ತಿರುಪತಿ ದೇವಾಲಯದಲ್ಲಿ ಒಂದು ಮಹತ್ವದ ಬದಲಾವಣೆ ಮಾಡಲಾಗಿದೆ. ಅದೇನೆಂದರೆ ಇನ್ನುಮುಂದೆ ದೇವಾಲಯಕ್ಕೆ ಬರುವ ಭಕ್ತರಿಗಷ್ಟೇ ದೇವಾಲಯದ ವಸತಿ ಕೊಠಡಿ ನೀಡಲಾಗುತ್ತದೆ ಎಂದು ತಿಳಿಸಿದೆ. ಅಂದರೆ ದೇವಸ್ಥಾನದ ಮಂಡಳಿಯಡಿ ಬರುವ ವಸತಿಗೃಹಗಳಲ್ಲಿ, ದೇವರ ದರ್ಶನ ಟಿಕೆಟ್ ಹೊಂದಿರುವವರಿಗೆ ಮಾತ್ರ ರೂಮ್‌ಗೆ ಅವಕಾಶ ಮಾಡಿಕೊಡಲಾಗುತ್ತದೆ.

ಟಿಟಿಡಿಯಲ್ಲಿದ್ದ ಹಳೆಯ ನಿಯಮದ ಪ್ರಕಾರ ಸಿನಿತಾರೆಯರು, ರಾಜಕೀಯ ಮುಖಂಡರು ಮತ್ತು ದೊಡ್ಡ ದೊಡ್ಡ ಅಧಿಕಾರದಲ್ಲಿರುವ ವ್ಯಕ್ತಿಗಳು ರೆಕಮೆಂಟ್ ಮಾಡಿದ್ರೆ ಯಾರಿಗೆ ಬೇಕಾದ್ರೂ ಟಿಕೆಟ್ ಸಿಗುತ್ತದೆ ಎಂಬಂತಿತ್ತು. ಮೊದಲು ದರ್ಶನ ಟಿಕೆಟ್ ಇಲ್ಲದಿದ್ರೂ ಕೊಠಡಿ ಪಡೆಯಬಹುದಿತ್ತು. ಆದರೆ ಈಗಿನ ನಿಯಮದ ಪ್ರಕಾರ ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಇನ್ನುಮುಂದೆ ತಿರುಪತಿಯಲ್ಲಿ ರೂಂ ಬೇಕು ಅಂದರೆ, ದರ್ಶನ ಟಿಕೆಟ್ ಹೊಂದಿರುವುದು ಕಡ್ಡಾಯವಾಗಿದೆ.
ಹೊಸ ನಿಯಮದಲ್ಲೇನಿದೆ..?
ಹೊಸ ನಿಯಮದ ಪ್ರಕಾರ ದೇವಸ್ಥಾನ ಮಂಡಳಿ, ಪ್ರತಿದಿನ 7,500 ಕೊಠಡಿಗಳನ್ನು ಹಂಚಿಕೊಳ್ಳುತ್ತದೆ ಎನ್ನಲಾಗಿದೆ. ಹಾಗೂ 3,500 ಕೊಠಡಿಗಳು CRO ಮೂಲಕ ಸಾಮಾನ್ಯ ಭಕ್ತರಿಗೆ ನೀಡಲಾಗುತ್ತದೆ. 1,580 ಕೊಠಡಿಗಳನ್ನು ಆನ್ಲೈನ್ ಮೂಲಕ ಬುಕ್ಕಿಂಗ್ ಮಾಡಬಹುದು. 400 ಕೊಠಡಿಗಳು ದೇವಸ್ಥಾನಕ್ಕೆ ದೇಣಿಗೆ ನೀಡುವ ದಾತರಿಗೆ ಮೀಸಲಿರಿಸಲಾಗಿದೆ. ಇನ್ನುಳಿದ ಕೊಠಡಿಗಳನ್ನು VIP/VVIP ಭಕ್ತರಿಗೆ ನೀಡಲಾಗುತ್ತದೆ. ಆದರೆ ಅವರೂ ಕೂಡ ದರ್ಶನ ಟಿಕೆಟ್ ಹೊಂದಿರುವುದು ಕಡ್ಡಾಯವಾಗಿದೆ. ಇಲ್ಲಿ ರೆಕಮೆಡೇಷನ್ ಲೆಟರ್ ಇದ್ದರೂ ಭಕ್ತರು ಶ್ರೀ ಪದ್ಮಾವತಿ ಎನ್‌ಕ್ವೈರಿ ಕಚೇರಿ ಅಥವಾ ಆಯ್ದ ಕೌಂಟರ್‌ಗಳಲ್ಲಿ, ಆಧಾರ್ ಕಾರ್ಡ್ ಮತ್ತು ದರ್ಶನ ಟಿಕೆಟ್ ಒದಗಿಸಬೇಕು.
ಈ ಹೊಸ ಬದಲಾವಣೆಯ ಉದ್ದೇಶವೇನು..?
ಈ ಹೊಸ ನಿಯಮವನ್ನು ಜಾರಿಗೆ ತರಲು ಒಂದು ಪ್ರಮುಖವಾದ ಉದ್ದೇಶವಿದೆ. ಅದೇನೆಂದರೆ ಕೆಲವರು ಶಿಫಾರಸ್ಸು ಪತ್ರಗಳ ಮೂಲಕ ಕೊಠಡಿಗಳನ್ನು ಅಕ್ರಮವಾಗಿ ಪಡೆಯುತ್ತಾರೆ. ಹಾಗೂ ಭಕ್ತರಿಗೆ ದುಬಾರಿ ದರದಲ್ಲಿ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಈ ದಲ್ಲಾಳಿ ವ್ಯವಸ್ಥೆಯನ್ನು ತಡೆಯುವುದು ಕೂಡ ಒಂದಾಗಿದೆ. ಈ ಮೂಲಕ ಸಮಾನ ಹಂಚಿಕೆ ಮತ್ತು ನ್ಯಾಯಸಮ್ಮತ ವ್ಯವಸ್ಥೆಯನ್ನು ಕಲ್ಪಿಸುವುದಾಗಿದೆ.
ಕಾಡುಪ್ರಾಣಿಗಳ ದಾಳಿ ತಡೆಗಟ್ಟಲು ರೇಡಿಯೋ ಕಾಲರ್ ವ್ಯವಸ್ಥೆ:
ಇನ್ನು ತಿರುಪತಿಗೆ ಕಾಡುಪ್ರಾಣಿಗಳಿಂದ ದಾಳಿ ಹೆಚ್ಚಾಗುತ್ತಿದ್ದು, ಅದನ್ನು ತಡೆಗಟ್ಟಲು TTD ಹೊಸ ನಿಗಾ ತಂತ್ರಜ್ಞಾನ ಪರಿಚಯಿಸಲು ಯೋಜನೆ ರೂಪಿಸಿದೆ. ಅದೇನೆಂದರೆ ಚಿರತೆ, ಆನೆ, ಕರಡಿ, ಮತ್ತು ಜಿಂಕೆಗಳನ್ನು ರೆಡಿಯೋ ಕಾಲರ್ ಮೂಲಕ ಟ್ರ್ಯಾಕ್ ಮಾಡಲಾಗುತ್ತದೆ. ಉಪಗ್ರಹ ಸಂಜ್ಞೆ ಆಧರಿಸಿದ GPS ಆಧಾರಿತ ಎಚ್ಚರಿಕೆ ವ್ಯವಸ್ಥೆ ಪ್ರತಿಷ್ಠಾಪಿಸುವ ಬಗ್ಗೆ ತಿಳಿಸಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸುರಕ್ಷತೆ ಒದಗಿಸಲು ಈ ನಿಯಮ ತೆಗೆದುಕೊಳ್ಳಲಾಗಿದೆ. ಅನುಮತಿ ಸಿಕ್ಕ ಕೂಡಲೇ ತಜ್ಞ ಪ್ರಾಣಿಶಾಸ್ತ್ರಜ್ಞರು, ಪ್ರಾಣಿಗಳನ್ನು ಸುರಕ್ಷಿತವಾಗಿ ಹಿಡಿದು SIM ಕಾರ್ಡ್ ಇರುವ ರೇಡಿಯೋ ಕಾಲರ್ ಅಳವಡಿಸಲಿದ್ದಾರೆ. ಇದರಿಂದ ಪ್ರಾಣಿಗಳ ಚಲನೆ ಮೇಲ್ವಿಚಾರಣೆ ಮಾಡಿ, ಭಕ್ತರಿಗೆ ಮುಂಚಿತ ಎಚ್ಚರಿಕೆ ನೀಡಲು ಸಾಧ್ಯವಾಗುತ್ತದೆ.
ಭಕ್ತರ ಸುರಕ್ಷತೆಗಾಗಿ ಈ ಯೋಜನೆಯನ್ನು ತೆಗೆದುಕೊಳ್ಳಲಾಗಿದೆ. ಇನ್ನು ಟಿಕೆಟ್ ವಿಚಾರದಲ್ಲಿನ ಬದಲಾವಣೆ ಅಕ್ರಮ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ತರುವುದಾಗಿದೆ. ಇನ್ನುಮುಂದೆ ಯಾರಿಗೇ ತಿರುಪತಿ ದೇವಸ್ಥಾನದಲ್ಲಿ ರೂಮ್ ಬುಕ್ ಮಾಡಬೇಕೆಂದರೂ, ಟಿಕೆಟ್ ಕಡ್ಡಾಯವಾಗಿ ತೋರಿಸಬೇಕಾಗಿದೆ. ದೇವಾಲಯ ಮಂಡಳಿಯಿಂದ ತೆಗೆದುಕೊಂಡಿರುವ ಈ ನಿಯಮ ಎಲ್ಲಾ ಭಕ್ತರಿಗೂ ಸಹ ಅನ್ವಯವಾಗಲಿದೆ. ತಮ್ಮ ಅಗತ್ಯತೆಗೆ ಅನುಸಾರ ಸರಿಯಾದ ಸಮಯಕ್ಕೆ ರೂಮ್ ಬುಕ್ ಮಾಡಿದವರಿಗೆ ರೂಮ್ ಸಿಗುತ್ತದೆ. ಅಲ್ಲದೇ ಲಕ್ಷಾಂತರ ಜನ ಭಕ್ತರು ಆಗಮಿಸುವ ತಿರುಪತಿ ದೇವಸ್ಥಾನದಲ್ಲಿ ಅಗತ್ಯ ಇರುವವರಿಗಿಂತ ಹೆಚ್ಚಾಗಿ, ರೆಕಮೆಂಡ್ ಮಾಡುತ್ತಿದ್ದ ಭಕ್ತರಿಗೆ ಎಲ್ಲಾ ಸೌಕರ್ಯ ಸಿಗುತ್ತಿತ್ತು. ಇನ್ನುಮುಂದೆ ಈ ಸೌಕರ್ಯಕ್ಕೆ ಕಡಿವಾಣ ಹಾಕಲಾಗಿದೆ.


Click it and Unblock the Notifications