Gold Price: ಆಭರಣ ಪ್ರಿಯರಿಗೆ ಸಿಹಿ ಸುದ್ದಿ. ವಾರದ ಮೊದಲ ದಿನದಿಂದ ಬಂಗಾರದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸತತವಾಗಿ ಏರಿಕೆ ಕಂಡಿದ್ದ ಚಿನ್ನ ಇಂದು ಕಡಿಮೆಯಾಗಿದೆ. ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲೂ ಕೂಡ ಇಂದು ಇಳಿಕೆ ಕಂಡಿದೆ. ಚಿನ್ನದ ಬೆಲೆ ಏರಿಕೆಯಿಂದ ನಿರಾಸೆಯಾದ ಖರೀದಿದಾರರಿಗೆ ರಿಲೀಫ್ ಸಿಕ್ಕಿದೆ. ಹಾಗಿದ್ರೆ ಭಾರತದಲ್ಲಿ ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ
ಹೌದು, ಚಿನ್ನದ ಬೆಲೆಯಲ್ಲಿ ಶನಿವಾರ (ಜ.4) ರಂದು ಇಳಿಕೆಯಾಗಿರುವುದು ಗೋಲ್ಡ್ ಪ್ರಿಯರ ಖುಷಿ ದುಪ್ಪಟ್ಟು ಮಾಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 72,150 ರೂಪಾಯಿ ಇದೆ. ಅಪರಂಜಿ 24 ಕ್ಯಾರಟ್ನ ಚಿನ್ನದ ಬೆಲೆ 78,710 ರೂಪಾಯಿ ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ದರೆ ಅಪರಂಜಿ ಚಿನ್ನದ ಬೆಲೆಯಲ್ಲಿ 490 ರೂಪಾಯಿಯ ಇಳಿಕೆಯನ್ನು ಕಂಡಿದೆ. ಇನ್ನೂ 100 ಗ್ರಾಂ ಅಪರಂಜಿ ಚಿನ್ನ ಬೆಲೆದ ಬೆಲೆ 4,900 ರೂಗಳ ಇಳಿಕೆಯ ವ್ಯತ್ಯಾಸವನ್ನು ನಾವು ಕಾಣಬಹುದು.

ಭಾರತದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ?
ಇಂದು ಭಾರತದಲ್ಲಿ ಚಿನ್ನದ ದರ ಇದೀಗ ಕಡಿಮೆಯಾಗಿದೆ. ಪ್ರಸ್ತುತ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,215 ರೂಪಾಯಿ ಇದೆ. ಅದೇ ರೀತಿ ಅಪರಂಜಿ 24 ಕ್ಯಾರಟ್ ಚಿನ್ನದ ಬೆಲೆ 7,920 ರೂ ಇದ್ದದ್ದು 7,871 ಆಗಿದ್ದು, 49ರೂಗಳ ಇಲಿಕೆ ಕಂಡಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನಕ್ಕೆ 72,150 ಇಂದು ರೂಪಾಯಿ ವಾಹಿವಾಟುವಿದೆ. 10 ಗ್ರಾಂ ನ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 78,710 ರೂ ಇದೆ.
100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 7,26,000 ಇದ್ದದ್ದು ಇಂದು 7,21,500 ಆಗಿದ್ದು, 4,500 ಭಾರೀ ಇಳಿಕೆಯನ್ನು ಕಂಡಿದೆ. ಅಪರಂಜಿ 100 ಗ್ರಾಂ ಚಿನ್ನದ ಬೆಲೆ 7,87,100 ರೂ.ಗಳ ವಹಿವಾಟು ನಡೆಸುತ್ತಿದೆ. 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 59,030 ರೂ ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ ಕಂಡಿದೆ.
ಇಂದಿನ ಬೆಳ್ಳಿಯ ಬೆಲೆ ಭಾರತದಲ್ಲಿ ಎಷ್ಟಿದೆ?
ಬೆಳ್ಳಿಯ ಬೆಲೆಯಲ್ಲಿ ಇಂದು ಭಾರತದಲ್ಲಿ ಇಳಿಕೆ ಕಂಡಿದೆ. ಬೆಳ್ಳಿಯ ಬೆಲೆ ಈಗ ಪ್ರತಿ ಕಿಲೋಗ್ರಾಂಗೆ 91,500 ರೂಪಾಯಿಗಳ ವಹಿವಾಟುವಿದ್ದು,ಒಂದು ಕಿಲೋಗ್ರಾಂ ಬೆಳ್ಳಿ ನಿನ್ನೆಗೆ ಹೋಲಿಕೆ ಮಾಡಿದ್ದರೆ 1,000 ರೂಪಾಯಿಗಳಷ್ಟುಇಳಿಕೆ ಕಂಡಿದೆ. ಒಂದು ಗ್ರಾಂ ಗೆ ಬೆಳ್ಳಿಗೆ 91.50 ರೂಗಳ ವ್ಯಾಪಾರದವಿದೆ. 10 ಗ್ರಾಂ ಬೆಳ್ಳಿಯ ಬೆಲೆ 915 ರೂಪಾಯಿಯಾಗಿದೆ. 100 ಗ್ರಾಂ ಬೆಳ್ಳಿ 9,150 ರೂ ಗಳು ಇದೆ. ಇಂದು ಬೆಳ್ಳಿಯ ಬೆಳೆಯಲ್ಲೂ ಸಹ ಇಳಿಕೆ ಕಂಡಿದೆ.
ಚಿನ್ನದ ಬೆಲೆ ವ್ಯತ್ಯಾಸಕ್ಕೆ ಕಾರಣವೇನು?
ಚಿನ್ನದ ಬೆಲೆಗಳು ಜಾಗತಿಕ ಮಟ್ಟದಲ್ಲಿ ಇನ್ನೂ ಸಹ ರಾಜಕೀಯ ಅಶಾಂತಿ ವಾತಾವರಣ ಮುಂದುವರೆದಿದೆ. ಇದ್ರ ಜೊತೆಗೆ ಯುಎಸ್ ಫೆಡರಲ್ ರಿಸರ್ವ್ 25 ಬಿಪಿಎಸ್‌ನಷ್ಟು ಬಡ್ಡಿ ದರ ತಗ್ಗಿಸಿದ ಬಳಿಕ ಹೂಡಿಕೆದಾರರ ಗಮನ ಮತ್ತು ಹೂಡಿಕೆಯ ಆಯ್ಕೆಯು ಸಹ ಬದಲಾಗಿದೆ. ವಿಪರೀತ ಹಣದುಬ್ಬರ ಏರಿಕೆಗೊಳ್ಳುತ್ತಿರುವುದು ಸಹ ಚಿನ್ನದ ಬೆಲೆ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ರೂಪಾಯಿ ದುರ್ಬಲಗೊಂಡು ಡಾಲರ್ ಬಲಗೊಂಡಿರುವುದು ಹಳದಿ ಲೋಹದ ಬೆಲೆ ಮೇಲೆ ನಕಾರಾತ್ಕಕ ಪರಿಣಾಮ ಬೀರುತ್ತಿದೆ.
MCXನಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಹೇಗಿದೆ?
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಚಿನ್ನದ ಭವಿಷ್ಯ ನೋಡೋದಾದ್ರೆ 77700 ಅನ್ನು ಮುಚ್ಚಿತು ಮತ್ತು ದೈನಂದಿನ ಚಾರ್ಟ್‌ನಲ್ಲಿ ಬುಲಿಶ್ ಕ್ಯಾಂಡಲ್ ಅನ್ನು ರೂಪಿಸಿತು. ಚಿನ್ನದ ಬೆಲೆ ಬೆಂಬಲಿತವಾದ ಮೇಲ್ಮುಖವಾದ ಪ್ರವೃತ್ತಿಯಿಂದ ಮರುಕಳಿಸುವಿಕೆಯನ್ನು ಪ್ರತಿಬಿಂಬಿಸುತ್ತದೆ. MCX ಗೋಲ್ಡ್ 77850/78200 ಮಟ್ಟಗಳಲ್ಲಿ ಪ್ರತಿರೋಧವನ್ನು ವೀಕ್ಷಿಸಬಹುದು 78200 ಕ್ಕಿಂತ ಹೆಚ್ಚಿನ ವಿರಾಮದೊಂದಿಗೆ ಹೆಚ್ಚಿನ ಲಾಭಗಳಿಗೆ ಬಾಗಿಲು ತೆರೆದಿದೆ. 78700/79000 ಮಟ್ಟಗಳಿಗೆ ವ್ಯತಿರಿಕ್ತವಾಗಿ, 77420/77000 ಮಟ್ಟಗಳಲ್ಲಿ ವ್ಯಾಪಾರದ ಬೆಂಬಲವನ್ನು ಗಮನಿಸಲಾಗಿದೆ ಏಕೆಂದರೆ ನಡೆಯುತ್ತಿರುವ ಭೂ-ರಾಜಕೀಯ ಉದ್ವಿಗ್ನತೆಯಿಂದಾಗಿ ಚಂಚಲತೆಯು ಹೆಚ್ಚಾಗಬಹುದು ಬ್ರೋಕರ್ಸ್ ಪ್ರೈ. ಲಿಮಿಟೆಡ ಸಂಸ್ಥೆ ಹೇಳಿದೆ.
ಸ್ಪಾಟ್ ಗೋಲ್ಡ್ ರೇಟ್ ?
ರಾಯಿಟರ್ಸ್ ಪ್ರಕಾರ, 0257 GMT ಯಲ್ಲಿ ಸ್ಪಾಟ್ ಚಿನ್ನವು ಶೇ. 0.2 ರಷ್ಟು ಔನ್ಸ್‌ಗೆ $ 2,661.19 ಕ್ಕೆ ಏರಿತು, ಡಿಸೆಂಬರ್ 13 ರಿಂದ ಅದರ ಅತ್ಯುನ್ನತ ಮಟ್ಟವನ್ನು ತಲುಪಿದೆ. ಈ ವಾರ ಇಲ್ಲಿಯವರೆಗೆ ಬುಲಿಯನ್ ಸುಮಾರು ಶೇ.1.6 ಗಳಿಸಿದೆ. $2,675.40 ನಲ್ಲಿ, US ಚಿನ್ನದ ಭವಿಷ್ಯವು ಶೇ.0.2 ಹೆಚ್ಚಾಗಿದೆ. ಪಲ್ಲಾಡಿಯಮ್ ಶೇ.0.2 ಏರಿಕೆಯಾಗಿ $913.18, ಪ್ಲಾಟಿನಮ್ ಶೇ.0.4 ರಷ್ಟು ಏರಿಕೆಯಾಗಿ $926.95 ಇದೆ. ಸ್ಪಾಟ್ ಸಿಲ್ವರ್ ಪ್ರತಿ ಔನ್ಸ್‌ಗೆ $29.58 ನಲ್ಲಿ ಸ್ಥಿರವಾಗಿದೆ.
ಭಾರತದ ವಿವಿಧ ನಗರಗಳಲ್ಲಿರುವ ಚಿನ್ನದ ಬೆಲೆ
| ನಗರ | 22 ಕ್ಯಾರೆಟ್ | 24k ಕ್ಯಾರೆಟ್ |
| ಬೆಂಗಳೂರು | 7,215 | 7,871 |
| ಚೆನ್ನೈ | 7,215 | 7,871 |
| ಮುಂಬೈ | 7,215 | 7,871 |
| ದೆಹಲಿ | 7,230 | 7,886 |
| ಕೋಲ್ಕತಾ | 7,215 | 7,871 |
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
| ಬೆಂಗಳೂರು | 9,150 ರೂ |
| ಚೆನ್ನೈ | 9,900 ರೂ |
| ಮುಂಬೈ | 9,150 ರೂ |
| ದೆಹಲಿ | 9,150 ರೂ |
| ಕೋಲ್ಕತಾ | 9,150 ರೂ |
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications