Trump Extends TikTok Deadline: ರೀಲ್ಸ್ ಪ್ರಿಯರಿಗೆ ಕೊಚ ರಿಲೀಫ್.. ಸದ್ಯಕ್ಕೆ ಇಲ್ಲ ಟಿಕ್ಟಾಕ್ ಬ್ಯಾನ್ ಆಗಲ್ಲ ಯೆಸ್ ಅಮೆರಿಕದಲ್ಲಿ ಶಾರ್ಟ್ ವಿಡಿಯೋ ಅಪ್ಲಿಕೇಶನ್ ಟಿಕ್‌ಟಾಕ್ ಅನ್ನು ನಿಷೇಧಿಸುವ ಕೊನೆಯ ದಿನಾಂಕಕ್ಕೂ ಮೊದಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಹಾಗಿದ್ರೆ ಟಿಕ್ಟಾಕ್ ಬ್ಯಾನ್ ಯಾವಾಗ..? ಇದರ ಬಗ್ಗೆ ಡೊನಾಲ್ಡ್ ಟ್ರಂಪ್ ಕೈಗೊಂಡ ಕ್ರಮವೇನು? ಇಲ್ಲಿದೆ ಹೆಚ್ಚಿನ ವಿವರ
ಹೌದು, ಟಿಕ್‌ಟಾಕ್‌ನ ಕಂಪನಿಯಾದ ಬೈಟ್‌ಡ್ಯಾನ್ಸ್ ತನ್ನ ಯುಎಸ್ ಕಾರ್ಯಾಚರಣೆಗಳನ್ನು ಮಾರಾಟ ಮಾಡಲು ಅಮೆರಿಕದ ಖರೀದಿದಾರರನ್ನು ಹುಡುಕಲು ಡೊನಾಲ್ಡ್ ಟ್ರಂಪ್ 75 ದಿನಗಳ ಗಡುವುನ್ನು ನೀಡಿದ್ದರು.ಇದಕ್ಕೆ ಸಂಬಂಧಿಸಿದಂತೆ ಟ್ರಂಪ್ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿ ಇನ್ನೂ ಕೆಲ ಕಳದವರೆಗೂ ಸಮಯವನ್ನು ನೀಡಿದ್ದಾರೆ. ಕೆಲ ದಿನಗಳ ಹಿಂದೆ ಟಿಕ್‌ಟಾಕ್ ಖರೀದಿಸಲು ಅಮೆಜಾನ್ ಕಂಪನಿ ಕೂಡ ಪ್ರಯತ್ನವನ್ನು ಮಾಡಿತು.

ಈ ಕುರಿತು ವಿಶ್ವದ ದೊಡ್ಡಣ್ಣ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ಮಾಧ್ಯಮ ಎಕ್ಸ್ ಖಾತೆಗಳಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ಮಾಹಿತಿ ಈ ಕೆಳಗಿನಂತೆ ಇದೆ.
ನಮ್ಮ ಆಡಳಿತದಲ್ಲಿ ಟಿಕ್‌ಟಾಕ್ ಉಳಿಸಲು ತುಂಬಾ ಪರಿಶ್ರಮಪಟ್ಟಿದ್ದೇವೆ. ಇದರಲ್ಲಿ ನಾವು ಈಗಾಗಲೇ ಅಗಾಧ ಪ್ರಗತಿ ಕಂಡಿದ್ಧೇವೆ. ಈ ಒಪ್ಪಂದಕ್ಕೆ ಅಗತ್ಯವಿರುವ ಎಲ್ಲಾ ಅನುಮೋದನೆಗಳನ್ನು ಪಡೆಯಲು ಹೆಚ್ಚಿನ ಕೆಲಸ ಅಗತ್ಯವಿದೆ. ಆ ಕಾರಣದಿಂದಾಗಿ ಟಿಕ್‌ಟಾಕ್ ಅನ್ನು ಹೆಚ್ಚುವರಿಯಾಗಿ 75 ದಿನಗಳವರೆಗೆ ಚಾಲನೆಯಲ್ಲಿಡಲು ನಾನು ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕುತ್ತಿದ್ದೇನೆ. ಒಪ್ಪಂದವನ್ನು ಪೂರ್ಣಗೊಳಿಸಲು ಟಿಕ್‌ಟಾಕ್ ಮತ್ತು ಚೀನಾದೊಂದಿಗೆ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಅಮೆರಿಕದಲ್ಲಿ ಟಿಕ್‌ಟಾಕ್ ಸಂಕಷ್ಟ
ಟಿಕ್‌ಟಾಕ್‌ನ ಮಾಲೀಕ ಕಂಪನಿ ಬೈಟ್‌ಡ್ಯಾನ್ಸ್ ಚೀನಾದವರಾಗಿದೆ. ಇದರಿಂದ ಅಮೆರಿಕದಲ್ಲಿ ಹಲವಾರು ಆತಂಕಗಳು ಸಂಕಷ್ಟಗಳು ಅಮೆರಿಕದ ಸರ್ಕಾರಕ್ಕೆ ಸಂಕಷ್ಟವನ್ನು ತಂದುವೊಡ್ಡಿದೆ. ಟಿಕ್‌ಟಾಕ್ ಬಳಕೆದಾರರ ವೈಯಕ್ತಿಕ ಡೇಟಾವನ್ನು ಚೀನಾ ಸರ್ಕಾರದೊಂದಿಗೆ ಹಂಚಿಕೊಳ್ಳುವ ಸಾಧ್ಯತೆ ಬಗ್ಗೆ ಚಿಂತೆಯಲ್ಲಿದೆ, ಮತ್ತು ಇದು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದು ಗುರುತಿಸಲಾಗಿದೆ.
ವಿಶ್ವದ ದೊಡ್ಡಣ್ಣ ಅಮೆರಿಕ ಟಿಕ್‌ಟಾಕ್ ಮತ್ತು ಅದರ ಮೂಲ ಕಂಪನಿ ಬೈಟ್‌ಡ್ಯಾನ್ಸ್ ಮೇಲೆ ನಿಯಂತ್ರಣವನ್ನು ಹಾಕಲು ರಾಷ್ಟ್ರೀಯ ಭದ್ರತೆ ಸಂಬಂಧಿಸಿದ ಪ್ರಶ್ನೆಗಳನ್ನೂ ಉಂಟುಮಾಡಿದೆ. ಅಮೆರಿಕವು ಟಿಕ್‌ಟಾಕ್ ಬಳಕೆದಾರರ ವೈಯಕ್ತಿಕ ಡೇಟಾವನ್ನು ಚೀನಾದಲ್ಲಿ ಸಂಗ್ರಹಿಸಲಾಗುವ ಮೂಲಕ ಅಮೆರಿಕನ ಸೈನಿಕ ಮತ್ತು ಮಾನವನ ಸೇವೆಗಳಿಗೆ ಅಪಾಯ ಎಂಬುವುದನ್ನು ಪರಿಗಣನೆಗೆ ತಗೆದುಕೊಂಡಿದೆ.
ಅಮೆರಿಕವು, ಟಿಕ್‌ಟಾಕ್ ಮಾಲೀಕತ್ವವನ್ನು ಅಮೆರಿಕನ್ ಕಂಪನಿಗೆ ಹಸ್ತಾಂತರಿಸಲು ಅಥವಾ ಈ ಅಪ್ಲಿಕೇಶನ್‌ನ ಕಾರ್ಯಾಚರಣೆಯನ್ನು ಅಮೆರಿಕಾದೊಳಗಿನ ಮಿತಿಯಲ್ಲಿ ನಿಲ್ಲಿಸಲು ನಿರ್ಧಾರ ಕೈಗೊಳ್ಳುವಂತೆ ಬೈಟ್‌ಡ್ಯಾನ್ಸ್ನನ್ನು ಒತ್ತಾಯಿಸಿದೆ. ಈ ಕಾನೂನು ಕ್ರಮವು ರಾಷ್ಟ್ರೀಯ ಭದ್ರತೆಗಾಗಿ, ದೇಶದ ಒಳಗಿನ ಡೇಟಾ ಸಂಗ್ರಹಣೆಯ ನಿಯಂತ್ರಣ ಮತ್ತು ಸುರಕ್ಷತೆ ಹೆಚ್ಚಿಸಲು ಉದ್ದೇಶಿಸಿದೆ. ಈ ರೀತಿ ಟಿಕ್‌ಟಾಕ್, ಅನೇಕ ದೇಶಗಳಲ್ಲಿ ಭದ್ರತಾ ಸಮಸ್ಯೆಗಳು, ನಿಯಂತ್ರಣದ ಅಂಶಗಳು ಮತ್ತು ಮಾಹಿತಿ ಹಂಚಿಕೆಯ ಬಗ್ಗೆ ಚರ್ಚೆಗಳಿಗೂ ಮುಂದಾಗಿದೆ.
ಟಿಕ್‌ಟಾಕ್ ಖರೀದಿಗೆ ಪೈಪೋಟಿ ಕಂಪನಿಗಳು ಯಾವುವು?
ಟಿಕ್‌ಟಾಕ್ ಕಾರ್ಯಾಚರಣೆಗಳನ್ನು ಖರೀದಿ ಮಾಡಲು ಅನೇಕ ದೊಡ್ಡ ಕಂಪನಿಗಳು ಸ್ಪರ್ಧೆಗೆ ಇಳಿದಿದ್ದೇವೆ. ಇವುಗಳಲ್ಲಿ
ಮೊದಲನೆಯದು ಟೆಕ್ ಕಂಪನಿ ಒರಾಕಲ್. ಇದಲ್ಲದೆ ಬ್ಲಾಕ್‌ಸ್ಟೋನ್ ಕೂಡ ಟಿಕ್‌ಟಾಕ್ ಖರೀದಿಸಲು ಆಸಕ್ತಿ ತೋರಿಸುತ್ತಿದೆ. AI ಸ್ಟಾರ್ಟ್ಅಪ್ ಪರ್ಪ್ಲೆಕ್ಸಿಟಿ AI ಕೂಡ ಟಿಕ್‌ಟಾಕ್‌ನ ಅಮೆರಿಕನ್ ವ್ಯವಹಾರವನ್ನು ತನ್ನೊಂದಿಗೆ ವಿಲೀನಗೊಳಿಸಲು ಸಿದ್ದವಾಗಿದೆ.
ಹೀಗೆ ಟಿಕ್‌ಟಾಕ್ ಕಾರ್ಯಾಚರಣೆಗಳನ್ನು ಖರೀದಿ ಮಾಡಲು ಅನೇಕ ಕಂಪನಿಗಳು ನಾನು ಮುಂದು ತಾ ಮುಂದೆ ಅಂತಾ ಬರುತ್ತೀವೆ ಯಾವ ಕಂಪನಿ ಟಿಕ್‌ಟಾಕ್‌ನ್ನು ಖರೀದಿ ಮಾಡುತ್ತದೆ ಎಂಬುವುದನ್ನು ಕಾದುನೋಡಬೇಕಿದೆ.


Click it and Unblock the Notifications