Toll Rate Hike: ವಾಹನ ಸವಾರರಿಗೆ ಶಾಕ್...ಏಪ್ರಿಲ್​ನಿಂದ ಟೋಲ್ ಸುಂಕ ದುಬಾರಿ.. ಮತ್ತಷ್ಟು ದುಬಾರಿಯಾಗಲಿದೆ ಕಾರಿನ ದರ

ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶಾಕ್ ನೀಡಿದೆ. ಹೌದು, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ನಿಮ್ಮ ಕ್ಯಾಬ್ ಪ್ರಯಾಣ ಇನ್ನಷ್ಟು ದುಬಾರಿಯಾಗಲಿದೆ.ಬೆಂಗಳೂರಿನ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಯ (STRR) ಎರಡು ಕಾರ್ಯಾಚರಣಾ ಪ್ರದೇಶಗಳಲ್ಲಿ ಟೋಲ್ ದರ ಏರಿಕೆಯಾಗಲಿದೆ.

ಏಪ್ರಿಲ್ 1ರಿಂದ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಸಾದಹಳ್ಳಿ (KIA ರಸ್ತೆ, NH 7), ಹುಲಿಕುಂಟೆ ಮತ್ತು ನಲ್ಲೂರು ದೇವನಹಳ್ಳಿ (STRR, NH 648) ಟೋಲ್ ಪ್ಲಾಜಾಗಳಿಗೆ ಬಳಕೆದಾರರ ಶುಲ್ಕವನ್ನು (ಟೋಲ್ ಶುಲ್ಕಗಳು) ಹೆಚ್ಚಿಸಲಿದೆ.

Toll Rate Hike:  ಏಪ್ರಿಲ್​ನಿಂದ ಟೋಲ್ ಸುಂಕ ದುಬಾರಿ

ಏಪ್ರಿಲ್ 1 ರಿಂದ ಕರ್ನಾಟಕದಾದ್ಯಂತ ಟೋಲ್ (Toll) ಸುಂಕ ಶೇ 3-5 ರಷ್ಟು ಹೆಚ್ಚಾಗಲಿವೆ. ಈ ನಿಟ್ಟಿನಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಮೂಲಗಳು ಮಾಹಿತಿಯನ್ನು ತಿಳಿಸಿವೆ.

ಈ ಹೆಚ್ಚಳವು ಸಗಟು ಬೆಲೆ ಸೂಚ್ಯಂಕಕ್ಕೆ (WPI) ಸಂಬಂಧಿಸಿದ ವಾರ್ಷಿಕ ಕ್ರಮವಾಗಿದೆ.ಹಾಗೂ ಸಾದಹಳ್ಳಿ (22.12ಕಿ.ಮೀ) ಮೂಲಕ ಹಾದುಹೋಗುವ ಕಾರುಗಳು, ಜೀಪುಗಳು, ವ್ಯಾನ್‌ ಗಳು ಮತ್ತು ಇತರ ಲಘು ಮೋಟಾರು ವಾಹನಗಳು ಒಂದು ಪ್ರಯಾಣಕ್ಕೆ 120 ರೂ. ಮತ್ತು ಒಂದು ದಿನದೊಳಗೆ ಹಿಂತಿರುಗಲು 180 ರೂ.ಗಳ ದರನ್ನು ಪಾವತಿಸಬೇಕಾಗುತ್ತದೆ.

Take a Poll

50 ಏಕ ಪ್ರಯಾಣಗಳಿಗೆ ಮಾಸಿಕ ಪಾಸ್ 3,970 ರೂ. ವೆಚ್ಚವಾಗಲಿದೆ. ಪ್ರಸ್ತುತ ದರಗಳು 115, 170 ,3,835 ರೂ.ಗಳು ಇರುತ್ತವೆ. ಸಣ್ಣ ವಾಣಿಜ್ಯ ವಾಹನಗಳು ಮತ್ತು ಮಿನಿ ಬಸ್‌ಗಳು ಒಂದೇ ಪ್ರಯಾಣಕ್ಕೆ 185 ರೂ. ಮತ್ತು ಒಂದು ದಿನದೊಳಗೆ ಹಿಂತಿರುಗಲು 275 ರೂ. ಪಾವತಿಸಬೇಕಾಗುತ್ತದೆ. 50 ಏಕ ಪ್ರಯಾಣಗಳಿಗೆ ಮಾಸಿಕ ಪಾಸ್‌ಗೆ 6,100 ರೂ. ವೆಚ್ಚವಾಗಲಿದೆ. ಪ್ರಸ್ತುತ ದರಗಳು 175 ರೂ., 265 ರೂ. ಮತ್ತು 5,890 ರೂ ಇರಲಿದೆ.

ಟ್ರಕ್‌ಗಳು ಮತ್ತು ಬಸ್‌ಗಳು ಒಂದೇ ಪ್ರಯಾಣಕ್ಕೆ 370 ರೂ.ಒಂದು ದಿನದೊಳಗೆ ಹಿಂತಿರುಗಲು 550 ರೂ. ಮತ್ತು ಮಾಸಿಕ ಪಾಸ್‌ಗೆ 12,265 ರೂ. ಪಾವತಿಸಬೇಕಾಗುತ್ತದೆ. ಪ್ರಸ್ತುತ ದರಗಳು 355 ರೂ. 535 ರೂ. ಮತ್ತು 11,845 ರೂ. ಹೆಚ್ಚಿದ ಟೋಲ್ ಶುಲ್ಕಗಳು ಎಲ್ಲಾ ಪ್ರಯಾಣಿಕರ ಮೇಲೆ ಪರಿಣಾಮ ಬೀರುತ್ತವೆ.

ಅವರು ಕ್ಯಾಬ್‌ ಗಳಲ್ಲಿ ಪ್ರಯಾಣಿಸಲಿ, ವೈಯಕ್ತಿಕ ವಾಹನಗಳಲ್ಲಿ ಪ್ರಯಾಣಿಸಲಿ ಅಥವಾ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಲಿ (ವಾಯು ವಜ್ರ ಬಸ್ ಸೇವೆಗಳು). 42 ಕಿ.ಮೀ. ಉದ್ದದ ಡೊನ್ಸಪೇಟೆ-ದೊಡ್ಡಬಳ್ಳಾಪುರ ಮಾರ್ಗವನ್ನು ಬಳಸುವ ಕಾರುಗಳು ಮತ್ತು ಇತರ ಲಘು ಮೋಟಾರು ವಾಹನಗಳು ಹುಲಿಕುಂಟೆ ಟೋಲ್ ಪ್ಲಾಜಾದಲ್ಲಿ 110 ರೂ. (ಒಂದೇ ಪ್ರಯಾಣ), 165 ರೂ. (ತಿರುವು ಪ್ರಯಾಣ) ಮತ್ತು 3,615 ರೂ. (ಮಾಸಿಕ ಪಾಸ್) ಪಾವತಿಸಬೇಕಾಗುತ್ತದೆ. ಪ್ರಸ್ತುತ ದರಗಳು 105 ರೂ., 155 ರೂ. ಮತ್ತು 3,490 ರೂ ಇದೆ.

ದೊಡ್ಡಬಳ್ಳಾಪುರ ಬೈಪಾಸ್-ಹೊಸಕೋಟೆ ಮಾರ್ಗದ 34.15 ಕಿ.ಮೀ. ಉದ್ದದ ಎಸ್‌ಟಿಆರ್‌ಆರ್ ಮಾರ್ಗವನ್ನು ಬಳಸುವ ಕಾರುಗಳು ಮತ್ತು ಇತರ ಲಘು ಮೋಟಾರು ವಾಹನಗಳು ನಲ್ಲೂರು ದೇವನಹಳ್ಳಿ ಟೋಲ್ ಪ್ಲಾಜಾದಲ್ಲಿ 85 ರೂ. (ಒಂದೇ ಪ್ರಯಾಣ) ಮತ್ತು 125 ರೂ. (ತಿರುವು ಪ್ರಯಾಣ) ಪಾವತಿಸಬೇಕಾಗುತ್ತದೆ. ಪ್ರಸ್ತುತ ದರಗಳು 70 ರೂ., 105 ರೂ. ಮತ್ತು 3,490 ರೂ ಇದೆ.

ಟೋಲ್ ಸುಂಕ ಹೆಚ್ಚವಾಗಲಿರುವ ಮುಖ್ಯ ಟೋಲ್ ಪ್ಲಾಜಾಗಳು ಯಾವುವು?
ರಾಜ್ಯದಲ್ಲಿ ಸುಮಾರು 66 ಟೋಲ್ ಪ್ಲಾಜಾಗಳಿವೆ. ಟೋಲ್ ಸುಂಕ ಹೆಚ್ಚಾಗುವ ಟೋಲ್ ಪ್ಲಾಜಾಗಳಲ್ಲಿ ಅವುಗಳು ಯಾವುವುವೆಂದರೆ, ಕಣಿಮಿಣಿಕೆ ಮತ್ತು ಶೇಷಗಿರಿಹಳ್ಳಿ (ಬೆಂಗಳೂರು-ಮೈಸೂರು), ನಂಗ್ಲಿ (ಬೆಂಗಳೂರು-ತಿರುಪತಿ), ಬಾಗೇಪಲ್ಲಿ (ಬೆಂಗಳೂರು-ಹೈದರಾಬಾದ್), ಸಾದಹಳ್ಳಿ (ಬೆಂಗಳೂರು ವಿಮಾನ ನಿಲ್ದಾಣ ರಸ್ತೆ), ಮತ್ತು ಹುಲಿಕುಂಟೆ ಮತ್ತು ನಲ್ಲೂರು ದೇವನಹಳ್ಳಿ (ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ) ಟೋಲ್ ಪ್ಲಾಜಾಗಳು ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+