ಯಾಮಾರಬೇಡಿ! ಗಾಡಿ ಓಡಿಸೋ ಮುನ್ನ ಇರಲಿ ಎಚ್ಚರ..ಸಂಚಾರಿ ನಿಯಮಗಳು ಎಷ್ಟೇ ಕಠಿಣವಾದರೂ ಅದನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಕೆಲವೇ ಮಂದಿ ಮಾತ್ರ.. ಹೌದು, ಪ್ರತಿನಿತ್ಯ ಒಂದಲ್ಲಾ ಒಂದು ಸಮಸ್ಸೆಗಳಾದ ವೇಗವಾದ ಚಾಲನೆ ರಸ್ತೆ ಅಪಘಾತ, ಸಿಗ್ನಲ್ ಜಂಪಿಂಗ್, ಪಾದಚಾರಿ ಮಾರ್ಗದಲ್ಲಿ ಗಾಡಿ ಓಡಿಸುವುದು,ಘಟನೆಗಳ ವಿರುದ್ಧ ದೂರು ಇದ್ದೆ ಇರುತ್ತೇವೆ ಇವೆಕೆಲ್ಲಾ ಬ್ರೇಕ್ ಹಾಕಲು ಸಂಚಾರ ನಿಯಮಗಳನ್ನು ಜಾರಿಗೆ ತರಲುತ್ತಲೇ ಇರುತ್ತಾರೆ.ಇವೆಲ್ಲದರ ವಿರುದ್ಧ 2019ರಂದು ದಂಡವನ್ನು ಹೆಚ್ಚಾಗಿ ವಿಧಿಸುವ ಕ್ರಮ ಕೈಗೊಳ್ಳಲಾಯಿತು ಆದರೂ, ರಸ್ತೆ ಅಪಘಾತಗಳು ಸ್ವಲ್ಲವೂ ಕಡಿಮೆಯಾಗಿಲ್ಲ. ಆದರಿಂದ ರಸ್ತೆ ಸಾರಿಗೆ ಸಚಿವಾಲಯವು ಇದೀಗ ಕಠಿಣ ಕ್ರಮ ಜಾರಿಗೆ ತರಲು ಸಿದ್ದತೆಗಳನ್ನು ನೆಡೆಸುತ್ತಿದೆ. ಶೀಘ್ರದಲ್ಲಿ ಜಾರಿಗೆ ಬರಲಿದೆ.
ಸಂಚಾರ ನಿಯಮ ಉಲ್ಲಂಘನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ,ರಸ್ತೆ ಸಾರಿಗೆ ಸಚಿವಾಲಯವು ಚಾಲನಾ ಪರವಾನಗಿಗಳಿಗೆ (DL) ನಕಾರಾತ್ಮಕ ಅಂಕಗಳ ವ್ಯವಸ್ಥೆಯನ್ನು ಪರಿಚಯಿಸುವುದಾಗಿ ಯೋಜಿಸಿದೆ. ನೀವು ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಈ ಪಾಯಿಂಟ್‌ಗಳನ್ನು ನೀಡಲಾಗುತ್ತದೆ. ನಕಾರಾತ್ಮಕ ಅಂಕಗಳನ್ನು ನೀವು ಹೆಚ್ಚಾಗಿ ಮಾಡಿದ್ದರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಗುವ ಸಾಧ್ಯತೆ ಇದೆ ಎಂದು ಹೇಳಿದೆ.

ಡ್ರೈವಿಂಗ್ ಲೈಸೆನ್ಸ್ ರದ್ದು
ಈ ಹೊಸ ನಿಯಮಗಳು ಜಾರಿಗೆ ಬಂದರೆ ಸಿಗ್ನಲ್ ಜಂಪಿಂಗ್ ವೇಗದ ಚಾಲನೆಯಂತಹ ನಿಯಮ ಉಲ್ಲಂಘನೆಗಳನ್ನು ಮಾಡಿದ್ದರೆ DL ನಲ್ಲಿ ಹಲವಾರು ನಕಾರಾತ್ಮಕ ಅಂಕಗಳು ಸಂಗ್ರಹವಾದರೆ ಅದರ ಅಮಾನತು ಮಾಡಲಾಗುತ್ತದೆ. ಅಪಘಾತಗಳು ಮತ್ತು ಸಂಚಾರ ಉಲ್ಲಂಘನೆಗಳನ್ನು ಕಡಿಮೆ ಮಾಡಲು ಅಧಿಕಾರಿಗಳು ಈ ಹಿಂದೆ ಭಾರಿ ದಂಡ ಮತ್ತು ದಂಡದಂತಹ ಕ್ರಮಗಳನ್ನು ಜಾರಿಗೆ ತಂದಿದ್ದರು, ಆದರೆ ಅವುಗಳು ಅಷ್ಟರ ಮಟ್ಟಿಗೆ ಪರಿಣಾಮವನ್ನು ಬೀರಿಲ್ಲ
ಭಾರತದಲ್ಲಿ ವರ್ಷಕ್ಕೆ 170,000 ಕ್ಕೂ ಹೆಚ್ಚು ಅಪಘಾತಗಳು ಆಗುತ್ತಿವೆ, ಇದನ್ನು ತಪ್ಪಿಸಲು ಸರ್ಕಾರವು ಕಠಿಣ ಕ್ರಮಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ, ಅದಕ್ಕಾಗಿಯೇ ಅಸ್ತಿತ್ವದಲ್ಲಿರುವ ದಂಡಗಳ ಜೊತೆಗೆ ನೆಗೆಟಿವ್ ಪಾಯಿಂಟ್ಸ್ ಗಳನ್ನು ಸಹ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಹೊಸ ವ್ಯವಸ್ಥೆಯು ಆಸ್ಟ್ರೇಲಿಯಾ, ಯುಕೆ, ಜರ್ಮನಿ, ಬ್ರೆಜಿಲ್, ಫ್ರಾನ್ಸ್ ಮತ್ತು ಕೆನಡಾದಂತಹ ದೇಶಗಳಲ್ಲಿ ಜಾರಿಯಲ್ಲಿರುವ ವ್ಯವಸ್ಥೆಗಳ ಮಾದರಿಯಲ್ಲಿದೆ, ಇತ್ತೀಚಿನ ಸಭೆಯಲ್ಲಿ DL ವ್ಯವಸ್ಥೆಯನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಬಗ್ಗೆ ಚರ್ಚಿಸಲಾಗಿದೆ. ಮುಂದಿನ ಎರಡು ತಿಂಗಳೊಳಗೆ ಈ ನೆಗೆಟಿವ್ ಪಾಯಿಂಟ್ಸ್ ವ್ಯವಸ್ಥೆಯನ್ನು ಕಾನೂನು ತಿದ್ದುಪಡಿಗಳಲ್ಲಿ ಸಂಯೋಜಿಸಲಾಗುವುದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಕಾನೂನು ಪಾಲಿಸುವ ಚಾಲಕರಿಗೆ ಸಕಾರಾತ್ಮಕ ಸುದ್ದಿ ಎಂದರೆ ಮೆರಿಟ್ ಪಾಯಿಂಟ್‌ಗಳನ್ನು ನೀಡುವುದು, ಆದರೆ ಉಲ್ಲಂಘಿಸುವವರು ಡಿಮೆರಿಟ್ ಪಾಯಿಂಟ್‌ಗಳನ್ನು ಪಡೆಯುತ್ತಾರೆ.
ಮೆರಿಟ್ ಅಂಕ ನೀಡುವ ವ್ಯವಸ್ಥೆ
ಸರಿಯಾದ ರೀತಿಯಲ್ಲಿ ವಾಹನ ಚಲಾಯಿಸಿ ನಿಯಮ ಪಾಲಿಸುವವರಿಗೆ ಮೆರಿಟ್ ಪಾಯಿಂಟ್ಸ್ ನೀಡುವ ವ್ಯವಸ್ಥೆಯನ್ನು ಮೋಟಾರು ವಾಹನ ಕಾಯ್ದೆಗೆ ತರಲಾಗುತ್ತದೆ. ಸಂಚಾರ ಉಲ್ಲಂಘನೆಗಾಗಿ ಡಿಮೆರಿಟ್ ಅಂಕಗಳನ್ನು ಎದುರಿಸಬೇಕಾಗುತ್ತದೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದು ಭಾರತದ ರಸ್ತೆ ಸುರಕ್ಷತಾ ಕ್ರಮಗಳನ್ನು ಪರಿಷ್ಕರಿಸುವ ದೊಡ್ಡ ಯೋಜನೆಯ ಭಾಗವಾಗಿದೆ, ಹೆಚ್ಚುತ್ತಿರುವ ಸಂಚಾರ ಸಂಬಂಧಿತ ಸಾವುಗಳ ಕಾರಣದಿಂದಾಗಿ ಈ ನಿಯಮಗಳನ್ನು ಜಾರಿಗೆ ತರಲು ಯೋಜನೆಯನ್ನು ಮಾಡಿದೆ.
ಚಾಲನಾ ಪರವಾನಗಿಗಳ ರದ್ದತಿಯನ್ನು ಒಳಗೊಂಡಿರುವ ಹೊಸ ಪೆನಾಲ್ಟಿ ಪಾಯಿಂಟ್ ವ್ಯವಸ್ಥೆಯು ಹೆಚ್ಚು ಪರಿಣಾಮಕಾರಿಯಾಗಿ ಸಂಚಾರ ಸುರಕ್ಷತೆಗಾಗಿ ಈ ನಿಮಯ ಹೆಚ್ಚು ಅನುಕೂಲವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ಧಾರೆ.
ಸಂಚಾರಿ ನಿಯಮವನ್ನು ಪಾಲಿಸಲು ಈ ಹೊಸ ನಿಯಮವು ಎಚ್ಚರಿಕೆಯ ಗಂಟೆಯಾಗಿ ಕೆಲಸ ಮಾಡುತ್ತದೆ ಇದರಿಂದ ಸಾವು.ನೋವುಗಳು ಸ್ವಲ್ಪ ಮಟ್ಟಿ ಕಡಿಮೆಯಾಗಬಹುದು.


Click it and Unblock the Notifications