ನೀವು ಎಂದಾದರೂ ಭಾರತದ ಟಾಪ್ 10 ಶ್ರೀಮಂತ ದೇವಾಲಯಗಳು ಯಾವುವು ಎಂದು ಯೋಚನೆ ಮಾಡಿದ್ದೀರಾ..? ಇವುಗಳು ಸಂಪತ್ತು ವರ್ಷಕ್ಕೆ ಎಷ್ಟು ಕೋಟಿ ಗೊತ್ತಾ..? ದೇವಾಲಯಕ್ಕೆ ಬರುವಂತಹ ಹಣವನ್ನು ಎಣಿಸಲು ಎಷ್ಟು ವರ್ಷಗಳು ಬೇಕಾಗಬಹುದು..? ಭಾರತದ 10 ಶ್ರೀಮಂತ ದೇವಾಲಯಗಳ (10 Richest Temples In india) ಎಂಬ ಹೆಚ್ಚಿನ ವಿವರವನ್ನು ನಾವಿಂದು ಈ ಲೇಖನದಲ್ಲಿ ಮಾಹಿತಿಯನ್ನು ತಿಳಿಸಿದ್ದೇವೆ.
ಹೌದು, ಹಿಂದೂಗಳಿಗೆ ದೇವರು ಎಂದರೇ ಅಪಾರ ಭಕ್ತಿ.ಪುರಾತನ ಕಾಲದಿಂದ ಭಾರತ ದೇಶವು ದೇವಾಲಯಗಳ ತವರೂರು ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಒಂದಿಲ್ಲೊಂದು ದೇವಸ್ಥಾನಗಳು ಪ್ರತಿಯೊಂದು ಊರಿನಲ್ಲೂ ಇದ್ದೇ ಇರುತ್ತದೆ.
ಸಂಸ್ಕೃತಿಗಳ ನೆಲೆಬೀಡು ಆಗಿರುವ ಭಾರತ ಕಲೆ, ವಾಸ್ತುಶಿಲ್ಪ ಐತಿಹಾಸಿಕ ಇತಿಹಾಸವನ್ನು ಹೊಂದಿದೆ. ಶತಮಾನಗಳಷ್ಟು ದೇವಲಾಯಗಳು ಹಳೆಯದ್ದರೂ ಪವಿತ್ರ ಸ್ಥಳಗಳಿಗೆ ಪ್ರತಿನಿತ್ಯವೂ ಲಕ್ಷಾಂತರ ಭಕ್ತರು ಮತ್ತು ಪ್ರವಾಸಿಗರು ಭೇಟಿಯನ್ನು ನೀಡುತ್ತಲೇ ಇರುತ್ತದೆ. ದೇವಲಕ್ಕೆ ಬರುವಂತಹ ಜನರು ಕಾಣಿಕೆಯ ರೂಪದಲ್ಲಿ ಹಣ,ಬೆಳ್ಳಿ, ಚಿನ್ನ, ಮತ್ತು ಹರಕೆ ಮಾಡಿಕೊಂಡತಂಹ ವಸ್ತುಗಳನ್ನು ನೀಡುತ್ತಾರೆ. ಇದು ಕಾಲಾನಂತರದಲ್ಲಿ, ಅಂತಹ ದೇಣಿಗೆಗಳು ಮತ್ತು ಈ ದೇವಾಲಯ ಟ್ರಸ್ಟ್‌ಗಳು ರೂಪುಗೊಂಡಿವೆ. ದೇವಲಾಯದ ವಿಶಾಲವಾದ ಭೂಪ್ರದೇಶಗಳು ಅವುಗಳನ್ನು ದೇಶದ ಅತ್ಯಂತ ಶ್ರೀಮಂತ ಧಾರ್ಮಿಕ ಸಂಸ್ಥೆಗಳ ಶ್ರೇಣಿಗೆ ತಲುಪಿಸಿವೆ.

ದೇವಲಯಕ್ಕೆ ಬರುವ ಹಣವನ್ನು ಬಡವರಿಗೆ ಸಹಾಯ ಮಾಡುವುದರ ಜೊತೆಗೆ, ಈ ದೇವಾಲಯಗಳ ಆರ್ಥಿಕ ಸ್ಥಿತಿ ಕೇವಲ ಶ್ರೀಮಂತಿಕೆಯನ್ನು ಮೀರಿ ವಿಸ್ತರಿಸುತ್ತದೆ.ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸುವುದರಿಂದ ಹಿಡಿದು ಪ್ರತಿದಿನ ಸಾವಿರಾರು ಪೋರ್ ಜನರಿಗೆ ಆಹಾರ ನೀಡುವವರೆಗೆ, ಈ ದೇವಾಲಯಗಳಿಂದ ಬರುವಂತಹ ಆದಾಯವನ್ನು ಲೋಕೋಪಕಾರಿ ಚಟುವಟಿಕೆಗಳಿಗೆ ವಿನಿಯೋಗವನ್ನು ಮಾಡಲಾಗುತ್ತದೆ ಇದರರಿಂದ ಕೋಟ್ಯಾಂತರ ಮಂದಿಗೆ ಅನುಕೂಲವಾಗಿದೆ.
ಭಾರತದ ಟಾಪ್ 10 ಶ್ರೀಮಂತ ದೇವಾಲಯಗಳ ವಿವರ
1 ತಿರುಮಲ ತಿರುಪತಿ ವೆಂಕಟೇಶ್ವರ ದೇವಸ್ಥಾನ, ಆಂಧ್ರಪ್ರದೇಶ
ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವು (Tirumala Tirupati Venkateswara Temple) ಸಂಪತ್ತಿನಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿ ಇದೆ. ತಿರುಮಲ ಬೆಟ್ಟಗಳಲ್ಲಿ ನೆಲೆಗೊಂಡಿರುವ ಈ ದೇವಾಲಯವು ಜಾಗತಿಕವಾಗಿ ಅತ್ಯಂತ ಶ್ರೀಮಂತ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಸುತ್ತ-ಮುತ್ತಾ ಬೆಟ್ಟೆ-ಗುಡ್ಡಗಳಿರುವುದರಿಂದ ಅಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಇದರ ಅಂದಾಜು ಮೌಲ್ಯ 3 ಲಕ್ಷ ಕೋಟಿ. ಇದು ಪ್ರತಿದಿನ ಸುಮಾರು 50,000 ಪ್ರಯಾಣಿಕರು ತಿಮ್ಮಪ್ಪ ದರ್ಶನಕ್ಕೆ ದೇಶ-ವಿದೇಶಗಳಿಂದ ಆಗಮಿಸುತ್ತಾರೆ. ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಂ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಹುಂಡಿಯೊಂದರಿಂದಲೇ ವಾರ್ಷಿಕವಾಗಿ 1,400 ಕೋಟಿ ರೂ.ಗಿಂತ ಹೆಚ್ಚು ಆದಾಯ ಹರಿದುಬುರುತ್ತದೆ. ಇದರ ಜೊತೆಗೆ ಭಕ್ತರು ಹರಕೆಗಾಗಿ ತಮ್ ತಲೆಕೂದಲು ಅರ್ಪಿಸುವುದು, ಠೇವಣಿಗಳ ಮೇಲಿನ ಬಡ್ಡಿ, ಚಿನ್ನ, ಬೆಳ್ಳಿ, ವಜ್ರಗಳಂತಹ ಬೆಲೆಬಾಳುವ ಕಾಣಿಕೆಗಳ ಮೂಲಕ ನೂರಾರು ಕೋಟಿ ರೂ. ಸಂಗ್ರಹವಾಗುತ್ತದೆ.
2. ಅನಂತ ಪದ್ಮನಾಭಸ್ವಾಮಿ ದೇವಾಲಯ, ತಿರುವನಂತಪುರಂ, ಕೇರಳ
ಅನಂತ ಪದ್ಮನಾಭಸ್ವಾಮಿ ದೇವಸ್ಥಾನವು (Padmanabhaswamy Temple) ಕೇರಳದ ರಾಜಧಾನಿ ತಿರುವನಂತಪುರದಲ್ಲಿದೆ. ವಿಶ್ವದ ಅತ್ಯಂತ ಶ್ರೀಮಂತ ದೇವಾಲಯವೆಂದು ಒಂದು. ಪದ್ಮನಾಭಸ್ವಾಮಿ ದೇವಾಲಯ1.2 ಲಕ್ಷ ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದೆ ಅಂದಾಜಿಸಲಾಗಿದೆ. ಇದರ ನಿಧಿಯಲ್ಲಿ ಚಿನ್ನದ ಆಭರಣಗಳು, ವಜ್ರಗಳು, ಪ್ರಾಚೀನ ಬೆಳ್ಳಿ ಮತ್ತು ಪಚ್ಚೆಗಳು ಸೇರಿವೆ.
2015ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತೆರೆಯಲಾದ ಕೆಲವು ನೆಲಮಾಳಿಗೆಗಳಲ್ಲಿ ಚಿನ್ನದ ವಿಗ್ರಹಗಳು, ವಜ್ರ ವೈಢೂರ್ಯಗಳು ಮತ್ತು ಪುರಾತನ ನಾಣ್ಯಗಳು ಪತ್ತೆಯಾಗಿದ್ದು, ಇಡೀ ಜಗತ್ತನ್ನೇ ಬೆಚ್ಚಿ ಬೀಳುವಂತೆ ಮಾಡಿವೆ. ಇನ್ನೂ ತೆರೆಯದ ವಾಲ್ಟ್-ಬಿ ಕೊಠಡಿಯ ಹಿಂದೆ ಅನೇಕ ರಹಸ್ಯಗಳು ಮತ್ತು ಪೌರಾಣಿಕ ಕಥೆಗಳಿವೆ. ಇದರ ಅಪಾರ ಸಂಪತ್ತನ್ನು ಮತ್ತಷ್ಟು ಹೆಚ್ಚಾಗಿದೆ.
3. ಗುರುವಾಯೂರ್ ದೇವಸ್ವಂ, ಕೇರಳ
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಗುರುವಾಯೂರ್ ದೇವಸ್ವಂ. ವಿಷ್ಣುವಿಗೆ ಸಮರ್ಪಿತವಾದ ಈ ಐತಿಹಾಸಿಕ ದೇವಾಲಯವು ಗಣನೀಯ ಸಂಪತ್ತಿಗೆ ಹೆಸರುವಾಸಿಯಾಗಿದೆ. ಇದು ಒಟ್ಟು 1,737.04 ಕೋಟಿ ಬ್ಯಾಂಕ್ ಠೇವಣಿಗಳನ್ನು ಹೊಂದಿದೆ ಮತ್ತು 271.05 ಎಕರೆ ಭೂಮಿಯನ್ನು ಹೊಂದಿದೆ. ಜೊತೆಗೆ, ಭಕ್ತರು ಅರ್ಪಿಸಿದ ಚಿನ್ನ, ಬೆಳ್ಳಿ ಮತ್ತು ಬೆಲೆಬಾಳುವ ರತ್ನಗಳ ಸಂಗ್ರಹ ಅಪಾರ. ವಿಶೇಷವಾಗಿ ಈ ದೇವಾಲಯವು ಗಜಪೂಜೆಗೆ ಹೆಸರುವಾಸಿ. ಅಲಂಕೃತ ಆನೆಗಳ ಮೆರವಣಿಗೆಯನ್ನು ನೋಡಲು ಪ್ರಪಂಚದಾದ್ಯಂತದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.ಗುರುವಾಯೂರ್ ದೇವಸ್ಥಾನವು ಕೇರಳದ ತ್ರಿಶೂರ್ ಜಿಲ್ಲೆಯಲ್ಲಿದೆ.
4. ವೈಷ್ಣೋ ದೇವಿ ದೇವಸ್ಥಾನ, ಜಮ್ಮು
ತ್ರಿಕೂಟ ಪರ್ವತಗಳ ಮೇಲೆ 5,200 ಅಡಿ ಎತ್ತರದಲ್ಲಿರುವ ವೈಷ್ಣೋದೇವಿ ದೇವಸ್ಥಾನವು ದುರ್ಗಾದೇವಿಗೆ ಸಮರ್ಪಿತ. ಇದು 108 ಶಕ್ತಿ ಪೀಠಗಳಲ್ಲಿ ಒಂದೆಂದು ಪ್ರಸಿದ್ಧವಾಗಿದೆ.ಭಾರತದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಲಯಕ್ಕೆ 2000 ಮತ್ತು 2020 ರ ನಡುವೆ, ಇದು 1,800 ಕಿಲೋಗ್ರಾಂಗಳಿಗಿಂತ ಹೆಚ್ಚು ಚಿನ್ನ, 4,700 ಕಿಲೋಗ್ರಾಂಗಳಷ್ಟು ಬೆಳ್ಳಿ ಮತ್ತು 2,000 ಕೋಟಿಗೂ ಹೆಚ್ಚಿನ ನಗದು ದೇಣಿಗೆಗಳನ್ನು ನೀಡಲಾಗಿತ್ತು.
5. ಶಿರಡಿ ಸಾಯಿಬಾಬಾ ದೇವಾಲಯ, ಮಹಾರಾಷ್ಟ್ರ
ಮಹಾರಾಷ್ಟ್ರದ ಸುಮಾರು 296 ಕಿ.ಮೀ ದೂರದಲ್ಲಿರುವ ಅಹ್ಮದ್‌ನಗರ ಜಿಲ್ಲೆಯ ಶಿರ್ಡಿಯಲ್ಲಿ ಶಿರಡಿ ಸಾಯಿಬಾಬಾ ದೇವಾಲಯ ಇದೆ. ಪ್ರತಿದಿನ ಸುಮಾರು 25,000 ಭಕ್ತರನ್ನು ಭೇಟಿ ಮಾಡುತ್ತದೆ. 1922 ರಲ್ಲಿ ಸ್ಥಾಪನೆಯಾದ ಈ ದೇವಸ್ಥಾನ ಇದು 2022 ರಲ್ಲಿ 400 ಕೋಟಿಗೂ ಹೆಚ್ಚು ದೇಣಿಗೆಯನ್ನು ನೀಡಲಾಗಿದೆ. ಶಿರಡಿ ಸಾಯಿಬಾಬಾ ದೇವಾಲಯ ಎರಡು ಆಸ್ಪತ್ರೆಗಳನ್ನು ಸಹ ನಿರ್ವಹಿಸುತ್ತದೆ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತು ಪ್ರತಿದಿನ ಸಾವಿರಾರು ಭಕ್ತಾಧಿಗಳಿಗೆ ಉಚಿತ ಊಟದ ವ್ಯವಸ್ಥೆಯನ್ನು ಶಿರಡಿ ಸಾಯಿಬಾಬಾ ದೇವಾಲಯ ಒಳಗೊಂಡಿದೆ.
6. ಗೋಲ್ಡನ್ ಟೆಂಪಲ್, ಅಮೃತಸರ
ಗೋಲ್ಡನ್ ಟೆಂಪಲ್ ತನ್ನ ಭವ್ಯವಾದ ವಾಸ್ತುಶಿಲ್ಪ ಮತ್ತು ಚಿನ್ನದ ಲೇಪಿತ ರಚನೆಗೆ ಹೆಸರುವಾಸಿಯಾದ ಗೋಲ್ಡನ್ ಟೆಂಪಲ್ ಸಿಖ್ ಧರ್ಮದ ಆಧ್ಯಾತ್ಮಿಕ ಕೇಂದ್ರ. ಸಿಖ್ಖರ ಪವಿತ್ರ ಕ್ಷೇತ್ರವಾದ ಸ್ವರ್ಣ ಮಂದಿರವು (Golden Temple) ಅಮೃತಸರ ನಗರದ ಹೆಗ್ಗುರು. ಐದನೇ ಸಿಖ್ ಗುರು, ಗುರು ಅರ್ಜನ್ ದೇವ್ ಅವರ ನೇತೃತ್ವದಲ್ಲಿ ನಿರ್ಮಿಸಲಾದ ಈ ದೇವಾಲಯವನ್ನು 'ಹರ್ಮಂದಿರ್ ಸಾಹಿಬ್' ಎಂತಲೂ ಕರೆಯುವರು. ಇದು 1581 ರಲ್ಲಿ ಪೂರ್ಣಗೊಂಡ ಇದು ವರ್ಷಕ್ಕೆ ಸುಮಾರು 500 ಕೋಟಿ ಆದಾಯವನ್ನು ಈ ದೇವಲಾಯಕ್ಕೆ ಬರುತ್ತದೆ.
7. ಮೀನಾಕ್ಷಿ ದೇವಸ್ಥಾನ, ಮಧುರೈ
ದ್ರಾವಿಡ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿರುವ ಮೀನಾಕ್ಷಿ ದೇವಸ್ಥಾನ ಮಧುರೈನಲ್ಲಿ ಇದೆ. ಮೀನಾಕ್ಷಿ ದೇವಸ್ಥಾನವು ಪ್ರತಿದಿನ 20,000 ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ಕನೀಡುತ್ತಾರೆ. ಇದು ವಾರ್ಷಿಕವಾಗಿ 60 ಮಿಲಿಯನ್ ಹೆಚ್ಚಿನ ಆದಾಯವನ್ನು ಗಳಿಸುತ್ತದೆ ಎಂದು ಆಂದಾಜು ಮಾಡಲಾಗಿದೆ. ವರ್ಣರಂಜಿತ ಗೋಪುರಗಳು ಮತ್ತು ಸಾವಿರಾರು ಕೆತ್ತನೆಗಳನ್ನು ಹೊಂದಿರುವ ಈ ದೇವಾಲಯವು ನೋಡುಗರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತದೆ. ಇಲ್ಲಿ ಮೀನಾಕ್ಷಿ ತಿರುಕಲ್ಯಾಣಂ ಉತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ.
8. ಸಿದ್ಧಿವಿನಾಯಕ ದೇವಸ್ಥಾನ, ಮುಂಬೈ
ಮುಂಬೈನ ಪ್ರಭಾದೇವಿ ಪ್ರದೇಶದಲ್ಲಿ ನೆಲೆಗೊಂಡಿರುವ ಈ ಗಣೇಶ ದೇವಸ್ಥಾನವು ದೇಶದ ಅತ್ಯಂತ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾಗಿದೆ. ಇದರ ಅಂದಾಜು ಮೂಲ್ಯ 125 ಕೋಟಿ. ಇದು ಪ್ರತಿದಿನ 30 ಲಕ್ಷ ಮೌಲ್ಯದ ಹಣ ಕಾಣಿಕೆ ರೂಪದಲ್ಲಿ ಬರುತ್ತದೆ. 4 ಕಿಲೋಗ್ರಾಂಗಳಷ್ಟು ತೂಕದ ಚಿನ್ನದಿಂದ ಅಲಂಕರಿಸಲ್ಪಟ್ಟ ವಿಗ್ರಹದ ದೇವಸ್ಥಾನ ಇದಾಗಿದೆ.
9. ಸೋಮನಾಥ ದೇವಾಲಯ, ಗುಜರಾತ್
ಭಾರತದ 12 ಜ್ಯೋತಿರ್ಲಿಂಗಳು ಇರುವ ಮೊದಲನೆ ದೇವಲಯ. ಈ ದೇವಸ್ಥಾನ ಗುಜರಾತ್ ರಾಜ್ಯದಲ್ಲಿದೆಈ ದೇವಾಲಯದ ಗರ್ಭಗುಡಿಯಲ್ಲಿ 130 ಕಿಲೋಗ್ರಾಂಗಳಷ್ಟು ಚಿನ್ನ ಮತ್ತು ಅದರ ಶಿಖರದಲ್ಲಿ ಹೆಚ್ಚುವರಿಯಾಗಿ 150 ಕಿಲೋಗ್ರಾಂಗಳಷ್ಟು ಚಿನ್ನವಿದೆ.ದೇವಾಲಯದ ಟ್ರಸ್ಟ್ ಹೆಸರಿನಲ್ಲಿ 1,700 ಎಕರೆ ಭೂಮಿ ಇದೆ.
10. ಶ್ರೀ ಜಗನ್ನಾಥ ದೇವಾಲಯ, ಪುರಿ, ಒಡಿಶಾ
11 ನೇ ಶತಮಾನಕ್ಕೆ ಸೇರಿದ ಈ ಪವಿತ್ರ ಸ್ಥಳವು ಚಾರ್ ಧಾಮ್ ಯಾತ್ರೆಯ ಪ್ರಮುಖ ಭಾಗವಾಗಿದೆ. ಇದರ ಅಂದಾಜು ಮೌಲ್ಯ 150 ಕೋಟಿ ಮತ್ತು ಸುಮಾರು 30,000 ಎಕರೆ ಭೂಮಿಯನ್ನು ಈ ದೇವಸ್ಥಾನ ಒಳಗೊಂಡಿದೆ. ಇಲ್ಲಿ ಶ್ರೀಕೃಷ್ಣನು ತನ್ನ ಸಹೋದರ ಬಲರಾಮ ಮತ್ತು ಸಹೋದರಿ ಸುಭದ್ರೆಯೊಂದಿಗೆ ಜಗನ್ನಾಥನ ರೂಪದಲ್ಲಿ ನೆಲೆಸಿದ್ದಾನೆ.
ಒಟ್ಟಾರೆಯಾಗಿ ಭಾರತದ ಈ ಶ್ರೀಮಂತ ದೇವಾಲಯಗಳು ಕೇವಲ ಧಾರ್ಮಿಕ ಕೇಂದ್ರಗಳಲ್ಲ. ಇವು ದೇಶದ ಸಾಂಸ್ಕೃತಿಕ ಮತ್ತು ಆರ್ಥಿಕ ಚಟುವಟಿಕೆಗಳ ಕೇಂದ್ರ ಕೂಡ ಆಗಿವೆ.


Click it and Unblock the Notifications