For Quick Alerts
ALLOW NOTIFICATIONS  
For Daily Alerts

ಈ ಷೇರಿನಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿದ್ದವರ ಹಣ, 1 ವರ್ಷದಲ್ಲಿ 10 ಲಕ್ಷ ರೂ. ಆಗಿದೆ!

|

ಷೇರುಪೇಟೆಯು ಹೂಡಿಕೆದಾರರನ್ನು ಕೆಲವೇ ದಿನಗಳಲ್ಲಿ ಶ್ರೀಮಂತರನ್ನಾಗಿ ಮಾಡಿಬಿಡಬಹುದು, ಅದೇ ರೀತಿಯಲ್ಲಿ ನಷ್ಟದ ತಳ ಮುಟ್ಟಿಸಬಹುದು. ಇತ್ತೀಚಿನ ಕೆಲವು ವಾರಗಳಲ್ಲಿ ಭಾರತೀಯ ಷೇರುಪೇಟೆ ಸತತ ಏರಿಕೆಯೊಂದಿಗೆ ದಾಖಲೆಯ ಮಟ್ಟದತ್ತ ದಾಪುಗಾಲಿಟ್ಟಿದೆ.

 

ಹೂಡಿಕೆದಾರರ ಸಂಪತ್ತನ್ನ ದ್ವಿಗುಣಗೊಳಿಸಿರುವ ಷೇರುಗಳು ಕಡಿಮೆ ಏನಿಲ್ಲ. ಇದೇ ಸಾಲಿನಲ್ಲಿ ಮ್ಯಾಗ್ಮಾ ಫಿನ್‌ಕಾರ್ಪ್‌ನ ಷೇರು ಒಂದು ವರ್ಷದಲ್ಲಿ ತನ್ನ ಷೇರುದಾರರಿಗೆ ಶೇಕಡಾ 919ರಷ್ಟು ಆದಾಯವನ್ನು ನೀಡಿದೆ.

1 ಲಕ್ಷ ರೂಪಾಯಿ ಈಗ 10 ಲಕ್ಷ ರೂಪಾಯಿ

1 ಲಕ್ಷ ರೂಪಾಯಿ ಈಗ 10 ಲಕ್ಷ ರೂಪಾಯಿ

2020 ರ ಜೂನ್ 8 ರಂದು 15.30 ರೂ.ಗೆ ತಲುಪಿದ್ದ ಷೇರು ಇಂದು ಬಿಎಸ್‌ಇಯಲ್ಲಿ 160 ರೂಪಾಯಿಗೆ ಹೆಚ್ಚಿನ ಮಟ್ಟದಲ್ಲಿದೆ. ಒಂದು ವರ್ಷದ ಹಿಂದೆ ಮ್ಯಾಗ್ಮಾ ಫಿನ್‌ಕಾರ್ಪ್ ಷೇರುಗಳಲ್ಲಿ ಒಂದು ಲಕ್ಷ ರೂ. ಹೂಡಿಕೆ ಮಾಡಿದ್ದವರ ಸಂಪತ್ತು ಇಂದು 10.21 ಲಕ್ಷ ರೂ. ಆಗಿರಲಿದೆ.

ಈ ವರ್ಷದಲ್ಲಿ ಶೇ. 290.63ರಷ್ಟು ಏರಿಕೆ

ಈ ವರ್ಷದಲ್ಲಿ ಶೇ. 290.63ರಷ್ಟು ಏರಿಕೆ

ಕಳೆದ ವರ್ಷದ ವಹಿವಾಟುಗಳಿಗೆ ಹೋಲಿಸಿದರೆ ಸೆನ್ಸೆಕ್ಸ್ ಈ ಅವಧಿಯಲ್ಲಿ ಶೇ. 52.16ರಷ್ಟು ಏರಿಕೆಯಾಗಿದೆ. ಮ್ಯಾಗ್ಮಾ ಫಿನ್‌ಕಾರ್ಪ್ ಪಾಲು 5 ದಿನ, 20 ದಿನ, 50 ದಿನ, 100 ದಿನ ಮತ್ತು 200 ದಿನಗಳ ಸರಾಸರಿಗಿಂತ ಹೆಚ್ಚಿನ ವಹಿವಾಟು ನಡೆಸುತ್ತಿದೆ. ಈ ವರ್ಷದ ಆರಂಭದಿಂದ ಈ ಷೇರು ಶೇ. 290.63ರಷ್ಟು ಗಳಿಸಿದೆ. ಆದರೆ ಸಂಸ್ಥೆಯ ಮಾರುಕಟ್ಟೆ ಕ್ಯಾಪ್ 11,927 ಕೋಟಿ ರೂ.ಗೆ ಇಳಿದಿದೆ.

ಈ ಷೇರಿನ ಬೆಲೆ ಕೇವಲ 10 ದಿನದಲ್ಲಿ ಡಬಲ್ ಆಗಿದೆ!ಈ ಷೇರಿನ ಬೆಲೆ ಕೇವಲ 10 ದಿನದಲ್ಲಿ ಡಬಲ್ ಆಗಿದೆ!

ಆದರ್‌ ಪೂನಾವಾಲ್ಲಾ ಸಂಸ್ಥೆಯಿಂದ ಪಾಲು ಖರೀದಿ?
 

ಆದರ್‌ ಪೂನಾವಾಲ್ಲಾ ಸಂಸ್ಥೆಯಿಂದ ಪಾಲು ಖರೀದಿ?

ಫೆಬ್ರವರಿ 2021 ರಲ್ಲಿ ಆದರ್ ಪೂನವಾಲ್ಲಾ ಸಂಸ್ಥೆಯ ರೈಸಿಂಗ್ ಸನ್ ಹೋಲ್ಡಿಂಗ್ಸ್ ಮತ್ತು ಇಬ್ಬರು ಪ್ರಮೊಟರ್ ಗ್ರೂಪ್ ಸಂಸ್ಥೆಯಲ್ಲಿ ಪಾಲು ಖರೀದಿಸಲು ಸಿದ್ಧರಾಗಿದ್ದಾರೆ ಎಂಬ ವರದಿಗಳು ಬಿತ್ತರವಾಗುತ್ತಿದ್ದಂತೆ ಈ ಷೇರುಗಳ ಅದ್ಭುತ ಏರಿಕೆಗೆ ಕಾರಣವಾಗಿದೆ. ಮಾರ್ಚ್ ಆರಂಭದಲ್ಲಿ, ಕಂಪನಿಯ ಷೇರುದಾರರು ರೈಸಿಂಗ್ ಸನ್ ಹೋಲ್ಡಿಂಗ್ಸ್‌ಗೆ ಆದ್ಯತೆಯ ಇಕ್ವಿಟಿ ಷೇರುಗಳನ್ನು ನೀಡುವ ಮೂಲಕ 3,456 ಕೋಟಿ ರೂ.ಗಳನ್ನು ಸಂಗ್ರಹಿಸುವ ಯೋಜನೆಗೆ ಅನುಮೋದನೆ ನೀಡಿದರು.

ಬಜಾಜ್ ಫೈನಾನ್ಸ್‌ ಷೇರು ಶೇ. 126ರಷ್ಟು ಜಿಗಿತ

ಬಜಾಜ್ ಫೈನಾನ್ಸ್‌ ಷೇರು ಶೇ. 126ರಷ್ಟು ಜಿಗಿತ

ಮುಂಬೈ ಮೂಲದ ಬ್ಯಾಂಕೇತರ ಹಣಕಾಸು ಕಂಪನಿಯ ಷೇರುಗಳು ಕಳೆದ ಒಂದು ವರ್ಷದಲ್ಲಿ ತನ್ನ ಸ್ಪರ್ಧಿಗಳನ್ನ ಮೀರಿಸಿದೆ. ಈ ಅವಧಿಯಲ್ಲಿ ಬಜಾಜ್ ಫೈನಾನ್ಸ್ ಷೇರು ಶೇ. 129.6 ಏರಿಕೆಯಾಗಿದೆ.

ಮತ್ತೊಂದು ಪ್ರತಿಸ್ಪರ್ಧಿ ಮುತೂಟ್ ಫೈನಾನ್ಸ್‌ನ ಷೇರು ಒಂದು ವರ್ಷದಲ್ಲಿ ಶೇ. 63.27ರಷ್ಟು ಗಳಿಸಿದೆ. ಕಳೆದ ವರ್ಷ ಜೂನ್ 8 ರಿಂದ ಬಜಾಜ್ ಹೋಲ್ಡಿಂಗ್ಸ್ ಷೇರು ಕೇವಲ ಶೇ. 39.79ರಷ್ಟು ಹೆಚ್ಚಾಗಿದೆ.

 

Read more about: share market sensex nifty
English summary

This Stock Value Up Rs 1 lakh To Rs 10 Lakh In 1 Year: Know More

Share of Magma Fincorp has delivered 919% returns to its shareholders in one year. The stock, which closed at Rs 15.30 on June 8, 2020, rose to Rs 155 on BSE today.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X