ಕೋವಿಡ್ 19 ಆರ್ಥಿಕ ಹಿಂಜರಿತದ ಮಧ್ಯೆಯೂ 2020ರಲ್ಲಿ 7 ಶತಕೋಟ್ಯಧಿಪತಿ ಭಾರತೀಯರ ಒಟ್ಟು ಆಸ್ತಿಯಲ್ಲಿ ಈ ತನಕ 6400 ಕೋಟಿ ಅಮೆರಿಕನ್ ಡಾಲರ್ ಗೂ ಜಾಸ್ತಿ ಮೊತ್ತ (4,67,200 ಕೋಟಿ ರುಪಾಯಿಗೂ ಹೆಚ್ಚು) ಹೆಚ್ಚಳವಾಗಿದೆ. ಈ 7 ಶತಕೋಟ್ಯಧಿಪತಿಗಳ ಒಟ್ಟು ಆಸ್ತಿ ಡಿಸೆಂಬರ್ 11, 2020ಕ್ಕೆ 200 ಕೋಟಿ ಅಮೆರಿಕನ್ ಡಾಲರ್ ಸಮೀಪದಲ್ಲಿದೆ ($ 194.39 ಬಿಲಿಯನ್).
ಬ್ಲೂಮ್ ಬರ್ಗ್ ಬಿಲಿಯನೇರ್ ಸೂಚ್ಯಂಕದ ಮಾಹಿತಿ ಪ್ರಕಾರ, ಈ ವರ್ಷ 50 ಪರ್ಸೆಂಟ್ ಹೆಚ್ಚಳವಾಗಿದೆ. ಕಳೆದ ಶುಕ್ರವಾರದ ಲೆಕ್ಕಾಚಾರದ ಪ್ರಕಾರ, 1 ಬಿಲಿಯನ್ ಅಮೆರಿಕನ್ ಡಾಲರ್ ಅಂದರೆ, 7364 ಕೋಟಿ ರುಪಾಯಿ ಆಗುತ್ತಿತ್ತು. ಹಾಗೆ ಲೆಕ್ಕ ಹಾಕಿ ನೋಡಿದರೆ ಕೆಲವರ ಆಸ್ತಿಯಲ್ಲಿ ಲಕ್ಷಾಂತರ ಕೋಟಿ ರುಪಾಯಿ ಏರಿಕೆ ಆಗಿದೆ.
ಗೌತಮ್ ಅದಾನಿ
ಮೊದಲ ತಲೆಮಾರಿನ ಉದ್ಯಮಿ ಗೌತಮ್ ಅದಾನಿ ಆಸ್ತಿಯು ನವೀಕೃತ ಇಂಧನ, ಬಂದರು, ಟರ್ಮಿನಲ್ ಮತ್ತಿತರ ವಲಯಗಳಲ್ಲಿ ಇವೆ. ಅವರ ಆಸ್ತಿಯು 2110 ಕೋಟಿ ಅಮೆರಿಕನ್ ಡಾಲರ್ ಈ ವರ್ಷವೇ ಹೆಚ್ಚಳ ಆಗಿದೆ. ಸದ್ಯಕ್ಕೆ ಗೌತಮ್ ಅದಾನಿ ಆಸ್ತಿ ಮೌಲ್ಯ 3240 ಕೋಟಿ ಅಮೆರಿಕನ್ ಡಾಲರ್ ಇದ್ದು, ಕಳೆದ ವರ್ಷದ ಕೊನೆಗೆ 1130 ಕೋಟಿ ಅಮೆರಿಕನ್ ಡಾಲರ್ ಇತ್ತು.
ಮುಕೇಶ್ ಅಂಬಾನಿ
ಇನ್ನು ಭಾರತದ ಅತ್ಯಂತ ಶ್ರೀಮಂತರ ಮುಕೇಶ್ ಅಂಬಾನಿ ಆಸ್ತಿಗೆ ಈ ವರ್ಷ 1810 ಕೋಟಿ ಅಮೆರಿಕನ್ ಡಾಲರ್ ಸೇರ್ಪಡೆ ಆಗಿ, ಒಟ್ಟು ಮೊತ್ತ 7670 ಕೋಟಿ ಯುಎಸ್ ಡಿಗೆ ಏರಿಕೆ ಆಗಿದೆ. ಕಳೆದ ವರ್ಷದ ಕೊನೆಗೆ ಅಂಬಾನಿಯ ಆಸ್ತಿ ಮೌಲ್ಯ 5860 ಕೋಟಿ ಅಮೆರಿಕನ್ ಡಾಲರ್ ಇತ್ತು. ಭಾರತದ ಅತ್ಯಂತ ಮೌಲ್ಯಯುತ ಕಂಪೆನಿಯಾದ ರಿಲಯನ್ಸ್ ಇಂಡಸ್ಟ್ರೀಸ್ ಅನ್ನು ಮುಕೇಶ್ ಅಂಬಾನಿ ಮುನ್ನಡೆಸುತ್ತಾರೆ. ತೈಲ, ಅನಿಲ, ಟೆಲಿಕಾಂ, ರೀಟೇಲ್ ವಲಯ ಹೀಗೆ ನಾನಾ ಉದ್ಯಮಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಹೊಂದಿದೆ.
ಸೈರಸ್ ಪೂನಾವಾಲ
"ವ್ಯಾಕ್ಸಿನ್ (ಲಸಿಕೆ) ಕಿಂಗ್ ಆಫ್ ಇಂಡಿಯಾ" ಎನಿಸಿಕೊಳ್ಳುವ ಸೈರಸ್ ಪೂನಾವಾಲ ಅವರಿಗೆ ಸೇರಿದ ಸೆರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಕೊರೊನಾ ಹೋರಾಟದ ಮುಂಚೂಣಿಯಲ್ಲಿದೆ. ಅವರ ಆಸ್ತಿಯಲ್ಲಿ 691 ಕೋಟಿ ಅಮೆರಿಕನ್ ಡಾಲರ್ ಹೆಚ್ಚಳ ಆಗಿದ್ದು, ಒಟ್ಟು ಆಸ್ತಿ ಮೊತ್ತ 1560 ಕೋಟಿ ಯುಎಸ್ ಡಿ ಆಗಿದೆ. ಪುಣೆ ಮೂಲದ ಸೆರಮ್ ಲಿಸ್ಟ್ ಆಗದ ಸಂಸ್ಥೆ. ಇದು ವಿಶ್ವದಲ್ಲೇ ಅತಿ ದೊಡ್ಡ ಲಸಿಕೆ ಉತ್ಪಾದಕ ಸಂಸ್ಥೆ.
ಶಿವ್ ನಾಡಾರ್, ಅಜೀಂ ಪ್ರೇಮ್ ಜೀ
ಎಚ್ ಸಿಎಲ್ ಟೆಕ್ನಾಲಜೀಸ್ ಶಿವ್ ನಾಡಾರ್, ವಿಪ್ರೋದ ಅಜೀಂ ಪ್ರೇಮ್ ಜೀ ಇವರಿಬ್ಬರು ತಮ್ಮ ಆಸ್ತಿಯನ್ನು 1200 ಕೋಟಿ ಅಮೆರಿಕನ್ ಡಾಲರ್ ಹೆಚ್ಚು ಮಾಡಿಕೊಂಡಿದ್ದಾರೆ. ಭಾರತದ ಮೂರನೇ ಅತಿ ದೊಡ್ಡ ಐಟಿ ರಫ್ತುದಾರ ಸಂಸ್ಥೆ ಎಚ್ ಸಿಎಲ್ ಟೆಕ್ನಾಲಜೀಸ್. ಅವರ ಆಸ್ತಿ ಮೌಲ್ಯ 2200 ಕೋಟಿ ಅಮೆರಿಕನ್ ಡಾಲರ್ ಇದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ಇಲ್ಲಿಯ ತನಕ 629 ಕೋಟಿ ಅಮೆರಿಕನ್ ಡಾಲರ್ ಹೆಚ್ಚಳವಾಗಿದೆ. ಇನ್ನು ವಿಪ್ರೋದ ಅಜೀಂ ಪ್ರೇಮ್ ಜೀ ಆಸ್ತಿ 526 ಕೋಟಿ ಅಮೆರಿಕನ್ ಡಾಲರ್ ಏರಿಕೆಯಾಗಿ, 2360 ಕೋಟಿ ಯುಎಸ್ ಡಿಯನ್ನು ಮುಟ್ಟಿದೆ.
ರಾಧಾಕಿಶನ್ ದಮಾನಿ
ಸೆಲೆಬ್ರಿಟಿ ಹೂಡಿಕೆದಾರರು ಮತ್ತು ಡಿ ಮಾರ್ಟ್ ಮಾಲೀಕರಾದ ರಾಧಾಕಿಶನ್ ದಮಾನಿ ಆಸ್ತಿ 471 ಕೋಟಿ ಅಮೆರಿಕನ್ ಡಾಲರ್ ಹೆಚ್ಚಳವಾಗಿ, 1440 ಕೋಟಿ ಯುಎಸ್ ಡಿ ತಲುಪಿದೆ. ಇನ್ನು ಸನ್ ಫಾರ್ಮಾದ ದಿಲೀಪ್ ಶಾಂಘ್ವಿ ಈಗ 969 ಕೋಟಿ ಯುಎಸ್ ಡಿ ಆಸ್ತಿಯನ್ನು ಹೊಂದಿದ್ದಾರೆ. ಅವರ ಆಸ್ತಿಯಲ್ಲಿ ಈ ವರ್ಷ 223 ಕೋಟಿ ಅಮೆರಿಕನ್ ಡಾಲರ್ ಹೆಚ್ಚಳವಾಗಿದೆ. ಬಹುತೇಕ ಶ್ರೀಮಂತರ ಆಸ್ತಿಯಲ್ಲಿ ಹೆಚ್ಚಳವಾಗುವುದಕ್ಕೆ ಕಾರಣ ಆಗಿರುವುದು ಷೇರು ಮಾರುಕಟ್ಟೆಯಲ್ಲಿ ಕಂಡುಬಂದ ಭರ್ಜರಿ ಗಳಿಕೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications