ಸಾಮಾನ್ಯವಾಗಿ ರೈಲ್ವೇ ಹಳಿ ದುರಸ್ತಿಗಾಗಿ, ರೈಲ್ವೇಯಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ ಕೆಲವೊಮ್ಮೆ ಸೇವೆಗಳನ್ನು ಭಾರತೀಯ ರೈಲ್ವೇ ರದ್ದುಗೊಳಿಸುತ್ತದೆ. ಇನ್ನೂ ಕೆಲವೊಮ್ಮೆ ವಾತಾವರಣ ನೋಡಿಕೊಂಡು ರೈಲು ಸೇವೆಯನ್ನು ಕ್ಯಾನ್ಸಲ್ ಮಾಡಲಾಗುತ್ತದೆ. ಅದೇ ರೀತಿ ಈ ಬಾರಿ ಚಳಿ ಜೊತೆಗೆ ಮಂಜು ದಟ್ಟವಾಗಿ ಆವರಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆ ಹಲವಾರು ರೈಲು ಸೇವೆಗಳು ರದ್ದುಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಚಳಿಗಾಲದ ಆರಂಭದೊಂದಿಗೆ, ದಟ್ಟವಾದ ಮಂಜು ಭಾರತೀಯ ರೈಲ್ವೆ ಸೇವೆಗಳಿಗೆ ಅಡ್ಡಿಯಾಗುವ ಸಾಧ್ಯತೆ ಇದೆ. ಈ ಪರಿಣಾಮ ದೂರದ ರೈಲುಗಳ ಸಂಚಾರದಲ್ಲಿ ಭಾರೀ ವಿಳಂಬ ಅಥವಾ ರದ್ದಾಗುವ ಸಾಧ್ಯತೆಗಳಿರುತ್ತದೆ. ಮುಂದಿನ ಮೂರು ತಿಂಗಳಲ್ಲಿ (ಡಿಸೆಂಬರ್-ಫೆಬ್ರವರಿ) ಮಂಜು ಮುಸುಕಿದ ವಾತಾವರಣವಿರಲಿದ್ದು, ಈ ಸಂದರ್ಭದಲ್ಲಿ ಎಷ್ಟು ರೈಲುಗಳು ಕ್ಯಾನ್ಸಲ್ ಆಗಿದೆ ಎಂಬುದರ ಮಾಹಿತಿ ಇಲ್ಲಿದೆ ಓದಿ.
ಅತಿಯಾದ ಮಂಜಿನಿಂದ ರೈಲು ಸಂಚಾರಕ್ಕೆ ಅಡ್ಡಿಯಾಗುವ ಪರಿಣಾಮ, ಪೂರ್ವ ಮಧ್ಯ ರೈಲ್ವೆ (ECR) ಡಿಸೆಂಬರ್ 1, 2025, ರಿಂದ ಮಾರ್ಚ್ 3, 2026, ರವರೆಗೆ ಒಟ್ಟು 24 ಜೋಡಿ ರೈಲುಗಳ ಸೇವೆಗಳನ್ನು ರದ್ದುಗೊಳಿಸಿದೆ. ಅಲ್ಲದೇ ಈ ಭಾಗದ ಪ್ರಯಾಣಿಕರು ಪರ್ಯಾಯ ರೈಲುಗಳಲ್ಲಿ ಸಂಚಾರ ಮಾಡುವಂತೆ ಮತ್ತು ಅದೇ ರೀತಿ ಟ್ರಾವೆಲ್ ಪ್ಲಾನ್ ಮಾಡುವಂತೆ ಸೂಚಿಸಲಾಗಿದೆ.
ಭಾರತೀಯ ರೈಲ್ವೆಯ ಈ ರದ್ದತಿ ಪ್ರಕ್ರಿಯೆ ಹಂತ ಹಂತವಾಗಿ ಜಾರಿಗೆ ಬರಲಿದೆ. ದಿಬ್ರುಗಢ್-ಚಂಡೀಗಢ್ ಎಕ್ಸ್‌ಪ್ರೆಸ್ ಮತ್ತು ಕಾಮಾಖ್ಯ-ಆನಂದ ವಿಹಾರ್ ಎಕ್ಸ್‌ಪ್ರೆಸ್‌ನಂತಹ ನಿರ್ದಿಷ್ಟ ರೈಲುಗಳ ಮಾರ್ಗಗಳ ಮೇಲೆ ಈ ರದ್ಧತಿ ನಿರ್ಧಾರ ಪರಿಣಾಮ ಬೀರಲಿದೆ.
ಮಂಜಿನ ಕಾರಣದಿಂದ ರದ್ದುಗೊಳ್ಳಲಿರುವ ರೈಲುಗಳ ಪಟ್ಟಿ:
ರೈಲು ಸಂಖ್ಯೆ 22857, ಸಂತಗ್ರಾಚಿ ಆನಂದ ವಿಹಾರ್ ಎಕ್ಸ್‌ಪ್ರೆಸ್, ಡಿಸೆಂಬರ್ 1, 2025, ರಿಂದ ಮಾರ್ಚ್ 2, 2026 ರವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 22858, ಆನಂದ ವಿಹಾರ್ ಸಂತಗ್ರಾಚಿ ಎಕ್ಸ್‌ಪ್ರೆಸ್, ಡಿಸೆಂಬರ್ 2, 2025, ರಿಂದ ಮಾರ್ಚ್ 3, 2026 ರವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 12873, ಹಟಿಯಾ ಆನಂದ ವಿಹಾರ್ ಎಕ್ಸ್‌ಪ್ರೆಸ್, ಡಿಸೆಂಬರ್ 1, 2025, ರಿಂದ ಫೆಬ್ರವರಿ 26, 2026 ರವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 12874, ಆನಂದ ವಿಹಾರ್ ಹಟಿಯಾ ಎಕ್ಸ್‌ಪ್ರೆಸ್, ಡಿಸೆಂಬರ್ 2, 2025, ರಿಂದ ಫೆಬ್ರವರಿ 27, 2026 ರವರೆಗೆ ರದ್ದಾಗಲಿದೆ.
ರೈಲು ಸಂಖ್ಯೆ 14617, ಪೂರ್ಣಿಯಾ ಕೋರ್ಟ್ ಅಮೃತಸರ ಜನಸೇವಾ ಎಕ್ಸ್‌ಪ್ರೆಸ್, ಡಿಸೆಂಬರ್ 3, 2025, ರಿಂದ ಮಾರ್ಚ್ 2, 2026 ರವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 14618, ಅಮೃತಸರ ಪೂರ್ಣಿಯಾ ಕೋರ್ಟ್ ಜನಸೇವಾ ಎಕ್ಸ್‌ಪ್ರೆಸ್, ಡಿಸೆಂಬರ್ 1, 2025, ರಿಂದ ಫೆಬ್ರವರಿ 28, 2026 ರವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 15903, ದಿಬ್ರುಗಢ್ ಚಂಡೀಗಢ್ ಎಕ್ಸ್‌ಪ್ರೆಸ್, ಡಿಸೆಂಬರ್ 1, 2025, ರಿಂದ ಫೆಬ್ರವರಿ 27, 2026 ರವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 15904, ಚಂಡೀಗಢ್ ದಿಬ್ರುಗಢ್ ಎಕ್ಸ್‌ಪ್ರೆಸ್, ಡಿಸೆಂಬರ್ 3, 2025, ರಿಂದ ಮಾರ್ಚ್ 1, 2026 ರವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 14112, ಪ್ರಯಾಗರಾಜ್ ಜಂಕ್ಷನ್ ಮುಜಫ್ಫರ್‌ಪುರ್ ಎಕ್ಸ್‌ಪ್ರೆಸ್, ಡಿಸೆಂಬರ್ 1, 2025, ರಿಂದ ಫೆಬ್ರವರಿ 25, 2026 ರವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 14111, ಮುಜಫ್ಫರ್‌ಪುರ್ ಪ್ರಯಾಗರಾಜ್ ಜಂಕ್ಷನ್ ಎಕ್ಸ್‌ಪ್ರೆಸ್, ಡಿಸೆಂಬರ್ 1, 2025, ರಿಂದ ಫೆಬ್ರವರಿ 25, 2026 ರವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 18103, ಟಾಟಾ ಅಮೃತಸರ ಎಕ್ಸ್‌ಪ್ರೆಸ್, ಡಿಸೆಂಬರ್ 1, 2025 ರಿಂದ ಫೆಬ್ರವರಿ 25, 2026 ರವರೆಗೆ ಕ್ಯಾನ್ಸಲ್.
ರೈಲು ನಂಬರ್ 18104, ಅಮೃತಸರ ಟಾಟಾ ಎಕ್ಸ್‌ಪ್ರೆಸ್, ಡಿಸೆಂಬರ್ 3, 2025, ರಿಂದ ಫೆಬ್ರವರಿ 27, 2026 ರವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 15620, ಕಾಮಾಖ್ಯ ಗಯಾ ಎಕ್ಸ್‌ಪ್ರೆಸ್, ಡಿಸೆಂಬರ್ 1, 2025, ರಿಂದ ಫೆಬ್ರವರಿ 23, 2026 ರವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 15619, ಗಯಾ ಕಾಮಾಖ್ಯ ಎಕ್ಸ್‌ಪ್ರೆಸ್, ಡಿಸೆಂಬರ್ 2, 2025, ರಿಂದ ಫೆಬ್ರವರಿ 24, 2026 ರವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 15621, ಕಾಮಾಖ್ಯ ಆನಂದ ವಿಹಾರ್ ಎಕ್ಸ್‌ಪ್ರೆಸ್, ಡಿಸೆಂಬರ್ 4, 2025, ರಿಂದ ಫೆಬ್ರವರಿ 26, 2026 ರವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 15622, ಆನಂದ ವಿಹಾರ್ ಕಾಮಾಖ್ಯ ಎಕ್ಸ್‌ಪ್ರೆಸ್, ಡಿಸೆಂಬರ್ 5, 2025, ರಿಂದ ಫೆಬ್ರವರಿ 27, 2026 ರವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 22198, ವಿರಾಂಗನಾ ಲಕ್ಷ್ಮಿಬಾಯಿ ಝಾನ್ಸಿ ಕೋಲ್ಕತ್ತಾ ಎಕ್ಸ್‌ಪ್ರೆಸ್, ಡಿಸೆಂಬರ್ 5, 2025, ರಿಂದ ಫೆಬ್ರವರಿ 27, 2026 ರವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 22197, ಕೋಲ್ಕತ್ತಾ ವಿರಾಂಗನಾ ಲಕ್ಷ್ಮಿಬಾಯಿ ಝಾನ್ಸಿ ಎಕ್ಸ್‌ಪ್ರೆಸ್, ಡಿಸೆಂಬರ್ 7, 2025, ರಿಂದ ಮಾರ್ಚ್ 1, 2026 ರವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 14523, ಬರೌನಿ ಅಂಬಾಲಾ ಹರಿಹರ್ ಎಕ್ಸ್‌ಪ್ರೆಸ್, ಡಿಸೆಂಬರ್ 4, 2025, ರಿಂದ ಫೆಬ್ರವರಿ 26, 2026 ರವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 14524, ಅಂಬಾಲಾ ಬರೌನಿ ಹರಿಹರ್ ಎಕ್ಸ್‌ಪ್ರೆಸ್, ಡಿಸೆಂಬರ್ 2, 2025, ರಿಂದ ಫೆಬ್ರವರಿ 24, 2026 ರವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 12327, ಹೌರಾ ದೆಹ್ರಾಡೂನ್ ಉಪಾಸನಾ ಎಕ್ಸ್‌ಪ್ರೆಸ್, ಡಿಸೆಂಬರ್ 2, 2025, ರಿಂದ ಫೆಬ್ರವರಿ 27, 2026 ರವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 12328, ದೆಹ್ರಾಡೂನ್ ಹೌರಾ ಉಪಾಸನಾ ಎಕ್ಸ್‌ಪ್ರೆಸ್, ಡಿಸೆಂಬರ್ 3, 2025, ರಿಂದ ಫೆಬ್ರವರಿ 28, 2026 ರವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 14003, ಮಾಲ್ಡಾ ಟೌನ್ ನವದೆಹಲಿ ಎಕ್ಸ್‌ಪ್ರೆಸ್, ಡಿಸೆಂಬರ್ 6, 2025, ರಿಂದ ಫೆಬ್ರವರಿ 28, 2026 ರವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 14004, ನವದೆಹಲಿ ಮಾಲ್ಡಾ ಟೌನ್ ಎಕ್ಸ್‌ಪ್ರೆಸ್, ಡಿಸೆಂಬರ್ 4, 2025, ರಿಂದ ಫೆಬ್ರವರಿ 26, 2026 ರವರೆಗೆ ರದ್ದುಗೊಳ್ಳಲಿದೆ.


Click it and Unblock the Notifications