ತಿರುಮಲ ತಿರುಪತಿ ದೇವಸ್ಥಾನಕ್ಕೆ ಬರುವಂತಹ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿ ಎಂದು ಟಿಟಿಡಿ ಮಂಡಳಿಯು ಹೊಸದಾಗಿ ಶ್ರೀವಾಣಿ ದರ್ಶನ ಟಿಕೆಟ್ ವಿತರಣಾ ಕೇಂದ್ರವನ್ನು ಪ್ರಾರಂಭಿಸಿದೆ. ಇದರಿಂದ ಭಕ್ತರು ದರ್ಶನಕ್ಕಾಗಿ ಕಾಯುವ ಸಮಯ ಮತ್ತು ಬಹುಬೇಗನೆ ತಿಮ್ಮಪ್ಪನ ದರ್ಶನ ಸಿಗಲಿದೆ.
ಹೌದು, ಶ್ರೀವಾಣಿ ದರ್ಶನ ಟಿಕೆಟ್‌ನಿಂದ ಭಕ್ತರ ಕಾಯುವಿಕೆಯ ಸಮಯಯ ಉಳಿತಾಯವಾಗುತ್ತದೆ ಎಂದು ತಿರುಮಲ ತಿರುಪತಿ ದೇವಸ್ಥಾನ ಟಿಟಿಡಿ ಮಂಡಳಿ ಮಾಹಿತಿಯನ್ನು ತಿಳಿಸಿದೆ.

ತಿರುಮಲ ತಿರುಪತಿಯ ದರ್ಶನವನ್ನು ಪಡೆಯಲು ಸಾಮಾನ್ಯವಾಗಿ 1 ರಿಂದ 2 ದಿನಗಳು ಬೇಕಾಗುತ್ತವೆ. ನೀವಿವಾದರೂ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುವ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡರೆ ಸುಮಾರು 12 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ಬೇಕಾಗಬಹುದು.
ನೀವು ಶ್ರೀವಾಣಿ ದರ್ಶನ ಟಿಕೆಟ್‌ನ್ನು ತಿರುಮಲದ ಅನ್ನಮಯ್ಯ ಭವನದ ಎದುರು ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಈ ಕೇಂದ್ರವನ್ನು ನಿರ್ಮಾಣ ಮಾಡಲಾಗಿದೆ ಅಲ್ಲಿ ಪಡೆದುಕೊಳ್ಳಬಹುದು. ಟಿಟಿಡಿ ಅಧ್ಯಕ್ಷರಾದ ಬಿ.ಆರ್. ನಾಯ್ಡು ಮತ್ತು ಕಾರ್ಯನಿರ್ವಾಹಕ ಅಧಿಕಾರಿ (ಇಒ) ಜೆ. ಶ್ಯಾಮಲಾ ರಾವ್ ಅವರು ಈ ಕೇಂದ್ರವನ್ನು ಉದ್ಘಾಟನೆಯನ್ನು ಮಾಡಿದ್ದಾರೆ.
ಶ್ರೀವಾಣಿ ದರ್ಶನ ಟಿಕೆಟ್‌ಗಳನ್ನು ಪಡೆಯಲು ಭಕ್ತಾದಿಗಳು ಪ್ರತಿದಿನ ಬೆಳಿಗ್ಗೆ 5:00 ಗಂಟೆಯಿಂದ ದೀರ್ಘ ಸರತಿ ಸಾಲಿನಲ್ಲಿ ನಿಲ್ಲುವ ತೊಂದರೆಯಿತ್ತು. ಈ ಹೊಸ ಕೇಂದ್ರದ ಪ್ರಾರಂಭದಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತು.
ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಅಧ್ಯಕ್ಷರಾದ ಬಿ.ಆರ್. ನಾಯ್ಡು ಅವರು ಈ ಕುರಿತು ಮಾತನಾಡಿ ಶ್ರೀವಾಣಿ ದರ್ಶನ ಟಿಕೆಟ್‌ಗಳನ್ನು ಪಡೆಯಲು ಭಕ್ತಾದಿಗಳು ಮುಂಜಾನೆ 5 ಗಂಟೆಯಿಂದಲೇ ಕಾಯುತ್ತಿದ್ದರು. ಭಕ್ತರಿಗೆ ಟಿಕೆಟ್ ವಿತರಣೆಯನ್ನು ಇನ್ನಷ್ಟು ಸುಲಭಗೊಳಿಸುವ ಉದ್ದೇಶದಿಂದ 60 ಲಕ್ಷ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಹೊಸ ಕೌಂಟರ್‌ಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.
ಶ್ರೀವಾಣಿ ಟ್ರಸ್ಟ್ ಟಿಟಿಡಿಯ ಪ್ರಮುಖ ಉಪಕ್ರಮವಾಗಿದೆ. ಇದರ ಮೂಲಕ ಭಕ್ತರು ಟಿಟಿಡಿಯ ವಿವಿಧ ಯೋಜನೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ದೇಣಿಗೆ ನೀಡುವ ಅವಕಾಶವನ್ನು ಪಡೆಯುತ್ತಾರೆ. ದೇಣಿಗೆಯ ಪ್ರತಿಫಲವಾಗಿ, ಭಕ್ತರಿಗೆ ವಿಶೇಷ ಪ್ರವೇಶದ ಮೂಲಕ ದರ್ಶನ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಟಿಕೆಟ್‌ಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ, ಕಾಯುವ ಸಮಯ ಹೆಚ್ಚಾಗಿ ಭಕ್ತರಿಗೆ ಅನಾನುಕೂಲವಾಗುತ್ತಿತ್ತು.
ಈ ಹೊಸ ಕೇಂದ್ರವು ಆಧುನಿಕ ಸೌಕರ್ಯಗಳನ್ನು ಒಳಗೊಂಡಿದ್ದು, ಟಿಕೆಟ್ ವಿತರಣಾ ಪ್ರಕ್ರಿಯೆಯನ್ನು ಹೆಚ್ಚು ಆರಾಮದಾಯಕವಾಗಿಸುತ್ತದೆ. ಇದರಿಂದ ಸರತಿ ಸಾಲುಗಳು ಕಡಿಮೆಯಾಗುತ್ತೇವೆ.
ಶ್ರೀವಾಣಿ ದರ್ಶನ ಟಿಕೆಟ್ ಕೇಂದ್ರದ ಉದ್ಘಾಟನೆಯ ನಂತರ, ಅಧ್ಯಕ್ಷ ನಾಯ್ಡು ಅವರು ಹೆಚ್‌ವಿಸಿ (ಹೈ-ಲೆವೆಲ್ ಕಾಟೇಜ್‌ಗಳು) ಮತ್ತು ಎಎನ್‌ಸಿ (ಅನ್ನಪ್ರಸಾದಂ ಕಾಂಪ್ಲೆಕ್ಸ್) ಪ್ರದೇಶಗಳಲ್ಲಿ ನವೀಕರಿಸಲಾದ ಉಪ ವಿಚಾರಣಾ ಕಚೇರಿಗಳನ್ನು ಉದ್ಘಾಟಿಸಿದರು. ಈ ನವೀಕರಿಸಿದ ಕಚೇರಿಗಳು ಯಾತ್ರಿಕರಿಗೆ ಉತ್ತಮ ಸಹಾಯ ಮತ್ತು ಮಾಹಿತಿಯನ್ನು ಒದಗಿಸುವ ಮೂಲಕ ಅನುಕೂಲ ಮಾಡಿಕೊಡಲಿವೆ. ಅಲ್ಲದೆ, ಅಧ್ಯಕ್ಷರು ಈ ಸ್ಥಳಗಳಲ್ಲಿ ಸ್ಥಾಪಿಸಲಾದ ಮೂಲಸೌಕರ್ಯಗಳನ್ನು ಪರಿಶೀಲಿಸಿ, ಅವು ಯಾತ್ರಿಕರ ಅಗತ್ಯಗಳನ್ನು ಪೂರೈಸುವಂತೆ ನೋಡಿಕೊಂಡರು.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications