For Quick Alerts
ALLOW NOTIFICATIONS  
For Daily Alerts

ಕಳೆದ ವಾರದ ಟಾಪ್ 10 ಕಂಪನಿ: ಎಚ್‌ಯುಎಲ್, ಇನ್ಫೋಸಿಸ್ ಹೆಚ್ಚು ಗಳಿಕೆ

|

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ನಾಲ್ಕು ಕಂಪನಿಗಳು 68, 458.72 ಕೋಟಿ ರು ಮಾರುಕಟ್ಟೆ ಮೌಲ್ಯ ಹೆಚ್ಚಿಸಿವೆ.

ಹಿಂದೂಸ್ತಾನ್ ಯೂನಿಲಿವರ್ ಹಾಗೂ ಇನ್ಫೋಸಿಸ್ ಹೆಚ್ಚು ಗಳಿಸಿದ್ದರೆ, ರಿಲಯನ್ಸ್, ಟಿಸಿಎಸ್ ತಕ್ಕಮಟ್ಟಿನ ಲಾಭ ಗಳಿಸಿವೆ. ಕಳೆದ ವಾರದಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್, ಐಸಿಐಸಿಐ, ಎಸ್ ಬಿಐ, ಬಜಾಜ್ ಫೈನಾನ್ಸ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮೌಲ್ಯ ಕುಸಿತ ಕಂಡಿದೆ.

ಮಿಕ್ಕ 7ಕಂಪನಿಗಳು ಮಾರುಕಟ್ಟೆ ಮೌಲ್ಯ ಕಳೆದ ವಾರ ಏರಿಕೆ ಕಂಡು ಒಟ್ಟಾರೆ, 1,15,898.82 ಕೋಟಿ ರು ಮೌಲ್ಯ ಏರಿಕೆಯಾಗಿದೆ.

ಕಳೆದ ವಾರದ ಟಾಪ್ 10 ಕಂಪನಿ: ಎಚ್‌ಯುಎಲ್, ಇನ್ಫೋಸಿಸ್ ಹೆಚ್ಚು ಗಳಿಕೆ

ಏರಿಕೆ ಕಂಡ ಕಂಪನಿಗಳು: ಇನ್ಫೋಸಿಸ್ 24, 628.79 ಕೋಟಿ ರು ಏರಿಕೆ ಕೊಂಡು 6,41,108,34 ಕೋಟಿ ರುಗೆ ಏರಿದೆ. ಹಿಂದೂಸ್ತಾನ್ ಯೂನಿಲಿವರ್ ಲಿ 26, 832.37 ಕೋಟಿ ರು ಏರಿಕೆಯಾಗಿ 5,82,874.25 ಕೋಟಿ ರು ಆಗಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ 9,358.6ಕೋಟಿ ರು ವೃದ್ಧಿಗೊಂಡು 12,19,577.24 ಕೋಟಿ ರು ಆಗಿದೆ. ರಿಲಯನ್ಸ್ ಇಂಡಸ್ಟ್ರೀಸ್ 7,639.03 ಕೋಟಿ ರು ಏರಿಕೆ ಕಂಡು 14,10,557.79 ಕೋಟಿ ರು ಗೇರಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 14,948.73ಕೋಟಿ ರು ಏರಿಕೆಯಾಗಿ 3,68,407.96 ಕೋಟಿ ರು ಆಗಿದೆ.

ಕುಸಿತ ಕಂಡ ಕಂಪನಿಗಳು: ಎಚ್ ಡಿ ಎಫ್ ಸಿ 12,796.03 ಕೋಟಿ ರು ಕುಸಿತವಾಗಿ 4,49,176.18 ಕೋಟಿ ರು ಮುಟ್ಟಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಮೌಲ್ಯ 6,908.63 ಕೋಟಿ ರು ಇಳಿಕೆ ಕಂಡು 3,49,019.23ಕೋಟಿ ರು ಆಗಿದೆ. ಐಸಿಐಸಿಸಿ ಬ್ಯಾಂಕ್ ಮೌಲ್ಯ 3,644.88 ಕೋಟಿ ರು ಕುಸಿತವಾಗಿ 4,36,390.78 ಕೋಟಿ ರು ಆಗಿದೆ.

ಬಜಾಬ್ ಫೈನಾನ್ಸ್ 1,901.32ಕೋಟಿ ರು ಕೆಳಕ್ಕಿಳಿದು 3,67,425.99 ಕೋಟಿ ರು ಆಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಮೌಲ್ಯ 3,503.96 ಕೋಟಿ ರು ಇಳಿಕೆ ಕಂಡು 8,16,587.81 ಕೋಟಿ ರು ಆಗಿದೆ.

ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿ, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫೈನಾನ್ಸ್ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್.

English summary

Top-10 most valued firms: HUL, Infosys biggest gainers last week

M- Cap valuation last week: Top-10 most valued firms: HUL, Infosys biggest gainers last week, four of top 10 firms add Rs 68,458.72 crore.
Story first published: Sunday, June 20, 2021, 13:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X