Gold Rate Today: ಚಿನ್ನದ ಬೆಲೆ ನಿರಂತರ ಕುಸಿತ..ಬೆಳ್ಳಿ ಕೂಡ ಅಗ್ಗ..ಖರೀದಿಗೆ ಇದು ಬೆಸ್ಟ್ ಟೈಮ್‌..ಬೆಂಗಳೂರಿನಲ್ಲಿ ಎಷ್ಟು?

Bengaluru Gold Rate Today: ಚಿನ್ನದ ಬೆಲೆಗಳು ದಿನೇ ದಿನೇ ಇಳಿಕೆಯಾಗುತ್ತಲೇ ಇದೆ. ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನದ ದರಗಳು ಇಳಿಕೆಯತ್ತ ಮುಖಮಾಡಿವೆ. ಬೆಲೆ ಇಳಿಕೆ ಆಭರಣ ಪ್ರಿಯರಿಗೆ ಕೊಂಚ ರಿಲೀಫ್‌ ತಂದು ಕೊಟ್ಟಿದೆ. ಬೆಲೆ ಇಳಿಕೆ ಮಹಿಳೆಯರ ಸಂತಸವನ್ನು ದುಪ್ಪಟ್ಟು ಮಾಡಿದೆ. ಚಿನ್ನದ ಬೆಲೆ ಜೊತೆಗೆ ಬೆಳ್ಳಿ ಬೆಲೆಗಳು ಇಳಿಕೆಯಾಗಿದೆ. ಹಾಗಿದ್ರೆ ಜೂನ್‌ 25 ರಂದು ಬುಧವಾರ ಬೆಂಗಳೂರಿನಲ್ಲಿ ಗೋಲ್ಡ್‌ ರೇಟ್ ಹೇಗಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು..? ಚಿನ್ನದ ಮೇಲೆ ಹೂಡಿಕೆ ಮಾಡಲು ಇದು ಉತ್ತಮ ಸಮಯವೇ..? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.

ಹೌದು, ಬೆಂಗಳೂರಿನಲ್ಲಿ ಚಿನ್ನ,ಬೆಳ್ಳಿ ಇಂದು ಇಳಿಕೆಯಾಗಿದೆ. ಸದ್ಯ 10 ಗ್ರಾಂ 22 ಕ್ಯಾರೆಟ್‌ ಚಿನ್ನ 90,700
ರೂ.ಗಳು ಇದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 98,950 ರೂ.ಗಳು ಇದ್ದು,ನಿನ್ನೆಗೆ ಹೋಲಿಕೆ ಮಾಡಿದ್ರೆ 270ರೂ. ಗಳ ಇಳಿಕೆ ಕಂಡಿದೆ.ಅದರಲ್ಲೂ 100 ಗ್ರಾಂ ಅಪರಂಜಿ ಚಿನ್ನ ಇಂದು 2,700 ರೂ,ಗಳ ಕುಸಿತವನ್ನು ಕಂಡಿದೆ.

Gold Rate:  ಚಿನ್ನದ ಬೆಲೆಯಲ್ಲಿ ನಿರಂತರ ಕುಸಿತ..ಬೆಳ್ಳಿ ಕೂಡ ಅಗ್ಗ.

ಜೂನ್‌ 25ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆಗಳು

ಬೆಂಗಳೂರಿನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ ಒಂದು ಗ್ರಾಂಗೆ 9,070 ರೂ.ಗಳು ಇದೆ. ಇನ್ನೂ 10ಗ್ರಾಂ 22 ಕ್ಯಾರೆಟ್‌ ಚಿನ್ನ90,700 ರೂ.ಗಳು ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ರೆ 250 ರೂಪಾಯಿಗಳ ಇಳಿಕೆಯನ್ನು ಕಂಡಿದೆ.ಹಾಗೇ 100 ಗ್ರಾಂ 22 ಕ್ಯಾರೆಟ್‌ ಚಿನ್ನದ ಬೆಲೆ 2,500 ರೂ.ಗಳಷ್ಟ ಇಳಿಕೆಯಾಗಿ 9,07,000 ರೂ.ಗಳು ತಲುಪಿದೆ.

24 ಕ್ಯಾರೆಟ್‌ ಗೋಲ್ಡ್ ರೇಟ್

ಅಪರಂಜಿ 24 ಕ್ಯಾರೆಟ್‌ ಚಿನ್ನ ಒನ್‌ ಗ್ರಾಂಗೆ 9,895 ರೂ.ಗಳ ವ್ಯಾಪಾರವಿದೆ. 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 98,950 ರೂ. ಇದ್ದು, ನಿನ್ನೆಗೆ ಹೋಲಿಕೆ ಮಾಡಿದ್ದರೆ ರೂಪಾಯಿಗಳ 270 ರೂ.ಗಳ ಇಳಿಕೆ ಕಂಡಿದೆ. ಇದಲ್ಲದೆ,100 ಗ್ರಾಂ 24 ಕ್ಯಾರೆಟ್‌ ಚಿನ್ನ9,89,500 ರೂ.ಗಳ ವಾಹಿವಾಟುವಿದೆ.ಇದೇ ಚಿನ್ನವನ್ನು ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ರೆ 2,700 ರೂ.ಗಳ ಇಳಿಕೆಯನ್ನು ಕಂಡಿದೆ.

18 ಕ್ಯಾರೆಟ್‌ ಗೋಲ್ಡ್‌ ರೇಟ್

18 ಕ್ಯಾರೆಟ್‌ ಚಿನ್ನ ಸಹ ಇಂದು ಇಳಿಕೆ ಕಂಡಿದೆ. 1ಗ್ರಾಂ 7,421 ರೂ.ಇದೆ. 18 ಕ್ಯಾರೆಟ್‌ ಹತ್ತು ಗ್ರಾಂ ಚಿನ್ನಕ್ಕೆ74,210 ರೂ. ಇದೆ.100 ಗ್ರಾಂ 18 ಕ್ಯಾರೆಟ್‌ ಚಿನ್ನಕ್ಕೆ 7,42,100 ರೂ ಇದೆ. ಇಂದು ಚಿನ್ನದ ಬೆಲೆ ಇಳಿಕೆ ಕಂಡಿದೆ.

ಜೂನ್‌ 25 ರಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಗಳು

ಬೆಂಗಳೂರಿನಲ್ಲಿ ಬೆಳ್ಳಿಯ ಇಂದು ಇಳಿಕೆ ಕಂಡಿದೆ. ಪ್ರಸ್ತುತ ಪ್ರತಿ ಕಿಲೋಗ್ರಾಂಗೆ1,08,000 ರೂಪಾಯಿಗಳು ವಾಹಿವಾಟುವಿದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ರೆ ಸಾವಿರ ರೂಪಾಯಿಗಳ ಇಳಿಕೆಯಾಗಿದೆ. ಒಂದು ಗ್ರಾಂಗೆ ಬೆಳ್ಳಿಗೆ 108 ರೂ.ಗಳ ವ್ಯಾಪಾರದವಿದೆ.10 ಗ್ರಾಂ ಬೆಳ್ಳಿಯ ಬೆಲೆ 1,080 ರೂಪಾಯಿಯಾಗಿದೆ.100 ಗ್ರಾಂ ಬೆಳ್ಳಿ 10,800 ರೂ.ಗಳು ವ್ಯಾಪಾರವಿದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಬೆಳ್ಳಿಯ ಬೆಲೆಯಲ್ಲಿ ಇಂದು ಇಳಿಕೆಯನ್ನು ಕಂಡಿದೆ.

ಬೆಂಗಳೂರಿನಲ್ಲಿ 10 ದಿನಗಳಲ್ಲಿ ಚಿನ್ನದ ಬೆಲೆಗಳು

24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನವು ಮೇ ತಿಂಗಳಲ್ಲಿ ಏರಿಳಿತವನ್ನು ಕಂಡಿದೆ. ಜೂನ್‌ ತಿಂಗಳ ಮೊದಲ ವಾರದಲ್ಲಿ ಚಿನ್ನದ ಬೆಲೆಗಳು ಏರಿಕೆ ಕಂಡಿವೆ. 1,2,3,4ರಂದು ಚಿನ್ನದ ಬೆಲೆಗಳು ಏರಿಕೆ ಕಂಡಿವೆ. ತಿಂಗಳ ಮೊದಲ ಶನಿವಾರ ಭಾನುವಾರ ಯಥಾಸ್ಥಿತಿಯಲ್ಲಿ ಚಿನ್ನ ಇತ್ತು. ಜೂನ್‌ ತಿಂಗಳ 2ನೇ ವಾರದ ಮೊದಲು ದಿನ ಇರಿಳಿತ ಕಂಡತು ಮೂರನೇ ವಾರದಲ್ಲೂ ಕೂಡ ಚಿನ್ನ ಇಳಿಯತ್ತ ಸಾಗುತ್ತಿದೆ. 10 ದಿನಗಳ ಸರಾಸರಿ ಚಿನ್ನದ ದರವು 22 ಕ್ಯಾರೆಟ್‌ 9,070 ರೂ. ಮತ್ತು 1 ಗ್ರಾಂ 24 ಕ್ಯಾರೆಟ್‌ ಚಿನ್ನ 9,895 ರೂ. ದರವಿದೆ.

ಕರ್ನಾಟಕ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಗಳ ವಿವರ

ಮೈಸೂರಿನಲ್ಲಿ ಚಿನ್ನದ ಬೆಲೆ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಿನ್ನದ ಬೆಲೆಗಳು ಬೆಂಗಳೂರಿನ ಬೆಲೆಗಳ ಮಾದರಿಯಲ್ಲಿ ಇರುತ್ತವೆ. ಮೈಸೂರಿನಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 7,421 ರೂ,ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 9,070 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 9,895 ರೂ ಆಗಿದೆ.

ಮಂಗಳೂರಿನಲ್ಲಿ ಚಿನ್ನದ ಬೆಲೆ: ಕರಾವಳಿ ನಗರ ಮಂಗಳೂರಿನಲ್ಲಿಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 7,421 ರೂ,ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 9,070 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 9,895 ರೂ ಆಗಿದೆ.

ಗದಗದಲ್ಲಿ ಚಿನ್ನದ ಬೆಲೆ: ಬಿಸಿಲಿನ ನಗರಿ ಎಂದು ಕರೆಯಲ್ಪಡುವ ಗದಗದಲ್ಲಿಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 7,421 ರೂ,ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 9,070 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 9,895 ರೂ ಆಗಿದೆ.

ಮಂಡ್ಯದಲ್ಲಿ ಚಿನ್ನದ ಬೆಲೆ: ಸಕ್ಕರೆ ನಾಡು ಮಂಡ್ಯದಲ್ಲಿಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 7,421 ರೂ,ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 9,070 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 9,895 ರೂ ಆಗಿದೆ.

ಚಿತ್ರದುರ್ಗದಲ್ಲಿ ಚಿನ್ನದ ಬೆಲೆ: ಕೋಟೆ ನಾಡು ಮದಕರಿ ನಾಯಕರು ಆಳಿದ ನಾಡು ಚಿತ್ರದುರ್ಗದಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 7,421 ರೂ,ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 9,070 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 9,895 ರೂ ಆಗಿದೆ.

ಸ್ಪಾಟ್ ಚಿನ್ನದ ಬೆಲೆ ಹೇಗಿದೆ..?

ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆಗಳು ಇಂದು ಇಳಿಕೆಯಾಗಿದೆ.ಇಂದು ಸ್ಪಾಟ್ ಚಿನ್ನವು (ಜೂನ್ 24, 2025) ರಂದು ಸ್ಪಾಟ್ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ $3,368 ವಾಹಿವಾಟು ತಲುಪಿದೆ ರಾಯಿಟರ್ಸ್ ವರದಿ ಹೇಳಿದೆ.

ಅತಿ ಹೆಚ್ಚು ಚಿನ್ನ ಖರೀದಿ ಮಾಡುವ ದೇಶವೆಂದರೆ ಭಾರತ. ಯಾಕೆಂದರೆ ಭಾರತೀಯ ಮಹಿಳೆಯರಿಗೆ ಚಿನ್ನವೆಂದರೆ ಅಚ್ಚು-ಮಚ್ಚುದಂತಹ ವಸ್ತುವಾಗಿದೆ. ಹಬ್ಬ ಹರಿದಿನ, ಜಾತ್ರೆ, ಮದುವೆ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಹೆಚ್ಚಾಗಿ ಬಂಗಾರ ಕೊಂಡುಕೊಳ್ಳುತ್ತಾರೆ. ಅದರಲ್ಲೂ ಮದುವೆ ಸಮಾರಂಭದಲ್ಲಿ ವರದಕ್ಷಣೆ ಕೊಡಲು ಮಧು ಕಡೆಯವರು ಹೆಚ್ಚಿನ ಆಭರಣಗಳನ್ನು ಖರೀದಿಮಾಡುತ್ತಾರೆ. ಇನ್ನೂ ಹಲವಾರು ಮಂದಿ ಚಿನ್ನವನ್ನು ಹೊಡಿಕೆ ಮಾಡುವುದಕ್ಕಾಗಿ ತಗೆದುಕೊಳ್ಳುತ್ತಾರೆ. ಬಂಗಾರ ಶತಮಾನಗಳಿಂದ ಭಾರತದಲ್ಲಿ ಹೆಚ್ಚಿನ ಮೌಲ್ಯ ಮತ್ತು ಪ್ರಾಮುಖ್ಯತೆಯನ್ನು ಹೊಂದಿದೆ. ಲೋಹವು ಸಂಪತ್ತು ಮತ್ತು ಸಮೃದ್ಧಿಯನ್ನು ಸಂಕೇತವಾಗಿದೆ. ಸಾಂಪ್ರದಾಯಿಕ ಆಭರಣಗಳು ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಚಿನ್ನದ ಬಳಕೆಯಿಂದ ಭಾರತೀಯ ಸಂಸ್ಕೃತಿಯ ಭಾಗವಾಗವೆಂದೇ ಹೇಳಬಹುದು. ಯಾವುದೇ ಒಳ್ಳೆಯ ಸಂದರ್ಭದಲ್ಲೂ ಸಹ ಜನರು ಚಿನ್ನ ಖರೀದಿ ಮಾಡುತ್ತಾರೆ. ಚಿನ್ನ ಮನೆಯಲ್ಲಿ ಇದ್ದರೆ ಕಷ್ಟದ ಸಮಯಕ್ಕೆ ಸಹಾಯವಾಗುತ್ತದೆ ಎಂಬುದು ಅವರ ನಂಬಿಕೆ.

ಚಿನ್ನ ಬೆಲೆ ಏರಿಕೆಗೆ ಕಾರಣ..?

ಅಂತರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ, ಕರೆನ್ಸಿ ವಿನಿಮಯ ದರಗಳು, ದೇಶೀಯ ಬೇಡಿಕೆ,ಡೊನಾಲ್ಡ್ ಟ್ರಂಪ್ ಸುಂಕ ಯುದ್ದ, ಹೂಡಿಕೆದಾರರ ಅಭಿಪ್ರಾಯ, ಆರ್ಥಿಕ ಪರಿಸ್ಥಿತಿಗಳು ಪ್ರಮುಖವಾಗಿರಬಹುದು. ತರಿಗೆ ಹೆಚ್ಚಳ, ಯುದ್ದದ ಪ್ರಭಾವ,ಡಾಲರ್ ಏರಿಕೆ, ಜಾಗತಿಕ ಪರಿಸ್ಥಿತಿಗಳು ಕಾರಣವಾಗಬಹುದು. ಇಸ್ರೇಲ್ ಇರಾನ್‌ನ ಪರಮಾಣು ಮತ್ತು ಮಿಲಿಟರಿ ನಾಯಕತ್ವದ ಮೇಲೆ ವೈಮಾನಿಕ ದಾಳಿ ನಡೆಸಿದ ನಂತರ ಚಿನ್ನದ ಜೊತೆಗೆ, ಕಚ್ಚಾ ತೈಲ ಬೆಲೆಗಳು ಸೋಮವಾರ ಏರಿಕೆಯನ್ನು ಕಂಡಿವೆ. ಮುಂದಿನ ದಿನದಲ್ಲಿ ಚಿನ್ನ ಏರಿಕೆಯಾಗುತ್ತಾ?ಇಳಿಕೆಯಾಗುತ್ತಾ ಎಂಬುದನ್ನು ಕಾದುನೋಡಬೇಕಿದೆ.

Disclaimer: This article is strictly for informational purposes only. It is not a solicitation to buy, sell in precious metal products, commodities, securities or other financial instruments. Greynium Information Technologies Pvt Ltd, its subsidiaries, associates and the author of this article do not accept culpability for losses and/or damages arising based on information in this article.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+