ರತನ್ ಟಾಟಾರ ಟಾಟಾ ಗ್ರೂಪ್ ವಿಶ್ವದಲ್ಲೇ ಅತೀ ಗೌರವಯುತ ಉದ್ಯಮವಾಗಿದೆ. ವಹಿವಾಟು ದಕ್ಷತೆ, ನೀತಿ ವಿಚಾರದಲ್ಲಿ ಹೆಸರುವಾಸಿಯಾದ ಸಂಸ್ಥೆ ಇದಾಗಿದೆ. ಹಾಗೆಯೇ ಸ್ಟಾಕ್ ಮಾರುಕಟ್ಟೆಯಲ್ಲಿ ರತನ್ ಟಾಟಾ ಗ್ರೂಪ್ ಎಂದಿಗೂ ಹೆಚ್ಚು ರಿಟರ್ನ್ ಪಡೆಯುವ ಸ್ಟಾಕ್ ಆಗಿದೆ. ಟಾಟಾ ಗ್ರೂಪ್‌ನ ಹಲವಾರು ಸಂಸ್ಥೆಗಳು ಸ್ಟಾಕ್ ಮಾರುಕಟ್ಟೆಯಲ್ಲಿ ಶೈನ್ ಆಗಿದೆ.
ಈ ಲೇಖನದಲ್ಲಿ ನಾವು ರತನ್ ಟಾಟಾ ಸಂಸ್ಥೆಯ ಸ್ಟಾಕ್ ಒಂದರ ಬಗ್ಗೆ ಮಾಹಿತಿ ನೀಡಿದ್ದೇವೆ. ಅತೀ ಕಡಿಮೆ ಹೂಡಿಕೆ ಮಾಡಿ ಭಾರೀ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗಿರುವ ಸ್ಟಾಕ್ ಬಗ್ಗೆ ವಿವರಣೆ ನೀಡಿದ್ದೇವೆ. ಅದುವೇ ಟೈಟಾನ್ ಕಂಪನಿ ಸ್ಟಾಕ್ ಆಗಿದೆ. ಟೈಟಾನ್ ಜಿಂಗಲ್ ನಿಮಗೆ ನೆನಪಿದೆ ಅಲ್ಲವೇ?, ಟೈಟಾನ್ ವಾಚ್ ಸಂಸ್ಥೆಯು ಹಲವಾರು ದಶಕಗಳಿಂದ ಒಂದು ಗುರುತಾಗಿ ಉಳಿದುಕೊಂಡಿದೆ. ಹಾಗೆಯೇ ನಂಬಿಕಾರ್ಹ ವಾಚ್ ಬ್ರ್ಯಾಂಡ್ ಎನಿಸಿಕೊಂಡಿದೆ. ಟೈಟಾನ್ ಬ್ರ್ಯಾಂಡ್ ಕಪಲ್ ವಾಚ್, ವಿವಾಹಕ್ಕೆ ಉಡುಗೊರೆಯಾಗಿ ನೀಡುವ ವಾಚ್, ಇತರೆ ವಾಚ್‌ಗಳನ್ನು ಮಾರಾಟ ಮಾಡುತ್ತದೆ.
ಫಾಸ್ಟ್‌ಟ್ರ್ಯಾಕ್ ಬ್ರ್ಯಾಂಡ್ ಕೂಡಾ ಇದರ ಅಡಿಯಲ್ಲಿ ಬರುತ್ತದೆ. ಸಂಸ್ಥೆಯು ತನ್ನ ಬ್ರ್ಯಾಂಡ್ ಐಡೆಂಟಿಟಿಯನ್ನು ಹಲವಾರು ದಶಕಗಳಿಂದ ಉಳಿಸಿಕೊಂಡು ಬಂದಿದೆ. ಹಾಗಿರುವಾಗ ಷೇರು ಮಾರುಕಟ್ಟಯಲ್ಲಿ ಟೈಟಾನ್ ಷೇರುಗಳು ಶೈನ್ ಆಗುವುದರಲ್ಲಿ ಆಶ್ಚರ್ಯವೇನಿಲ್ಲ. ಈ ಷೇರು ಬಗ್ಗೆ ಅಧಿಕ ಮಾಹಿತಿ ಈ ಕೆಳಗಿದೆ ಮುಂದೆ ಓದಿ..
ಟೈಟಾನ್ ಷೇರು ಬೆಲೆ ಎಷ್ಟು ಏರಿಕೆ?
ಕಳೆದ ಕೆಲವು ತಿಂಗಳುಗಳಲ್ಲಿ ಟೈಟಾನ್ ಭಾರೀ ಲಾಭವನ್ನು ನೀಡುತ್ತಿದೆ. ಕಳೆದ ದಶಕಗಳಿಂದ ಈ ಸ್ಟಾಕ್ ಮೇಲೆ ಯಾರು ಹೂಡಿಕೆ ಮಾಡಿದ್ದಾರೋ ಅವರ ಹೂಡಿಕೆಗೆ ಅತೀ ಅಧಿಕ ರಿಟರ್ನ್ ಲಭ್ಯವಾಗಿದೆ. ಕಳೆದ 14 ವರ್ಷಗಳ ಹಿಂದೆ ಟೈಟಾನ್ ಷೇರು ಬೆಲೆ 40 ರೂಪಾಯಿ ಆಗಿತ್ತು. ಆದರೆ ಈಗ ಷೇರು ಬೆಲೆ 2470 ರೂಪಾಯಿಗೆ ಏರಿಕೆಯಾಗಿದೆ. 2011ರ ಬಳಿಕ ಈ ಷೇರುಗಳನ್ನು ಯಾರು ಖರೀದಿ ಮಾಡಿದ್ದಾರೋ ಅವರು ಉತ್ತಮ ರಿಟರ್ನ್ ಅನ್ನು ಪಡೆದಿದ್ದಾರೆ. ಇದಕ್ಕೂ ಹಿಂದೆ ಹೂಡಿಕೆ ಮಾಡಿದವರು ಬೋನಸ್ ಷೇರಿನ ಲಾಭ ಪಡೆಯುತ್ತಿದ್ದಾರೆ.
120,000,000 ರೂಪಾಯಿ ರಿಟರ್ನ್
2009ರಲ್ಲಿ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಟೈಟಾನ್ ಸ್ಟಾಕ್‌ನ ಬೆಲೆಯು ಇಳಿಕೆಯಾಗಿತ್ತು, 38.20 ರೂಪಾಯಿಗೆ ತಲುಪಿತ್ತು. ಯಾರು 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೋ ಅವರು 2600 ಷೇರುಗಳನ್ನು ಪಡೆದಿದ್ದಾರೆ. ಸಂಸ್ಥೆಯು 1:1 ಅನುಪಾತದಲ್ಲಿ ಸ್ಟಾಕ್ ಅನ್ನು 2011ರಲ್ಲಿ ಲೀಸ್ಟ್ ಮಾಡಿದೆ. ಇದರ ಲೆಕ್ಕಾಚಾರದಲ್ಲಿ ಹೂಡಿಕೆದಾರರ ಬಳಿ ಒಟ್ಟಾಗಿ 52000 ಸ್ಟಾಕ್‌ಗಳು ಇದ್ದಂತೆ ಆಗಿತ್ತು. ಆದರೆ ಫೆಬ್ರವರಿ 10, 2023ರಲ್ಲಿ ಷೇರು ಬೆಲೆಯು 2468 ರೂಪಾಯಿಗೆ ಏರಿಕೆಯಾಗಿದೆ. ಅಂದರೆ 2009ರಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದವರು ಈಗ 12.35 ಲಕ್ಷ ರೂಪಾಯಿ ಅಥವಾ 120,000,000 ರೂಪಾಯಿ ರಿಟರ್ನ್ ಅನ್ನು ಪಡೆದಿದ್ದಾರೆ.
ಇಲ್ಲಿ ಗಮನಿಸಿ
ಈ ಮೇಲಿನ ಲೇಖನವನ್ನು ಬರೀ ಮಾಹಿತಿ ನೀಡುವ ಸಲುವಾಗಿ ಪ್ರಕಟಿಸಲಾಗಿದೆ. ಅಧಿಕ ರಿಟರ್ನ್ ಅನ್ನು ಯಾವ ಸ್ಟಾಕ್ ನೀಡಿದೆ ಎಂಬ ಆಧಾರದಲ್ಲಿ ಈ ಲೇಖನ ಪ್ರಕಟಿಸಿದ್ದೇವೆ. ಯಾವುದೇ ಸ್ಟಾಕ್ ಖರೀದಿ ಮಾಡುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ. ಲೇಖನದ ಆಧಾರದ ಮೇಲೆ ನೀವು ಯಾವುದೇ ನಿರ್ಧಾರವನ್ನು ಕೈಗೊಂಡರೂ ಅದರಿಂದ ಉಂಟಾಗುವ ನಷ್ಟಕ್ಕೆ ಗ್ರೇನಿಯಮ್ ಸಂಸ್ಥೆಯಾಗಲಿ ಅಥವಾ ಲೇಖಕರಾಗಲಿ, ಸಂಬಂಧಿತ ಬ್ರೋಕರೇಜ್ ಸಂಸ್ಥೆಯಾಗಲಿ ಜವಾಬ್ದಾರರಾಗಿರುವುದಿಲ್ಲ.


Click it and Unblock the Notifications