For Quick Alerts
ALLOW NOTIFICATIONS  
For Daily Alerts

ಹೊಸ ಹೆಸರಿನ ಮೂಲಕ ಭಾರತಕ್ಕೆ ಮತ್ತೆ ಕಾಲಿಡಲಿದೆ ಟಿಕ್‌ಟಾಕ್‌?

|

ಭಾರತದಲ್ಲಿ ಸಾಕಷ್ಟು ಯುವ ಜನತೆಯ ಮನಗೆದ್ದಿದ್ದ ಕಿರು ವೀಡಿಯೋಗಳ ಅಪ್ಲಿಕೇಶನ್ ಟಿಕ್‌ಟಾಕ್ ಬ್ಯಾನ್ ಆದ ಬಳಿಕ ಇದೀಗ ಮತ್ತೆ ದೇಶಕ್ಕೆ ಕಾಲಿಡಲಿದೆ ಎಂಬ ಸುದ್ದಿ ಹರಿದಾಡಿದೆ. ಇತ್ತೀಚಿನ ಕೆಲ ವರದಿ ಪ್ರಕಾರ ಚೀನಾದ ಬೈಟ್‌ ಡ್ಯಾನ್ಸ್ ಒಡೆತನದ ಟಿಕ್‌ಟಾಕ್ ಭಾರತ ಪ್ರವೇಶಕ್ಕೆ ಸಿದ್ಧವಾಗಿದೆ ಎಂದು ವರದಿಯಾಗಿದೆ.

2020ರಲ್ಲಿ ಡೇಟಾ ಸೋರಿಕೆ ಕುರಿತಾಗಿ ಚೀನಾ ಅಪ್ಲಿಕೇಶನ್ ಟಿಕ್‌ಟಾಕ್ ಅನ್ನು ಕೇಂದ್ರ ಸರ್ಕಾರ ನಿಷೇಧಗೊಳಿಸಿತ್ತು. ಇದಾದ ಬಳಿಕ ಈ ವರ್ಷದ ಜನವರಿಯಲ್ಲಿ ಟಿಕ್‌ಟಾಕ್‌ ಮಾತೃ ಸಂಸ್ಥೆ ಬೈಟ್‌ಡ್ಯಾನ್ಸ್‌ ಭಾರತದಲ್ಲಿನ ಕಚೇರಿಯನ್ನು ಮುಚ್ಚಿತು. ಆದರೆ ಆ್ಯಪ್ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ಮುಂದುವರಿಸಿದೆ.

ಹೊಸ ಹೆಸರಿನ ಮೂಲಕ ಭಾರತಕ್ಕೆ ಮತ್ತೆ ಕಾಲಿಡಲಿದೆ ಟಿಕ್‌ಟಾಕ್‌?

ಇನ್ನು ಟಿಕ್‌ಟಾಕ್ ಮರು ಎಂಟ್ರಿ ಕುರಿತಾಗಿ ಟ್ವಿಟರ್‌ನ ಟಿಪ್‌ಸ್ಟಾರ್ ಮುಕುಲ್ ಶರ್ಮಾ ಅವರು ಚೀನಾ ಕಂಪನಿಯು ಟಿಕ್‌ಟಾಕ್ (Tik Tock) ಎಂಬ ಹೊಸ ಹೆಸರಿನ ಮೂಲಕ ಮತ್ತು ಹೊಸ ಡಿಸೈನ್ ಹಾಗೂ ಟ್ರೇಡ್‌ ಮಾರ್ಕ್‌ನೊಂದಿಗೆ ನೋಂದಾಯಿಸಿದೆ ಎಂದು ಬಹಿರಂಗಪಡಿಸಿದ್ದಾರೆ.

ಈ ಹಿಂದಿದ್ದ TikTok ಎಂಬ ಹೆಸರನ್ನು TiKTock ಎಂದು ಬದಲಾಯಿಸಲು ಕಂಪನಿ ಮುಂದಾಗಿದೆ ಎಂದು ಶರ್ಮಾ ಹೇಳಿದ್ದಾರೆ. ಭಾರತದಲ್ಲಿ ಹೊಸದಾಗಿ ಜಾರಿಯಿರುವ ಐಟಿ ನಿಯಮಗಳು 2021ರ ಕಾಯ್ದೆಯನ್ವಯ ಭಾರತಕ್ಕೆ ಮತ್ತೆ ಕಾಲಿಡಲು ಬೈಟ್‌ಡ್ಯಾನ್ಸ್ ಪ್ರಯತ್ನಿಸುತ್ತಿದೆ.

Read more about: tiktok
English summary

TiKTok May Return To India As TiKTock: ByteDance Files For Trademark

ByteDance, TikTok’s parent company, filed a trademark application for TickTock with the Controller General of Patents Design and Trademarks on July 6.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X