ಬೆಂಗಳೂರಿನಲ್ಲಿ ಅಮೆರಿಕ ಕಾನ್ಸುಲೇಟ್‌ ಕಚೇರಿ; ಮೋದಿ ಬೆಂಬಲವಿಲ್ಲದ ಈ ಮೈಲುಗಲ್ಲು ಸಾಧ್ಯವಿಲ್ಲ: ತೇಜಸ್ವಿ ಸೂರ್ಯ

ಹೊಸ ವರ್ಷ 2025ರ ಎರಡನೇ ವಾರದಲ್ಲಿ ಬೆಂಗಳೂರಿನಲ್ಲಿ ಅಮೆರಿಕ ಕಾನ್ಸುಲೇಟ್ ಕಚೇರಿ ಆರಂಭವಾಗಲಿದೆ ಇದೊಂದು ಐತಿಹಾಸಿಕ ಹೆಜ್ಜೆಯಾಗಲಿದೆ. ಪ್ರಧಾನಿ ಮೋದಿ ಬೆಂಬಲವಿಲ್ಲದ ಈ ಮೈಲುಗಲ್ಲು ಸಾಧ್ಯವಿಲ್ಲ ಎಂದು ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಈ ಕುರಿತು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ವೀಸಾ ಪ್ರಕ್ರಿಯೆ ಮತ್ತಷ್ಟು ಸುಲಭ

ಇನ್ಮುಂದೆ ಬೆಂಗಳೂರಿನಲ್ಲಿ ವೀಸಾ ಪ್ರಕ್ರಿಯೆ ಮತ್ತಷ್ಟು ಸುಲಭವಾಗುತ್ತದೆ.ನಗರದಲ್ಲಿ ಕಾನ್ಸುಲೇಟ್ ಆರಂಭಿಸುವ ಕುರಿತು ಭಾರತದಲ್ಲಿರುವ ಅಮೆರಿಕ ರಾಯಭಾರಿ ಎರಿಕ್​ ಗರ್ಸೆಟ್ಟಿ ಘೋಷಿಸಿದ್ದಾರೆ. ಇದರಿಂದ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಬಲಪಡಿಸಲು ಮತ್ತಷ್ಟು ಸಹಾಯವಾಗುತ್ತದೆ.

ಮೋದಿ ಬೆಂಬಲವಿಲ್ಲದ ಈ ಮೈಲುಗಲ್ಲು ಸಾಧಿಸಲು ಸಾಧ್ಯವಿಲ್ಲ:ಬಿಜೆಪಿ ಸಂಸದ

ಜನರ ದೀರ್ಘಕಾಲದ ಬೇಡಿಕೆ ನೇರವೇರುತ್ತಿದೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಮೆರಿಕ ಕಾನ್ಸುಲೇಟ್ ಕಚೇರಿ ತೆರೆಯುವುದು ನಗರದ ಜನರ ದೀರ್ಘಕಾಲದಲ್ಲೂ ಬೇಡಿಕೆ ಇತ್ತು. 2019ರಿಂದಲೂ ಕಚೇರಿ ಆರಂಭಿಸುವಂತೆ ಮನವಿ ಮಾಡಲಾಗುತ್ತಿತ್ತು. ಭಾರತದ ಐಟಿ ಆದಾಯದಲ್ಲಿ ಬೆಂಗಳೂರಿನ ಕೊಡುಗೆ ಶೇ 40ರಷ್ಟಿದ್ದು, ಲಕ್ಷಾಂತರ ಟೆಕ್​ ಉದ್ಯೋಗಿಗಳು ವಾಸವಿದ್ದಾರೆ. ಆದರೆ, ಅಮೆರಿಕ ವೀಸಾ ಸಂಬಂಧಿತ ಸೇವೆಗಳು ಬಂದಾಗ ಬೆಂಗಳೂರಿನವರು ನೆರೆಯ ಹೈದರಾಬಾದ್​ ಅಥವಾ ಚೆನ್ನೈಗೆ ತೆರಳಬೇಕಿತ್ತು. ಇದನ್ನು ನಾನು ಸಂಸದನಾಗಿ ಪೂರೈಸುವುದು ನನ್ನ ಧ್ಯೇಯವಾಗಿದೆ ಎಂದು ಬರೆದುಕೊಂಡಿದ್ದಾರೆ.

2019ರಲ್ಲಿ ಕಾನ್ಸುಲೇಟ್ ಕಚೇರಿ ತೆರೆಯುವ ಬಗ್ಗೆ ಪತ್ರ ಬರೆದಿದೆ.

ಭಾರತ ಅಮೆರಿಕ ಸಂಬಂಧದಲ್ಲಿ ಬೆಂಗಳೂರು ನಿರ್ಣಾಯಕ ಪಾತ್ರ ಹೊಂದಿದ್ದು, ಇಲ್ಲಿ ಕಾಲ್ಸುಲೇಟ್ ಕಚೇರಿ ತೆಗೆಯುವ ಅಗತ್ಯತೆಯ ಕುರಿತು ವಿದೇಶಾಂಗ ಸಚಿವ ಎಸ್.ಜೈಶಂಕರ್​ ಅವರಿಗೆ ನವೆಂಬರ್​ 2019ರಲ್ಲಿ ಪತ್ರ ಬರೆಯಲಾಗಿತ್ತು. ಮಾರ್ಚ್ 2023 ರಲ್ಲಿ ಅವರ ಬೆಂಗಳೂರು ಭೇಟಿಯ ಸಮಯದಲ್ಲಿ ಕ್ರಮವನ್ನು ಜಾರಿಗೊಳಿಸುವ ಭರವಸೆ ನೀಡಿದರು. ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ 750 ಬಹುರಾಷ್ಟ್ರೀಯ ಕಂಪನಿಗಳಿದ್ದು, ಇದರಲ್ಲಿ 270 ಅಮೆರಿಕ ಮೂಲದ ಘಟಕಗಳಿವೆ. ಅಮೆರಿಕದಿಂದ ಅತೀ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಉದ್ಯಮಿಗಳು ಭಾರತಕ್ಕೆ ಆಗಮಿಸುತ್ತಾರೆ ಎಂದರು.

ಮಾರ್ಚ್ 2023 ರಲ್ಲಿ ಅವರ ಬೆಂಗಳೂರು ಭೇಟಿಯ ಸಮಯದಲ್ಲಿ ಕ್ರಮವನ್ನು ಜಾರಿಗೊಳಿಸುವ ಭರವಸೆ ನೀಡಿದರು.ಮಾರ್ಚ್ 2023 ರಲ್ಲಿ ಅವರ ಬೆಂಗಳೂರು ಭೇಟಿಯ ಸಮಯದಲ್ಲಿ ಕ್ರಮವನ್ನು ಜಾರಿಗೊಳಿಸುವ ಭರವಸೆ ನೀಡಿದರು.

ಪ್ರಧಾನಿ ಮೋದಿ ಬೆಂಬಲವಿಲ್ಲದ ಈ ಮೈಲುಗಲ್ಲು ಸಾಧಿಸಲು ಸಾಧ್ಯವಿಲ್ಲ

ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಡಾ.ಜೈಶಂಕರ್​ ಅವರ ಬೆಂಬಲವಿಲ್ಲದೇ ಈ ಮೈಲಿಗಲ್ಲು ಸಾಧಿಸಲು ಸಾಧ್ಯವಿಲ್ಲ. ಬೆಂಗಳೂರಿನ ಆಸಕ್ತಿಯನ್ನು ಪ್ರೋತ್ಸಾಹಿಸುವ ಮತ್ತು ದೀರ್ಘಕಾಲದ ಬೇಡಿಕೆಯನ್ನು ಪೂರ್ಣಗೊಳಿಸುವಲ್ಲಿ ಅವರು ಬದ್ಧತೆ ಹೊಂದಿದ್ದಾರೆ. ಇದೇ ವೇಳೆ ನಾನು ಅಮೆರಿಕ ರಾಯಭಾರಿ ಕೆನ್ನೆತ್​ ಜುಸ್ಟರ್​ ಮತ್ತು ಎರಿಕ್​ ಗರ್ಸೆಟ್ಟಿ ಅವರ ಬೆಂಬಲಕ್ಕೂ ಧನ್ಯವಾದ ತಿಳಿಸುತ್ತೇನೆ ಎಂದು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+