ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ತೆರಿಗೆ ಮಸೂದೆಯನ್ನು ಟೀಕಿಸಿದ್ದರು. ಈ ಬೆನ್ನಲ್ಲೇ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಇದು 'ದೊಡ್ಡ ಸುಂದರ ತೆರಿಗೆ ಮಸೂದೆ' ಎಂದು ಪೋಸ್ಟ್ ಮಾಡಿದ್ದರು. ಇದನ್ನು 'ಕಾಂಗ್ರೆಸ್‌ಗೆ ಇದುವರೆಗೆ ಮಂಡಿಸಲಾದ ಶ್ರೇಷ್ಠ ಮಸೂದೆಗಳಲ್ಲಿ ಒಂದಾಗಿದೆ' ಎಂದು ಮಸ್ಕ್ ವ್ಯಂಗ್ಯವಾಡಿದ್ದರು. ಇತ್ತ ಡೊನಾಲ್ಡ್ ಟ್ರಂಪ್ ಮಸೂದೆಯ ಮಹತ್ವವನ್ನು ಒತ್ತಿ ಹೇಳಿದರು. ಇದನ್ನು ದಾಖಲೆಯ $1.6 ಟ್ರಿಲಿಯನ್ ವೆಚ್ಚ ಕಡಿತ ಮತ್ತು ಇದುವರೆಗೆ ನೀಡಲಾದ ಅತಿದೊಡ್ಡ ತೆರಿಗೆ ಕಡಿತ ಎಂದು ಬಣ್ಣಿಸಿದ್ದಾರೆ. ಈ ಮೂಲಕ ಬಿಲೇನಿಯರ್ ಮಸ್ಕ್‌ಗೆ ತಿರುಗೇಟು ನೀಡಿದ್ದಾರೆ. ಆದರೆ ಇದೀಗ ಡೋನಾಲ್ಡ್ ಟ್ರಂಪ್ ಕೂಡ ತಿರುಗು ಬಾಣವನ್ನು ಬಿಟ್ಟಿ ಮಸ್ಕ್ ದೋಸ್ತಿಯನ್ನು ಫಿನಿಷ್ ಮಾಡಿದ್ದಾರೆ.
ಹೌದು,ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎಲೋನ್ ಮಸ್ಕ್ ತೆರಿಗೆ ಮಸೂದೆಯ ಪೋಸ್ಟ್ ತಿರುಗುಬಾಣವನ್ನು ಬಿಟ್ಟಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಿದ ಟ್ರಂಪ್ ಈ ರೀತಿ ಹೇಳಿದ್ದಾರೆ.ಎಲೋನ್ ಮಸ್ಕ್ ತಮ್ಮ ವಿರುದ್ಧ ತಿರುಗಿಬಿದ್ದಿದ್ದಕ್ಕೆ ತಮಗೆ ಯಾವುದೇ ಅಭ್ಯಂತರವಿಲ್ಲ ಆ ಬಿಲಿಯನೇರ್ "ತಿಂಗಳ ಹಿಂದೆಯೇ" ಹಾಗೆ ಮಾಡಬೇಕಿತ್ತು ಎಂದು ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಹಂಚಿಕೊಂಡಿದ್ದಾರೆ.

ಮಸೂದೆ ಅಂಗೀಕಾರವಾಗದಿದ್ದರೆ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಲು ಡೊನಾಲ್ಡ್ ಟ್ರಂಪ್ ಪ್ರಯತ್ನಿಸಿದರು, ಶೇಕಡಾ 68 ರಷ್ಟು ತೆರಿಗೆ ಹೆಚ್ಚಳವಾಗಲಿದೆ ಎಂದು ಹೇಳಿಕೊಂಡಿದ್ದಾರೆ.
ನಾನು ಈ ಅವ್ಯವಸ್ಥೆಯನ್ನು ಸೃಷ್ಟಿಸಲಿಲ್ಲ, ಅದನ್ನು ಸರಿಪಡಿಸಲು ನಾನು ಇಲ್ಲಿದ್ದೇನೆ ಎಂದು ಪ್ರತಿಪಾದಿಸುವ ಟ್ರಂಪ್ ತಮ್ಮನ್ನು ಸಮಸ್ಯೆ ಪರಿಹಾರಕ ಎಂದು ಪ್ರತಿಪಾದಿಸಿದರು ಮತ್ತು ಮಸೂದೆಯು ದೇಶವನ್ನು "ಶ್ರೇಷ್ಠತೆಯ ಹಾದಿಯಲ್ಲಿ" ಸಾಗಿಸುತ್ತದೆ ಎಂದು ತೀರುಗೇಟು ನೀಡುತ್ತಿದ್ಧಾರೆ.
ಇದು ಕಾಂಗ್ರೆಸ್‌ಗೆ ಮಂಡಿಸಲಾದ ಅತ್ಯಂತ ಶ್ರೇಷ್ಠ ಮಸೂದೆಗಳಲ್ಲಿ ಒಂದಾಗಿದೆ. ಇದು ದಾಖಲೆಯ ವೆಚ್ಚ ಕಡಿತ, $1.6 ಟ್ರಿಲಿಯನ್ ಡಾಲರ್‌ಗಳು ಮತ್ತು ಇದುವರೆಗೆ ನೀಡಲಾದ ಅತಿದೊಡ್ಡ ತೆರಿಗೆ ಕಡಿತವಾಗಿದೆ. ಈ ಮಸೂದೆ ಅಂಗೀಕಾರವಾಗದಿದ್ದರೆ, ಶೇ. 68 ತೆರಿಗೆ ಹೆಚ್ಚಳವಾಗುತ್ತದೆ ಮತ್ತು ಅದಕ್ಕಿಂತಲೂ ಕೆಟ್ಟದಾಗಿದೆ. ನಾನು ಈ ಅವ್ಯವಸ್ಥೆಯನ್ನು ಸೃಷ್ಟಿಸಲಿಲ್ಲ, ಇದನ್ನು ಸರಿಪಡಿಸಲು ನಾನು ಇಲ್ಲಿದ್ದೇನೆ. ಇದು ನಮ್ಮ ದೇಶವನ್ನು ಶ್ರೇಷ್ಠತೆಯ ಹಾದಿಯಲ್ಲಿ ಇರಿಸುತ್ತದೆ. ಅಮೆರಿಕವನ್ನು ಮತ್ತೆ ಶ್ರೇಷ್ಠಗೊಳಿಸಿ ಎಂದು ಡೊನಾಲ್ಡ್ ಟ್ರಂಪ್ ಅವರು ಹೇಳಿದ್ಧಾರೆ.
ಇದಕ್ಕೂ ಮೊದಲು, ಎಲೋನ್ ಮಸ್ಕ್ ಡೊನಾಲ್ಡ್ ಟ್ರಂಪ್ ಅವರ ದೋಷಾರೋಪಣೆಗೆ ಕರೆ ನೀಡಿದಾಗ , ಅಮೆರಿಕ ಅಧ್ಯಕ್ಷರು ಬಿಲಿಯನೇರ್ ಎಲೋನ್ ಮಸ್ಕ್ ಅವರ ಕಂಪನಿಗಳೊಂದಿಗಿನ ಸರ್ಕಾರಿ ಒಪ್ಪಂದಗಳನ್ನು ಕಡಿತಗೊಳಿಸುವುದಾಗಿ ಬೆದರಿಕೆ ಹಾಕಿದರು. ಅವು ಸರ್ಕಾರಕ್ಕೆ ಬಹಳಷ್ಟು ಹಣವನ್ನು ಉಳಿಸುತ್ತವೆ ಎಂದು ಹೇಳಿದ್ದಾರೆ.
ಈ ಹಿಂದೆ ನಮ್ಮ ಬಜೆಟ್‌ನಲ್ಲಿ ಬಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ಉಳಿಸಲು ಸುಲಭವಾದ ಮಾರ್ಗವೆಂದರೆ ಎಲೋನ್‌ರ ಸರ್ಕಾರಿ ಸಬ್ಸಿಡಿಗಳು ಮತ್ತು ಒಪ್ಪಂದಗಳನ್ನು ರದ್ದುಗೊಳಿಸುವುದು. ಬಿಡೆನ್ ಅದನ್ನು ಮಾಡದಿರುವುದು ನನಗೆ ಯಾವಾಗಲೂ ಆಶ್ಚರ್ಯವನ್ನುಂಟು ಮಾಡುತ್ತಿತ್ತುಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.
ತೆರಿಗೆ ಕಡಿತ ಮತ್ತು ಖರ್ಚು ಮಸೂದೆಯನ್ನು ಟೆಸ್ಲಾ ಮುಖ್ಯಸ್ಥರು ಖಂಡಿಸಿದಾಗ ಟ್ರಂಪ್ ಮತ್ತು ಮಸ್ಕ್ ನಡುವಿನ ಸ್ನೇಹ ಹೆಗೆತನವಾಗಿದೆ ಇದರಿಂದ ಅವರ ದೋಸ್ತಿ ಕೂಡ ಫಿನಿಷ್ ಆಗಿದೆ. ಮಸ್ಕ್ ಈ ಆರೋಪವನ್ನು ತಮ್ಮ ಪ್ಲಾಟ್‌ಫಾರ್ಮ್ ಎಕ್ಸ್ ಖಾತೆಯಲ್ಲಿ (ಹಿಂದೆ ಟ್ವಿಟರ್) ಹಂಚಿಕೊಂಡಿದ್ದರು, ಆದರೆ ಅದನ್ನು ಬೆಂಬಲಿಸಲು ಯಾವುದೇ ಪುರಾವೆಗಳನ್ನು ಸಹ ಅವರು ನೀಡಿಲ್ಲ.


Click it and Unblock the Notifications