ಈ ಘಟನೆಗಳಲ್ಲಿ 893 ಸಾವನ್ನಪ್ಪಿದ್ದರೆ 4,052 ಮಂದಿ ಗಾಯಗೊಂಡಿದ್ದಾರೆ. ಆದಾಗ್ಯೂ, ದತ್ತಾಂಶವು ಸ್ವಯಂ ಅಪಘಾತ ಪ್ರಕರಣಗಳಲ್ಲಿ ಸ್ವಲ್ಪ 3.34 ಶೇಕಡಾ ಹೆಚ್ಚಳವನ್ನು ಬಹಿರಂಗಪಡಿಸಿದೆ. 210 ಅಂತಹ ಪ್ರಕರಣಗಳಲ್ಲಿ 212 ಜನರು ಪ್ರಾಣ ಕಳೆದುಕೊಂಡಿದ್ದಾರೆ. 2024 ರಲ್ಲಿ, ಬೆಂಗಳೂರು ನಗರದಲ್ಲಿ ವಿಶೇಷವಾಗಿ ಪಾದಚಾರಿ ಅಪಘಾತಗಳಿಗೆ ಸಂಬಂಧಿಸಿದ ಅತೀ ಹೆಚ್ಚು ಅಪಗಾತಗಳನ್ನ ನಿಯಂತ್ರಿಸಲು ಸಾಕಷ್ಟು ಕ್ರಮಗಳನ್ನ ತೆಗೆದುಕೊಳ್ಳಲಾಯಿತು. ಪ್ರಯತ್ನಗಳು ಫಲ ನೀಡಿವೆ ಮತ್ತು 2024 ರಲ್ಲಿ ಪಾದಚಾರಿಗಳ ಸಾವಿನಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಕಳೆದ ವರ್ಷ 2023ಕ್ಕೆ ಹೋಲಿಕೆ ಮಾಡಿದರೆ ಶೇಕಡಾ 23.17 ರಷ್ಟು ಕಡಿಮೆಯಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿದಂತೆ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.


Click it and Unblock the Notifications