For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಕಾರ್ಯ ನಿರ್ವಹಣೆ ನಿಲ್ಲಿಸಿದ ಟಿಕ್ ಟಾಕ್

|

ಚೀನಾದ ಅಲ್ಪಾವಧಿ ವಿಡಿಯೋ ಪ್ಲಾಟ್ ಫಾರ್ಮ್ ಟಿಕ್ ಟಾಕ್ ಭಾರತದಲ್ಲಿ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿದೆ. ಕಂಪೆನಿಯು ತನ್ನ ಆಪ್ ಬಳಕೆದಾರರಿಗೆ ಈ ಬಗ್ಗೆ ನೋಟಿಸ್ ಕಳಿಸಲು ಆರಂಭಿಸಿದೆ. ಸರ್ಕಾರ ಘೋಷಣೆ ಮಾಡಿದ ನಿಷೇಧ ಮತ್ತು ಇನ್ನು ಮುಂದೆ ಈ ಸರ್ವೀಸ್ ದೊರೆಯುವುದಿಲ್ಲ ಎಂದು ತಿಳಿಸಿದೆ. ಇದಕ್ಕೂ ಮುನ್ನ ಆಪಲ್ ಅಪ್ಲಿಕೇಷನ್ ಸ್ಟೋರ್ ಮತ್ತು ಗೂಗಲ್ ಪ್ಲೇನಿಂದ ನಾಪತ್ತೆ ಆಗಿತ್ತು ಟಿಕ್ ಟಾಕ್.

ಪ್ರಿಯ ಬಳಕೆದಾರರೆ, ಐವತ್ತೊಂಬತ್ತು ಅಪ್ಲಿಕೇಷನ್ ಗಳನ್ನು ನಿಷೇಧಿಸುವ ಭಾರತ ಸರ್ಕಾರದ ಸೂಚನೆಗೆ ಬದ್ಧವಾಗುವ ಪ್ರಕ್ರಿಯೆಯಲ್ಲಿ ಇದ್ದೇವೆ. ನಮ್ಮ ಎಲ್ಲ ಬಳಕೆದಾರರ ಖಾಸಗಿತನ ಮತ್ತು ಭದ್ರತೆ ಖಾತ್ರಿ ಪಡಿಸುವುದು ನಮ್ಮ ಬಹುಮುಖ್ಯ ಆದ್ಯತೆ ಎಂದು ಅಪ್ಲಿಕೇಷನ್ ನಲ್ಲಿ ಕಂಡುಬಂದಿರುವ ಮೆಸೇಜ್ ನಲ್ಲೇ ತಿಳಿಸಲಾಗಿದೆ.

ಚೀನಾದ 59 ಮೊಬೈಲ್ ಅಪ್ಲಿಕೇಷನ್ ನಿಷೇಧಿಸಿದ ಮೇಲೆ ಏನಾಯ್ತು?ಚೀನಾದ 59 ಮೊಬೈಲ್ ಅಪ್ಲಿಕೇಷನ್ ನಿಷೇಧಿಸಿದ ಮೇಲೆ ಏನಾಯ್ತು?

ಹಲವು ಬಳಕೆದಾರರಿಗೆ ಈ ಸಂದೇಶ ಕಂಡಿದೆ. ಇನ್ನೂ ಹಲವರು ಆಪ್ ಸ್ಕ್ರಾಲ್ ಮಾಡಲು ಆಗುತ್ತಿಲ್ಲ ಎಂದು ದೂರಿದ್ದಾರೆ. ಸ್ಕ್ರಾಲ್ ಮಾಡಲು ಆರಂಭಿಸಿದರೆ ಒಂದು ಅಥವಾ ಎರಡು ವಿಡಿಯೋ ನಂತರ ನಿಂತುಹೋಗುತ್ತಿದೆ. ಆ ನಂತರ "ನೆಟ್ ವರ್ಕ್ ಸಮಸ್ಯೆ" ಎಂದು ತೋರಿಸುತ್ತಿದೆ. ಇದರರ್ಥ ಟೆಲಿಕಾಂ ಕಂಪೆನಿಗಳು ಅಪ್ಲಿಕೇಷನ್ ಬ್ಲಾಕ್ ಮಾಡಲು ಆರಂಭಿಸಿವೆ.

ಭಾರತದಲ್ಲಿ ಕಾರ್ಯ ನಿರ್ವಹಣೆ ನಿಲ್ಲಿಸಿದ ಟಿಕ್ ಟಾಕ್

ಟಿಕ್ ಟಾಕ್ ಗೆ ಭಾರತದಲ್ಲಿ ತಿಂಗಳಿಗೆ ಇಪ್ಪತ್ತು ಕೋಟಿ ಸಕ್ರಿಯ ಬಳಕೆದಾರರು ಇದ್ದಾರೆ. ಈ ಹಿಂದೆ ಹೇಳಿಕೆಯನ್ನು ನೀಡಿದ್ದ ಟಿಕ್ ಟಾಕ್, ಸರ್ಕಾರದ ಪ್ರತಿನಿಧಿಗಳ ಜತೆಗೆ ಮಾತುಕತೆ ನಡೆಸುವುದಾಗಿ ಹೇಳಿತ್ತು. ಕೆಲವು ಅಪ್ಲಿಕೇಷನ್ ಗಳು ವಕೀಲರ ನೆರವು ಪಡೆಯಲು ಮುಂದಾಗಿವೆ. ಆದರೆ ಸರ್ಕಾರವು ಈ ಕಂಪೆನಿಗಳ ವಿರುದ್ಧ ಯಾವ ಸಾಕ್ಷ್ಯವನ್ನು ಇಟ್ಟುಕೊಂಡಿದೆ ಎಂಬುದನ್ನು ಹೇಳಿಲ್ಲ.

English summary

TikTok Stop Functioning In India After Government Announced Ban

Day after government of India announced ban, Chinese short video platform TikTok stop functioning.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X