ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಆಗಸ್ಟ್ 17 ರಂದು ಸ್ವಲ್ಪ ಕುಸಿತ ಕಂಡು ಮಾರುಕಟ್ಟೆ ವಹಿವಾಟನ್ನು ಆರಂಭ ಮಾಡುವ ನಿರೀಕ್ಷೆಯಿದೆ. ಜಿಐಎಫ್‌ಟಿ ನಿಫ್ಟಿಯು 46 ಅಂಕಗಳ ನಷ್ಟದೊಂದಿಗೆ ಮಾರುಕಟ್ಟೆಯಲ್ಲಿ ನೆಗೆಟಿವ್ ಆರಂಭವನ್ನು ಕಂಡ ಕಾರಣ ಇಂದು ಸ್ಟಾಕ್ ಮಾರುಕಟ್ಟೆಯು ಕೊಂಚ ನಷ್ಟದೊಂದಿಗೆ ಆರಂಭವಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ.
ಬುಧವಾರ ವಹಿವಾಟಿನ ಅಂತ್ಯದಲ್ಲಿ ಬಿಎಸ್‌ಇ ಸೆನ್ಸೆಕ್ಸ್ 137 ಪಾಯಿಂಟ್ ಏರಿಕೆ ಕಂಡು 65,539ರಷ್ಟಿದ್ದರೆ, ನಿಫ್ಟಿ 50 ಸುಮಾರು 30 ಪಾಯಿಂಟ್‌ಗಳ ಏರಿಕೆಯೊಂದಿಗೆ 19,465 ಪಾಯಿಂಟ್‌ಗೆ ಸ್ಥಿರವಾಗಿದೆ. ತಜ್ಞರ ಅಭಿಪ್ರಾಯದಂತೆ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಬುಧವಾರ ಕೊಂಚ ಇಳಿಕೆ ಕಂಡು ವಹಿವಾಟು ಆರಂಭಿಸಿದೆ.

ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಬುಧವಾರ ಶೇಕಡ 0.06 ರಷ್ಟು ಅಥವಾ 41.48 ಪಾಯಿಂಟ್‌ಗಳು ಇಳಿಕೆಯಾಗಿ, 65,497.94ಕ್ಕೆ ತಲುಪಿದೆ. ನಿಫ್ಟಿ ಶೇಕಡ 0.11ರಷ್ಟು ಅಥವಾ 21.00 ಅಂಕ ಕುಸಿತ ಕಂಡು 19,444ಕ್ಕೆ ತಲುಪಿದೆ. 1436 ಷೇರುಗಳು ಏರಿಕೆಯಾಗಿದ್ದರೆ, 571 ಷೇರುಗಳು ಇಳಿಕೆಯಾಗಿದೆ. 125 ಷೇರುಗಳು ಸ್ಥಿರವಾಗಿದೆ. ಇಂದು ನೀವು ಗಮನಿಸಬೇಕಾದ 10 ಸ್ಟಾಕ್‌ಗಳ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ಅದಾನಿ ಪವರ್
ಗೌತಮ್ ಅದಾನಿ ಕುಟುಂಬವು ಬುಧವಾರ 9,000 ಕೋಟಿ ರೂಪಾಯಿಯ ಷೇರುಗಳನ್ನು ಮಾರಾಟ ಮಾಡಿದೆ. ಜಿಕ್ಯೂಜಿ ಪಾಲುದಾರರು 1.1 ಬಿಲಿಯನ್ ಡಾಲರ್‌ಗೆ ಶೇಕಡ 8.1ರಷ್ಟು ಪಾಲನ್ನು ಖರೀದಿಸಿದರು.
ಜಿಎಸ್‌ಡಬ್ಲ್ಯೂ ಎನರ್ಜಿ
ಜಿಎಸ್‌ಡಬ್ಲ್ಯೂ ಇನ್ವೆಸ್ಟ್‌ಮೆಂಟ್ಸ್ 1 ಕೋಟಿ ಷೇರುಗಳನ್ನು ಅಥವಾ ಕಂಪನಿಯಲ್ಲಿನ ಶೇಕಡ 1.27ರಷ್ಟು ಪಾಲನ್ನು, ಒಟ್ಟು 717.57 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಬುಧವಾರ ಮಾರಾಟ ಮಾಡಿದೆ. ಜಿಕ್ಯೂಜಿ ಪ್ರತಿ ಷೇರಿಗೆ 341.70 ರೂಪಾಯಿಯಂತೆ 1 ಕೋಟಿ ಷೇರುಗಳನ್ನು ಅಥವಾ ಶೇಕಡ 0.6ರಷ್ಟು ಪಾಲನ್ನು ಒಟ್ಟಾಗಿ 351 ಕೋಟಿ ರೂಪಾಯಿಗೆ ಖರೀದಿಸಿದೆ.
ರೆಲಿಗೇರ್ ಎಂಟರ್‌ಪ್ರೈಸಸ್
ಬರ್ಮನ್ ಕುಟುಂಬದ ಮೂರು ಕಂಪನಿಗಳಾದ ಪುರನ್ ಅಸೋಸಿಯೇಟ್ಸ್, ವಿಕ್ ಎಂಟರ್‌ಪ್ರೈಸಸ್ ಮತ್ತು ಎಮ್ ಬಿ ಫಿನ್‌ಮಾರ್ಟ್ ಬುಧವಾರದಂದು ಕಂಪನಿಯಲ್ಲಿನ ಶೇಕಡ 7.5ರಷ್ಟು ಪಾಲನ್ನು 534 ಕೋಟಿ ರೂಪಾಯಿಗೆ ಖರೀದಿಸಿತು.
ಐಐಎಫ್‌ಎಲ್ ಸೆಕ್ಯುರಿಟೀಸ್
ಬುಧವಾರದ ಮುಕ್ತ ಮಾರುಕಟ್ಟೆ ವಹಿವಾಟಿನಲ್ಲಿ, ಫೇರ್‌ಫ್ಯಾಕ್ಸ್ ಗ್ರೂಪ್ ಬ್ರೋಕರೇಜ್ ಕಂಪನಿಯಲ್ಲಿನ ಶೇಕಡ 5.9ರಷ್ಟು ಪಾಲನ್ನು 118 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ.
ಸಿಪ್ಲಾ
ಉತ್ಪಾದನೆ ವೇಳೆ ಸರಿಯಾದ ನಿಯಮವನ್ನು ಪಾಲನೆ ಮಾಡದ ಕಾರಣದಿಂದಾಗಿ, ಮಹಾರಾಷ್ಟ್ರದ ಪಾತಾಳಗಂಗಾದಲ್ಲಿರುವ ಸಿಪ್ಲಾ ಕಂಪನಿಯ ಉತ್ಪಾದನಾ ಘಟಕಕ್ಕೆ ನೀಡಲಾದ ಎಫ್‌ಡಿಎ ಪರವಾನಗಿಯನ್ನು ಬುಧವಾರ ಅಮಾನತುಗೊಳಿಸಲಾಗಿದೆ.
ವೊಡಾಫೋನ್ ಐಡಿಯಾ
ಬುಧವಾರ, ವೊಡಾಫೋನ್ ಐಡಿಯಾ ಸಿಇಒ ಅಕ್ಷಯ ಮೂಂದ್ರಾ ಅಕ್ಟೋಬರ್‌ನಿಂದ ಡಿಸೆಂಬರ್‌ನ ಮೂರನೇ ತ್ರೈಮಾಸಿಕದೊಳಗೆ ತನ್ನ ಹಣಕಾಸು ವ್ಯವಹಾರಗಳನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಪ್ರೋಮೋಟರ್‌ಗಳು 2000 ಕೋಟಿ ರೂಪಾಯಿ ಫಂಡಿಂಗ್ ನೀಡಲಿದ್ದಾರೆ.
ನವ
ಒಡಿಶಾದಲ್ಲಿರುವ ತನ್ನ ಕಾರ್ಖಾನೆಯಲ್ಲಿ ಸಿಲಿಕೋ ಮ್ಯಾಂಗನೀಸ್ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿರುವುದಾಗಿ ನವ ಕಂಪನಿ ಬುಧವಾರ ತಿಳಿಸಿದೆ.
ಒನ್97 ಕಮ್ಯೂನಿಕೇಷನ್ಸ್
ಅಲಿಬಾಬಾ ಸಮೂಹ ಸಂಸ್ಥೆ ಆಂಟ್‌ಫಿನ್ ತನ್ನ ಶೇಕಡ 10.3ರಷ್ಟು ಪಾಲನ್ನು ಬುಧವಾರ ಫಿನ್‌ಟೆಕ್ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಅವರಿಗೆ ವರ್ಗಾಯಿಸಿದೆ ಎಂದು ಪಿಟಿಐ ತಿಳಿಸಿದೆ.
ಆಪ್ಟೆಕ್
ಆಗಸ್ಟ್ 15 ರಂದು ಆಪ್ಟೆಕ್‌ನ ಎಂಡಿ ಮತ್ತು ಸಿಇಒ ಡಾ.ಅನಿಲ್ ಪಂತ್ ನಿಧನರಾದರು.
ಪವರ್ ಗ್ರಿಡ್
"ನಾರ್ತ್ ಈಸ್ಟರ್ನ್ ರೀಜನ್ ಸ್ಟ್ರೆಂಥನಿಂಗ್ ಸ್ಕೀಮ್-VI" ಅಡಿಯಲ್ಲಿ ಪವರ್ ಗ್ರಿಡ್‌ನ ಸ್ವತ್ತುಗಳು ಬುಧವಾರ ವಾಣಿಜ್ಯ ಕಾರ್ಯಾಚರಣೆ (ಡಿಒಸಿಒ) ಗಾಗಿ ಅಧಿಸೂಚನೆಯನ್ನು ಸ್ವೀಕರಿಸಿವೆ.


Click it and Unblock the Notifications