Year Ender 2024: 2024 ಮುಗಿಯಲು ಕೆಲವೇ ದಿನಗಳು ಬಾಕಿ ಉಳಿದಿದೆ. ಪ್ರತಿವರ್ಷದಂತೆ ಈ ವರ್ಷವೂ ಷೇರು ಮಾರುಕಟ್ಟೆಗಳಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಹೌದು, ಭೌಗೋಳಿಕ, ರಾಜಕೀಯ ಉದ್ವಿಗ್ನತೆ ಮತ್ತು ಆರ್ಥಿಕ ಅನಿಶ್ಚಿತತೆಗಳ ನಡುವೆ ವಿಶ್ವದಾದ್ಯಂತ ಷೇರು ಮಾರುಕಟ್ಟೆಗಳಲ್ಲಿ ಸಂಚಲನ ಸೃಷ್ಟಿಯಾಗಿದೆ. ಇದು ಸಂಸ್ಥೆಗಳ ಮಾರುಕಟ್ಟೆ ಮೌಲ್ಯದ ಮೇಲೆ ಪರಿಣಾಮ ಬೀರುತ್ತದೆ. ನಾವು ಈ ಲೇಖನದಲ್ಲಿ ವಿಶ್ವದ 10 ದೊಡ್ಡ ಕಂಪನಿಗಳ ಬಗ್ಗೆ ತಿಳಿಸಿದ್ದೇವೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಹೌದು, ಮಾರುಕಟ್ಟೆ ಕ್ಯಾಪ್ ಲೆಕ್ಕದಲ್ಲಿ ವಿಶ್ವದ 10 ದೊಡ್ಡ ಕಂಪನಿಗಳ ಹೆಸರುಗಳನ್ನು ಗಮನಿಸಿದರೆ ಆಪಲ್, ಮೆಟಾ, ಟೆಸ್ಲಾ ಸೇರಿದಂತೆ ಆಲ್ಫಾಬೆಟ್ ಹೆಸರುಗಳು ಬರುತ್ತವೆ. ಆದರೆ, ಈ ಪಟ್ಟಿಯಲ್ಲಿ ಊಹೆಗೂ ನಿಲುಕದ ಕಂಪನಿ ಹೆಸರು ಅಗ್ರಸ್ಥಾನದಲ್ಲಿದೆ. ಅಚ್ಚರಿ ಎಂಬಂತೆ ಎನ್ವಿಡಿಯಾ ಹೆಸರು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆಪಲ್ ಕಂಪನಿ ಮತ್ತು ಎಲೋನ್ ಮಸ್ಕ್ ಅವರ ಕಂಪನಿ ಯಾವ ಸ್ಥಾನದಲ್ಲಿದೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.

ವಿಶ್ವದ 10 ದೊಡ್ಡ ಕಂಪನಿಗಳಿವು!
ಎನ್ವಿಡಿಯಾ (Nvidia) ಕಂಪನಿಯು 1993 ರಲ್ಲಿ ಯುಎಸ್‌ಎ (USA) ಅಲ್ಲಿ ಪ್ರಾರಂಭವಾಯಿತು. ಕಂಪನಿಯು ಸಿಇಒ ಜೆನ್ಸನ್ ಹುವಾಂಗ್ ನೇತೃತ್ವದಲ್ಲಿ ಬಹಳಷ್ಟು ಅಭಿವೃದ್ಧಿ ಕಂಡಿದೆ. ಓಪನ್ ಎಐನ (OpenAI) ಚಾಟ್ ಜಿಪಿಟಿ (ChatGPT) ಯಂತಹ ಉತ್ಪಾದಕ ಎಐ (AI) ಪ್ಲಾಟ್‌ಫಾರ್ಮ್‌ಗಳಿಗೆ ಅದ್ವಿತೀಯ ಜಿಪಿಯುಗಳ ಮೇಲೆ ಕಂಪನಿಯ ಗಮನವು ಮುಖ್ಯವಾಗಿದೆ. ಈ ಸಾಧನೆ ತಾಂತ್ರಿಕ ಆವಿಷ್ಕಾರವನ್ನು ಮುಂದುವರೆಸುವಲ್ಲಿ ಎನ್ವಿಡಿಯಾದ ಪ್ರಮುಖ ಪಾತ್ರವನ್ನು ಎತ್ತಿತೋರಿಸುತ್ತದೆ. ಇದರ ಒಟ್ಟು ಮಾರುಕಟ್ಟೆ ಮೌಲ್ಯ 3.571 ಟ್ರಿಲಿಯನ್ ಡಾಲರ್ ಆಗಿದೆ. ಪ್ರಸ್ತುತ, ಈ ಕಂಪನಿಯು ವಿಶ್ವದ ಅತಿದೊಡ್ಡ ಕಂಪನಿಯಾಗಿ ಹೊರಹೊಮ್ಮಿದೆ.
ಟೆಕ್ ದೈತ್ಯ ಆಪಲ್‌ಗೆ ಎರಡನೇ ಸ್ಥಾನ
ಅಮೆರಿಕಾ ಮೂಲದ ಟೆಕ್ ಕಂಪನಿ ಆಪಲ್ 1976 ರಲ್ಲಿ ಪ್ರಾರಂಭವಾಯಿತು. ಟಿಮ್ ಕುಕ್ ಸಾರಥ್ಯದಲ್ಲಿ ಈ ಕಂಪನಿಯು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಇದರ ಒಟ್ಟು ಮಾರುಕಟ್ಟೆ ಮೌಲ್ಯ $3.36 ಟ್ರಿಲಿಯನ್ ಆಗಿದೆ. ಕಂಪನಿಯ ಪ್ರಸಿದ್ಧ ಬ್ರ್ಯಾಂಡ್‌ಗಳು ಐಫೋನ್ (iPhone) ಮತ್ತು ಮ್ಯಾಕ್ (Mac) ನಂತಹ ಉತ್ಪನ್ನಗಳನ್ನು ಒಳಗೊಂಡಿವೆ. ಇದು ನಾವೀನ್ಯತೆ ಮತ್ತು ಡಿಸೈನ್ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಸೈ ಎನಿಸಿಕೊಂಡಿದೆ.
ಮೂರನೇ ಸ್ಥಾನದಲ್ಲಿ ಮೈಕ್ರೋಸಾಫ್ಟ್
ಮೈಕ್ರೋಸಾಫ್ಟ್ ಕಾರ್ಪೊರೇಷನ್ ಅನ್ನು 1975 ರಲ್ಲಿ ಅಮೇರಿಕಾದಲ್ಲಿ ಸ್ಥಾಪಿಸಲಾಯಿತು. ಪ್ರಸ್ತುತ, ಸತ್ಯ ನಾಡೆಲ್ಲಾ ಸಿಇಒ ಆಗಿ ಕೆಲಸ ಮಾಡುತ್ತಿದ್ದಾರೆ. ಇದು ವಿಂಡೋಸ್ ಮತ್ತು ಆಫೀಸ್‌ನಂತಹ ವೈವಿಧ್ಯಮಯ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಮೈಕ್ರೋಸಾಫ್ಟ್‌ನ ಒಟ್ಟು ಮಾರುಕಟ್ಟೆ ಮೌಲ್ಯ 3.13 ಟ್ರಿಲಿಯನ್ ಡಾಲರ್ ಆಗಿದೆ. ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿನ ಇದರ ಸಾಧನೆಗಳು ಮೈಕ್ರೋಸಾಫ್ಟ್‌ನ ಸ್ಥಾನವನ್ನು ವಿಶ್ವಾದ್ಯಂತ ಪ್ರಮುಖ ಆದಾಯ ಉತ್ಪಾದಿಸುವ ಕಂಪನಿಯಾಗಿ ಬಲಪಡಿಸಿದೆ.
ಟಾಪ್ 5 ನಲ್ಲಿ ಪ್ರಸಿದ್ಧ ಶಾಪಿಂಗ್ ಸೈಟ್ ಅಮೆಜಾನ್
ಪ್ರಸಿದ್ಧ ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್ ಈ ಪಟ್ಟಿಯಲ್ಲಿ ಟಾಪ್ 5 ನಲ್ಲಿ ಕಾಣಿಸಿಕೊಂಡಿದೆ. ಈ ಕಂಪನಿಯ ಮಾರುಕಟ್ಟೆ ಮೌಲ್ಯ $2.17 ಟ್ರಿಲಿಯನ್ ಆಗಿದೆ. ಈ ಮೂಲಕ ಅಮೆಜಾನ್ ನಾಲ್ಕನೇ ಸ್ಥಾನದಲ್ಲಿದೆ. ಈ ಕಂಪನಿಯನ್ನು 1994 ರಲ್ಲಿ ಪ್ರಾರಂಭಿಸಲಾಯಿತು. ಪ್ರಸ್ತುತ, ಅಮೆಜಾನ್ ಸಿಇಒ ಆಂಡಿ ಜೆಸ್ಸಿ ಆಗಿದ್ದಾರೆ. ಇದರ ನಂತರ ಆಲ್ಫಾಬೆಟ್ ಬರುತ್ತದೆ. ಇದರ ಒಟ್ಟು ಮಾರುಕಟ್ಟೆ ಮೌಲ್ಯ $2.17 ಟ್ರಿಲಿಯನ್ ಆಗಿದೆ. ಭಾರತೀಯ ಮೂಲದ ಸುಂದರ್ ಪಿಚೈ ಇದರ ಸಿಇಒ ಆಗಿ ಕೆಲಸ ಮಾಡುತ್ತಿದ್ದಾರೆ.
ಸೌದಿ ಅರಾಮ್ಕೊ ಕೂಡ ಟಾಪ್ 10 ನಲ್ಲಿದೆ
ತೈಲ ಮತ್ತು ಅನಿಲ ವಲಯಕ್ಕೆ ಸಂಬಂಧಿಸಿದ ಸೌದಿ ಅರೇಬಿಯಾದ ಕಂಪನಿ ಸೌದಿ ಅರಾಮ್ಕೊ ಕೂಡ ಟಾಪ್ 10 ಪಟ್ಟಿಯಲ್ಲಿ ಒಂದಾಗಿದೆ. ಪ್ರಸ್ತುತ ಅಮೀನ್ ಎಚ್.ನಾಸರ್ ಕಂಪನಿಯ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಂಪನಿಯನ್ನು ಸೌದಿ ಅರೇಬಿಯಾದಲ್ಲಿ 1933 ರಲ್ಲಿ ಸ್ಥಾಪನೆ ಮಾಡಲಾಯಿತು.
ಬರ್ಕ್‌ಷೈರ್ ಹಾಥ್‌ವೇ ಇಂಕ್
ಟಾಪ್ 10 ಪಟ್ಟಿಯಲ್ಲಿ ಬರ್ಕ್‌ಷೈರ್ ಹಾಥ್‌ವೇ ಇಂಕ್ ಸಹ ಇದೆ. ಈ ಸಂಸ್ಥೆಯನ್ನು 1839 ರಲ್ಲಿ ಅಮೆರಿಕದಲ್ಲಿ ಸ್ಥಾಪಿಸಲಾಯಿತು. ಕಂಪನಿಯು ಹಿರಿಯ ಹೂಡಿಕೆದಾರ ವಾರೆನ್ ಬಫೆಟ್ ನೇತೃತ್ವದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಪ್ರಸ್ತುತ ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯ 1.010 ಟ್ರಿಲಿಯನ್ ಡಾಲರ್ ಆಗಿದೆ. ಈ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿ ಮಾರ್ಕ್ ಜುಕರ್‌ಬರ್ಗ್ ಅವರ ಕಂಪನಿ ಮೆಟಾ ಇದೆ. ಇದರ ಮಾರುಕಟ್ಟೆ ಮೌಲ್ಯ $1.444 ಟ್ರಿಲಿಯನ್ ಆಗಿದೆ. ಜುಕರ್‌ಬರ್ಗ್ ಯುಎಸ್‌ಎ ಮೂಲದ ಮೆಟಾ ಪ್ಲಾಟ್‌ಫಾರ್ಮ್ ಅನ್ನು 2004 ರಲ್ಲಿ ಪ್ರಾರಂಭಿಸಿದರು. ಇದು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ನಂತಹ ಪ್ಲಾಟ್‌ಫಾರ್ಮ್‌ಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಾಬಲ್ಯ ಹೊಂದಿದೆ.
ತೈವಾನ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್
ತೈವಾನ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯನ್ನು (TSMC) 1987 ರಲ್ಲಿ ಪ್ರಾರಂಭಿಸಲಾಗಿತು. ಪ್ರಸ್ತುತ, ಈ ಕಂಪನಿಯ ಸಿಇಒ ಆಗಿ ತೈವಾನ್ ಮೂಲದ ಸಿಸಿ ವೀ (CC Wei) ಕೆಲಸ ಮಾಡುತ್ತಿದ್ದಾರೆ. ಈ ಕಂಪನಿಯ ಮಾರುಕಟ್ಟೆ ಮೌಲ್ಯ 1.00 ಟ್ರಿಲಿಯನ್ ಡಾಲರ್ ಆಗಿದೆ. ಕಂಪನಿಯು ಸೆಮಿಕಂಡಕ್ಟರ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ.
ಮ್ಯಾಜಿಕ್ ಮಾಡದ ಎಲೋನ್ 'ಮಸ್ಕ್'
ಎಲೋನ್ ಮಸ್ಕ್ ಅವರ ಕಂಪನಿಯು ಟಾಪ್ 10 ರ ಕೆಳಭಾಗದಲ್ಲಿದೆ. ಎಲೋನ್ ಮಸ್ಕ್ ಅವರು 2003 ರಲ್ಲಿ ಟೆಸ್ಲಾ ಇಂಕ್ ಕಂಪನಿಯನ್ನು ಪ್ರಾರಂಭಿಸಿದರು. ಇದು ಎಲೆಕ್ಟ್ರಿಕ್ ವಾಹನಗಳಿಗೆ ಹೆಸರುವಾಸಿಯಾಗಿದೆ. ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯ $926.19 ಮಿಲಿಯನ್ ಆಗಿದೆ.


Click it and Unblock the Notifications