ಈಗಾಗಲೇ ಹಲವಾರು ದೊಡ್ಡ ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡುತ್ತ ಸಾಗುತ್ತಿದೆ. ಒಂದಲ್ಲ ಎರಡಲ್ಲ ಹಲವಾರು ಹಂತಗಳಲ್ಲಿ ಲೇ ಆಫ್ ಪ್ರಕ್ರಿಯೆಯನ್ನು ನಡೆಸುತ್ತಾ ಬಂದಿದೆ. ವೆಚ್ಚ ಕಡಿತ ಮಾಡುವುದು ಉದ್ದೇಶ ಎಂದು ಬಹುತೇಕ ಸಂಸ್ಥೆಗಳು ಈ ಉದ್ಯೋಗ ಕಡಿತಕ್ಕೆ ನೀಡಿದ ಕಾರಣವಾಗಿದೆ. ಆದರೆ ಇಲ್ಲೊಂದು ಸಂಸ್ಥೆ ನೇಮಕಾತಿಯನ್ನು ಮಾಡಲು ಮುಂದಾಗಿದೆ.
ಹೌದು, ಪ್ರಸ್ತುತ ಉದ್ಯೋಗ ಹುಡುಕಾಟ ಸಾಮಾನ್ಯವಾಗಿದೆ. ಶಿಕ್ಷಣ ಮುಗಿಸಿ ಉದ್ಯೋಗದ ಅಲೆದಾಟದಲ್ಲಿರುವ ಯುವಜನರು ಒಂದೆಡೆಯಾದರೆ ಇನ್ನೊಂದೆಡೆ ನಮ್ಮ ಪದವಿಗೆ ತಕ್ಕ ಉದ್ಯೋಗದ ಹುಡುಕಾಟದಲ್ಲಿರುವವರು ಕೂಡಾ ಇದ್ದಾರೆ. ಈ ಉದ್ಯೋಗವಕಾಶಿಗಳಿಗೆ ಇಲ್ಲಿದೆ ನೋಡಿ ಉತ್ತಮ ಅವಕಾಶ. ಮುಂದೆ ಓದಿ...

ಟೈಟಾನ್‌ನಲ್ಲಿ ಉದ್ಯೋಗವಕಾಶ
ಎಂಜಿನಿಯರಿಂಗ್, ವಿನ್ಯಾಸ, ಐಷಾರಾಮಿ, ಡಿಜಿಟಲ್, ಡೇಟಾ ಅನಾಲಿಟಿಕ್ಸ್, ಮಾರ್ಕೆಟಿಂಗ್ ಮತ್ತು ಮಾರಾಟ ಸೇರಿದಂತೆ ವಿವಿಧೆಡೆ ಮುಂದಿನ 5 ವರ್ಷಗಳಲ್ಲಿ 3,000 ಉದ್ಯೋಗಿಗಳನ್ನು ಸೇರಿಸಲು ಯೋಜನೆ ಮಾಡಲಾಗುತ್ತಿದೆ ಎಂದು ಟೈಟಾನ್ ಕಂಪನಿ ಮಂಗಳವಾರ ತಿಳಿಸಿದೆ.
ನಮ್ಮ ಸಂಸ್ಥೆಯು ಡೇಟಾ ಅನಾಲಿಟಿಕ್ಸ್, ಸೈಬರ್ ಸೆಕ್ಯೂರಿಟಿ, ಉತ್ಪನ್ನ ನಿರ್ವಹಣೆ, ಡಿಜಿಟಲ್ ಮಾರ್ಕೆಟಿಂಗ್ ಮತ್ತು ಇತರ ಹೊಸ-ಯುಗದ ಕೌಶಲ್ಯಗಳಂತಹ ವಿಶೇಷ ಕೌಶಲ್ಯಗಳನ್ನು ಹೊಂದಿರುವ ವೃತ್ತಿಪರರನ್ನು ಹುಡುಕುತ್ತಿದೆ ಎಂದು ಕಂಪನಿಯ ಹೇಳಿಕೆ ತಿಳಿಸಿದೆ.
ಐದು ವರ್ಷಗಳಲ್ಲಿ ಮೂರು ಸಾವಿರ ಮಂದಿ ನೇಮಕ
"ಮುಂದಿನ 5 ವರ್ಷಗಳಲ್ಲಿ 1,00,000 ಕೋಟಿ ರೂಪಾಯಿಗಳ ವ್ಯವಹಾರವಾಗುವತ್ತ ನಾವು ಪ್ರಯಾಣವನ್ನು ಪ್ರಾರಂಭಿಸುತ್ತಿದ್ದೇವೆ. ಮುಂದಿನ 5 ವರ್ಷಗಳಲ್ಲಿ 3,000 ಜನರನ್ನು ನೇಮಕ ಮಾಡಿಕೊಳ್ಳುವ ನಿರ್ಧಾರ ಮಾಡಿಕೊಂಡಿದ್ದೇವೆ. ಪ್ರತಿಭಾವಂತ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗುತ್ತದೆ," ಎಂದು ಟೈಟಾನ್ ಸಂಸ್ಥೆಯು ಮಾಹಿತಿ ನೀಡಿದೆ.
"ನಮ್ಮ ಸ್ವಂತ ಜನರನ್ನು ಬೆಳೆಸುವುದರ ಜೊತೆಗೆ ಯುವ ಮತ್ತು ಅನುಭವಿಗಳನ್ನು ನಮ್ಮ ಸಂಸ್ಥೆಗೆ ಕರೆ ತರಲು ಈ ನೇಮಕಾತಿ ಸಹಾಯ ಮಾಡುತ್ತದೆ ಎಂದು ನಾವು ನಂಬುತ್ತೇವೆ. ಇದು ನಮ್ಮ ಬೆಳವಣಿಗೆ ಮತ್ತು ಆವಿಷ್ಕಾರವನ್ನು ವೇಗಗೊಳಿಸುತ್ತದೆ. ಉದ್ಯಮದಲ್ಲಿ ನಮ್ಮ ಸ್ಥಾನವನ್ನು ಬಲಪಡಿಸುತ್ತದೆ," ಎಂದು ಟೈಟಾನ್ ಕಂಪನಿಯ ಎಚ್‌ಆರ್- ಕಾರ್ಪೊರೇಟ್ ಮತ್ತು ರಿಟೇಲ್ ಮುಖ್ಯಸ್ಥರಾದ ಪ್ರಿಯಾ ಮತಿಲಕತ್ ಪಿಳ್ಳೈ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ, ಕಂಪನಿಯ ಶೇಕಡ 60 ರಷ್ಟು ಉದ್ಯೋಗಿಗಳು ಮಹಾನಗರಗಳಲ್ಲಿ ಮತ್ತು ಶೇಕಡ 40 ರಷ್ಟು ಎರಡನೇ ಮತ್ತು ಮೂರನೇ ದರ್ಜೆ ನಗರಗಳಲ್ಲಿ ನೆಲೆಸಿದ್ದಾರೆ. "ನಾನು ಮಾರುಕಟ್ಟೆಯಲ್ಲಿ ಬೆಳೆಯುವುದನ್ನು ಮುಂದುವರಿಸುತ್ತೇವೆ. ಪ್ರಾದೇಶಿಕ ಉದ್ಯೋಗವನ್ನು ಉತ್ತೇಜಿಸಲು ಸ್ಥಳೀಯ ಪ್ರತಿಭೆಗಳ ಮೇಲೆ ಕೇಂದ್ರೀಕರಿಸುತ್ತೇವೆ," ಎಂದು ಪ್ರಿಯಾ ಮತಿಲಕತ್ ಪಿಳ್ಳೈ ಹೇಳಿದರು.
ಟೈಟಾನ್ ಕಂಪನಿಯು ಟಾಟಾ ಗ್ರೂಪ್ ಮತ್ತು ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ನಿಗಮ (ಟಿಡ್ಕೊ) ನಡುವಿನ ಜಂಟಿ ಉದ್ಯಮವಾಗಿದೆ. ನಾವೀನ್ಯತೆ ಮತ್ತು ತಂತ್ರಜ್ಞಾನದ ಮೇಲೆ ಗಮನಹರಿಸುವುದರೊಂದಿಗೆ ಟೈಟಾನ್ ಮುಂದಿನ 2-3 ವರ್ಷಗಳಲ್ಲಿ ಎಂಜಿನಿಯರಿಂಗ್‌ಗಳಿಗೆ ಶೇಕಡ 50 ಉದ್ಯೋಗಿವನ್ನು ಹೆಚ್ಚಿಸಲು ಯೋಜಿಸಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications