ಷೇರು ಪೇಟೆಯು ಕಳೆದ ಒಂದು ವರ್ಷದಲ್ಲೇ ಅತೀ ಕೆಟ್ಟ ವಾರವನ್ನು ಕಂಡಿದೆ. ಈ ವಾರ ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ ಉಂಟಾಗಿದೆ. ಕೊನೆಯ ವಹಿವಾಟು ಕೂಡಾ ನಷ್ಟದೊಂದಿಗೆ ಅಂತ್ಯವಾಗಿದೆ. ಈ ನಡುವೆ ಟಾಪ್ 10 ಕಂಪನಿಗಳ ಮಾರುಕಟ್ಟೆ ಮೌಲ್ಯ ಹೇಗಿದೆ?, ಎಷ್ಟು ನಷ್ಟ, ಎಷ್ಟು ಲಾಭವಾಗಿದೆ ಎಂದು ತಿಳಿಯೋಣ ಮುಂದೆ ಓದಿ..
ಈ ವಾರದಲ್ಲಿ ಟಾಪ್ 10 ಕಂಪನಿಗಳ ಮಾರುಕಟ್ಟೆ ಮೌಲ್ಯವು 3.91 ಲಕ್ಷ ಕೋಟಿ ರೂಪಾಯಿ ಕುಸಿತ ಕಂಡಿದೆ. TCS ಷೇರುಗಳು ಶೇಕಡ 1.69ರಷ್ಟು ಇಳಿಕೆ ಕಂಡರೆ, ರಿಲಯನ್ಸ್ ಇಂಡಸ್ಟ್ರೀಸ್ ಶೇಕಡ 1.17 ರಷ್ಟು ಕಡಿಮೆ ವಹಿವಾಟಾಗಲಿದೆ. ಕಳೆದ ವಾರ, ಬಿಎಸ್‌ಇ ಸೆನ್ಸೆಕ್ಸ್ 2,943.02 ಪಾಯಿಂಟ್‌ಗಳು ಅಥವಾ 5.42 ರಷ್ಟು ಕುಸಿದಿದ್ದರೆ, ಎನ್‌ಎಸ್‌ಇ ನಿಫ್ಟಿ 908.30 ಪಾಯಿಂಟ್‌ಗಳು ಅಥವಾ 5.61 ರಷ್ಟು ಕುಸಿದಿದೆ.
ಉಕ್ರೇನ್ ಹಾಗೂ ರಷ್ಯಾದ ಯುದ್ಧದ ನಡುವೆ ಹಣದುಬ್ಬರವನ್ನು ನಿಯಂತ್ರಣ ಮಾಡಲು ಜಾಗತಿಕ ಸೆಂಟ್ರಲ್ ಬ್ಯಾಂಕ್‌ಗಳು ಬಡ್ಡಿದರವನ್ನು ಏರಿಕೆ ಮಾಡಿದೆ. ಈ ನಡುವೆ ಕಚ್ಚಾ ತೈಲ ದರವು ಕೂಡಾ ಏರಿಕೆ ಕಂಡಿದೆ. ಈ ಎಲ್ಲಾ ಬೆಳವಣಿಗೆಯೂ ಷೇರು ಪೇಟೆಯ ಮೇಲೆ ಪರಿಣಾಮವನ್ನು ಉಂಟು ಮಾಡಿದೆ. 10 ಅತ್ಯಂತ ಮೌಲ್ಯಯುತ ದೇಶೀಯ ಸಂಸ್ಥೆಗಳ ಮಾರುಕಟ್ಟೆ ಮೌಲ್ಯ ಕಳೆದ ವಾರ 3,91,620.01 ಕೋಟಿ ರೂ ಕುಸಿದಿದೆ.
ಟಿಸಿಎಸ್ ಮಾರುಕಟ್ಟೆ ಮೌಲ್ಯ ಭಾರೀ ಕುಸಿತ
ಭಾರತದ ಟಾಪ್ 10 ಕಂಪನಿಗಳಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಈ ವಾರ ಭಾರೀ ನಷ್ಟವನ್ನು ಅನುಭವಿಸಿದೆ. ಈ ಸಂಸ್ಥೆಯ ಷೇರುಗಳು ಭಾರೀ ಕೆಳಕ್ಕೆ ಕುಸಿದಿದೆ. ಟಿಸಿಎಸ್ ಮಾರುಕಟ್ಟೆ ಮೌಲ್ಯವು ರೂ 1,01,026.4 ಕೋಟಿ ಕುಸಿದು ರೂ 11,30,372.45 ಕೋಟಿಗೆ ತಲುಪಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್
ಕಳೆದ ಎರಡು ವಾರಗಳ ಹಿಂದೆ ಟಾಪ್ ಸ್ಥಾನದಲ್ಲಿದ್ದ ರಿಲಯನ್ಸ್ ಸಂಸ್ಥೆ ಷೇರುಗಳು ಈ ವಾರ ಭಾರೀ ಕುಸಿತ ಕಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್) ಮಾರುಕಟ್ಟೆ ಮೌಲ್ಯವು ರೂ 84,352.76 ಕೋಟಿ ಕುಸಿದು ರೂ 17,51,686.52 ಕೋಟಿಗೆ ತಲುಪಿದೆ.
ಇನ್ಫೋಸಿಸ್, ಎಲ್‌ಐಸಿ
ಇನ್ಫೋಸಿಸ್ ಮೌಲ್ಯವು 37,656.62 ಕೋಟಿ ರೂ.ನಿಂದ 5,83,846.01 ಕೋಟಿ ರೂ.ಗೆ ಕುಸಿದಿದೆ ಮತ್ತು ಜೀವ ವಿಮಾ ನಿಗಮದ (ಎಲ್‌ಐಸಿ) ಮೌಲ್ಯವು ರೂ.34,787.49 ಕೋಟಿಯಿಂದ ರೂ.4,14,097.60 ಕೋಟಿಗೆ ಕುಸಿದಿದೆ.
ಐಸಿಐಸಿಐ ಬ್ಯಾಂಕ್, ಎಚ್‌ಯುಎಲ್
ಐಸಿಐಸಿಐ ಬ್ಯಾಂಕ್ ಮಾರುಕಟ್ಟೆ ಮೌಲ್ಯವು 22,203.69 ಕೋಟಿ ರೂ.ನಿಂದ 4,78,540.58 ಕೋಟಿ ರೂ.ಗೆ ಕುಸಿದಿದೆ. ಈ ಸಂದರ್ಭದಲ್ಲೇ ಹಿಂದೂಸ್ತಾನ್ ಯೂನಿಲಿವರ್ (ಎಚ್‌ಯುಎಲ್) 20,535.43 ಕೋಟಿ ರೂ.ನಿಂದ 4,96,351.15 ಕೋಟಿ ರೂ.ಗೆ ಇಳಿದಿದೆ.
ಎಸ್‌ಬಿಐ, ಭಾರ್ತಿ ಏರ್‌ಟೆಲ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಮಾರುಕಟ್ಟೆ ಮೌಲ್ಯವು 18,563.19 ಕೋಟಿ ರೂ.ನಿಂದ 3,93,575.37 ಕೋಟಿ ರೂ.ಗೆ ಕುಸಿದಿದೆ. ಹಾಗೆಯೇ ಈ ವಾರದಲ್ಲಿ ಭಾರ್ತಿ ಏರ್‌ಟೆಲ್ ರೂ.16,009.26 ಕೋಟಿಯಿಂದ ರೂ.3,53,604.18 ಕೋಟಿಗೆ ಕುಸಿದಿದೆ.
ಟಾಪ್-10 ಸಂಸ್ಥೆಗಳು ಯಾವುದು?
ಟಾಪ್-10 ಸಂಸ್ಥೆಗಳ ಶ್ರೇಯಾಂಕದಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಅತ್ಯಂತ ಮೌಲ್ಯಯುತ ಕಂಪನಿಯಾಗಿ ಮುಂದುವರೆದಿದೆ. ನಂತರದ ಸ್ಥಾನದಲ್ಲಿ ಟಿಸಿಎಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಎಚ್‌ಯುಎಲ್, ಐಸಿಐಸಿಐ ಬ್ಯಾಂಕ್, ಎಲ್‌ಐಸಿ, ಎಸ್‌ಬಿಐ, ಎಚ್‌ಡಿಎಫ್‌ಸಿ, ಭಾರ್ತಿ ಏರ್‌ಟೆಲ್ ಇದೆ.


Click it and Unblock the Notifications