ಕೆಲವು ಭಾರತೀಯ ಕ್ರಿಕೆಟಿಗರು, ಮೈದಾನದಲ್ಲಿ ಶ್ರೇಷ್ಠ ಆಟಗಾರಾಗಿರುವುದು ಮಾತ್ರವಲ್ಲದೇ, ವಿಶ್ವದ ಸಿರಿವಂತ ಕ್ರೀಡಾಪಟುಗಳು ಆಗಿದ್ದಾರೆ. ಪಂದ್ಯಗಳನ್ನು ಆಟವಾಡುವುದರ ಜೊತೆಗೆ, ಐಷಾರಾಮಿ ಬ್ರ್ಯಾಂಡ್ ಗಳೊಂದಿಗೆ ಅಂಬಾಸಿಡರ್ ಆಗಿ, ಜಾಹೀರಾತುಗಳಲ್ಲಿ ಭಾಗಿಯಾಗಿ ಅಪಾರ ಹಣ ಸಂಪಾದಿಸುತ್ತಾರೆ.
ಈ ಕ್ರಿಕೆಟಿಗರೆಲ್ಲರೂ ಐಷಾರಾಮಿ ಕಾರುಗಳು, ಬಂಗಲೆಗಳು ಮತ್ತು ದುಬಾರಿ ಫ್ಲಾಟ್‌ಗಳ ಮಾಲೀಕರಾಗಿದ್ದಾರೆ. ಪ್ರಸ್ತುತ ಟೀಂ ಇಂಡಿಯಾ ನಾಯಕನಾಗಿರುವ ರೋಹಿತ್ ಶರ್ಮಾ 53 ಅಂತಸ್ತಿನ ಐಷಾರಾಮಿ ಟವರ್ ನ 29ನೇ ಮಹಡಿಯಲ್ಲಿ ವಾಸವಾಗಿದ್ದು, ಇದರ ಬೆಲೆ 30 ಕೋಟಿ ರೂ. ಆಗಿದೆ. ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಗುರುಗ್ರಾಮ್‌ನಲ್ಲಿ 80 ಕೋಟಿ ರೂಪಾಯಿಗಳ ಐಷಾರಾಮಿ ವಿಲ್ಲಾದ ಒಡೆಯರಾಗಿದ್ದಾರೆ.

ಕ್ರಿಕೆಟ್ ದೇವರು ಎಂದೇ ಹೆಸರುವಾಸಿಯಾಗಿರುವ ಸಚಿನ್ ತೆಂಡೂಲ್ಕರ್ ಅವರು ಮುಂಬೈನ ಬಾಂದ್ರಾದಲ್ಲಿ 80 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಮಾಲೀಕರಾಗಿದ್ದಾರೆ. ಆದರೆ, ಸಚಿನ್, ವಿರಾಟ್, ರೋಹಿತ್ ಮತ್ತು ಎಂಎಸ್ ಧೋನಿ ಹಾಗೂ ಇತರ ಕ್ರಿಕೆಟಿಗರು ವಾಸಿಸುತ್ತಿರುವಂತಹ ಮನೆಗಿಂತಲೂ, ಅತ್ಯಂತ ದುಬಾರಿ ಬೆಲೆಯ ವಾಸಿಸುತ್ತಿರುವ ಭಾರತೀಯ ಕ್ರಿಕೆಟಿಗರೊಬ್ಬರಿದ್ದಾರೆ ಅವರೇ ಮೃದುಲಾ ಜಡೇಜಾ.
ಮೃದುಲಾ ಅವರು ಗುಜರಾತ್ ಮೂಲದವರಾಗಿದ್ದು, ರಾಜ್‌ಕೋಟ್‌ನಲ್ಲಿರುವ ರಂಜಿತ್ ವಿಲ್ಲಾ ಅರಮನೆಯಲ್ಲಿ ನೆಲೆಸಿದ್ದಾರೆ. ಮೃದುಲಾ ಕುಮಾರಿ ಜಡೇಜಾ ಮಂಧಾತಸಿನ್ಹ್ ಜಡೇಜಾ ಅವರ ಮಗಳಾಗಿದ್ದಾರೆ. ಇವರು ಪ್ರಸ್ತುತ 225 ಎಕರೆಗಳಷ್ಟು ವಿಸ್ತಾರವಾದ ಎಸ್ಟೇಟ್‌ನಲ್ಲಿರುವ ವೈಭವೋಪೇತ ಅರಮನೆಯಾದ "ರಂಜಿತ್ ವಿಲಾಸ್" ವಾಸಿಸುತ್ತಿದ್ದಾರೆ. ಮೃದುಲಾ ಕ್ರಿಕೆಟಿಗರಾಗಿರುವುದು ಮಾತ್ರವಲ್ಲದೇ ಮಾತ್ರವಲ್ಲದೇ ರಾಜ್‌ಕೋಟ್‌ನ ರಾಜಮನೆತನ ಕುಟುಂಬದ ಭಾಗವಾಗಿದ್ದಾರೆ.

ಈ ಐಷಾರಾಮಿ ಪ್ಯಾಲೇಸ್ ಗೋಥಿಕ್ ವಾಸ್ತುಶಿಲ್ಪವನ್ನು ಒಳಗೊಂಡಿದ್ದು, ಆರು ಎಕರೆ ಪ್ರದೇಶದಷ್ಟು ವಿಸ್ತಾರವಾಗಿದ್ದು, 150 ಕೊಠಡಿಗಳನ್ನು ಒಳಗೊಂಡಿದೆ. ಇನ್ನೊಂದು ಕುತೂಹಲಕಾರಿ ವಿಚಾರವೆಂದರೆ, ವಿಂಟೇಜ್ ಐಷಾರಾಮಿ ಕಾರುಗಳಿಗಾಗಿಯೇ ಈ ಅರಮನೆಯಲ್ಲಿ ಬೃಹತ್ ಗ್ಯಾರೇಜ್ ಕೂಡಾ ಇದೆ.
ಈ ಅರಮನೆಯು ವಿಶಿಷ್ಟವಾದ ಆಕರ್ಷಣೆಯನ್ನು ಹೊಂದಿದ್ದು, ಸಾಮಾನ್ಯವಾಗಿ ಅರಮನೆಗಳು ಐಷರಾಮಿ ಹೋಟೆಲ್‌ಗಳಾಗಿ ಪರಿವರ್ತನೆ ಮಾಡುವ ಬದಲಾಗಿ, ಇದು ಹಿಂದಿನ ರಾಜವಂಶದ ವಂಶಸ್ಥರಿಗೆ ಇನ್ನೂ ನೆಲೆಯಾಗಿದೆ.

ಈ ಭವ್ಯವಾದ ಎಸ್ಟೇಟ್‌ನ ಹಿರಿಮೆಯನ್ನು ಮೃದುಲಾ ಜಡೇಜಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಮತ್ತೊಂದು ಕುತೂಹಲಕಾರಿ ವಿಚಾರವೆಂದರೆ, ಈ ಅರಮನೆಯಲ್ಲಿ ಭಾರತದ ಅತ್ಯಂತ ದುಬಾರಿ ರಾಜಮನೆತನದ ವಿವಾಹವನ್ನು ಆಯೋಜಿಸಲಾಗಿತ್ತು.
ರಂಜಿತ್ ವಿಲಾಸ್ ಅರಮನೆಯು 4,500 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಲೇಕ್ ಫಾರ್ಮ್, ಬೆಳ್ಳಿ ರಥ, ಆಭರಣಗಳು ಮತ್ತು ಹಲವಾರು ವಿಂಟೇಜ್ ವಾಹನಗಳು ಒಳಗೊಂಡಿದೆ.
ಇನ್ನು ಮೃದುಲಾ ಅವರ ಕ್ರಿಕೆಟ್ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಅವರು ಸೌರಾಷ್ಟ್ರ ಆಡಿರುವುದು ಮಾತ್ರವಲ್ಲದೇ ದೇಶೀಯ ತಂಡದ ನಾಯಕತ್ವವನ್ನು ಸಹ ನಿರ್ವಹಿಸಿದ್ದಾರೆ. ಅವರು ತಮ್ಮ ಕೆರಿಯರ್ ನಲ್ಲಿ 46 ಸೀಮಿತ ಓವರ್‌ಗಳ ಪಂದ್ಯಗಳು, 36 T20ಗಳು ಮತ್ತು 1 ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದಾರೆ. ಇದಕ್ಕೂ ಹಿಂದೆ, ಪಶ್ಚಿಮ ವಲಯವನ್ನು ಪ್ರತಿನಿಧಿಸಿದ್ದ ಮೃದುಲಾ ಅವರು ಆಲ್ ರೌಂಡರ್ ಎಂದು ಪರಿಗಣಿಸಲ್ಪಟ್ಟಿದ್ದಾರೆ.


Click it and Unblock the Notifications