ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಕಾರು ಖರೀದಿಗೆ ಹಾಗೂ ಕಾರು ಸರ್ವೀಸ್ ಗೆ ಕೂಡ ಹೊಸದಾಗಿ, ಕಡಿಮೆ ಬಡ್ಡಿ ದರದಲ್ಲಿ 9 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಇಎಂಐ ಸೌಲಭ್ಯವನ್ನು ಗ್ರಾಹಕರಿಗೆ ಮಂಗಳವಾರ ಘೋಷಣೆ ಮಾಡಿದೆ. ಕಾರು ಖರೀದಿ ಮತ್ತು ನಿರ್ವಹಣೆ ಎರಡೂ ಗ್ರಾಹಕರಿಗೆ ಹೊರೆ ಆಗದಿರಲಿ ಎಂದು ಈ ಅನುಕೂಲ ಮಾಡಿಕೊಡಲಾಗಿದೆ ಎಂದು ತಿಳಿಸಲಾಗಿದೆ.
ಕೊರೊನಾದ ಸಂದರ್ಭದಲ್ಲಿ ಟೊಯೊಟಾದ ಅಧಿಕೃತ ವಾಟ್ಸಾಪ್ ಕೂಡ ಆರಂಭಿಸಲಾಗಿದೆ. ಕಾರು ಖರೀದಿ ಅಥವಾ ಸರ್ವೀಸ್ ಮಾಡಿಸಬೇಕು ಎಂದಿರುವವರಿಗೆ 3, 6, 9 ಹೀಗೆ ಇಎಂಐಗಳ ಲೆಕ್ಕದಲ್ಲಿ ಪಾವತಿಗೆ ಅವಕಾಶ ದೊರೆಯುತ್ತದೆ. ಬಡ್ಡಿದರ ಸಹ ಕಡಿಮೆ ಇರುತ್ತದೆ. ಕೆಲವು ಪ್ರಕರಣಗಳಲ್ಲಿ ಪ್ರೊಸೆಸಿಂಗ್ ಶುಲ್ಕ ಶೇಕಡಾ ನೂರರಷ್ಟು ಮನ್ನಾ ಮಾಡಲಾಗುತ್ತದೆ.

83676 83676 ಈ ಸಂಖ್ಯೆಗೆ ಮಿಸ್ಶ್ ಕಾಲ್ ಅಥವಾ 'Hi' ಎಂಬ ಸಂದೇಶ ಕಳುಹಿಸುವ ಮೂಲಕ ಯಾವುದೇ ಮಾಹಿತಿ ಪಡೆಯಬಹುದು, ದೂರು ಸಲ್ಲಿಸಬಹುದು, ಅಭಿಪ್ರಾಯ ತಿಳಿಸಬಹುದು ಎಂದು ಕಂಪೆನಿ ತಿಳಿಸಿದೆ. ಈ ವ್ಯವಸ್ಥೆ ಮೂಲಕ ಗ್ರಾಹರಿಗೆ ಹೊಸ ಕಾರು ಖರೀದಿ, ಈಗಾಗಲೇ ಇರುವ ಕಾರಿನ ಖರೀದಿ, ಮಾರಾಟ ಹಾಗೂ ಎಕ್ಸ್ ಚೇಂಜ್ ಮಾಡಬಹುದು. ಸರ್ವೀಸ್ ಅಪಾಯಿಂಟ್ ಮೆಂಟ್ ಪಡೆಯಬಹುದು ಇತ್ಯಾದಿ ಅನುಕೂಲಗಳಿವೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications