ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಆರು ಕಂಪನಿಗಳು 1.11 ಲಕ್ಷ ಕೋಟಿ ರು ಮಾರುಕಟ್ಟೆ ಮೌಲ್ಯ ಹೆಚ್ಚಿಸಿವೆ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಹಾಗೂ ಇನ್ಫೋಸಿಸ್ ಹೆಚ್ಚು ಗಳಿಸಿದ್ದರೆ, ಎಚ್ ಡಿ ಎಫ್ ಸಿ ಬ್ಯಾಂಕ್, ಐಸಿಐಸಿಐ, ಎಸ್ ಬಿ ಐ ತಕ್ಕಮಟ್ಟಿನ ಲಾಭ ಗಳಿಸಿವೆ. ಕಳೆದ ವಾರದಲ್ಲಿ ರಿಲಯನ್ಸ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಬಜಾಜ್ ಫೈನಾನ್ಸ್ ಹಾಗೂ ಕೋಟರ್ ಮಹೀಂದ್ರಾ ಬ್ಯಾಂಕ್ ಮೌಲ್ಯ ಕುಸಿತ ಕಂಡಿದೆ.
ಏರಿಕೆ ಕಂಡ ಕಂಪನಿಗಳು: ಇನ್ಫೋಸಿಸ್ 29,807.59 ಕೋಟಿ ರು ಏರಿಕೆ ಕೊಂಡು 6,70,915.93 ಕೋಟಿ ರುಗೆ ಏರಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ 30, 961.06 ಕೋಟಿ ರು ವೃದ್ಧಿಗೊಂಡು 12,50,538.30 ಕೋಟಿ ರು ಆಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಮೌಲ್ಯ 19,838.88 ಕೋಟಿ ರು ಇಳಿಕೆ ಕಂಡು 8,36,426.69 ಕೋಟಿ ರು ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 14,234.76 ಕೋಟಿ ರು ಏರಿಕೆಯಾಗಿ 3,82,642.72 ಕೋಟಿ ರು ಆಗಿದೆ. ಐಸಿಐಸಿಸಿ ಬ್ಯಾಂಕ್ ಮೌಲ್ಯ 12,775.99 ಕೋಟಿ ರು ಕುಸಿತವಾಗಿ 4,49,166.77 ಕೋಟಿ ರು ಆಗಿದೆ. ಎಚ್ ಡಿ ಎಫ್ ಸಿ 3,602.22 ಕೋಟಿ ರು ಕುಸಿತವಾಗಿ 4,52,778.40 ಕೋಟಿ ರು ಮುಟ್ಟಿದೆ.
ಕುಸಿತ ಕಂಡ ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್ 76,548.77 ಕೋಟಿ ರು ಇಳಿಕೆ ಕಂಡು 13,34,009.02 ಕೋಟಿ ರು ಆಗಿದೆ. ಹಿಂದೂಸ್ತಾನ್ ಯೂನಿಲಿವರ್ ಲಿ 7,424.7 ಕೋಟಿ ರು ಇಳಿಕೆಯಾಗಿ 5,75,449.55 ಕೋಟಿ ರು ಆಗಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಮೌಲ್ಯ 5,084.82 ಕೋಟಿ ರು ಇಳಿಕೆ ಕಂಡು 3,43,934.41 ಕೋಟಿ ರು ಆಗಿದೆ.
ಬಜಾಜ್ ಫೈನಾನ್ಸ್ 763.55 ಕೋಟಿ ರು ಕೆಳಕ್ಕಿಳಿದು 3,66,662.44 ಕೋಟಿ ರು ಆಗಿದೆ.
ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿ, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫೈನಾನ್ಸ್ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್.


Click it and Unblock the Notifications