ಬ್ಯಾಂಕಿಂಗ್ ಸೇವೆಗಳನ್ನು ಇನ್ನಷ್ಟು ಸುಧಾರಿಸಲು ಕರೆ ನೀಡಿದ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕೆ ಕರದ್, ತಮ್ಮ ಗ್ರಾಹಕರನ್ನು ದೇವರಂತೆ ಕಾಣುವಂತೆ ಬ್ಯಾಂಕ್‌ಗಳಿಗೆ ಮನವಿ ಮಾಡಿದ್ದಾರೆ. "ಬ್ಯಾಂಕ್‌ಗಳು ತಮ್ಮ ಗ್ರಾಹಕರ ಸೇವೆಯನ್ನು ಸುಧಾರಿಸುವತ್ತ ಹೆಚ್ಚು ಗಮನಹರಿಸಬೇಕು, ಗ್ರಾಹಕರಿಗೆ ಉಂಟಾಗುವ ಕಷ್ಟಗಳನ್ನು, ತೊಂದರೆಗಳನ್ನು, ಅಡೆತಡೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬ್ಯಾಂಕುಗಳು ಕಾರ್ಯನಿರ್ವಹಣೆ ಮಾಡಬೇಕು," ಎಂದು ಕೂಡಾ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕೆ ಕರದ್ ತಿಳಿಸಿದ್ದಾರೆ.
ಈ ವಾರದಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರ (BoM) ಆಯೋಜಿಸಿದ್ದ ಗ್ರಾಹಕರ ಭೇಟಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕೆ ಕರದ್ ಈ ಮಾತುಗಳನ್ನು ಆಡಿದ್ದಾರೆ. ಇನ್ನು ಗ್ರಾಹಕರು ಕೂಡಾ ಬ್ಯಾಂಕುಗಳಿಗೆ ಸಹಕಾರ ನೀಡಬೇಕಾಗುತ್ತದೆ. ಬ್ಯಾಂಕ್‌ಗಳು ಆರ್ಥಿಕವಾಗಿ ಆರೋಗ್ಯವಾಗಿರಲು ಬ್ಯಾಂಕುಗಳಿಗೆ ಮುಖ್ಯವಾಗಿ ಸಹಾಯ ಮಾಡುವುದು ಗ್ರಾಹಕರು. ಬ್ಯಾಂಕ್‌ಗಳ ಆರ್ಥಿಕ ಸ್ಥಿತಿ ಉತ್ತಮವಾಗಿರಬೇಕಾದರೆ ಗ್ರಾಹಕರು ಸಾಲ ಮರುಪಾವತಿ ಮಾಡುವ ಕಾರ್ಯದಲ್ಲಿ ಸ್ಪಂಧಿಸಬೇಕು, ತ್ವರಿತವಾಗಿ ಸಾಲ ಮರುಪಾವತಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಕೇಂದ್ರ ಸಚಿವರು ಬೇರೇನು ಹೇಳಿದ್ದಾರೆ?
ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ (ಕೆಸಿಸಿ) ಸಂಬಂಧಿಸಿದಂತೆ ಮಾತನಾಡಿದ ಸಚಿವ ಭಾಗವತ್ ಕೆ ಕರದ್, ಕೆಸಿಸಿ ಯೋಜನೆಯ ವ್ಯಾಪ್ತಿಯನ್ನು ಹೆಚ್ಚಿನ ರೈತರಿಗೆ ವಿಸ್ತರಿಸಲು ಮತ್ತು ಸಮಯಕ್ಕೆ ಅನುಗುಣವಾಗಿ ಸ್ಯಾಚುರೇಶನ್ ಅನ್ನು ಖಚಿತಪಡಿಸಿಕೊಳ್ಳಬೇಕು ಎಂದು ಬ್ಯಾಂಕ್ ಆಫ್ ಮಹಾರಾಷ್ಟ್ರ ಸೇರಿದಂತೆ ಇತರೆ ಬ್ಯಾಂಕುಗಳಲ್ಲಿ ಒತ್ತಾಯ ಮಾಡಿದರು. ಬ್ಯಾಂಕಿಂಗ್ ಉದ್ಯಮವು ಪ್ರಮುಖವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು, ಯುವಕ, ಮಹಿಳಾ ಕೃಷಿಕರಿಗೆ ಸಹಾಯ ಮಾಡಬೇಕಾಗಿದೆ. ಬೆಳವಣಿಗೆಗೆ ಒಂದು ಬಾಣದಂತೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
"ಭಾರತವು ಈಗ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯನ್ನು ಹೊಂದಿದೆ," ಎಂದು ಕೂಡಾ ತಿಳಿಸಿದರು. ಇನ್ನು ಪ್ರಸ್ತುತ ಅಧಿವೇಶನ ನಡೆಯುತ್ತಿದ್ದು, ದೇಶದ ಆರ್ಥಿಕತೆ, ಹಣಕಾಸು ಸ್ಥಿತಿ, ಸ್ಟಾರ್ಟ್‌ಅಪ್‌ಗಳು, ಪಿಎಫ್ ಬಗ್ಗೆಗಿನ ಹಲವಾರು ಗೊಂದಲಗಳಿಗೆ ಉತ್ತರವನ್ನು ಕೇಂದ್ರ ಸರ್ಕಾರ ನೀಡುವ ಪ್ರಯತ್ನ ಮಾಡುತ್ತಾ ಬಂದಿದೆ. ವಿರೋಧ ಪಕ್ಷಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡುವ ಮೂಲಕ ಜನರ ಗೊಂದಲಗಳನ್ನು ದೂರ ಮಾಡಲಾಗುತ್ತಿದೆ.
ಬ್ಯಾಂಕ್‌ಗೆ ಎಚ್ಚರಿಕೆ ನೀಡುರುವ ಆರ್‌ಬಿಐ
ಯುಎಸ್, ಯುರೋಪ್ ರಾಷ್ಟ್ರಗಳಲ್ಲಿ ಬ್ಯಾಂಕಿಂಗ್ ವಲಯದಲ್ಲಿ ಬಿಕ್ಕಟ್ಟು ಕಂಡು ಬಂದಿದೆ. ಯುಎಸ್‌ನ ಸಿಲಿಕಾನ್ ವ್ಯಾಲಿ ಬ್ಯಾಂಕ್ ಮುಚ್ಚಲಾಗಿದೆ. ಈ ನಡುವೆ ಆಸ್ತಿ-ಬಾಧ್ಯತೆಯ ಅಸಮತೋಲನದ ಬಗ್ಗೆ ಬ್ಯಾಂಕುಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ್ ದಾಸ್ ಎಚ್ಚರಿಕೆ ನೀಡಿದ್ದಾರೆ.
ಸಿಲಿಕಾನ್ ವ್ಯಾಲಿ ಬ್ಯಾಂಕ್, ಸಿಗ್ನೇಚರ್ ಬ್ಯಾಂಕ್ ಮುಚ್ಚಲ್ಪಟ್ಟ ಬಳಿಕ ಬೇರೆ ದೇಶಗಳಲ್ಲಿಯೂ ಆತಂಕ ಸೃಷ್ಟಿಯಾಗಿದೆ. ಇದರಂತೆಯೇ ಆರ್‌ಬಿಐ ಕೂಡಾ ಭಾರತದ ಬ್ಯಾಂಕ್‌ಗಳಿಗೆ ಎಚ್ಚರಿಕೆಯನ್ನು ನೀಡಿದೆ. ಎಸ್‌ವಿಬಿ ಕುಸಿತವು ಭಾರತದ ಸ್ಟಾರ್ಟ್‌ಅಪ್‌ಗಳು ಇತರೆ ಸಂಸ್ಥೆಗಳ ಮೇಲೆಯೂ ಪ್ರಭಾವ ಬೀರಿದೆ. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರನ್, "ಕೆಲವು ಭಾರತೀಯ ಸಂಸ್ಥೆಯು ಬಿಲಿಯನ್ ಡಾಲರ್‌ಗೂ ಅಧಿಕ ಸಂಪತ್ತು ಎಸ್‌ವಿಬಿಯಲ್ಲಿದೆ," ಎಂದು ತಿಳಿಸಿದ್ದು, ಪ್ರಭಾವಕ್ಕೆ ಒಳಗಾದ ಸಂಸ್ಥೆಗಳಿಗೆ ಭರವಸೆ ನೀಡಿದ್ದಾರೆ.


Click it and Unblock the Notifications