For Quick Alerts
ALLOW NOTIFICATIONS  
For Daily Alerts

ಕಡಿಮೆ ಬೆಲೆಯ ಕಾಂಪ್ಯಾಕ್ಟ್‌ ಎಸ್‌ಯುವಿ: ಟಾಪ್ 5 ಕಾರುಗಳ ಬೆಲೆ ಇಲ್ಲಿದೆ

|

ಒಳ್ಳೆಯ ಕಾರು ಖರೀದಿ ಮಾಡುಬೇಕು ಎನ್ನುವುದು ಬಹುತೇಕ ಜನರ ಕನಸಾಗಿರುತ್ತದೆ. ಅದ್ರಲ್ಲೂ ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿ ಬೇಡಿಕೆ ಹೆಚ್ಚಿದೆ. ವಿವಿಧ ಮೋಟಾರು ಕಂಪನಿಗಳು ತನ್ನದೇ ಆದ ವಿಶೇಷ ರೀತಿಯ ಎಸ್‌ಯುವಿಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ.

ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಎಸ್‌ಯುವಿಗಳನ್ನು ಗ್ರಾಹಕರನ್ನು ಸೆಳೆಯುತ್ತಿವೆ. ಅದರಲ್ಲೂ ಭಾರತೀಯ ಗ್ರಾಹಕರ ಸೂಕ್ಷ್ಮ ಬೆಲೆ ಖರೀದಿಯನ್ನು ಗಮನದಲ್ಲಿಟ್ಟುಕೊಂಡು, ಇಂದು ನಾವು ಅಗ್ಗದ ಐದು ಕಾಂಪ್ಯಾಕ್ಟ್ ಎಸ್‌ಯುವಿಗಳ ಮಾಹಿತಿ ಈ ಕೆಳಗೆ ತಿಳಿಸಿದ್ದೇವೆ.

ರೆನಾಲ್ಟ್ ಕಿಗರ್

ರೆನಾಲ್ಟ್ ಕಿಗರ್

ರೆನಾಲ್ಟ್ ಇಂಡಿಯಾ ಇತ್ತೀಚೆಗಷ್ಟೇ ಬಹುನಿರೀಕ್ಷಿತ ಕಿಗರ್ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಆರಂಭಿಕ ಬೆಲೆಗೆ 5.45 ಲಕ್ಷಕ್ಕೆ (ಎಕ್ಸ್ ಶೋ ರೂಂ, ಪ್ಯಾನ್-ಇಂಡಿಯಾ) ಬಿಡುಗಡೆ ಮಾಡಿತು. ಜೊತೆಗೆ ಕಂಪನಿಯು ಇಂದಿನಿಂದ ಎಸ್‌ಯುವಿಗಾಗಿ ಬುಕಿಂಗ್ ತೆರೆದಿದ್ದು, 11,000 ರೂ.ಗಳ ಬೆಲೆಯಲ್ಲಿ ಕಾಯ್ದಿರಿಸಬಹುದು.

ರೆನಾಲ್ಟ್ ಕಿಗರ್ ಅನ್ನು ನಾಲ್ಕು ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ. ಆರ್ಎಕ್ಸ್ಇ, ಆರ್ಎಕ್ಸ್ಎಲ್, ಆರ್ಎಕ್ಸ್‌ಟಿ ಮತ್ತು ಆರ್ಎಕ್ಸ್ ಝಡ್ ಎಂಬ ನಾಲ್ಕು ರೂಪಾಂತರಗಳಲ್ಲಿ ಪರಿಚಯಿಸಲಾಗಿದ್ದು, ಅದರ ಟಾಪ್ ವೇರಿಯಂಟ್ 9.55 ಲಕ್ಷ ರೂ. ಆಗಿದ್ದು, ಡ್ಯುಯಲ್ ಟೋನ್ ರೂಪಾಂತರವು ಹೆಚ್ಚುವರಿ ಬೆಲೆ 17,000 ರೂ. ಹೊಂದಿದೆ.

 

ನಿಸ್ಸಾನ್ ಮ್ಯಾಗ್ನೈಟ್

ನಿಸ್ಸಾನ್ ಮ್ಯಾಗ್ನೈಟ್

ನಿಸ್ಸಾನ್ ಮ್ಯಾಗ್ನೈಟ್ ಪ್ರಸ್ತುತ 10 ವೆರಿಯೆಂಟ್‌‌ಗಳನ್ನು ಹೊಂದಿದ್ದು, ಆರಂಭಿಕ ಮಾದರಿಯ ಬೆಲೆ 5.49 ರಿಂದ ಆರಂಭವಾಗಲಿದ್ದು, ನಿಸ್ಸಾನ್ ಮ್ಯಾಗ್ನೈಟ್ XV ಪ್ರೀಮಿಯಂ ಟರ್ಬೊ 9.35 ಲಕ್ಷ ರೂಪಾಯಿನಷ್ಟಿದೆ (ಎಕ್ಸ್ ಶೋ ರೂಂ), ಹೀಗಾಗಿಯೇ ಈ ಕಾರಣದಿಂದಾಗಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ತರಲಾಗಿದೆ.

ಕಿಯಾ ಸಾನೆಟ್

ಕಿಯಾ ಸಾನೆಟ್

ಕಿಯಾ ಸಾನೆಟ್ ಈ ಕಾಂಪ್ಯಾಕ್ಟ್ ಎಸ್‌ಯುವಿ ಆರಂಭಿಕ ಬೆಲೆ 6.8 ರಿಂದ 12 ಲಕ್ಷ ರೂಪಾಯಿಗಳಲ್ಲಿ ಲಭ್ಯವಿದೆ. ಇದು ಮೂರು ಎಂಜಿನ್ ಮತ್ತು ಹಲವಾರು ಗೇರ್ ಬಾಕ್ಸ್ ಆಯ್ಕೆಗಳನ್ನು ಹೊಂದಿದೆ.

ಇದು ಯುವೊ ಸಂಪರ್ಕಿತ ತಂತ್ರಜ್ಞಾನ, ಬೋಸ್ ಸೌಂಡ್ ಸಿಸ್ಟಮ್, ಏರ್ ಪ್ಯೂರಿಫಿಕೇಶನ್ ಸಿಸ್ಟಮ್, ಸೌಂಡ್ ಮೂಡ್ ಲೈಟ್, ಎಲೆಕ್ಟ್ರಿಕ್ ಸನ್‌ರೂಫ್, ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ ಹೊಂದಿದ್ದು, ಇದು ಎರಡು ಪೆಟ್ರೋಲ್ ಮತ್ತು ಒಂದು ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ.

 

ಹ್ಯುಂಡೈ ವೆನ್ಯೂ

ಹ್ಯುಂಡೈ ವೆನ್ಯೂ

ಹ್ಯುಂಡೈ ವೆನ್ಯೂ ಪ್ರಸ್ತುತ 19 ವೆರಿಯೆಂಟ್‌‌ಗಳನ್ನು ಹೊಂದಿದ್ದು, ವಿವಿಧ ನಮೂನೆಯ 7 ಬಣ್ಣಗಳಲ್ಲಿ ಲಭ್ಯವಿರುತ್ತದೆ. ಇದರ ಆರಂಭಿಕ ಬೆಲೆ 6.87 ರಿಂದ 11.61 ಲಕ್ಷ ರೂ, ಎಕ್ಸ್ ಶೋ ರೂಂಗೆ ಲಭ್ಯವಿದೆ. ಇದು ಎರಡು ಪೆಟ್ರೋಲ್ ಮತ್ತು ಒಂದು ಡೀಸೆಲ್ ಎಂಜಿನ್ ಆಯ್ಕೆಯನ್ನು ಸಹ ಹೊಂದಿದೆ.

ಟಾಟಾ ನೆಕ್ಸಾನ್

ಟಾಟಾ ನೆಕ್ಸಾನ್

ಟಾಟಾ ನೆಕ್ಸಾನ್ ದೀರ್ಘಕಾಲದವರೆಗೆ ಮಾರುಕಟ್ಟೆಯಲ್ಲಿದ್ದರೂ, ಹೊಸ ಅವತಾರದಲ್ಲಿ ಪರಿಚಯಿಸಿದಾಗಿನಿಂದ ಇದು ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಟಾಟಾ ನೆಕ್ಸಾನ್ ಪ್ರಸ್ತುತ 36 ವೆರಿಯೆಂಟ್‌‌ಗಳನ್ನು ಹೊಂದಿದ್ದು, ವಿವಿಧ ನಮೂನೆಯ 12 ಬಣ್ಣಗಳಲ್ಲಿ ಲಭ್ಯವಿದೆ. ಇತ್ತೀಚೆಗೆ ಇದರ ಮಾರಾಟವು ಅತಿ ಹೆಚ್ಚು ಆಗಿದ್ದು, ದೇಶದ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ.

ಇದರ ಬೆಲೆ 7.09 ರಿಂದ 12.8 ಲಕ್ಷ ರೂಪಾಯಿವರೆಗೆ ಲಭ್ಯವಿದ್ದು, ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಾಗಿದೆ. ಇದು ಸಂಪರ್ಕಿತ ತಂತ್ರಜ್ಞಾನ, ಹಾರ್ಮನ್ ಸೌಂಡ್ ಸಿಸ್ಟಮ್, ಡ್ರೈವಿಂಗ್ ಮೋಡ್, ಎಲೆಕ್ಟ್ರಿಕ್ ಸನ್‌ರೂಫ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.

 

Read more about: car price ಕಾರು ಬೆಲೆ
English summary

Top Affordable Compact SUV In India: Know More

SUVs are attracting customers in the Indian market in line with consumer demand. Considering the affordability of Indian consumers, we have listed here five low price compact SUVs
Story first published: Saturday, February 20, 2021, 16:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X