ರಾಜರು, ಅವರ ಆಳ್ವಿಕೆ, ವೈಭವ, ಸಾಮ್ರಾಜ್ಯ ವಿಸ್ತರಣೆ ಇವುಗಳ ಬಗ್ಗೆ ನಿಮಗೆ ಆಸಕ್ತಿ ಅಥವಾ ಕುತೂಹಲ ಇದೆ ಅಂದರೆ ಈ ಲೇಖನವಂತೂ ನೀವು ಓದಲೇಬೇಕು. ಏಕೆಂದರೆ ಮಾನವ ಇತಿಹಾಸದ ವಿವಿಧ ಹಂತದಲ್ಲಿ ಅತಿ ದೊಡ್ಡ ಸಾಮ್ರಾಜ್ಯಗಳನ್ನು ಆಳಿದವರ ವಿವರಣೆ ಇದೆ. ಅವರ ಆಳ್ವಿಕೆ ಇಷ್ಟು ಅಗಾಧ ಪ್ರಮಾಣದಲ್ಲಿ ವ್ಯಾಪಿಸಿತ್ತು ಎಂಬುದು ಗೊತ್ತಾದರೆ ಎಂಥವರಿಗೂ ಅಚ್ಚರಿ ಆಗುತ್ತದೆ.
ಅಂಥ ಅಚ್ಚರಿಗೆ ಎದುರುಗೊಳ್ಳುವಂತೆ ಮಾಡುವ ಹತ್ತು ಅತಿ ದೊಡ್ಡ ಸಾಮ್ರಾಜ್ಯಗಳ ಯಾವುವು? ಇಲ್ಲಿದೆ ಮಾಹಿತಿ. ಒಂದು ಸಂದರ್ಭದಲ್ಲಂತೂ ಒಬ್ಬ ರಾಜನ ಆಳ್ವಿಕೆಯಲ್ಲಿ ಆಗಿನ ವಿಶ್ವದ ಒಟ್ಟು ಜನಸಂಖ್ಯೆಯ ಇಪ್ಪತ್ತೊಂಬತ್ತರಷ್ಟು ಮಂದಿ ಒಳಪಟ್ಟಿದ್ದರು ಎಂಬುದಂತೂ ಮತ್ತೊಂದು ಅಚ್ಚರಿ. ಇನ್ನೇಕೆ ತಡ, ಮುಂದೆ ಓದಿ.
ಪೋರ್ಚುಗೀಸ್ ಸಾಮ್ರಾಜ್ಯ
ಪೋರ್ಚುಗೀಸ್ ಸಾಮ್ರಾಜ್ಯದ ಉಚ್ಛ್ರಾಯ ಕಾಲ ಇದ್ದದ್ದು 1815ನೇ ಇಸವಿಯಲ್ಲಿ. 40.2 ಲಕ್ಷ ಚದರ ಮೈಲಿಯಷ್ಟು ವ್ಯಾಪ್ತಿಗೆ 1815ನೇ ಇಸವಿಯಲ್ಲಿ ಸಾಮ್ರಾಜ್ಯ ಇತ್ತು. ಈಗಿನ ಬ್ರೆಜಿಲ್, ಮೊಜಾಂಬಿಕ್, ಜಾಂಬಿಯಾ, ಜಿಂಬಾಬ್ವೆ ಸೇರಿದಂತೆ ಆಫ್ರಿಕಾದ ಮತ್ತಿತರ ಭಾಗಗಳಲ್ಲಿ ಪೋರ್ಚುಗೀಸ್ ಆಡಳಿತ ಇತ್ತು.
ಯುವಾನ್ ರಾಜ ಮನೆತನ
ಯುವಾನ್ ವಂಶಾಡಳಿತವನ್ನು ಅಧಿಕಾರಕ್ಕೆ ತಂದವನು ಕುಬ್ಲಾಯ್ ಖಾನ್. ಆತ ಸಾಂಗ್ ರಾಜ ಮನೆತನವನ್ನು ಸೋಲಿಸಿ, ಅಧಿಕಾರಕ್ಕೆ ಬಂದ. ಅದಕ್ಕೆ ಮುನ್ನ 960ನೇ ಇಸವಿಯಿಂದಲೂ ಚೀನಾದಲ್ಲಿ ಅಧಿಕಾರ ನಡೆಸುತ್ತಿದ್ದ ಕುಟುಂಬ ಅದು. 1310ನೇ ಇಸವಿಯಲ್ಲಿ ಯುವಾನ್ ರಾಜ ಮನೆತನದ ವೈಭವದ ದಿನಗಳಲ್ಲಿ 42.5 ಲಕ್ಷ ಚದರ ಮೈಲು ಆಡಳಿತ ವ್ಯಾಪಿಸಿತ್ತು. ಈ ಸಂದರ್ಭದಲ್ಲಿ ಆರ್ಥಿಕ, ಸಾಂಸ್ಕೃತಿಕ, ವೈಜ್ಞಾನಿಕ ಬೆಳವಣಿಗೆಗಳು ಆದವು. ಕುಬ್ಲಾಯ್ ಖಾನ್ ಮತ್ತು ಆತನ ಉತ್ತರಾಧಿಕಾರಿಗಳು ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಉತ್ತೇಜನ ನೀಡಿದರು.
ಉಮಯ್ಯದ್ ಖಲೀಫ
720ನೇ ಇಸವಿಯಲ್ಲಿ ಉಮಯ್ಯದ್ ಸಾಮ್ರಾಜ್ಯ 42.9 ಲಕ್ಷ ಚದರ ಮೈಲು ವಿಸ್ತಾರಗೊಂಡಿತ್ತು. ಸಿರಿಯಾ, ಡಮಾಸ್ಕಸ್, ಮಗ್ರೇಬ್, ಸಿಂಧ್, ಪಂಜಾಬ್ ಸೇರಿದಂತೆ ಬಹಳ ದೊಡ್ಡ ಭೂ ಭಾಗ ಆಳುತ್ತಿದ್ದ ಸಾಮ್ರಾಜ್ಯ. ಆಗ ವಿಶ್ವದ ಒಟ್ಟು ಜನಸಂಖ್ಯೆ 6.2 ಕೋಟಿ ಇದ್ದರೆ ಅದರಲ್ಲಿ ಹತ್ತಿರಹತ್ತಿರ ಶೇಕಡಾ 29ರಷ್ಟು ಮಂದಿ ಈ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿದ್ದರು.
ಅಬ್ಬಸಿದ್ ಖಲೀಫ
750ನೇ ಇಸವಿಯಲ್ಲಿ ಉಮಯ್ಯದ್ ಖಲೀಫನನ್ನು ಸೋಲಿಸಿದ ಅಬ್ಬಸಿದ್ ಅಧಿಕಾರಕ್ಕೆ ಬಂದು, 42.9 ಲಕ್ಷ ಮೈಲು ವ್ಯಾಪ್ತಿಗೆ ಆಡಳಿತ ನಡೆಸಿದ. ಆ ಸಾಮ್ರಾಜ್ಯವನ್ನು ಮಣಿಸಿದ್ದು ಮಂಗೋಲಿಯನ್ನರು. 1258ನೇ ಇಸವಿಯಲ್ಲಿ ಮಂಗೋಲಿಯನ್ನರು ಮಣಿಸುವ ತನಕ ಅಷ್ಟು ವಿಶಾಲವಾದ ಪ್ರದೇಶ ಆಳ್ವಿಕೆ ನಡೆಸಿದ್ದು ಅಬ್ಬಸಿದ್ ಖಲೀಫ. ಈಗಿನ ಮಧ್ಯಪ್ರಾಚ್ಯ, ಕೇಂದ್ರ್ ಏಷ್ಯಾ, ದಕ್ಷಿಣ ಯುರೋಪ್ ಮತ್ತು ಉತ್ತರ ಆಫ್ರಿಕಾ ಭಾಗ ಕೂಡ ಆಳ್ವಿಕೆ ಪ್ರದೇಶಕ್ಕೆ ಒಳಪಟ್ಟಿತ್ತು.
ಎರಡನೇ ಫ್ರೆಂಚ್ ಸಾಮ್ರಾಜ್ಯ
1920ರಲ್ಲಿ ಎರಡನೇ ಫ್ರೆಂಚ್ ಸಾಮ್ರಾಜ್ಯದ ಆಳ್ವಿಕೆಗೆ 44.4 ಲಕ್ಷ ಚದರ ಮೈಲು ಪ್ರದೇಶ ಒಳಪಟ್ಟಿತ್ತು. ಮೊದಲ ವಿಶ್ವಯುದ್ಧದಲ್ಲಿ ಇತರರ ಸಹಾಯ ಪಡೆದು, ಫ್ರಾನ್ಸ್ ದೇಶವು ಜರ್ಮನಿಯನ್ನು ಸೋಲಿಸಿತು. ಆನಂತರ ಕೃಷಿ ಮತ್ತು ಕೈಗಾರಿಕೆ ಉತ್ಪಾದನೆಯಿಂದ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಂಡಿತು. ಆದರೆ 1931ರಲ್ಲಿ ಮಹಾ ಆರ್ಥಿಕ ಕುಸಿತದ ಪ್ರಭಾವಕ್ಕೆ ಸಿಲುಕಿತು. ಆದರೆ ಈ ಸಾಮ್ರಾಜ್ಯವು ಯುರೋಪ್, ಆಫ್ರಿಕಾ, ಉತ್ತರ ಅಮೆರಿಕ, ಏಷ್ಯಾದಲ್ಲಿ ಕೂಡ ವಿಸ್ತರಿಸಿದ್ದು, ತನ್ನ ಪಾರಮ್ಯ ಕಳೆದುಕೊಂಡಿತು.
ಸ್ಪ್ಯಾನಿಷ್ ಸಾಮ್ರಾಜ್ಯ
1810ನೇ ಇಸವಿಯ ವೈಭವದ ಘಟ್ಟದಲ್ಲಿ ಸ್ಪ್ಯಾನಿಷ್ ಸಾಮ್ರಾಜ್ಯವು 52.9 ಲಕ್ಷ ಚದರ ಮೈಲು ವ್ಯಾಪ್ತಿಗೆ ಆಡಳಿತ ನಡೆಸಿತ್ತು. ಸ್ಪ್ಯಾನಿಷ್ ಸಾಮ್ರಾಜ್ಯದ ವಸಾಹತು, ಪ್ರದೇಶಗಳು ಅಮೆರಿಕ, ಏಷ್ಯಾ, ಆಫ್ರಿಕಾ, ಒಸಿಯಾನಿಯಾ ಮತ್ತು ಫಿಲಿಪೈನ್ಸ್ ಮತ್ತಿತರ ಕಡೆಗಳಲ್ಲಿ ವ್ಯಾಪಿಸಿತ್ತು. ಆದರೆ ವ್ಯಾಪಾರ- ಪ್ರದೇಶ- ಧರ್ಮದ ತಿಕ್ಕಾಟಗಳ ಕಾರಣಕ್ಕೆ ಸೇನೆ ಮತ್ತು ಆರ್ಥಿಕತೆ ಅನಿಶ್ಚಿತತೆ ಬಿರುಗಾಳಿಗೆ ಸಿಲುಕಿತು.
ಖಿಂಗ್ ಸಾಮ್ರಾಜ್ಯ
ಖಿಂಗ್ ಸಾಮ್ರಾಜ್ಯವು 1790ನೇ ಇಸವಿ ಹೊತ್ತಿಗೆ 56.8 ಲಕ್ಷ ಚದರ ಮೈಲು ವ್ಯಾಪ್ತಿಗೆ ಆಡಳಿತ ನಡೆಸುತ್ತಿತ್ತು. ಚೀನಾವನ್ನು ಆಳಿದ ಕೊನೆ ರಾಜ ಮನೆತನ ಇದು. 1644ನೇ ಇಸವಿಯಿಂದ 1911/12ರ ತನಕ ಖಿಂಗ್ ವಂಶಾಡಳಿತ ಇತ್ತು. 18ನೇ ಶತಮಾನದಲ್ಲಿ ಈ ಸಾಮ್ರಾಜ್ಯದ ಆಡಳಿತ ಉಚ್ಛ್ರಾಯ ಸ್ಥಿತಿ ತಲುಪಿತು. ಆಗ 50 ಲಕ್ಷ ಚದರ ಮೈಲು ವ್ಯಾಪ್ತಿಯ ಆಡಳಿತ ನಡೆಸಿತು.
ರಷ್ಯನ್ ಸಾಮ್ರಾಜ್ಯ
1895ರಲ್ಲಿ ರಷ್ಯನ್ ಸಾಮ್ರಾಜ್ಯ ವ್ಯಾಪ್ತಿಗೆ 88 ಲಕ್ಷ ಚದರ ಮೈಲು ಒಳಪಟ್ಟಿತ್ತು. ಮಾಸ್ಕೋ, ಸೇಂಟ್ ಪೀಟರ್ಸ್ ಬರ್ಗ್, ರಷ್ಯನ್ ಪೋಲಂಡ್, ಕೇಂದ್ರ ಯುರೋಪಿಯನ್ ರಷ್ಯನ್ ಪ್ರದೇಶ, ಬಾಲ್ಟಿಕ್ ನಗರಗಳು, ದಕ್ಷಿಣ ಉರಲ್ ಪರ್ವತಗಳು ಈ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿತ್ತು.
ಮಂಗೋಲ್ ಸಾಮ್ರಾಜ್ಯ
ಮಂಗೋಲಿಯನ್ನರ ಸಾಮ್ರಾಜ್ಯವು 1270ರಲ್ಲಿ 92.7 ಲಕ್ಷ ಚದರ ಮೈಲು ವ್ಯಾಪಿಸಿತ್ತು. ಮಂಗೋಲರು ಮೂಲತಃ ಅಲೆಮಾರಿಗಳು. ಅವರನ್ನು ಒಗ್ಗೂಡಿಸಿದ್ದು ಜೆಂಗೀಸ್ ಖಾನ್, 1206ನೇ ಇಸವಿಯಲ್ಲಿ. ಆ ನಂತರ ಮಾನವ ಇತಿಹಾಸದಲ್ಲೇ ಅತಿ ದೊಡ್ಡ ಸಾಮ್ರಾಜ್ಯವಾದ 92.7 ಲಕ್ಷ ಚದರ ಮೈಲು ವ್ಯಾಪಿಸಿತು. ಕೇಂದ್ರ ಏಷ್ಯಾ, ಜಪಾನ್ ಸಮುದ್ರ, ಕೇಂದ್ರ ಯುರೋಪ್, ಲೆವೆಂಟ್ ಪಶ್ಚಿಮ ಮತ್ತು ಅರೇಬಿಯಾ ತನಕ ವ್ಯಾಪಿಸಿತ್ತು. ಇನ್ನು ಉತ್ತರದ ಕಡೆ ಸೈಬೀರಿಯಾ, ದಕ್ಷಿಣ ಮತ್ತು ಪೂರ್ವಕ್ಕೆ ಇಂಡೋಚೀನಾ, ಇರಾನಿಯನ್ ಪ್ರಸ್ಥ ಭೂಮಿ ಮತ್ತು ಭಾರತದ ಉಪಖಂಡದ ತನಕ ವ್ಯಾಪಿಸಿತ್ತು.
ಬ್ರಿಟಿಷ್ ಸಾಮ್ರಾಜ್ಯ
1920ರ ಹೊತ್ತಿಗೆ ತನ್ನ ಉಚ್ಛ್ರಾಯ ಘಟ್ಟದಲ್ಲಿ 1.37 ಕೋಟಿ ಚದರ ಮೈಲು ಪ್ರದೇಶವು ಈ ಸಾಮ್ರಾಜ್ಯದ ವ್ಯಾಪ್ತಿಯಲ್ಲಿತ್ತು. ಆ ಕಾರಣಕ್ಕೆ, 'ಸೂರ್ಯ ಮುಳುಗದ ಸಾಮ್ರಾಜ್ಯ' ಎಂದು ಕರೆಯಲಾಗುತ್ತಿತ್ತು. ಅದಕ್ಕೆ ಕಾರಣವೂ ಪ್ರತಿ ಖಂಡದಲ್ಲೂ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟ ಪ್ರದೇಶಗಳು ಇದ್ದವು. ದಕ್ಷಿಣ ಆಫ್ರಿಕಾ ಒಕ್ಕೂಟ, ಆಸ್ಟ್ರೇಲಿಯಾ, ಕೆನಡಾ, ನ್ಯೂಜಿಲೆಂಡ್, ಕೆನ್ಯಾ, ನೈಜೀರಿಯಾ, ಭಾರತ, ಈಜಿಪ್ಟ್, ಸೂಡಾನ್, ಬರ್ಮಾ, ಸಿಂಗಾಪೂರ್ ಹೀಗೆ ಆನೇಕ ದೇಶಗಳ ಮೇಲೆ ಲಂಡನ್ ನಿಂದಲೇ ಅಧಿಕಾರ ಚಲಾಯಿಸಲಾಗುತ್ತಿತ್ತು. 1913ನೇ ಇಸವಿ ಹೊತ್ತಿಗೆ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದ ಪ್ರದೇಶಗಳಲ್ಲಿ 41.2 ಕೋಟಿ ಮಂದಿ ವಾಸವಿದ್ದರು. ಅಂದರೆ ಆ ಸಮಯದಲ್ಲಿನ ವಿಶ್ವದ ಒಟ್ಟು ಜನಸಂಖ್ಯೆಯ ಶೇಕಡಾ 23ರಷ್ಟು ಮಂದಿ ಬ್ರಿಟಿಷರ ಆಳ್ವಿಕೆಯಲ್ಲಿ ಇದ್ದರು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications