2025ರಲ್ಲಿ ಹೂಡಿಕೆ ಮಾಡಲು ಯಾವ ವಲಯಗಳು ಉತ್ತಮ ? ಹೆಚ್ಚಿನ ಲಾಭಕ್ಕಾಗಿ ಈ ಕ್ಷೇತ್ರದಲ್ಲಿ ಕಣ್ಣಿಟ್ಟಿರಿ

ಸಾಮಾನ್ಯವಾಗಿ ತಾವು ಮಾಡಿದ ಹೂಡಿಕೆಗಳಿಗೆ ಸರಿಯಾದ ರಿಟರ್ನ್ಸ್ ಸಿಗಬೇಕೆಂಬುದು ಎಲ್ಲರ ಇಚ್ಛೆಯಾಗಿದೆ. ಇನ್ನೇನು ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ನೂತನ ವರ್ಷದಲ್ಲಿ ಆರ್ಥಿಕ ಯೋಜನೆಗಳ ವಿಚಾರದಲ್ಲಿ ಏನನ್ನಾದರೂ ಹೊಸತನ್ನು ಮಾಡಬೇಕೆಂದು ಹಲವರು ಯೋಜನೆ ಹಾಕಿಕೊಂಡಿರುತ್ತಾರೆ. ಆದರೆ 2025ರಲ್ಲಿ ಹಾಕಿದ ಹಣಕ್ಕೆ ಉತ್ತಮ ಲಾಭಾಂಶ ಯಾವುದರಿಂದ ಪಡೆಯಬಹುದು ಎಂಬುದು ಬಹುತೇಕರ ಪ್ರಶ್ನೆಯಾಗಿದೆ. ಸದ್ಯ ನಾವು ಹೂಡಿಕೆದಾರರ ಈ ಪ್ರಶ್ನೆಗಳಿಗೆ ಸರಳ ಭಾಷೆಯಲ್ಲಿ ಉತ್ತರ ನೀಡಲಿದ್ದೇವೆ. 2025 ರಲ್ಲಿ ಭಾರತದ ಆರ್ಥಿಕತೆಯು ಮತ್ತಷ್ಟು ಏರಿಕೆ ದಾಖಲಾಗಲಿದೆ ಎಂಬುದು ಹಲವು ಸಂಸ್ಥೆಗಳು ಈಗಾಗಲೇ ಭವಿಷ್ಯ ನುಡಿದಿದೆ. ಹಲವಾರು ಕೈಗಾರಿಕೆಗಳು ಅತ್ಯುತ್ತಮ ಹೂಡಿಕೆಯ ನಿರೀಕ್ಷೆಗಳನ್ನು ಬಹಿರಂಗಪಡಿಸಿದೆ. ಇನ್ನು ಇದೇ ಹಾದಿಯಲ್ಲಿ ಹೊಸ ವರ್ಷವು ಹತ್ತಿರವಾಗುತ್ತಿದ್ದಂತೆ ಹೂಡಿಕೆದಾರರಿಗೆ ಹೊಸ ಅವಕಾಶಗಳನ್ನು ತೆರೆದಿದೆ. ಉದ್ಯಮದ ವಿಶ್ಲೇಷಕರ ಪ್ರಕಾರ, ಹೂಡಿಕೆದಾರರು ಗ್ರೀನ್ ಎನರ್ಜಿ, ರಿಯಲ್ ಎಸ್ಟೇಟ್, ಎಲೆಕ್ಟ್ರಿಕ್ ವಾಹನಗಳು (EV) ಮತ್ತು ತಾಂತ್ರಿಕ ಪ್ರಗತಿಗಳಂತಹ ಉನ್ನತ-ಸಂಭಾವ್ಯ ವಲಯಗಳನ್ನು ನಿಯಂತ್ರಿಸುವ ಮೂಲಕ ಬಲವಾದ ಆದಾಯವನ್ನು ನಿರೀಕ್ಷಿಸಬಹುದು.

ಎಲೆಕ್ಟ್ರಿಕ್ ವಾಹನಗಳು (EV)

ಸದ್ಯ ಪೆಟ್ರೋಲ್, ಡೀಸಿಲ್ ನಿಂದ ಹೊರಹೊಮ್ಮುವ ಹೊಗೆಯಿಂದಾಗಿ ಭೂಮಿಯ ಮೇಲೆ ಯಾವೆಲ್ಲಾ ರೀತಿಯಲ್ಲಿ ಅನಾಹುತಗಳು ನಡೆಯುತ್ತಿರುತ್ತದೆ ಎಂದು ನಮಗೆಲ್ಲಾ ತಿಳಿದಿದೆ. ಇದೇ ಕಾರಣಕ್ಕಾಗಿ ಇಂದು ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳು ಎಲೆಕ್ಟ್ರಿಕ್ ವಾಹನಗಳತ್ತ ಮುಖಮಾಡುತ್ತಿದ್ದು, ಈಗಾಗಲೇ ಇದಕ್ಕೆ ಸಂಬಂಧಿಸಿದ ತಯಾರಿಯನ್ನು ನಡೆಸುತ್ತಿದೆ. ಅದರಲ್ಲೂ ಸರ್ಕಾರದ ಸಬ್ಸಿಡಿಗಳು, ಹೆಚ್ಚುತ್ತಿರುವ ಬೇಡಿಕೆ ಮತ್ತು ಬ್ಯಾಟರಿ ತಂತ್ರಜ್ಞಾನದಲ್ಲಿನ ಸುಧಾರಣೆಗಳು ವಿದ್ಯುತ್ ವಾಹನ (EV) ಮಾರುಕಟ್ಟೆಯ ಬೆಳವಣಿಗೆಗೆ ಕೊಡುಗೆ ನೀಡುತ್ತಿವೆ. ಇದೇ ಕಾರಣಕ್ಕಾಗಿ ಸದ್ಯ EV ಮಾರಾಟವು ಗಗನಕ್ಕೇರುತ್ತಿದೆ, ಈ ಉದ್ಯಮವು ಭವಿಷ್ಯದಲ್ಲಿ ಸಾರಿಗೆಯಲ್ಲಿ ಮಹತ್ವದ ಶಕ್ತಿಯಾಗಿದೆ. ಸದ್ಯ ಇವಿ ವಲಯದಲ್ಲಿ ಹೂಡಿಕೆ ಮಾಡುವವರ ಸಂಖ್ಯೆಯಲ್ಳೂ ಏರಿಕೆಯಾಗುತ್ತಿದ್ದು, ಹಾಗಾಗಿ ಇದರಿಂದ ಲಾಭಾಂಶ ಕೂಡ ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ. ಹಾಗಾಗಿ ಇವಿ ಮುಂದೆ ಯಾವುದೇ ದೇಶದ ಅಭಿವೃದ್ದಿಗೂ ಗೇಮ್ ಚೇಂಜರ್ ಆಗಿ ಬದಲಾಗಲಿದೆ.

 2025ರಲ್ಲಿ ಹೂಡಿಕೆ ಮಾಡಲು ಯಾವ ವಲಯಗಳು ಉತ್ತಮ ?

ರಿಯಲ್ ಎಸ್ಟೇಟ್

ಮುಂದಿನ ದಿನಗಳಲ್ಲಿ ಭಾರತದಲ್ಲಿ ನಗರ ವಿಸ್ತರಣೆ ಕೂಡ ವೇಗವಾಗಿ ವಿಸ್ತರಿಸುತ್ತಿದ್ದು, ಪರಿಣಾಮ ರಿಯಲ್ ಎಸ್ಟೇಟ್ ಉದ್ಯಮದ ತ್ವರಿತ ಏರಿಕೆಗೆ ಕಾರಣವಾಗಿದೆ. ರಿಯಲ್ ಎಸ್ಟೇಟ್ ವೇಗವಾಗಿ ಬೆಳೆಯುತ್ತಲೇ ಇದೆ. ನಗರಗಳು ರಿಯಲ್ ಎಸ್ಟೇಟ್‌ನಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಕಂಡುಬರಲಿದ್ದು, ವಿಶೇಷವಾಗಿ ಸುಸ್ಥಿರ ನಗರಾಭಿವೃದ್ಧಿಯೊಂದಿಗೆ, ಹೆಚ್ಚಿನ ನಗರಗಳು ಪರಿಸರ ನಿಯಮಗಳನ್ನು ಪೂರೈಸಲು ಬಯಸುತ್ತವೆ. ಗಾಳಿ, ಸೌರ ಮತ್ತು ಹೈಡ್ರೋಜನ್‌ನಂತಹ ಹಸಿರು ಶಕ್ತಿಯಲ್ಲಿ ಹೂಡಿಕೆ ಮಾಡುವುದು ಮುಖ್ಯವಾಗಿದೆ. ಈ ಮೂಲಕ ಇಂಗಾಲದ ಹೊರಸೂಸುವಿಕೆಯಿಂದ ಮುಕ್ತವಾದ ಪರಿಸರಕ್ಕೆ ಅಗತ್ಯವಾದ ಆಧಾರ ಸ್ತಂಭಗಳಾಗಿ ಹೊರಹೊಮ್ಮಿದೆ ಎನ್ನುತ್ತಾರೆ ಅಭಿನವ್ ಆರ್ ಜೈನ್.

ಗ್ರೀನ್ ಎನರ್ಜಿ

ಭಾರತದಲ್ಲಿನ ಸರ್ಕಾರಿ ನಿಯಮಗಳು ನವೀಕರಿಸಬಹುದಾದ ಶಕ್ತಿಯಲ್ಲಿ ಹೂಡಿಕೆಗಳನ್ನು ಉತ್ತೇಜಿಸುತ್ತಿದ್ದು, ಸಬ್ಸಿಡಿ ಕೂಡ ನೀಡಲಾಗುತ್ತಿದೆ. ಇದು ಶುದ್ಧವಾದ, ಹೆಚ್ಚು ಸಮರ್ಥನೀಯ ಇಂಧನ ಮೂಲಗಳತ್ತ ಹೆಜ್ಜೆಯಾಗಿದೆ. ಗಾಳಿ, ಸೌರ ಮತ್ತು ಹೈಡ್ರೋಜನ್ ಶಕ್ತಿಯಂತಹ ಹಸಿರು ಶಕ್ತಿಯು ಭಾರತವು ಹೆಚ್ಚು ಸಮರ್ಥನೀಯ ಮತ್ತು ಶುದ್ಧ ಇಂಧನ ಮೂಲಗಳತ್ತ ಸಾಗುತ್ತಿರುವಾಗ ಹೆಚ್ಚು ಜನಪ್ರಿಯವಾಗುತ್ತಿದೆ. ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು ಅಕ್ಟೋಬರ್ 2024 ರ ವೇಳೆಗೆ ಬರೊಬ್ಬರಿ 201.45 GW ಗೆ ತಲುಪಿದೆ.

ತಾಂತ್ರಿಕ ನಾವೀನ್ಯತೆಗಳು

ಬ್ಲಾಕ್‌ಚೈನ್, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಕೃತಕ ಬುದ್ಧಿಮತ್ತೆ (AI) ನಲ್ಲಿನ ಪ್ರಗತಿಯೊಂದಿಗೆ ಹೊಸ ಮಾರ್ಗಗಳನ್ನು ಕೂಡ ತೆರೆದಿಡುತ್ತಿದ್ದು, ಹೂಡಿಕೆಗೂ ಹೆಚ್ಚು ಲಾಭ ತಂದುಕೊಡುತ್ತಿದೆ. ಅದರಲ್ಳೂ ಟೆಕ್ ಉದ್ಯಮವು ಮುಂದೆ ಮತ್ತಷ್ಟು ವೇಗದಲ್ಲಿ ಬೆಳವಣಿಗೆ ಹೊಂದುತ್ತಿದ್ದು, ಹಾಗಾಗಿ ಇದಕ್ಕೆ ಸಂಬಂಧಿಸಿದ ಯೋಜನೆಗಳ ಮೇಲಿನ ಹೂಡಿಕೆ ಹೆಚ್ಚು ಲಾಭದಾಯಕವಾಗಿದೆ.

ಅಂತಿಮ ಮಾತು

ಹೂಡಿಕೆ ಬಂಡವಾಳಗಳನ್ನು ಈ ಮೇಲಿನ ಕ್ಷೇತ್ರಗಳಲ್ಲಿ ವೈವಿಧ್ಯಗೊಳಿಸುದರ ಮೂಲಕ ಮುಂದಿನ ವರ್ಷದ ಪ್ರಗತಿಯಲ್ಲಿ ಜಾಗತಿಕ ಆರ್ಥಿಕ ಅಭಿವೃದ್ಧಿಯಲ್ಲಿ ಭಾಗವಹಿಸಲು ಅವಕಾಶವನ್ನು ನೀಡುತ್ತದೆ. ಹೂಡಿಕೆದಾರರು ತಮ್ಮ ಹಿಡುವಳಿಗಳನ್ನು ವೈವಿಧ್ಯಗೊಳಿಸಬಹುದು ಮತ್ತು ಮುಂಬರುವ ವರ್ಷದಲ್ಲಿ ಗಮನಾರ್ಹವಾದ ಆರಂಭಿಕ ಸಾರ್ವಜನಿಕ ಕೊಡುಗೆಗಳು (ಐಪಿಒಗಳು) ಮತ್ತು ಹೊಸ ಮಾರುಕಟ್ಟೆ ಪ್ರವೃತ್ತಿಗಳನ್ನು ಇಟ್ಟುಕೊಳ್ಳುವ ಮೂಲಕ ಯಶಸ್ಸಿಗೆ ತಮ್ಮನ್ನು ತಾವು ಹೊಂದಿಸಿಕೊಳ್ಳಬಹುದು.

Disclaimer: The write-up is just for information purposes, and is not a recommendation to buy, sell or hold. We have not done fundamental or technical analysis and have no opinion on article mentioned. Neither, the author nor Greynium Information Technologies should be held liable for any losses. Please consult a professional advisor.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+