ನವದೆಹಲಿ, ಏಪ್ರಿಲ್ 12: ವಿಯೆಟ್ನಾಂ ಖ್ಯಾತ ಹಾಗೂ ರಿಯಲ್ ಎಸ್ಟೇಟ್ ಸಿರಿವಂತ ಮಹಿಳಾ ಉದ್ಯಮಿ ಟ್ರೂಂಗ್ ಮೈ ಲಾನ್‌ಗೆ ನ್ಯಾಯಾಲಯ ಗುರುವಾರ ಮರಣ ದಂಡನೆ ವಿಧಿಸಿ ಆದೇಶ ಹೊರಡಿಸಿದೆ. ಬಹು ಶತಕೋಟಿ ಡಾಲರ್ ವಂಚನೆ ಪ್ರಕರಣದಲ್ಲಿ ಮಹಿಳಾ ಉದ್ಯಮಿ ಟ್ರೂಂಗ್ ನ್ನು ಅಪರಾಧಿ ಎಂದು ಸಾಬೀತಾಗಿದ್ದು ಹೋ ಚಿ ಮಿನ್ಹ್ ನಗರದ ಕೋರ್ಟ್ ಶಿಕ್ಷೆ ವಿಧಿಸಿದೆ. ಅಲ್ಲದೇ ಈ ಪ್ರಕರಣ ವಿಯೆಟ್ನಾಂ ದೇಶದ ಅತಿದೊಡ್ಡ ವಂಚನೆ ಪ್ರಕರಣ ಎಂದು ಹೇಳಲಾಗಿದೆ.
ವಾನ್ ಥಿನ್ ಫಾಟ್ ಹೋಲ್ಡಿಂಗ್ಸ್ ಗ್ರೂಪ್ ಎಂಬ ರಿಯಲ್ ಎಸ್ಟೇಟ್ ಕಂಪನಿ ನಡೆಸುತ್ತಿದ್ದ 67 ವರ್ಷದ ಉದ್ಯಮಿ ಟ್ರೂಂಗ್ ಅವರು 2022ರಲ್ಲಿ ಬಂಧಿತರಾಗಿದ್ದರು. ತಮ್ಮ ನಿಯಂತ್ರಣದಲ್ಲಿ ಬ್ಯಾಂಕ್ "ಸೈಗಾನ್ ಜಾಯಿಂಟ್ ಸ್ಟಾಕ್ ಕಮರ್ಷಿಯಲ್ ಬ್ಯಾಂಕ್ " ನಲ್ಲಿ ವಂಚನೆ ಎಸಗಿದ್ದಾರೆ ಎಂಬ ಆರೋಪ ಇವರ ಮೇಲಿತ್ತು. ಈ ಹಿನ್ನಲೆ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹದಲ್ಲಿ ಬಂಧಿಸಲ್ಪಟ್ಟ ನಂತರ ತನಿಖಾಧಿಕಾರಿಗಳು $ 12.5 ಶತಕೋಟಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ತನಿಖೆಯಲ್ಲಿ ತಿಳಿಸಿದ್ದರು .

2012ರಿಂದ 2022ರವರೆಗೂ ಲಾನ್ ಅವರು ಹಲವು ಬಿಲಿಯನ್ ಡಾಲರ್ ಹಣ ಪಡೆಯಲು ಸಾವಿರಾರು ಕಾಲ್ಪನಿಕ ಕಂಪನಿಗಳ ಮೂಲಕ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡುವ ಮೂಲಕ ಪ್ರಮುಖ ಬ್ಯಾಂಕ್‌ಗೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮಾತ್ರವಲ್ಲದೇ ಸೈಗಾನ್ ಜಾಯಿಂಟ್ ಸ್ಟಾಕ್ ಕಮರ್ಷಿಯಲ್ ಬ್ಯಾಂಕ್ (2012-2022) ನಿಯಂತ್ರಣದ ಮೂಲಕ ಬ್ಯಾಂಕಿಂಗ್ ನಿಯಮಗಳ ಉಲ್ಲಂಘನೆ ಮಾಡಿರುವ ಆರೋಪವೂ ಇವರ ವಿರುದ್ದ ಕೇಳಿಬಂದಿದೆ.
ಮೈ ಲ್ಯಾನ್ ವಾನ್ ಥಿನ್ ಫಾಟ್ ಹೋಲ್ಡಿಂಗ್ಸ್ ಗ್ರೂಪ್ ಎಂಬ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದ ಈಕೆ ರಿಯಲ್ ಎಸ್ಟೇಟ್ ಸಾಮ್ರಾಜ್ಯದ ರಾಣಿ ಎನಿಸಿಕೊಂಡಿದ್ದಳು. ಇವರು ವಿಯೆಟ್ನಾಂನ 2022 GDP ಯ ಸುಮಾರು 3% ಅಂದರೆ ದಿಗ್ಭ್ರಮೆಗೊಳಿಸುವ ಮೊತ್ತವಾದ $12.5 ಶತಕೋಟಿಯ ದುರುಪಯೋಗಪಡಿಸಿಕೊಂಡಿದ್ದರು. ಈ ಆರೋಪ ಈಗ ಸಾಬೀತಾಗಿದ್ದು ನ್ಯಾಯಾಲಯ ಈಕೆಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಲ್ಯಾನ್‌ನ ಪತಿ ಎರಿಕ್ ಚು ಒಂಬತ್ತು ವರ್ಷಗಳ ಜೈಲು ಶಿಕ್ಷೆಗೆ ಮತ್ತು ಅವಳ ಸೋದರ ಸೊಸೆಗೆ 17 ವರ್ಷಗಳ ಶಿಕ್ಷೆಯನ್ನು ವಿಧಿಸಲಾಯಿಗಿದೆ.
ಈಕೆಯ ಮೇಲೆ ಕೇಳಿಬಂದ ಆರೋಪಗಳಿಗೆ ಒಟ್ಟು ಆರು ಟನ್ ತೂಕದ 104 ಬಾಕ್ಸ್ ಗಳಲ್ಲಿ ಸಾಕ್ಷ್ಯಾಧಾರಗಳಿದ್ದವು. ಎಂಭತ್ತೈದು ಆರೋಪಿಗಳನ್ನು ಟ್ರೂಂಗ್ ಮೈ ಲ್ಯಾನ್‌ನೊಂದಿಗೆ ವಿಚಾರಣೆ ನಡೆಸಲಾಗಿತ್ತು, ಆದರೆ ಈಕೆ ಆರೋಪಗಳನ್ನು ನಿರಾಕರಿಸಿದ್ದು ತಾನು "ನಿರಪರಾಧಿ" ಎಂದು ಲ್ಯಾನ್ ಮನವಿ ಮಾಡಿದ್ದಾರೆ.
ಲ್ಯಾನ್ ತನ್ನ ವೃತ್ತಿಜೀವನವನ್ನು ಹೋ ಚಿ ಮಿನ್ಹ್ ಸಿಟಿಯ ಸೆಂಟ್ರಲ್ ಮಾರುಕಟ್ಟೆಯಲ್ಲಿ ತನ್ನ ತಾಯಿಗೆ ಸಹಾಯ ಮಾಡುವ ಕಾಸ್ಮೆಟಿಕ್ಸ್ ವ್ಯಾಪಾರಿಯಾಗಿ ಆರಂಭಿಸಿದ್ದು, 1992 ರಲ್ಲಿ ಶ್ರೀಮಂತ ಹಾಂಗ್‌ಕಾಂಗ್ ಉದ್ಯಮಿ ಎರಿಕ್ ಚು ಮದುವೆಯಾದರು. ಮದುವೆಯಾದ ಅದೇ ವರ್ಷ, ಲ್ಯಾನ್ ರಿಯಲ್ ಎಸ್ಟೇಟ್ ಕಂಪನಿ ವ್ಯಾನ್ ಥಿನ್ಹ್ ಫಾಟ್ ಅನ್ನು ಸ್ಥಾಪಿಸಿದರು. ವಿಯೆಟ್ನಾಂ ನ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಇವರ ಸಂಸ್ಥೆ ಐಶಾರಾಮಿ ವಸತಿ ಕಟ್ಟಡಗಳು, ಕಚೇರಿಗಳು ಶಾಪಿಂಗ್ ಮಾಲ್‌ಗಳು ಹಾಗೂ ಹೋಟೆಲ್‌ಗಳನ್ನು ನಿರ್ಮಿಸುತ್ತದೆ.
ವ್ಯಾನ್ ಥಿನ್ ಫಾಟ್ ಮೇಲೆ ಪರಿಣಾಮ: ಲ್ಯಾನ್ ಕಂಪನಿ ವ್ಯಾನ್ ಥಿನ್ ಫಾಟ್ ನ ಭವಿಷ್ಯ ಅಸ್ಪಷ್ಟವಾಗಿಯೇ ಉಳಿದಿದೆ. ವಿಯೆಟ್ನಾಂ ಸರ್ಕಾರವು ಹೂಡಿಕೆದಾರರನ್ನು ರಕ್ಷಿಸಲು ಮತ್ತು ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಕಂಪನಿಯನ್ನು ಪುನರ್ರಚಿಸಲು ಅಥವಾ ರಾಷ್ಟ್ರೀಕರಣಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಬಹುದು.


Click it and Unblock the Notifications