ಬೆಂಗಳೂರಿನ ಪಕ್ಕದಲ್ಲೇ ಇರುವ ತುಮಕೂರಿನ ಬೆಳವಣಿಗೆ ನಿಜಕ್ಕೂ ಕಣ್ಣು ಕುಕ್ಕುವಂತಿದೆ. ಏಕೆಂದರೆ ಬೆಂಗಳೂರು ನಂತರ ತುಮಕೂರಿಗೆ ಮೆಟ್ರೋ ಸಂಚಾರ ಆಗಬಹುದೆಂಬ ಸುದ್ದಿ ಹರಿದಾಡಿತು. ಇದರ ಬೆನ್ನಲ್ಲೇ ಈಗ ಹಲವಾರು ಐಟಿ ಮತ್ತು ಐಟಿಇಎಸ್ ಸಂಸ್ಥೆಗಳು ತುಮಕೂರಿಗೆ ಸ್ಥಳಾಂತರಗೊಳ್ಳುವ ಅಥವಾ ಶಾಖೆಗಳನ್ನು ಆರಂಭಿಸುವ ಸಾಧ್ಯತೆಗಳತ್ತ ತಿರುಗಿವೆ.

ಇನ್ನು ಈಗಾಗ್ಲೇ ಬೆಂಗಳೂರಿನಲ್ಲಿ ಭೂಮಿ ಬೆಲೆ ಕೇಳೋ ಹಾಗಿಲ್ಲ. ಸಂಚಾರದ ಸಮಸ್ಯೆಯಂತೂ ಹೇಳೋಕಾಗಲ್ಲ. ಬಾಡಿಗೆ ವೆಚ್ಚಗಳನ್ನು ಭರಿಸುವಷ್ಟರದಲ್ಲಿ ಬದುಕೇ ಮುಗಿದಂತೆ ಅನಿಸುತ್ತೆ. ಹೀಗಾಗಿ ಬೆಂಗಳೂರು ಓವರ್ ಫ್ಲೋ ಆದಂತೆ ಕಾಣುತ್ತಿದೆ. ಸ್ಥಳವಿಲ್ಲ, ದಟ್ಟಣೆ ಜಾಸ್ತಿ, ಇದೆಲ್ಲವನ್ನು ಗಮನಿಸುತ್ತಿರುವ ಐಟಿ ವಲಯ, ತುಮಕೂರಿನತ್ತ ತಿರುಗಿ ನೋಡುವ ಸಾಧ್ಯತೆ ಹೆಚ್ಚಾಗಿದೆ.
ತುಮಕೂರು-ಬೆಂಗಳೂರಿಗೆ ದಿನಂಪ್ರತಿ ಪ್ರಯಾಣ:
ಇನ್ನು ತುಮಕೂರು ಜಿಲ್ಲಾಡಳಿತ ಈಗ ಬೆಂಗಳೂರಿಗೆ ಪ್ರತಿದಿನ ಪ್ರಯಾಣ ಮಾಡುತ್ತಿರುವ, ಐಟಿ ವೃತ್ತಿಪರರ ವಿವರಗಳನ್ನು ಸಂಗ್ರಹಿಸುವ ಕಾರ್ಯ ಆರಂಭಿಸಿದೆ. ಸಾಮಾಜಿಕ ಮಾಧ್ಯಮದ ಮೂಲಕ ಜಿಲ್ಲೆಯ ಡಿಸಿಯವರು ಒಂದು ಡೇಟಾ ಶೀಟ್ ಬಿಡುಗಡೆ ಮಾಡಿ, ಉದ್ಯೋಗಸ್ಥರಿಂದ ತಮ್ಮ ಕಂಪನಿಗಳ ಹೆಸರು ಮತ್ತು ದುಡಿಮೆಯ ಪ್ರಯಾಣದ ಪ್ರಮಾಣವನ್ನು ಹಂಚಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಇನ್ನು ಈ ಒಂದು ಅಭಿಯಾನಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಕೇವಲ ಒಂದೆರಡು ದಿನಗಳಲ್ಲಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಕೆಲಸ ಮಾಡುವ, 150ಕ್ಕೂ ಹೆಚ್ಚು ಕಂಪನಿಗಳ ತಂತ್ರಜ್ಞರಿಂದ ಜಿಲ್ಲಾಡಳಿತಕ್ಕೆ ಮಾಹಿತಿ ಲಭಿಸಿದೆ. ಈ ಮಾಹಿತಿಯನ್ನು ನಾವು ಐಟಿ ಇಲಾಖೆಯ ನಿರ್ದೇಶಕರಾದ ರಾಹುಲ್ ಎಸ್.ಎಸ್. ಅವರೊಂದಿಗೆ ಹಂಚಿಕೊಂಡಿದ್ದೇವೆ. ಅದರ ಜೊತೆಗೆ ಈ ಕಂಪನಿಗಳನ್ನು ನೇರವಾಗಿ ಸಂಪರ್ಕಿಸಲು ಇಮೇಲ್ ಮೂಲಕ ಚಟುವಟಿಕೆಗಳು ನಡೆಯುತ್ತಿವೆ, ಎಂದು ಉಪ ಆಯುಕ್ತ ಶುಭ ಕಲ್ಯಾಣ್ ತಿಳಿಸಿದ್ದಾರೆ
ಐಟಿ ಕೇಂದ್ರವನ್ನಾಗಿ ರೂಪುಗೊಳ್ಳುತ್ತಿರುವ ತುಮಕೂರು:
ಇನ್ನು ಡೇಟಾ ಸಂಗ್ರಹಣೆಯ ಹಿಂದೆ ಕಂಪನಿಗಳ ಕಂಪನಿಯ ಕಾರ್ಯಾಚರಣೆಯ ಅಗತ್ಯತೆಗಳು ಮತ್ತು ಮೂಲಸೌಕರ್ಯ ಹೊಂದಾಣಿಕೆ ಮಾಡಬೇಕೆಂಬ ಉದ್ದೇಶವಿದೆ ಎಂಬುದನ್ನು ಡಿಸಿ ತಿಳಿಸಿದ್ದಾರೆ. ತುಮಕೂರಿನಿಂದ ಪ್ರತಿದಿನ ಕನಿಷ್ಠ 5,000 ತಂತ್ರಜ್ಞರು ಬೆಂಗಳೂರಿಗೆ ಪ್ಯಾಸೆಂಜರ್ ಆಗಿ ಪ್ರಯಾಣಿಸುತ್ತಿದ್ದಾರೆ ಎಂಬ ಅಂದಾಜಿದೆ. ಈ ಸಂಖ್ಯೆಯನ್ನು ದೃಢಪಡಿಸಲು ಹಾಗೂ ಕಂಪನಿಗಳನ್ನು ಪ್ರೇರೇಪಿಸಲು ಅಧಿಕಾರಿಗಳು ಮುಕ್ತ ಸಭೆಗಳನ್ನು ಏರ್ಪಡಿಸುತ್ತಿದ್ದಾರೆ.
ಕೈಗಾರಿಕಾ ವಿಸ್ತರಣೆಗೂ ದಾರಿ ತೆರೆದಿದೆ:
ತುಮಕೂರಿನಲ್ಲಿ ಈಗಾಗಲೇ ಐಟಿ ಕಂಪನಿಗಳಿಗೆ ಅನುಕೂಲವಾಗುವಂತೆ ಹಲವು ಮೂಲಸೌಕರ್ಯಗಳು ಸಿದ್ಧವಾಗಿವೆ. ಐಟಿ ಕಾರ್ಯದರ್ಶಿ ಏಕರೂಪ್ ಕೌರ್ ಹಾಗೂ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್‌ನ ಸಿಇಒ ಸಂಜೀವ್ ಗುಪ್ತಾ ಅವರು ಸಹ ನಗರಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ಮಾಡಿದ್ದಾರೆ, ಎಂದು ಡಿಸಿ ತಿಳಿಸಿದರು.
ತಂತ್ರಜ್ಞರು ಮತ್ತು ಕಂಪನಿಗಳ ಅನುಕೂಲಕ್ಕಾಗಿ:
ತಂತ್ರಜ್ಞರು ಮತ್ತು ಐಟಿ ಕಂಪನಿಗಳಿಗೆ ಅನುಕೂಲವಾಗುವಂತೆ, ತುಮಕೂರು ನಗರವು ತಂತ್ರಜ್ಞಾನ ಹೈಬ್ರಿಡ್ ಕಾರ್ಯಪಟುಗಳಿಗೆ ಬೇಕಾದ ಪ್ರಮುಖ ಮೂಲಸೌಕರ್ಯಗಳನ್ನು ತಯಾರಿಸುತ್ತಿದೆ. ಮೊದಲನೆಯದಾಗಿ, ನಗರದಲ್ಲಿ ಹಲವು ಪ್ಲಗ್-ಅಂಡ್-ಪ್ಲೇ ಕಚೇರಿ ಸ್ಥಳಗಳು ಈಗಾಗಲೇ ಸಿದ್ಧವಾಗಿದ್ದು, ಕಂಪನಿಗಳು ತಕ್ಷಣ ಕಾರ್ಯಾರಂಭ ಮಾಡಲು ಅನುಕೂಲವಾಗುತ್ತದೆ. ಇವುಗಳಲ್ಲಿ ಬೇಕಾದಷ್ಟು ವಿದ್ಯುತ್, ಉನ್ನತ ವೇಗದ ಇಂಟರ್ನೆಟ್, ಸಭಾಂಗಣಗಳು, ಮತ್ತು ಇತರ ಆಧುನಿಕ ಸೌಲಭ್ಯಗಳಿವೆ.
ಕಂಪನಿಗಳಿಗೆ ತುಮಕೂರು ಏಕೆ ಲಾಭದಾಯಕ?
ಶುಭಾ ಕಲ್ಯಾಣ್ ಅವರು ನೀಡಿದ ಮಾಹಿತಿಯ ಪ್ರಕಾರ, ಕಂಪನಿಗಳಿಗೆ ತುಮಕೂರಿನಲ್ಲಿ ಕಾರ್ಯಾರಂಭ ಮಾಡುವ ಮೂಲಕ ಪ್ರತಿ ತಿಂಗಳ ಬಾಡಿಗೆ, ಸಾರಿಗೆ ವೆಚ್ಚಗಳು ಮತ್ತು ಕಾರ್ಯಾಚರಣೆಯ ವೆಚ್ಚ ಮೇಲೆ ಉಳಿತಾಯ ಸಾಧ್ಯವಿದೆ. ಇದೇ ವೇಳೆ, ಉದ್ಯೋಗಿಗಳ ಬದುಕಿನ ಗುಣಮಟ್ಟವೂ ಉತ್ತಮವಾಗಬಹುದು. ಹೆಚ್ಚು ಕಾಲ ರಸ್ತೆ ಮೇಲೆ ಕಳೆಯಬೇಕಿಲ್ಲ, ಹೆಚ್ಚು ಖರ್ಚು ಮಾಡಬೇಕಿಲ್ಲ.
ಬೆಂಗಳೂರು ದಟ್ಟಣೆಯಿಂದ ಬೇಸತ್ತು ಹೋಗಿರುವ ಐಟಿ ಕಂಪನಿಗಳು ಮತ್ತು ಉದ್ಯೋಗಿಗಳು ಈಗ ನವೀಕರಿಸಿದ ಆಯ್ಕೆಯತ್ತ ದೃಷ್ಟಿ ಹರಿಸುತ್ತಿದ್ದಾರೆ. ಮೂಲಸೌಕರ್ಯ, ಇನ್‌ಫ್ರಾ ಮತ್ತು ಸರ್ಕಾರದ ಪ್ರೋತ್ಸಾಹ - ಈ ಎಲ್ಲಾ ಅಂಶಗಳು ತುಮಕೂರನ್ನು ಮುಂದಿನ ತಂತ್ರಜ್ಞಾನ ಹಬ್ ಆಗಿ ರೂಪಿಸುವ ಕನಸನ್ನು ಆಧಾರಯುತವನ್ನಾಗಿ ಮಾಡುತ್ತಿವೆ.


Click it and Unblock the Notifications