ಗೋವಿಂದನ ಲೀಲೆ..! 1,729 ಕೋಟಿ ಆದಾಯ.. 1.3 ಸಾವಿರ ಕೋಟಿ ಬಡ್ಡಿ.. ಬಜೆಟ್‌ ಎಷ್ಟು ಗೊತ್ತಾ?

Tirupati Budget: ತಿರುಮಲದಲ್ಲಿರುವ ಏಳು ಬೆಟ್ಟಗಳು ಒಡೆಯ ವೆಂಕಟೇಶ್ವರ ದೇವಾಲಯಕ್ಕೆ ಪ್ರತಿ ವರ್ಷ ಕೋಟೆಗಟ್ಟಲೆ ಆದಾಯ ಹರಿದು ಬರುತ್ತದೆ. ಇದಕ್ಕಾಗಿ ದೇವಸ್ಥಾನ ಸಮಿತಿ ಆರ್ಥಿಕ ವರ್ಷದ ಕೊನೆಯ ತಿಂಗಳಲ್ಲಿ ಮುಂದಿನ ವರ್ಷದ ಬಜೆಟ್ ಮಂಡನೆಯನ್ನು ಮಾಡುತ್ತದೆ 5258 ಕೋಟಿ ಬಜೆಟ್ ಮಂಡನೆ ಮಾಡಲಾಗಿದೆ. ಈ ಅದಾಯವನ್ನು ಕೆಲ ಉತ್ತಮ ಕಾರ್ಯಗಳಿಗೆ ಬಳಕೆ ಮಾಡಲು ಟಿಟಿಡಿ ನಿರ್ಧಾರವನ್ನು ಮಾಡಿದೆ. ಮುಂದಿನ ವರ್ಷಕ್ಕೆ ದೇವಸ್ಥಾನಕ್ಕೆ 1729 ಕೋಟಿ ಆದಾಯ ಹರಿದು ಬರಲಿ ಎಂದು ನಿರೀಕ್ಷೆಯನ್ನು ಹೊಂದಿದೆ.

ಹೌದು,ಮುಂದಿನ 2025-26ರ ಆರ್ಥಿಕ ಸಾಲಿನ ಬಜೆಟ್ ಅನ್ನು 5258 ಕೋಟಿ ರೂ ಮಂಡಿಸಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಸಮಿತಿ ತಯಾರಿ ನಡೆಸುತ್ತಿದೆ. ಈ ಬಾರಿಯ ಬಜೆಟ್‌ನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಬಜೆಟ್‌ ಗಾತ್ರ 79 ಕೋಟಿಗೂ ಅಧಿಕವಾಗಿದೆ.

Tirupati Budget: 5258 ಕೋಟಿ ಬಜೆಟ್ ಮಂಡನೆ: ಟಿಟಿಡಿ

ತಿರುಮಲ ತಿರುಪತಿಯ ದೇವಸ್ಥಾನದ ಮುಂದಿನ ವರ್ಷ ಹುಂಡಿಯಿಂದ 1,729 ಕೋಟಿರೂ.ಗಳ ಆದಾಯದ ನಿರೀಕ್ಷೆ ಇದೆ ಎಂದು ಟಿಟಿಡಿ ಟ್ರಸ್ಟ್‌ ಮಾಹಿತಿಯನ್ನು ತಿಳಿಸಿದೆ.

1.6 ಸಾವಿರ ಕೋಟಿ ಸಂಗ್ರಹ

ದೇಗುದ ಹುಂಡಿಯಲ್ಲಿ ಕಳೆದ ವರ್ಷ 1.6 ಸಾವಿರ ಕೋಟಿ ರು. ಸಂಗ್ರಹವಾಗಿತ್ತು.ಇದರೊಂದಿಗೆ, ಬ್ಯಾಂಕಿನಲ್ಲಿರಿಸಿರುವ 18 ಸಾವಿರ ಕೋಟಿ ರು.ನಷ್ಟು ಸ್ಥಿರ ಠೇವಣಿಗೆ 1.3 ಸಾವಿರ ಕೋಟಿರೂ. ಬಡ್ಡಿ ಸಿಗಲಿದೆ. ಹಾಗೂ, ಪ್ರಸಾದದಿಂದ 600 ಕೋಟಿ ರೂ. ಗಳಿಕೆಯ ಸಾಧ್ಯತೆವಿದೆ ಎಂದು ಟ್ರಸ್ಟ್ ಹೇಳಿದೆ.

ಅಡುಗೆಮನೆಯಲ್ಲಿ ಕೆಲಸ ಮಾಡುವವರ ವೇತನ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಲು ಹಾಗೂ ವೃದ್ಧರು ಮತ್ತು ಅಂಗವಿಕಲರಿಗೆ ದರ್ಶನ ನೀಡುವ ಕಾರ್ಯಸಾಧ್ಯತೆಗಳನ್ನು ಅನ್ವೇಷಿಸಲು ನಿರ್ಧಾರಗಳನ್ನು ತಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಕೊಡಂಗಲ್, ಕರೀಂನಗರ, ಉಪಮಾಕ, ಅನಕಪಲ್ಲಿ, ಕರ್ನೂಲ್, ಧರ್ಮಾವರಂ, ತಲಕೋಣ, ತಿರುಪತಿ (ಗಂಗಮ್ಮ ದೇವಸ್ಥಾನ) ಈ ದೇವಾಲಯಗಳ ಮರುರ್ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲು ನಿರ್ಧಾರ ಮಾಡಲಾಗಿದೆ.

ತಿರುಮಲ: ವಿಐಪಿ ಮತ್ತು ವಿಐಪಿಯೇತರರಿಗೆ ಅತಿಥಿಗೃಹ ನಿರ್ಮಾಣದ ಯೋಜನೆ ಪ್ರಸ್ತಾಪಿಸಲಾಗಿದೆ.

ಅಲಿಪಿರಿ: ಸೈನ್ಸ್ ಸಿಟಿ ಮತ್ತು ವಸ್ತುಸಂಗ್ರಹಾಲಯಕ್ಕಾಗಿ ಗೊತ್ತುಪಡಿಸಿದ 20 ಎಕರೆ ಭೂಮಿಯ ಹಂಚಿಕೆಯನ್ನು ರದ್ದುಗೊಳಿಸುವುದಕ್ಕೆ ಮಂಡಳಿ ಅನುಮೋದನೆ ನೀಡಿದೆ.

ಈ ಎಲ್ಲಾ ನಿರ್ಧಾರಗಳು ದೇವಾಲಯಗಳ ಮತ್ತು ಸುತ್ತಲೂ ಇರುವ ಪರಿಸರದ ಅಭಿವೃದ್ಧಿಗೆ ಹಾಗೂ ಪವಿತ್ರ ಸ್ಥಳಗಳಿಗೆ ಉತ್ತಮ ಅನುಕೂಲಗಳನ್ನು ಒದಗಿಸಲು ನಾವು ಈ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಅದಕ್ಕಾಗಿ ಹಣವನ್ನುಬ ಮೀಸಲು ಇಡಬೇಕಾಗುತ್ತದೆ ಎಂದು ಟಿಟಿಡಿ ಟ್ರಸ್ಟ್‌ ಮಾಹಿತಿಯನ್ನು ತಿಳಿಸಿದೆ.

ಟಿಟಿಡಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು ಯಾವುವು?

  • ದೇವಾಲಯದ ಅಡುಗೆಮನೆ ನೌಕರರಿಗೆ ಪೂರ್ಣ ವೇತನ ಸಿಗುವಂತೆ ನೋಡಿಕೊಳ್ಳುವುದು.
  • ಕಾರ್ಮಿಕರ ಸಂಬಳವನ್ನು ಯಾವುದೇ ಕಡಿತವಿಲ್ಲದೆ ಪಾವತಿಸುವುದು.
  • ಟಿಟಿಡಿ ಕಾಲೇಜುಗಳಲ್ಲಿ 25 ವರ್ಷಗಳಿಂದ ಕೆಲಸ ಮಾಡುತ್ತಿರುವ 151 ಗುತ್ತಿಗೆ ಉಪನ್ಯಾಸಕರ ಸಮಸ್ಯೆಗಳನ್ನು ಪರಿಹರಿಸಲು ಸಮಿತಿಯನ್ನು ರಚಿಸಲು ಸಹ ನಿರ್ಧರಿಸಲಾಗಿದೆ.
  • ತಿರುಮಲದಲ್ಲಿ ಟಿಟಿಡಿ ಉದ್ಯೋಗಿಗಳಿಗೆ ನೇಮ್ ಬ್ಯಾಡ್ಜ್‌ಗಳ ಸಮಸ್ಯೆಯನ್ನು ಪರಿಶೀಲಿಸುವಂತೆ ಮಂಡಳಿಯು ಅಧಿಕಾರಿಗಳಿಗೆ ಸೂಚಿಸಿದೆ.

ವಿಶ್ವವಿಖ್ಯಾತ ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನಕ್ಕೆ ಈ ಬಾರಿ ಭರ್ಜರಿ ಆದಾಯ ಬಂದಿದೆ. ನಿತ್ಯ ಸಾವಿರಾರು ಭಕ್ತರು ದರ್ಶನ ಪಡೆಯುವ ಪವಿತ್ರ ಸನ್ನಿಧಾನದಲ್ಲಿ ಆದಾಯದ ಹಣವನ್ನು ಕೆಲ ಉತ್ತಮ ಕಾರ್ಯಗಳಿಗೆ ಬಳಕೆ ಮಾಡಲು ಟಿಟಿಡಿ ನಿರ್ಧಾರವನ್ನು ಮಾಡಿದೆ.

ತಿರುಪತಿ ತಿಮ್ಮಪ್ಪನ ದೇವಸ್ಥಾನವಿರುವ ಏಳು ಬೆಟ್ಟಗಳು ದೇವಸ್ಥಾನಕ್ಕೆ ಮಾತ್ರ ಸೇರಿದ್ದು. ಅದನ್ನು ಬೇರೆ ಯಾರೂ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ದೇವಸ್ಥಾನವಿರುವ ಬೆಟ್ಟಗಳಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಕಾರ್ಯನಿರ್ವಹಿಸಲು ಯಾರಿಗೂ ಅನುಮತಿ ಕೂಡ ಇಲ್ಲ.

ದೇವಸ್ಥಾನಕ್ಕೆ ಪ್ರತಿ ವರ್ಷ ಕೋಟಿ ಕೋಟಿ ಆದಾಯ ಹರಿದು ಬರುತ್ತದೆ.ಇದನ್ನು ವಿವಿಧ ಅಭಿವೃದ್ದಿ ಯೋಜನೆಗಳಿಗೆ ಒಳಕೆ ಮಾಡಿಕೊಳ್ಲಲಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+