ಬೆಂಗಳೂರು, ಜನವರಿ 22: ಈ ಹಿಂದಿನ ಎಂಟು ತಿಂಗಳಲ್ಲಿ ಆರ್‌ಬಿಐ ರೆಪೊ ದರ 225 ಬೇಸಿಸ್ ಪಾಯಿಂಟ್‌ಗಳಿಂದ ಶೇ. 6.25ಕ್ಕೆ ಏರಿಕೆ ಮಾಡಿದ್ದರ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಸಾಲ ಹಾಗೂ ಠೇವಣಿ ದರಗಳನ್ನು ಗಣನೀಯರವಾಗಿ ಹೆಚ್ಚಳ ಮಾಡಿವೆ. ರೂ. 2 ಕೋಟಿಗಿಂತ ಕಡಿಮೆ ಫಿಕ್ಸ್ ಡಿಫಾಸಿಟ್ (FD) ಮೇಲೆ ಶೇಕಡ 7.19 ವರೆಗಿನ ಬಡ್ಡಿ ದರವನ್ನು ನೀಡುವ ಐದು ಬ್ಯಾಂಕ್‌ಗಳ ಪಟ್ಟಿ ಇಲ್ಲಿದೆ.
ತೆರಿಗೆಯ ಪ್ರಯೋಜನ ಇರುವ ಬ್ಯಾಂಕ್‌ಗಳಿಗೆ ಸ್ಥಿರ ಠೇವಣಿ ಸೆಕ್ಷನ್ 80C 1.5 ಲಕ್ಷದವರೆಗೆ ತೆರಿಗೆ ವಿನಾಯಿತಿಗಳಿವೆ. ಈ ಫಿಕ್ಸ್ ಡಿಫಾಸಿಟ್‌ಗಳಲ್ಲಿ 5 ವರ್ಷಗಳ ಲಾಕ್-ಇನ್ ವ್ಯವಸ್ಥೆ ಇದೆ. ಅನೇಕ ಬ್ಯಾಂಕುಗಳು 3 ವರ್ಷಗಳ ಸ್ಥಿರ ಠೇವಣಿಗಳ ಮೇಲೆ ಅತ್ಯಂತ ಅನುಕೂಲಕರ ಬಡ್ಡಿ ದರ ಒದಗಿಸುತ್ತಿವೆ. ಅಂದರೆ ವಾಸ್ತವದಲ್ಲಿ ಒಂದು ಇಲ್ಲವೇ ಎರಡು ವರ್ಷದ ಅವಧಿಯ ಖಾತೆಗಳಿಗೆ ಹೋಲಿಸಿದರೆ ಮೂರು ವರ್ಷದ ಠೇವಣಿಗಳ ಮೇಲೆ ಬೀಳುವ ಬಡ್ಡಿಯ ಪ್ರಮಾಣ ಹೆಚ್ಚಿದೆ.

ರೂ. 2 ಕೋಟಿಗಿಂತ ಕಡಿಮೆ ಫಿಕ್ಸ್ ಡಿಫಾಸಿಟ್ (FD) ಮೇಲೆ ಶೇಕಡ 7.19 ವರೆಗಿನ ಬಡ್ಡಿ ದರವನ್ನು ನೀಡುತ್ತಿವೆ. ಉನ್ನತ ಮೂರು ವರ್ಷಗಳ ಸ್ಥಿರ ಠೇವಣಿಗಳ ಕುರಿತು ಮಾಹಿತಿ ಹಾಗೂ ಎಫ್‌ಡಿಗೆ ಹೆಚ್ಚು ಬಡ್ಡಿ ದರ ನೀಡುವ ಟಾಪ್ ಐದು ಬ್ಯಾಂಕ್‌ಗಳ ಮಾಹಿತಿ ಇಲ್ಲಿದೆ.
1. ಫಿನ್‌ಕೇರ್ ಬ್ಯಾಂಕ್
ಫಿನ್‌ಕೇರ್ ಬ್ಯಾಂಕ್ ಇದೊಂದು ಸಣ್ಣ ಹಣಕಾಸು ಸಂಸ್ಥೆಯಾಗಿದೆ. ಮೂರು ವರ್ಷಗಳ ಅವಧಿಗೆ ಅನುಕೂಲಕರ ಬಡ್ಡಿದರಗಳನ್ನು ಈ ಬ್ಯಾಂಕ್ ನೀಡುತ್ತದೆ. ಸಾಮಾನ್ಯ ಜನರಿಗೆ ಶೇಕಡಾ 7.19 p.a. ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 7.71ರಷ್ಟು ಬ್ಯಾಂಕ್ ಬಡ್ಡಿ ನೀಡುತ್ತದೆ. ವಿವಿಧ ಕಸ್ಟಮೈಸ್ ಮಾಡಬಹುದಾದ ಬಡ್ಡಿ ಪಾವತಿ ಆಯ್ಕೆಗಳನ್ನು ಮತ್ತು ಆರಂಭಿಕ ಹಿಂಪಡೆಯುವಿಕೆಯನ್ನು ಸಹ ಈ ಬ್ಯಾಂಕ್ ಒದಗಿಸಲಿದೆ.
2. ಕೆಟಿಡಿಎಫ್‌ಸಿ ಬ್ಯಾಂಕ್
ಕೇರಳ ರಾಜ್ಯ ಸರ್ಕಾರದ ಒಡೆತನ 'ಕೇರಳ ಸಾರಿಗೆ ಅಭಿವೃದ್ಧಿ ಹಣಕಾಸು ನಿಗಮ ಲಿಮಿಟೆಡ್' (KTDFC) ಗ್ರಾಹಕರಿಗೆ ಮನಿ ಮಲ್ಟಿಪ್ಲೈಯರ್ ಯೋಜನೆ ಹಾಗೂ ಆವರ್ತಕ ಬಡ್ಡಿ ಪಾವತಿ ಯೋಜನೆ ನೀಡುತ್ತದೆ. ಮೂರು ವರ್ಷಗಳ ಅವಧಿಗೆ ತೆರೆಯಲಾದ ಅವಧಿಯ ಠೇವಣಿಗಳನ್ನು ವರ್ಷಕ್ಕೆ ಶೇಕಡ 7ರ ಲಾಭದಾಯಕ ಬಡ್ಡಿ ದರದಲ್ಲಿ ನೀಡುತ್ತದೆ. ಹಿರಿಯರಿಗೆ ಲಭ್ಯವಿರುವ ಬಡ್ಡಿ ದರವು ಶೇಕಡಾ 7.25 p.a. ಎಲ್ಲಾ ಎಫ್‌ಡಿ ಯೋಜನೆಗಳ ಟಿಡಿಎಸ್‌ಗೆ ಒಳಪಟ್ಟಿರುತ್ತವೆ. ಮುಖ್ಯವಾಗಿ ಅಕಾಲಿಕ ಸಂದರ್ಭಗಳಲ್ಲಿ ಹಣ ಹಿಂಪಡೆಯುವಿಕೆಯ ಪ್ರಯೋಜನವನ್ನು ಈ ಬ್ಯಾಂಕ್ ನೀಡುತ್ತದೆ.
3. ಶ್ರೀರಾಮ್ ಸಿಟಿ ಬ್ಯಾಂಕ್
ಈ ಶ್ರೀರಾಮ್ ಸಿಟಿ ಬ್ಯಾಂಕ್ ಮೂರು ವರ್ಷಗಳ ಮೌಲ್ಯದ ಸಂಚಿತ ಠೇವಣಿಗಳ ಮೇಲೆ ಶೇಕಡಾ 7.86 p.a. ಬಡ್ಡಿ ದರ ನೀಡುತ್ತದೆ.

4. ಲಕ್ಷ್ಮೀ ವಿಲಾಸ್ ಬ್ಯಾಂಕ್ (LVB)
ಮೂರು ವರ್ಷಗಳ ಹೂಡಿಕೆ ಅವಧಿಯೊಂದಿಗೆ ಅವಧಿಯ ಠೇವಣಿ ತೆರೆಯಲು, ಬ್ಯಾಂಕ್ ಸಾಮಾನ್ಯ ಜನರಿಗೆ ವಾರ್ಷಿಕ ಶೇಕಡಾ 6.50 ಬಡ್ಡಿ ದರ ನೀಡುತ್ತಿದೆ. ಹಿರಿಯ ನಾಗರಿಕರಿಗೆ ವರ್ಷಕ್ಕೆ ಇದೇ ಬ್ಯಾಂಕ್ ಶೇಕಡಾ 7 ರಷ್ಟು ಠೇವಣಿ ಮೇಲೆ ಬಡ್ಡಿ ಒದಗಿಸುತ್ತಿದೆ. ಅಕಾಲಿಕ ವೇಳೆ ಹಣ ಹಿಂತೆಗೆದುಕೊಳ್ಳುವಿಕೆ ಸಂದರ್ಭದಲ್ಲಿ ಶೇಕಡಾ 1ರಷ್ಟು ಬಡ್ಡಿಯ ಮೇಲಿನ ಹಣ ಬ್ಯಾಂಕ್ ಹಿಡಿದುಕೊಳ್ಳಲಿದೆ.
5. ಈಕ್ವಿಟಾಸ್ ಬ್ಯಾಂಕ್
ಈಕ್ವಿಟಾಸ್ ಬ್ಯಾಂಕ್ ಇದು ಸಹ ಸಣ್ಣ ಹಣಕಾಸು ಸಂಸ್ಥೆಯಾಗಿದೆ. ಮೂರು ವರ್ಷಗಳ ಅವಧಿಗೆ ಬ್ಯಾಂಕ್ ವಾರ್ಷಿಕ ಶೇಕಡಾ 7.25 ಹೆಚ್ಚಿನ ಬಡ್ಡಿ ದರ ನೀಡುತ್ತಿದೆ. ಹಿರಿಯರಿಗೆ ಪ್ರತಿ ವರ್ಷ ಶೇಕಡಾ 7.45ರಷ್ಟು ಬಡ್ಡಿ ದರವನ್ನು ಒದಗಿಸುತ್ತಿದೆ. ಅವಧಿಪೂರ್ವಕ್ಕೂ ಮುನ್ನವೇ ಠೇವಣಿ ಹಿಂತೆಗೆದುಕೊಳ್ಳುವ ಈ ಬ್ಯಾಂಕ್‌ನಲ್ಲೂ ಅವಕಾಶ ಇದೆ.


Click it and Unblock the Notifications