ನಿಮ್ಮ ಹಣವನ್ನು ಡಬಲ್ ಮಾಡಬೇಕೆಂಬ ಆಸೆ ಇದ್ಯಾ? ನಿಮಗೆ ಭಾರತೀಯ ಮ್ಯೂಚುವಲ್ ಫಂಡ್ (Mutual Funds) ನಿಮಗೆ ಉತ್ತಮ ಆಯ್ಕೆಯಾಗಿದೆ. ಅದರಲ್ಲೂ ವ್ಯವಸ್ಥಿತ ಹೂಡಿಕೆ ಯೋಜನೆಗಳ (SIP) ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಕಾಲಾನಂತರದಲ್ಲಿ ನಿಮ್ಮ ಹಣವನ್ನು ಹೆಚ್ಚು ಮಾಡಲು ಒಂದು ಉತ್ತಮ ಮಾರ್ಗವೆಂದೇ ಹೇಳಬಹುದು.ಹಾಗಿದ್ರೆ ನೀವು ಯಾವ ಮ್ಯೂಚುಯಲ್ ಫಂಡ್‌ಗಳ ಮೇಲೆ ಹೂಡಿಕೆ ಮಾಡಬಹುದು ಎಂಬುವುದನ್ನು ತಿಳಿಯೋಣ ಬನ್ನಿ
ಹೌದು, ಉತ್ತಮ ಆದಾಯ ಕೊಡುವ ಕಡಿಮೆ ಮೊತ್ತದ SBI ಕೆಲ ಮ್ಯೂಚುವಲ್ ಫಂಡ್ ಯೋಜನೆಗಳಿವೆ. ಇಂತಹ ಸ್ಕೀಮ್ ಗಳಲ್ಲಿ ಹೂಡಿಕೆ ಮಾಡಿದರೆ ನೀವು ಉತ್ತಮ ಆದಾಯ ನಿಮ್ಮದಾಗಿಸಬಹುದು. ನೀವು ಇದರಲ್ಲಿ 5 ವರ್ಷಗಳ ಕಾಲ ತಿಂಗಳಿಗೆ 10,000 ರೂಪಾಯಿಗಳನ್ನು ಹೂಡಿಕೆ ಮಾಡಲು ಬಯಸಿದರೆ, ಪರಿಗಣಿಸಬೇಕಾದ ಟಾಪ್ 5 ಎಸ್‌ಬಿಐ ಮ್ಯೂಚುವಲ್ ಫಂಡ್‌ಗಳ ವಿವರಗಳನ್ನು ಈ ಕೆಳಗಿನಂತೆ ನೀಡಲಾಗಿದೆ.

1. ಎಸ್ಬಿಐ ಪಿಎಸ್ಯು(PSU) ಫಂಡ್
NAV (ಫೆಬ್ರವರಿ 25, 2025 ರಂತೆ): 30.32ರೂ
ನಿಧಿಯ ಗಾತ್ರ: 4,542.83 ಕೋಟಿ ರೂ.
SIP ಮೊತ್ತ: 500 ಕನಿಷ್ಠ
ಮೊತ್ತದ ಹೂಡಿಕೆ: 5,000
ಒಟ್ಟು ಹೂಡಿಕೆ (5 ವರ್ಷಗಳವರೆಗೆ ತಿಂಗಳಿಗೆ 10,000ರೂ. ): 6,00,000 ರೂ.
ಅಂದಾಜು ಆದಾಯ: 12,09170
ವರ್ಗ: 5 ವರ್ಷಗಳು
ವಾರ್ಷಿಕ ಆದಾಯ: ಶೇ. 23.2
ವೆಚ್ಚ ಅನುಪಾತ: ಶೇ. 0.78ರಷ್ಟು
ಹೂಡಿಕೆ ಯಾಕೆ ಮಾಡಬೇಕು?
ಸರ್ಕಾರ ಒಡೆತನದ ಕಂಪನಿಗಳಲ್ಲಿ ಹೂಡಿಕೆ ಮಾಡಲು ಈ ನಿಧಿಯನ್ನು ಕಡ್ಡಾಯಗೊಳಿಸಲಾಗಿದೆ. ಸಾರ್ವಜನಿಕ ವಲಯದ ಯೋಜನೆಗಳು ಉತ್ತಮವಾಗಿರುತ್ತವೆ ಎಂದು ನೀವು ಬಾವಿಸಿದಲ್ಲಿ ಇದನ್ನು ಆಯ್ಕೆ ಮಾಡಬಹುದು. ಕನಿಷ್ಟ 500ರೂ ಗಳಂತೆ ಹೂಡಿಕೆ ಮಾಡಬಹುದು. ಇವು ಸರ್ಕಾರಿ ನೀತಿಗಳಿಂದ ಬೆಂಬಲಿತವಾಗಿವೆ.
2 ಎಸ್‌ಬಿಐ ದೀರ್ಘಾವಧಿಯ ಇಕ್ವಿಟಿ ಫಂಡ್
NAV (ಫೆಬ್ರವರಿ 25, 2025 ರಂತೆ): 425.81 ರೂ
ನಿಧಿಯ ಗಾತ್ರ: 27,305.51 ಕೋಟಿ
ಕನಿಷ್ಠ SIP ಮೊತ್ತ: 500 ರೂ
ಕನಿಷ್ಠ ಮೊತ್ತದ ಹೂಡಿಕೆ: 1,000 ರೂ
ಒಟ್ಟು ಹೂಡಿಕೆ (5 ವರ್ಷಗಳವರೆಗೆ ತಿಂಗಳಿಗೆ 10,000 ರೂ): 6,00,000
ಅಂದಾಜು ಆದಾಯ: 10,83,405
ವರ್ಗ: 5 ವರ್ಷಗಳು
ವಾರ್ಷಿಕ ಆದಾಯ: ಶೇ.23.3
ವೆಚ್ಚ ಅನುಪಾತ: ಶೇ. 0.95
ಹೂಡಿಕೆ ಮಾಡುವುದು ಯಾಕೆ?
ಈ ELSS (ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್) ನಿಧಿಯು ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಸಹ ನೀಡುತ್ತದೆ, ಇದು ಹೆಚ್ಚಿನ ಆದಾಯವನ್ನು ಗಳಿಸುವಾಗ ತೆರಿಗೆ ಉಳಿಸಲು ಬಯಸುವ ಹೂಡಿಕೆದಾರರಿಗೆ ಅತ್ಯುತ್ತಮ ಆಯ್ಕೆಯಾಗಿದೆ.
3. ಎಸ್‌ಬಿಐ ಮೂಲಸೌಕರ್ಯ ನಿಧಿ
NAV (ಫೆಬ್ರವರಿ 25, 2025 ರಂತೆ): 47 ರೂ
ನಿಧಿಯ ಗಾತ್ರ: 4,867.23 ಕೋಟಿ
ಕನಿಷ್ಠ SIP ಮೊತ್ತ: 500 ಕನಿಷ್ಠ
ಮೊತ್ತದ ಹೂಡಿಕೆ: 5,000
ಒಟ್ಟು ಹೂಡಿಕೆ (5 ವರ್ಷಗಳವರೆಗೆ ತಿಂಗಳಿಗೆ 10,000): 6,00,000
ಅಂದಾಜು ಆದಾಯ: 10,73,447
ವರ್ಗ: 5 ವರ್ಷಗಳು
ವಾರ್ಷಿಕ ಆದಾಯ: ಶೇ.23.3
ವೆಚ್ಚ ಅನುಪಾತ: ಶೇ. 0.83
ಹೂಡಿಕೆ ಯಾಕೆ?
ಈ ನಿಧಿಯು ಮೂಲಸೌಕರ್ಯ ಸಂಬಂಧಿತ ವಲಯಗಳ ಮೇಲೆ ಕೇಂದ್ರೀಕರಿಸುತ್ತದೆ. ಇದು ರಸ್ತೆಗಳು, ರೈಲ್ವೆಗಳು ಮತ್ತು ನಗರಾಭಿವೃದ್ಧಿಯಲ್ಲಿ ಹೆಚ್ಚುತ್ತಿರುವ ಸರ್ಕಾರಿ ಹೂಡಿಕೆಗಳಿಂದಾಗಿ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ.
4. ಎಸ್‌ಬಿಐ ಹೆಲ್ತ್‌ಕೇರ್ ಆಪರ್ಚುನಿಟೀಸ್ ಫಂಡ್
NAV (ಫೆಬ್ರವರಿ 25, 2025 ರಂತೆ):446.77
ನಿಧಿಯ ಗಾತ್ರ: 3,521.93 ಕೋಟಿ
ಕನಿಷ್ಠ SIP ಮೊತ್ತ: 500 ಕನಿಷ್ಠ
ಮೊತ್ತದ ಹೂಡಿಕೆ: 5,000
ಒಟ್ಟು ಹೂಡಿಕೆ (5 ವರ್ಷಗಳವರೆಗೆ ತಿಂಗಳಿಗೆ 10,000): 6,00,000
ಅಂದಾಜು ಆದಾಯ: 11,83,306
ವರ್ಗ: 5 ವರ್ಷ
ಆದಾಯ: ಶೇ.25.8 ಪ್ರತಿಶತ
ವೆಚ್ಚ ಅನುಪಾತ: ಶೇ.0.89
ಹೂಡಿಕೆ ಏಕೆ?
ಆರೋಗ್ಯ ಮತ್ತು ಔಷಧಗಳಿಗೆ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ಈ ನಿಧಿಯು ದೀರ್ಘಾವಧಿಯ ಬೆಳವಣಿಗೆಗೆ ಉತ್ತಮ ಸ್ಥಾನದಲ್ಲಿದೆ.
5. ಎಸ್‌ಬಿಐ ಕಾಂಟ್ರಾ
NAV (ಫೆಬ್ರವರಿ 25, 2025 ರಂತೆ): 379.38
ನಿಧಿಯ ಗಾತ್ರ: 41,634.25 ಕೋಟಿ
ಕನಿಷ್ಠ SIP ಮೊತ್ತ: 500
ಕನಿಷ್ಠ ಮೊತ್ತದ ಹೂಡಿಕೆ: 5,000
ಒಟ್ಟು ಹೂಡಿಕೆ (5 ವರ್ಷಗಳವರೆಗೆ ತಿಂಗಳಿಗೆ 10,000): 6,00,000
ಅಂದಾಜು ಆದಾಯ: 11,31,310
ವರ್ಗ: 5 ವರ್ಷ
ವಾರ್ಷಿಕ ಆದಾಯ: ಶೇ. 28.6
ವೆಚ್ಚ ಅನುಪಾತ: ಶೇ. 0.60
ಹೂಡಿಕೆ ಮಾಡುವುದು ಯಾಕೆ?
ಎಸ್ಬಿಐ ಕಾಂಟ್ರಾ ಫಂಡ್ ಈ ಸಿಪ್ಸ್ ಯೋಜನೆ ಶೇ. 25ರಷ್ಟು ರಿಟರ್ನ್ಸ್ ಗಳಿಸಿದೆ. ಈ ಫಂಡ್ ತುಂಬಾ ವೈವಿದ್ಯಮಯವಾಗಿದ್ದು, ಕಾಗ್ನಿಜಂಟ್, ಎಚ್ಡಿಎಫ್ಸಿ, ಎಸ್ಬಿಐ, ಎಚ್ಸಿಎಲ್ ಇದರ ಪ್ರಮುಖ ಹೋಲ್ಡಿಂಗ್ ಸಂಸ್ಥೆಗಳಾಗಿವೆ. ಪ್ರತಿ ತಿಂಗಳು ಕನಿಷ್ಟ ರೂ. 500ರ ಮೂಲಕ ಹೂಡಿಕೆ ಮಾಡಬಹುದು.


Click it and Unblock the Notifications