ಕೊರೊನಾವೈರಸ್‌ನಿಂದಾಗಿ ಹೈರಾಣಾಗಿರುವ ಅಮೆರಿಕಾ ದೇಶವು ದಿಕ್ಕೇ ತೋಚದಂತೆ ಕಂಗಾಲಾಗಿ ಹೋಗಿದೆ. ಏನು ಮಾಡಿದರೂ ಕೊರೊನಾ ಸೋಂಕು ಹರಡುವಿಕೆ ದಿನೇ ದಿನೇ ದುಪ್ಪಟ್ಟಾಗುತ್ತಿದೆ. ವಿಶ್ವದಲ್ಲೇ ಅತಿ ಹೆಚ್ಚು ಸೋಂಕು ತಗುಲಿರುವ ರಾಷ್ಟ್ರವಾಗಿರುವ ಅಮೆರಿಕಾ, ಕೊರೊನಾ ಸೋಂಕಿನ ಮುಂದೆ ತನ್ನ ಶಕ್ತಿಯನ್ನೇ ಕಳೆದುಕೊಂಡಂತೆ ಭಾಸವಾಗುತ್ತಿದೆ.
ವಿಶ್ವದ ದೊಡ್ಡಣ್ಣ ಎಂದು ಬೀಗುತ್ತಿದ್ದ ಅಮೆರಿಕಾದಲ್ಲಿ 3 ಲಕ್ಷದ 75 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಏನೇ ಪ್ರಯತ್ನಿಸಿದರೂ ಪರಿಹಾರ ಮಾತ್ರ ಸಿಗುತ್ತಿಲ್ಲ. ಇದರಿಂದ ತಲೆಕೆಟ್ಟು ಇಂಗು ತಿಂದ ಮಂಗನಂತಾಗಿರುವ ಅಮೆರಿಕಾ, ಇದೀಗ ಭಾರತಕ್ಕೆ ಪ್ರತೀಕಾರದ ಎಚ್ಚರಿಕೆ ನೀಡಿದೆ. ಅದಕ್ಕೆ ಕಾರಣ ಏನು ಎಂಬುದನ್ನು ಈ ಕೆಳಗೆ ನೋಡಿ.
ಹೈಡ್ರಾಕ್ಸಿಕ್ಲೋರೋಕ್ವಿನ್ ಬೇಡಿಕೆ ಇಟ್ಟಿರುವ ಅಮೆರಿಕಾ
ಅಮೆರಿಕಾದಲ್ಲಿ ದಿನೇ ದಿನೇ ಸಾವಿರಾರು ಸಂಖ್ಯೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ದಿನಕ್ಕೆ ಸಾವಿರದಂತೆ ಸತತ 6 ದಿನ 6000ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಈಗಾಗಲೇ 10,000ಕ್ಕೂ ಅಧಿಕ ಅಮೆರಿಕನ್ನರು ಪ್ರಾಣ ತೆತ್ತಿದ್ದಾರೆ. ಇದರಿಂದ ಏನು ಮಾಡುವುದು ಎಂದು ತಿಳಿಯದೇ ಕಂಗಾಲಾಗಿ ಹೋಗಿರುವ ಅಮೆರಿಕಾಕ್ಕೆ ಭಾರತದ ಮಾರ್ಗವನ್ನು ಕಂಡುಕೊಳ್ಳಲು ಮುಂದಾಗಿದೆ.
ಇದಕ್ಕಾಗಿಯೇ ವಿಶ್ವದಲ್ಲಿಯೇ ಅತಿ ಹೆಚ್ಚು ಹೈಡ್ರಾಕ್ಸಿಕ್ಲೋರೋಕ್ವಿನ್ ಉತ್ಪಾದನೆ ಮಾಡುವ ಭಾರತದ ಮುಂದೆ ಭಾರೀ ಪ್ರಮಾಣದ ಔಷಧಿಯ ಬೇಡಿಕೆ ಮುಂದಿಟ್ಟಿದೆ.
130 ಕೋಟಿ ಜನಸಂಖ್ಯೆ ಹೊಂದಿದ್ದರು ಕೊರೊನಾ ನಿಭಾಯಿಸುತ್ತಿರುವ ಭಾರತ
ಚೀನಾ ಬಿಟ್ಟರೆ ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತ 130 ಬಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಇಷ್ಟಾದರೂ ಕೊರೊನಾ ಸೋಂಕನ್ನು ನಿಭಾಯಿಸುವಲ್ಲಿ ಭಾರತವು ಸ್ವಲ್ಪ ಮಟ್ಟಿಗೆ ಯಶಸ್ಸು ಸಾಧಿಸಿದೆ. ಇದನ್ನು ಕಂಡಿರುವ ಅಮೆರಿಕಾ ಭಾರತದಲ್ಲಿ ಸದ್ಯ ಕೊರೊನಾವಿರುದ್ಧ ಹೋರಾಟಕ್ಕೆ ಬಳಸುತ್ತಿರುವ ಔಷಧಿ ಮೇಲೆ ಕಣ್ಣಿಟ್ಟಿದೆ.
ಇತ್ತೀಚೆಗಷ್ಟೇ ಭಾರತ ಕೊರೊನಾ ಎದುರಿಸುತ್ತಿರುವ ರೀತಿ ಕಂಡು ಮೆಚ್ಚುಗೆ ವ್ಯಕ್ತಪಡಿಸಿರುವ ಅಮೆರಿಕಾ ಅಧ್ಯಕ್ಷ ಟ್ರಂಪ್, ಹೈಡ್ರಾಕ್ಸಿಕ್ಲೋರೋಕ್ವಿನ್ (ಮಲೇರಿಯಾ ತಡೆ ಔಷಧ) ನೀಡುವಂತೆ ಬೇಡಿಕೆಯಿಟ್ಟು ಮೋದಿ ಬಳಿ ಚರ್ಚಿಸಿದ್ದಾರೆ.
ಮೋದಿಗೆ ದೂರವಾಣಿ ಕರೆ ಮಾಡಿದ್ದ ಟ್ರಂಪ್
ಭಾನುವಾರ ಬೆಳಿಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಪ್ರಧಾನಿ ಮೋದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಕೊರೊನಾ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ತೆಗೆದುಕೊಳ್ಳುತ್ತಿರುವ ಕ್ರಮ ಶ್ಲಾಘಿಸಿದ ಟ್ರಂಪ್ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ Hydroxychloroquine (ಮಲೇರಿಯಾ ತಡೆ ಔಷಧ) ಔಷಧವನ್ನು ರಫ್ತು ಮಾಡುವಂತೆ ಮನವಿ ಮಾಡಿದ್ದರು. ಇದಕ್ಕೆ ಪ್ರಧಾನಿ ಮೋದಿ ಭರವಸೆ ಕೊಟ್ಟಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.
ಮಾರ್ಚ್ 25ರಂದೇ ಹೈಡ್ರಾಕ್ಸಿಕ್ಲೋರೋಕ್ವಿನ್ ಸೇರಿದಂತೆ ಹಲವು ಔಷಧ ನಿಷೇಧ
ದೇಶದಲ್ಲಿ ಕೊರೊನಾ ತನ್ನ ಬಾಹುವನ್ನು ಚಾಚುತ್ತಿದ್ದಂತೆ, ಮಾರ್ಚ್ 25 ರಂದೇ ಭಾರತದ ವಿದೇಶಾಂಗ ವ್ಯಾಪಾರ ನಿರ್ದೇಶನಾಲಯವು ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮಾಡುವುದನ್ನು ನಿಷೇಧಿಸಿದೆ.ಇದರ ಜೊತೆಗೆ ಇತರೇ ಹಲವು ಔಷಧಗಳ ರಫ್ತುಗೂ ತಡೆ ನೀಡಿದೆ. ಆದರೆ ಮಾನವೀಯ ಆಧಾರದ ಮೇಲೆ ಕೆಲವು ಸಾಗಣೆಯನ್ನು ಕೇಸ್-ಬೈ-ಕೇಸ್ ಆಧಾರದ ಮೇಲೆ ಅನುಮತಿಸಬಹುದು ಎಂದು ಹೇಳಿದೆ. ಕೊವಿಡ್ ಹರಡುತ್ತಿರುವ ಈ ಸಂದರ್ಭದಲ್ಲಿ ಭಾರತಕ್ಕೆ ಔಷಧ ಪ್ರಮಾಣದಲ್ಲಿ ಕೊರತೆಯಾಗಬಾರದು ಎಂಬ ಕಾರಣಕ್ಕೆ ಭಾರತ ಸರ್ಕಾರ ಈ ಆದೇಶ ಹೊರಡಿಸಿತ್ತು.
ಔಷಧ ಕೊಡದಿದ್ದರೆ 'ಪ್ರತೀಕಾರ'ದ ಎಚ್ಚರಿಕೆ ನೀಡಿದ ಟ್ರಂಪ್
ಈ ಕುರಿತು ಅಮೆರಿಕದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಟ್ರಂಪ್, ಭಾರತಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ''ನಾನು ಭಾರತದ ಪ್ರಧಾನಿ ಬಳಿ ಭಾನುವಾರ ಮಾತನಾಡಿದ್ದೇನೆ, ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಕ್ಕಾಗಿ ಮನವಿ ಮಾಡಿದ್ದೇನೆ, ಒಂದು ವೇಳೆ ಭಾರತ ಆ ಔಷಧ ನೀಡಿದ್ರೆ ಸಂತೋಷ. ಕೊಡಲು ನಿರಾಕರಿಸಿದರೆ ಪರವಾಗಿಲ್ಲ. ಆದರೆ ಅದಕ್ಕೆ ಪ್ರತಿಕಾರವೂ ಇರಬಹುದು. ಏಕೆ ಇರಬಾರದೇ?'' ಎಂದಿದ್ದಾರೆ.
ಅಮೆರಿಕಾದ ಎಚ್ಚರಿಕೆಗೆ ಮೋದಿ ಮಂತ್ರವೇನು?
ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿ ಹೋಗಿದ್ದ ಟ್ರಂಪ್ ಇದೀಗ ಅಸಾಹಾಯಕತೆಯಿಂದ ಪ್ರತೀಕಾರದ ಎಚ್ಚರಿಕೆ ನೀಡಿದಂತೆ ಕಾಣುತ್ತಿದೆ. ಅಮೆರಿಕಾ ಹಾಗೂ ಟ್ರಂಪ್ ಜೊತೆಗೆ ಉತ್ತಮ ಬಾಂಧವ್ಯ ಕಾಪಾಡಿಕೊಂಡಿರುವ ನರೇಂದ್ರ ಮೋದಿ, ಅಮೆರಿಕಾಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮಾಡುವ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ಆದರೆ ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳ ಪ್ರಕಾರ ಭಾರತವು ಔಷಧ ರಫ್ತು ಮಾಡಲು ಮನಸ್ಸು ಮಾಡಿದೆ.
ಒಟ್ಟು ದೇಶಿಯ ಅಗತ್ಯತೆಗೆ ತಕ್ಕಂತೆ ಇರಿಸಿಕೊಳ್ಳುವುದರ ಜೊತೆಗೆ ಹೆಚ್ಚುವರಿ 25 ಪರ್ಸೆಂಟ್ ಔಷಧವನ್ನು ಇಟ್ಟುಕೊಂಡು ಉಳಿದ ಔಷಧಿಯನ್ನು ಎಲ್ಲಾ ದೇಶಗಳಿಗೂ ರಫ್ತು ಮಾಡಲು ಸರ್ಕಾರ ನಿರ್ಧಾರ ಮಾಡಿದೆ ಎಂದು ಮೂಲಗಳು ಹೇಳಿವೆ.
ಕೊರೊನಾಯಿಂದ ವಿಶ್ವದ ಮುಂದೆ ಚಿಕ್ಕಣ್ಣನಾದ 'ದೊಡ್ಡಣ್ಣ'
ವಿಶ್ವದಲ್ಲೇ ಬಹುದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರವಾಗಿರುವ ಅಮೆರಿಕಾ, ಜಗತ್ತಿನ ಶ್ರೀಮಂತ ರಾಷ್ಟ್ರವಾಗಿದೆ. ವಿಶ್ವವನ್ನೇ ಕಂಟ್ರೋಲ್ ಮಾಡುವ ತಾಕತ್ತು ಹೊಂದಿದ್ದ ಅಮೆರಿಕಾ ಕಣ್ಣಿಗೆ ಕಾಣದ ಕೊರೊನಾವೈರಸ್ ಸೋಂಕಿನಿಂದ ವಿಶ್ವದ ಇತರೆ ರಾಷ್ಟ್ರಗಳೆದುರು ಮಂಡಿಯೂರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊರೊನಾಯಿಂದಾಗಿ ಅತಿ ಹೆಚ್ಚು ಸೋಂಕಿಗೆ ಒಳಗಾಗಿರುವ ಅಮೆರಿಕಾ ವೈರಸ್ ವಿರುದ್ಧ ಹೋರಾಟ ನಡೆಸುವಲ್ಲಿ ಎಡವುತ್ತಿದೆ ಎಂಬುದು ಮೇಲ್ನೋಟಕ್ಕೆ ಸಾಭೀತಾಗಿದೆ. ಇದಕ್ಕೆ ಜ್ವಲಂತ ಸಾಕ್ಷಿ ದಿನೇ ದಿನೇ ದುಪ್ಪಟ್ಟಾಗುತ್ತಿರುವ ಸೋಂಕಿನ ಪ್ರಮಾಣ ಹಾಗೂ ಸಾವಿನ ಸಂಖ್ಯೆ. ಹೀಗಾಗಿ ಟ್ರಂಪ್ ಸರ್ಕಾರ ತನ್ನ ಅಗತ್ಯತೆಗಳಿಗೆ ಇತರೇ ರಾಷ್ಟ್ರಗಳ ಮೇಲೆ ಅವಲಂಬಿತವಾಗಬೇಕಾದ ಪರಿಸ್ಥಿತಿಗೆ ತಲುಪಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications