ಪ್ರಸಕ್ತ ಹಣಕಾಸು ವರ್ಷ ಆರಂಭದಿಂದ ಅನೇಕ ವಾಹನಗಳ ಬೆಲೆ ಏರಿಕೆಗೊಂಡಿದೆ. ಇದೇ ಸಾಲಿಗೆ ಟೊಯೋಟಾ ಫಾರ್ಚೂನರ್ ಲೆಜೆಂಡರ್ ಸೇರಿಕೊಂಡಿದ್ದು, ಈ ಎಸ್‌ಯುವಿಯ ಬೆಲೆ ಮೊದಲ ಬಾರಿಗೆ ಹೆಚ್ಚಾಗಿದೆ.
ಟೊಯೋಟಾ ಫಾರ್ಚೂನರ್ ಲೆಜೆಂಡರ್ ಫೇಸ್ ಲಿಫ್ಟ್ ಮಾದರಿಯನ್ನು ಜನವರಿಯಲ್ಲಿ ಪರಿಚಯಿಸಲಾಯಿತು. ಆರಂಭದಲ್ಲಿ 37.58 ಲಕ್ಷ ರೂ.ಗೆ ಬಿಡುಗಡೆ ಮಾಡಲಾಗಿದ್ದು, ಇದೀಗ ಇದರ ಬೆಲೆ 38.30 ಲಕ್ಷ ರೂ. ತಲುಪಿದೆ.

ಟೊಯೋಟಾ ಫಾರ್ಚೂನರ್ ಲೆಜೆಂಡ್ ಅನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ ಅದರ ಬೆಲೆ ಏರಿಕೆಯಾಗಿದೆ. ಟೊಯೋಟಾ ಫಾರ್ಚೂನರ್ ಲೆಜೆಂಡ್‌ನ ಪರಿಷ್ಕೃತ ಬೆಲೆ ಏಪ್ರಿಲ್ 1 ರಿಂದ ಜಾರಿಗೆ ಬಂದಿದ್ದು, ಬೆಲೆ ಏರಿಕೆಯನ್ನು ಹೊರತುಪಡಿಸಿ, ಈ ಎಸ್ಯುವಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಇದರ ವೈಶಿಷ್ಟ್ಯಗಳು, ಎಂಜಿನ್ ಇತ್ಯಾದಿಗಳನ್ನು ಮೊದಲಿನಂತೆ ಇರಿಸಲಾಗಿದೆ.
ಟೊಯೋಟಾ ಫಾರ್ಚೂನರ್ ಅನ್ನು ಪರಿಚಯಿಸಿದಾಗಿನಿಂದ ಇದು ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ, ಫೆಬ್ರವರಿಯಲ್ಲಿ ಕಂಪನಿಯು ಒಂದೇ ತಿಂಗಳಲ್ಲಿ 5,000 ಬುಕಿಂಗ್ ಪಡೆದಿದೆ ಎಂದು ವರದಿ ಮಾಡಿದೆ. ಹೊಸ ರೀತಿಯಲ್ಲಿ ಕಾರನ್ನು ಪರಿಚಯಿಸಿದ ನಂತರ, ಅದು ತನ್ನ ವಿಭಾಗದಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿದೆ.


Click it and Unblock the Notifications