ತೈಲ ಬೆಲೆಯಲ್ಲಿ ಭಾರೀ ಏರಿಕೆ, ನಿರ್ವಹಣೆ ವೆಚ್ಚದಲ್ಲಿ ಹೆಚ್ಚಳ ಹಾಗೂ ಸಿಬ್ಬಂದಿ ಕೊರತೆ ಆಗುತ್ತಿರುವ ಹಿನ್ನೆಲೆಯಲ್ಲಿ ಟ್ರಕ್ ಗಳ ಸರಕು- ಸಾಗಣೆ ದರವು 20ರಿಂದ 25 ಪರ್ಸೆಂಟ್ ಹೆಚ್ಚಳ ಆಗಬಹುದು. ಆದರೆ ಬೆಲೆ ಏರಿಕೆ ಬಗ್ಗೆ ಒಂದಕ್ಕೆ ಸಾವಿರ ಬಾರಿ ಆಲೋಚಿಸುವಂತಾಗಿದೆ. ಏಕೆಂದರೆ ಬೇಡಿಕೆ ನಿಧಾನಕ್ಕೆ ಕುದುರುತ್ತಿದೆ. ಇಂಥ ಸಂದರ್ಭದಲ್ಲಿ ತೈಲ ಬೆಲೆ ಗರಿಷ್ಠ ಮಟ್ಟದಲ್ಲಿದೆ.
ಹಲವು ಒಕ್ಕೂಟಗಳಿಂದ ಈಗಾಗಲೇ ತಮ್ಮ ಕಾಯಂ ಗ್ರಾಹಕರಿಗೆ ದರ ಹೆಚ್ಚಳದ ಬಗ್ಗೆ ಮನವಿ ಕಳುಹಿಸಲಾಗಿದೆ. ಡೀಸೆಲ್ ದರದಲ್ಲಿ ಸಿಕ್ಕಾಪಟ್ಟೆ ಏರಿಕೆ ಆಗಿರುವುದರಿಂದ ನಷ್ಟದಲ್ಲಿ ವ್ಯವಹಾರ ನಡೆಸಬೇಕಾಗಿದೆ ಎನ್ನುತ್ತಾರೆ ಮಾಲೀಕರು. ಲಾಕ್ ಡೌನ್ ನಿಂದ ಇನ್ನೂ ಚೇತರಿಕೆ ಕಾಣುತ್ತಿದ್ದೇವೆ. ಈ ಮಧ್ಯೆ ತೈಲ ದರ, ಕಾರ್ಮಿಕರ ಕೂಲಿ ಕೂಡ ಹೆಚ್ಚಾಗಿ ವ್ಯಾಪಾರಕ್ಕೆ ಹೊಡೆತ ನೀಡುತ್ತಿದೆ ಎಂದು ಹೇಳುತ್ತಾರೆ.

ಲಾರಿಗಳಲ್ಲಿ ಸರಕು- ಸಾಗಣೆ ಆಗುವುದು ಬಹುತೇಕ ಕೃಷಿ ಉತ್ಪನ್ನಗಳು ಮತ್ತು ನಿತ್ಯ ಬಳಕೆ ವಸ್ತುಗಳು. ಸಾಗಣೆಗೆ ಬೇಡಿಕೆ ಹೆಚ್ಚಾಗಿರುವುದರಿಂದ ರಸ್ತೆಗೆ ಇಳಿಯುವ ವಾಹನಗಳ ಪ್ರಮಾಣ ಲಾಕ್ ಡೌನ್ ಅವಧಿಗಿಂತ ಶೇಕಡಾ ಐವತ್ತರಷ್ಟು ಹೆಚ್ಚಾಗಿದೆ. ಟ್ರಕ್ ಗಳ ಬಾಡಿಗೆ ದರ ಹೆಚ್ಚಾದರೂ ಗ್ರಾಹಕರು ಹೆಚ್ಚಿನ ಹಣ ನೀಡಲು ಸಿದ್ಧವಿಲ್ಲ ಎಂಬುದು ಬಹುತೇಕರ ಆಕ್ಷೇಪ.
ಸ್ಥಳೀಯವಾಗಿ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಅದಕ್ಕೆ ಬೇಡಿಕೆ ಕಡಿಮೆ ಆಗಿರುವುದೇ ಕಾರಣ. ಇಷ್ಟು ದೊಡ್ಡ ಮಟ್ಟದ ನಿರ್ವಹಣಾ ವೆಚ್ಚವನ್ನು ಕೈಯಿಂದ ಹಾಕಿಕೊಂಡು, ನಷ್ಟ ಅನುಭವಿಸುತ್ತಾ ದೀರ್ಘ ಕಾಲ ನಡೆಸುವುದು ಕಷ್ಟ ಎನ್ನುತ್ತಾರೆ ಬಹುತೇಕ ಲಾರಿ ಮಾಲೀಕರು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications