ಪ್ರಸ್ತುತ ಜಾಗತಿಕವಾಗಿ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡುತ್ತಿದೆ. ಪ್ರತಿದಿನ ಒಂದೆರಡು ಸಂಸ್ಥೆಯಾದರೂ ಉದ್ಯೋಗ ಕಡಿತವನ್ನು ಮಾಡುತ್ತಿದೆ. ಈಗ ಟಿಕ್‌ಟಾಕ್ ತನ್ನ ಸಂಪೂರ್ಣ ಭಾರತದ ತಂಡವನ್ನು ವಜಾಗೊಳಿಸಿದೆ. ಅಂದರೆ ಸುಮಾರು 40ರಷ್ಟು ಉದ್ಯೋಗಿಗಳನ್ನು ತೆಗೆದುಹಾಕಿದೆ. ಫೆಬ್ರವರಿ 28 ಈ ತಂಡದ ಕೊನೆಯ ವರ್ಕಿಂಗ್ ಡೇ ಆಗಿದೆ.
ಮಾಹಿತಿ ಪ್ರಕಾರ ಬೈಟ್‌ಡ್ಯಾನ್ಸ್‌ನ ಪ್ಲಾಟ್‌ಫಾರ್ಮ್ ಅನ್ನು ಜೂನ್ 2020ರಲ್ಲಿ ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ರಾಷ್ಟ್ರೀಯ ಅಪಾಯದ ನಿಟ್ಟಿನಲ್ಲಿ ಈ ಆಪ್ ಅನ್ನು ಬ್ಯಾನ್ ಮಾಡಲಾಗಿದೆ. ಇನ್ನು ಈ ಉದ್ಯೋಗಿಗಳಿಗೆ ಒಟ್ಟು 9 ತಿಂಗಳ ಪ್ಯಾಕೇಜ್ ಅನ್ನು ನೀಡಲಾಗುವುದು ಎಂದು ಕೂಡಾ ಸಂಸ್ಥೆ ಹೇಳಿದೆ. ಇನ್ನು ಹೆಚ್ಚಿನ ಉದ್ಯೋಗಿಗಳಿಗೆ ಬರೀ 3 ತಿಂಗಳ ಪ್ಯಾಕೇಜ್ ಲಭ್ಯವಾಗುತ್ತದೆ.
ಜೂನ್ 2020ರಲ್ಲಿ ಕೇಂದ್ರ ಸರ್ಕಾರವು ಶಾರ್ಟ್ ವಿಡಿಯೋ ಪ್ಲಾಟ್‌ಫಾರ್ಮ್ ಟಿಕ್‌ಟಾಕ್ ಸೇರಿದಂತೆ ಒಟ್ಟು 59 ಚೀನಾದ ಆಪ್‌ಗಳನ್ನು ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಬ್ಯಾನ್ ಮಾಡಿದೆ. ಅದಾದ ಬಳಿಕ ದೇಶದಲ್ಲಿ ಒಟ್ಟಾಗಿ 300 ಚೀನಾದ ಆಪ್‌ಗಳನ್ನು ಬ್ಯಾನ್ ಮಾಡಲಾಗಿದೆ.

138 ಬೆಟ್ಟಿಂಗ್ ಆಪ್, 94 ಸಾಲದ ಆಪ್ ಬ್ಲಾಕ್
ಈ 300 ಆಪ್‌ಗಳ ಪೈಕಿ, ವಿಚಾಟ್, ಶೇರ್‌ಇಟ್, ಹೆಲೊ, ಲೈಕಿ, ಯುಸಿ ನ್ಯೂಸ್, ಬಿಗೊ ಲೈವ್, ಯುಸಿ ಬ್ರೌಸರ್ ಇತರೆ ಆಪ್‌ಗಳನ್ನು ಬ್ಯಾನ್ ಮಾಡಿದೆ. ಇನ್ನು ಕಳೆದ ವಾರ ಕೇಂದ್ರ ಸರ್ಕಾರವು 300 ಚೀನಾ ಆಪ್‌ಗಳನ್ನು ಬ್ಲಾಕ್ ಮಾಡಿದೆ. ಈ ಪೈಕಿ 138 ಬೆಟ್ಟಿಂಗ್ ಆಪ್‌ಗಳು ಮತ್ತು 94 ಸಾಲದ ಆಪ್‌ಗಳು ಆಗಿದೆ. ಚೀನಾದ ಲಿಂಕ್ ಇದೆ ಎಂಬ ಕಾರಣ ನೀಡಿ ಈ ಆಪ್‌ಗಳನ್ನು ಬ್ಲಾಕ್ ಮಾಡಲಾಗಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಇನ್ಫಾರ್ಮೆಷನ್ ಟೆಕ್ನಾಲಜಿ (MeitY) ಸಚಿವಾಲಯವು ಇತ್ತೀಚೆಗೆ ಎಂಎಚ್‌ಎ ಸೂಚನೆಯಂತೆ ಆಪ್‌ಗಳನ್ನು ಬ್ಯಾನ್ ಮಾಡಿದೆ. ಇದು ಮೂರನೇ ಪಾರ್ಟಿ ಲಿಂಕ್ ಮೂಲಕ ನಿರ್ವಹಣೆ ಮಾಡುವ ಆಪ್‌ಗಳು ಇದಾಗಿದೆ. ಎಲ್ಲ ಆಪ್‌ಗಳು ಐಟಿ ಆಕ್ಟ್ ಸೆಕ್ಷನ್ 69 ಅಡಿಯಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಿದೆ ಎಂಬ ಆರೋಪವಿದೆ.
ಈ ನಡುವೆ ಯುಎಸ್ ಸೆನೆಟರ್ ಮೈಖಲ್ ಬೆನೆಟ್ ಆಪಲ್ ಸಿಇಒ ಟಿಮ್ ಕೋಕ್ ಹಾಗೂ ಗೂಗಲ್ ಸಿಇಒ ಸುಂದರ್ ಪಿಚೈ ತಕ್ಷಣ ಟಿಕ್‌ಟಾಕ್ ಆಪ್ ಅನ್ನು ಆಪ್‌ಸ್ಟೋರ್‌ನಿಂದ ತೆಗೆದು ಹಾಕುವಂತೆ ಆಗ್ರಹಿಸಿದ್ದಾರೆ. ಇದು ಅಮೆರಿಕಾದ ರಾಷ್ಟ್ರೀಯ ಸುರಕ್ಷತೆಗೆ ಆಪತ್ತು ಎಂದು ಹೇಳಿದ್ದಾರೆ.
ಭಾರತದಲ್ಲಿ ಸಾಕಷ್ಟು ಯುವ ಜನತೆಯ ಮನಗೆದ್ದಿದ್ದ ಕಿರು ವೀಡಿಯೋಗಳ ಅಪ್ಲಿಕೇಶನ್ ಟಿಕ್‌ಟಾಕ್ ಬ್ಯಾನ್ ಆದ ಬಳಿಕ ಮತ್ತೆ ದೇಶಕ್ಕೆ ಕಾಲಿಡಲಿದೆ ಎಂಬ ಸುದ್ದಿ ಎರಡು ವರ್ಷದ ಹಿಂದೆ ಹರಿದಾಡಿದೆ. ಇತ್ತೀಚಿನ ಕೆಲ ವರದಿ ಪ್ರಕಾರ ಚೀನಾದ ಬೈಟ್ ಡ್ಯಾನ್ಸ್ ಒಡೆತನದ ಟಿಕ್‌ಟಾಕ್ ಭಾರತ ಪ್ರವೇಶಕ್ಕೆ ಸಿದ್ಧವಾಗಿದೆ ಎಂದು ವರದಿಯಾಗಿತ್ತು.
2020ರಲ್ಲಿ ಡೇಟಾ ಸೋರಿಕೆ ಕುರಿತಾಗಿ ಚೀನಾ ಅಪ್ಲಿಕೇಶನ್ ಟಿಕ್‌ಟಾಕ್ ಅನ್ನು ಕೇಂದ್ರ ಸರ್ಕಾರ ನಿಷೇಧಗೊಳಿಸಿತ್ತು. ಇದಾದ ಬಳಿಕ ಈ ವರ್ಷದ ಜನವರಿಯಲ್ಲಿ ಟಿಕ್‌ಟಾಕ್ ಮಾತೃ ಸಂಸ್ಥೆ ಬೈಟ್‌ಡ್ಯಾನ್ಸ್ ಭಾರತದಲ್ಲಿನ ಕಚೇರಿಯನ್ನು ಮುಚ್ಚಿತು. ಆದರೆ ಆ್ಯಪ್ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ಮುಂದುವರಿಸಿದೆ.


Click it and Unblock the Notifications