ಬೆಂಗಳೂರು, ಏಪ್ರಿಲ್ 26: ಇಂದು ಶುಕ್ರವಾರ (ಏಪ್ರಿಲ್ 26) ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ರೈಲುಗಳು ಕಾರ್ಯಾಚರಣೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಬಿಡುಗಡೆ ಮಾಡಿದ ಪ್ರಕಟಣೆ ಪ್ರಕಾರ, ಟರ್ಮಿನಲ್ ನಿಲ್ದಾಣಗಳಾದ ಚಲ್ಲಘಟ್ಟ, ವೈಟ್‌ಫೀಲ್ಡ್ (ಕಾಡುಗೋಡಿ), ನಾಗಸಂದ್ರ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್‌ನಿಂದ ಕೊನೆಯ ರೈಲು ರಾತ್ರಿ 11.55 ಕ್ಕೆ ಹೊರಡಲಿದೆ. "ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ (ಮೆಜೆಸ್ಟಿಕ್) ಎಲ್ಲಾ ನಾಲ್ಕು ದಿಕ್ಕುಗಳಲ್ಲಿ ಕೊನೆಯ ರೈಲು 27.04.2024 ರಂದು 00.35 ಗಂಟೆಗೆ (ಬೆಳಿಗ್ಗೆ 00.35) ಹೊರಡಲಿದೆ" ಎಂದು ಪ್ರಕಟಣೆ ತಿಳಿಸಿದೆ.

ತುಮಕೂರಿನವರೆಗೆ ಮೆಟ್ರೋ:
ಮಾದಾವರದಿಂದ ತುಮಕೂರಿನವರೆಗೆ 52 ಕಿಮೀ ಮೆಟ್ರೊ ರೈಲು ಕಾರಿಡಾರ್ ವಿಸ್ತರಣೆಗೆ ಎಂಟು ಸಲಹಾ ಸಂಸ್ಥೆಗಳು ಕಾರ್ಯಸಾಧ್ಯತೆಯ ಅಧ್ಯಯನ ವರದಿಯನ್ನು ಸಿದ್ಧಪಡಿಸಲು ಆಸಕ್ತಿ ತೋರಿಸಿವೆ. ಇದು ಕಾರ್ಯಸಾಧ್ಯವಾದರೆ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ಕಾರ್ಯಗತಗೊಳಿಸಲಾಗುತ್ತದೆ. ಟೆಂಡರ್‌ನಲ್ಲಿ ಭಾಗವಹಿಸುವ ಕೆಲವು ಬಿಡ್‌ದಾರರು RITES ಲಿಮಿಟೆಡ್, Systra MVA ಕನ್ಸಲ್ಟಿಂಗ್, ಆರ್ವಿ ಅಸೋಸಿಯೇಟ್ಸ್ ಇವೇ ಮೊದಲಾದವು.
ಎಂಟು ಬಿಡ್‌ದಾರರ ಭಾಗವಹಿಸಿವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ದೃಢಪಡಿಸಿದ್ದಾರೆ. ತಾಂತ್ರಿಕ ಮತ್ತು ಆರ್ಥಿಕ ಮೌಲ್ಯಮಾಪನಗಳ ನಂತರ ಯಶಸ್ವಿ ಸಲಹೆಗಾರರನ್ನು ಆಯ್ಕೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ತುಮಕೂರಿಗೆ ಮೆಟ್ರೋ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.


Click it and Unblock the Notifications