1 ವರ್ಷದ ಈ ಪುಟಾಣಿಗೆ ಇನ್ ಸ್ಟಾಗ್ರಾಮ್ ನಲ್ಲಿ 14 ಲಕ್ಷ ಫಾಲೋವರ್ಸ್

"Chef Kobe" ಎಂಬ ಹೆಸರಿನ ಪುಟಾಣಿಗೆ ಖಾತೆ ತೆರೆದ ಒಂದು ತಿಂಗಳೊಳಗೆ ಇನ್ ಸ್ಟಾಗ್ರಾಮ್ ನಲ್ಲಿ ಹದಿನಾಲ್ಕು ಲಕ್ಷ ಮಂದಿ ಫಾಲೋವರ್ ಗಳಾಗಿದ್ದಾರೆ. ಒಂದು ವರ್ಷದ ಈ ಮಗುವಿನ ಪೋಷಕರು ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ಅದಕ್ಕೆ "Kobe Eats" ಎಂಬ ಹ್ಯಾಂಡಲ್ ನೀಡಲಾಗಿದೆ. "Chef Kobe" ಅಡುಗೆ ಮಾಡುವುದಕ್ಕೆ, ಊಟ ಮಾಡಲು ಮತ್ತು ಅಡುಗೆಮನೆಯಲ್ಲಿ ಏನೇನಿದೆ ಎಂದು ಅನ್ವೇಷಿಸಲು ಬಯಸುತ್ತಿರುವುದಾಗಿ ತಿಳಿಸಲಾಗಿದೆ.

ಬಟರ್ ಚಿಕನ್, ನಾನ್ ನಿಂದ ಮಾಕ್ ಮತ್ತು ಚೀಸ್ ತನಕ ಎಲ್ಲ ಬಗೆಯ ಅಡುಗೆಗಳನ್ನು ಹೇಗೆ ಮಾಡುವುದು ಎಂಬ ವಿಡಿಯೋ ಪಾಠ ಹೇಳಿಕೊಡಲಾಗುತ್ತದೆ.

"ನನ್ನ ಅಮ್ಮನ ಜತೆ ಬಟರ್ ಚಿಕನ್ ಹಾಗೂ ನಾನ್ ಮಾಡ್ತೀನಿ! ಈ ಸ್ಟೌ ಮೇಲೆ ಸಾಕಷ್ಟು ಕೆಲಸಗಳನ್ನು ಮಾಡಲು ಆಕೆ ಸಹಾಯ ಮಾಡುತ್ತಾಳೆ. ನಾನು ಕೆಲವು ತಪ್ಪು ಮಾಡ್ತೇನೆ. ಆದರೆ ಓಕೆ. ಇದನ್ನು ಮಾಡಲು ತುಂಬ ಸಂತೋಷ ಆಗುತ್ತದೆ!!! ನಾನ್ ತಿನ್ನುವಾಗ ಇಷ್ಟವಾಗುತ್ತದೆ. ನನಗೆ ನಾನ್ ಅಂದರೆ ಪ್ರೀತಿ" ಎಂದು ವಿಡಿಯೋ ಕ್ಯಾಪ್ಷನ್ ಮೂರು ದಿನಕ್ಕೆ ಮುಂಚೆ ನೀಡಲಾಗಿದೆ.

1 ವರ್ಷದ ಈ ಪುಟಾಣಿಗೆ ಇನ್ ಸ್ಟಾಗ್ರಾಮ್ ನಲ್ಲಿ 14 ಲಕ್ಷ ಫಾಲೋವರ್ಸ್

ಲಕ್ಷಾಂತರ ಮಂದಿ ನೋಡಿದ್ದಾರೆ. ಈ ವಿಡಿಯೋಗೆ 6700 ಕಾಮೆಂಟ್ ಗಳು ಬಂದಿವೆ. "ಅವನು ಬಹಳ ಮುದ್ದಾಗಿದ್ದಾನೆ ಮತ್ತು ಅವನಿಗೆ ಕ್ಯಾಂಡಿಯೇ ಇಷ್ಟವಾಗುತ್ತೆ. ಅವನಾಗಿಯೇ ಬೇರೆ ಯಾವುದನ್ನೂ ರುಚಿ ನೋಡಲ್ಲ ಅನಿಸುತ್ತೆ" ಎಂದು ಫಾಲೋವರ್ ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇಂಡೋನೇಷ್ಯಾದ ಆಹಾರ ಮಾಡಬಹುದಾ ಎಂದು ಮತ್ತೊಬ್ಬ ಫಾಲೋವರ್ ಕೇಳಿದ್ದಾರೆ. ಸಿಎನ್ ಎನ್ ವರದಿ ಪ್ರಕಾರ, ತನ್ನ ಕುಟುಂಬದವರು ಹಾಗೂ ಸ್ನೇಹಿತರ ಜತೆಗೆ ಹಂಚಿಕೊಳ್ಳಬೇಕು ಎಂಬ ಕಾರಣಕ್ಕೆ ವಿಡಿಯೋ ಮಾಡಲು ಆರಂಭಿಸಿದ್ದರು ಆ ಮಗುವಿನ ತಾಯಿ. "Kobe Eats" ಇನ್ ಸ್ಟಾಗ್ರಾಮ್ ನಲ್ಲಿ ಆರಂಭವಾದದ್ದು ಫೆಬ್ರವರಿ ಕೊನೆಗೆ. ಏಪ್ರಿಲ್ 15ನೇ ತಾರೀಕಿನವರೆಗೆ 200 ಫಾಲೋವರ್ಸ್ ಮಾತ್ರ ಇದ್ದರು. ಆ ನಂತರ ಮಾತಿನ ಮೂಲಕ ಪ್ರಚಾರ ಸಿಕ್ಕಿ, ದೊಡ್ಡ ಮಟ್ಟದಲ್ಲಿ ಫಾಲೋವರ್ಸ್ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+