For Quick Alerts
ALLOW NOTIFICATIONS  
For Daily Alerts

TikTok 150 ಕೋಟಿಯಷ್ಟು ಡೌನ್ ಲೋಡ್; ಭಾರತ ಟಾಪ್

|

ಬೀಜಿಂಗ್, ನವೆಂಬರ್ 17: ಸಾಮಾಜಿಕ ವಿಡಿಯೋ ಅಪ್ಲಿಕೇಷನ್ TikTok ಜಗತ್ತಿನಾದ್ಯಂತ 150 ಕೋಟಿಯಷ್ಟು ಡೌನ್ ಲೋಡ್ ಆಗಿದೆ. ಅಪ್ಲಿಕೇಷನ್ ಸ್ಟೋರ್ ಹಾಗೂ ಗೂಗಲ್ ಪ್ಲೇ ಎಲ್ಲವೂ ಸೇರಿ ಈ ಸಂಖ್ಯೆ ತಲುಪಿದೆ. ಇದರಲ್ಲಿ ಭಾರತದಲ್ಲಿ ಡೌನ್ ಲೋಡ್ ಆದ ಲೆಕ್ಕವೇ 46.68 ಕೋಟಿ. ಅಂದರೆ ಒಟ್ಟು ಡೌನ್ ಲೋಡ್ ನ 31 ಪರ್ಸೆಂಟ್ ನಷ್ಟು ಭಾರತದಲ್ಲೇ ಆಗಿದೆ.

2019ರಲ್ಲಿ ಈ ಅಪ್ಲಿಕೇಷನ್ 61.4 ಕೋಟಿಯಷ್ಟು ಡೌನ್ ಲೋಡ್ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆರು ಪರ್ಸೆಂಟ್ ಜಾಸ್ತಿ ಎಂದು ಮೊಬೈಲ್ ಇಂಟೆಲಿಜೆನ್ಸ್ ಸಂಸ್ಥೆ ಸೆನ್ಸಾರ್ ಟವರ್ ತಿಳಿಸಿದೆ.

ಇದರಲ್ಲಿ ಭಾರತವೇ ಮುಂಚೂಣಿಯಲ್ಲಿದೆ. 2019ರಲ್ಲಿ 27.76 ಕೋಟಿಯಷ್ಟು ಡೌನ್ ಲೋಡ್ ಆಗಿದೆ. ಜಾಗತಿಕ ಮಟ್ಟಕ್ಕೆ ಹೋಲಿಸಿ ಹೇಳುವುದಾದರೆ, ಒಟ್ಟಾರೆ ಡೌನ್ ಲೋಡ್ ನ ಶೇಕಡಾ 45ರಷ್ಟು. ಎರಡನೇ ಸ್ಥಾನದಲ್ಲಿ ಚೀನಾ ಇದ್ದು, ಅಲ್ಲಿ 4.55 ಕೋಟಿ ಅಥವಾ 7.4 ಪರ್ಸೆಂಟ್, 3ನೇ ಸ್ಥಾನದಲ್ಲಿ ಯು.ಎಸ್., 3.76 ಕೋಟಿ ಅಥವಾ 6 ಪರ್ಸೆಂಟ್ ಗಿಂತ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಡೌನ್ ಲೋಡ್ ಆಗಿದೆ. ಈ ಸಂಖ್ಯೆಯಲ್ಲಿ ಥರ್ಡ್ ಪಾರ್ಟಿ ಆಂಡ್ರಾಯಿಡ್ ಸ್ಟೋರ್ ನ ಲೆಕ್ಕಾಚಾರ ಇಲ್ಲ ಎನ್ನಲಾಗಿದೆ.

TikTok 150 ಕೋಟಿಯಷ್ಟು ಡೌನ್ ಲೋಡ್; ಭಾರತ ಟಾಪ್

ಸದ್ಯಕ್ಕೆ 61.4 ಕೋಟಿಯಷ್ಟು ಡೌನ್ ಲೋಡ್ ಆಗುವ ಮೂಲಕ TikTok ಮೂರನೇ ಅತಿ ಹೆಚ್ಚು ಡೌನ್ ಲೋಡ್ ಆದ ನಾನ್ ಗೇಮಿಂಗ್ ಅಪ್ಲಿಕೇಷನ್ ಎಂಬ ಕೀರ್ತಿಗೆ ಪಾತ್ರವಾಗಿದೆ. ಮೊದಲ ಸ್ಥಾನದಲ್ಲಿ 70.74 ಕೋಟಿ ಡೌನ್ ಲೋಡ್ ಮೂಲಕ ವಾಟ್ಸಾಪ್, ಎರಡನೇ ಸ್ಥಾನದಲ್ಲಿ ಫೇಸ್ ಬುಕ್ ಮೆಸೆಂಜರ್ (63.62 ಕೋಟಿ) ಇದೆ. ನಾಲ್ಕನೇ ಸ್ಥಾನದಲ್ಲಿ ಫೇಸ್ ಬುಕ್ (58.7 ಕೋಟಿ), ಐದನೇ ಸ್ಥಾನದಲ್ಲಿ ಇನ್ ಸ್ಟಾಗ್ರಾಮ್ (37.62 ಕೋಟಿ) ಇದೆ.

ಫೆಬ್ರವರಿ, 2019ರಲ್ಲಿ TikTok 100 ಕೋಟಿ ಡೌನ್ ಲೋಡ್ ಮೈಲುಗಲ್ಲು ದಾಟಿತು. ಆ ನಂತರ ಕೇವಲ ಒಂಬತ್ತು ತಿಂಗಳಲ್ಲಿ 50 ಕೋಟಿ ಡೌನ್ ಲೋಡ್ ಆಗಿದೆ.

Read more about: india ಭಾರತ
English summary

TikTok 150 Crore Hits Globally; India On Top Spot

Social video application TikTok hits 150 crore globally. India top on the chart. Here is the complete details of the story.
Story first published: Sunday, November 17, 2019, 11:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X