ನಮ್ಮ ಕರ್ನಾಟಕದ ರಾಜಧಾನಿ ಬೆಂಗಳೂರು ಭಾರತದ ಸ್ಟಾರ್ಟ್‌ಅಪ್ ರಾಜಧಾನಿ ಕೂಡಾ ಹೌದು. 'ಸ್ಟಾರ್ಟ್‌ಅಪ್ ಕ್ಯಾಪಿಟಲ್ ಆಫ್ ಇಂಡಿಯಾ' ಎಂದು ಕರೆಯಲ್ಪಡುವ ಬೆಂಗಳೂರು ತನ್ನ ವಿಭಿನ್ನ ಐಡಿಯಾಗಳ ಮೂಲಕ ಭಾರತವೇ ಬೆರಗಾಗುವಂತೆ ಮಾಡುತ್ತಾ ಬಂದಿದೆ.
ನಗರವು ವಿಭಿನ್ನ ಚಿಂತನೆ, ದಿಟ್ಟವಾದ ಮನೋಭಾವ, ಇಂದಿನ ಜನರ ನಾವೀನ್ಯತೆಗೆ ಹೆಸರುವಾಸಿಯಾಗಿದೆ. ಸಾಮಾನ್ಯಕ್ಕೆ ವಿರುದ್ಧವಾಗಿಯೇ ನಾವೀನ್ಯತೆ ಇದೆ. "ಪೀಕ್ ಬೆಂಗಳೂರು" ಕ್ಷಣದ ಮತ್ತೊಂದು ದೃಶ್ಯ ಈಗ ವೈರಲ್ ಆಗುತ್ತಿದೆ. ಮೊಬೈಲ್ ವಾಕ್-ಇನ್ ಉಡುಪು ಶೋರೂಮ್‌ನಂತೆ ಕಾಣುವ ಟ್ರಕ್ ಅನ್ನು ವ್ಯಕ್ತಿಯೊಬ್ಬರು ನೋಡಿದ್ದಾರೆ. ಈ ದೃಶ್ಯವೀಗ ವೈರಲ್ ಆಗಿದೆ.

ಎಕ್ಸ್ ಬಳಕೆದಾರ ಪಕ್ಷಿಕ್‌ಪಾಪ್ ರಾಜಾ ಬಾಬು (Pakchikpak Raja Babu) ಈ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಈ ಚಿತ್ರದಲ್ಲಿ ಕಪ್ಪು ಟ್ರಕ್ ಇದೆ. ಬರೀ ಕಪ್ಪು ಟ್ರಕ್ ಏನು ವಿಶೇಷ ಅಂದುಕೊಂಡರೆ ಈ ಚಿತ್ರವನ್ನು ನೀವು ನೋಡಲೇಬೇಕು. ಈ ಟ್ರಕ್‌ನಲ್ಲಿ ಬಟ್ಟೆಗಳನ್ನು ಸೊಗಸಾಗಿ ಪ್ರದರ್ಶಿಸಲಾಗಿದೆ.
ಟ್ರಕ್ ಒಳಗೆ ಇರುವ ಬಟ್ಟೆಗಳು ಹೊರಕ್ಕೆ ಕಾಣುತ್ತದೆ. ಹಾಗೆಯೇ ಇದು ಚಕ್ರ ಹೊಂದಿರುವ ಟ್ರಕ್ ಆದರೂ ಉನ್ನತ ಮಟ್ಟದ ಫ್ಯಾಷನ್ ಶೋರೂಮ್ ಅನ್ನು ಹೋಲುತ್ತದೆ. ಚಿತ್ರದ ಜೊತೆಗೆ "WTF ಬೆಂಗಳೂರು" ನ ಇನ್ನೊಂದು ಸಂಚಿಕೆಯಲ್ಲಿ, ನನ್ನ ಪತ್ನಿಯೊಂದಿಗೆ ಮಂದಿರಕ್ಕೆ ಹೋಗುತ್ತಿರುವಾಗ ಈ ಟ್ರಕ್ ಅನ್ನು ನೋಡಿದೆ," ರಾಜಾ ಬಾಬು ಬರೆದುಕೊಂಡಿದ್ದಾರೆ.
ಪೋಸ್ಟ್ ಶೀಘ್ರದಲ್ಲೇ ವೈರಲ್ ಆಗಿದೆ ಮತ್ತು ಅದು ನೆಟ್ಟಿಗರು ಬೆರಗಾಗುವಂತೆ ಮಾಡಿದೆ. ಬಳಕೆದಾರರೊಬ್ಬರು ಹೀಗೆ ಬರೆದಿದ್ದಾರೆ, "ನಾನು 'ಮೊಬೈಲ್ ಶೋರೂಮ್' ಬಗ್ಗೆ ಯೋಚಿಸಿದಾಗ ಈ ರೀತಿ ಇರಬಹುದು ಎಂದು ಯೋಚನೆ ಮಾಡಿರಲಿಲ್ಲ," ಎಂದಿದ್ದಾರೆ.
ಇನ್ನೊಬ್ಬ ಬಳಕೆದಾರರು, "ದೊಡ್ಡ ಮಾಲ್‌ಗಳಲ್ಲಿ ಶೋರೂಮ್‌ಗಳು ಮಾಡುವುದನ್ನು ಒಬ್ಬ ವ್ಯಕ್ತಿ ಮಾಡಲು ಪ್ರಯತ್ನಿಸುತ್ತಿರುವುದು ಸಂತೋಷವಾಗಿದೆ ಎಂದು ನಾನು ಭಾವಿಸುತ್ತೇನೆ. ಮಧ್ಯಮ ವರ್ಗದ ವ್ಯಕ್ತಿಯೊಬ್ಬರು ಸಂಪೂರ್ಣವಾಗಿ ಸಾಮಾನ್ಯವಲ್ಲದಿದ್ದರೂ ಸಹ, ಒಂದು ಕಾರ್ಯವನ್ನು ಮಾಡಲು ಪ್ರಯತ್ನಿಸುವುದರಲ್ಲಿ ನನಗೆ ಯಾವುದೇ ಸಮಸ್ಯೆ ಇಲ್ಲ. ಕನಿಷ್ಠ ಇದು ಅನೈತಿಕವಲ್ಲ," ಎಂದು ಅಭಿಪ್ರಾಯಿಸಿದ್ದಾರೆ.
"ನಾನು ಫುಡ್ ಟ್ರಕ್ ಅನ್ನು ಕೇಳಿದ್ದೆ, ಆದರೆ ಇದು ಕೂಡಾ ಬರುತ್ತಿರುವುದನ್ನು ನಾನು ನೋಡಿಲ್ಲ," ಎಂದು ಮತ್ತೊಬ್ಬ ನೆಟ್ಟಿಗರು ಹೇಳಿದ್ದಾರೆ. ಬೆಂಗಳೂರು ಟ್ರಾಫಿಕ್‌ಗೆ ಹೆಸರುವಾಸಿಯಾಗಿರುವಾಗ ಈ ದೃಶ್ಯಗಲ್ಲೆಲ್ಲ ಇನ್ನು ಮುಂದೆ ಸಾಮಾನ್ಯದಲ್ಲಿ ಸಾಮಾನ್ಯ ಎಂದ ನೆಟ್ಟಿಗರೂ ಇದ್ದಾರೆ!
ಪೀಕ್ ಬೆಂಗಳೂರಿನ ಮತ್ತೊಂದು ನಿದರ್ಶನದಲ್ಲಿ ನಗರದ ಡೆಲಿವರಿ ಏಜೆಂಟ್ ಸ್ವಿಗ್ಗಿ ಸಿಗ್ನೇಚರ್ ಆರೆಂಜ್ ಟಿ-ಶರ್ಟ್ ಧರಿಸಿ ಜೊಮ್ಯಾಟೊ ಡೆಲಿವರಿ ಬ್ಯಾಗ್ ಅನ್ನು ಹೊತ್ತೊಯ್ದಿರುವುದು ಕಂಡು ಬಂದಿದೆ. ಅಷ್ಟಕ್ಕೆ ಮುಗಿದಿಲ್ಲ. ತನ್ನ ದ್ವಿಚಕ್ರ ವಾಹನವನ್ನು ಚಾಲನೆ ಮಾಡುವಾಗ ಅವರು ಧರಿಸಿದ್ದ ಹೆಲ್ಮೆಟ್ ಲಾಜಿಸ್ಟಿಕ್ಸ್ ಸೇವೆಗಳ ಸ್ಟಾರ್ಟ್ಅಪ್ ಪೋರ್ಟರ್‌ನ ಲೋಗೋವನ್ನು ಹೊಂದಿದೆ.
"ಇದಕ್ಕಾಗಿಯೇ ನಾನು ಬೆಂಗಳೂರನ್ನು ಪ್ರೀತಿಸುತ್ತೇನೆ!! ಇದು ನನ್ನ ಪೀಕ್ ಬೆಂಗಳೂರು ಕ್ಷಣವಾಗಿದೆ. ಸ್ಟಾರ್ಟ್‌ಅಪ್‌ಗಳಿಗೆ ಒಳಿತಾಗಲಿ," ಎಂದು ಡೆಲಿವರಿ ವ್ಯಕ್ತಿಯ ಚಿತ್ರವನ್ನು ಹಂಚಿಕೊಂಡ ಎಕ್ಸ್ ಬಳಕೆದಾರ ಮಂಜು ಬರೆದಿದ್ದಾರೆ.


Click it and Unblock the Notifications