ಬೆಂಗಳೂರಿಗೆ ಬಲು ಹತ್ತಿರವಾಗಿರುವ ತುಮಕೂರಿನ ಅಭಿವೃದ್ಧಿ ದಿನದಿಂದ ದಿನಕ್ಕೆ ಗಮನ ಸೆಳೆಯುತ್ತಿದೆ. ಹೆದ್ದಾರಿಗಳು, ರೈಲ್ವೆ ಯೋಜನೆಗಳಿಂದ ತುಮಕೂರು ಮುಂದೊಂದು ದಿನ ದೊಡ್ಡ ಮಟ್ಟದ ಬೆಳವಣಿಗೆ ಕಾಣಲಿದೆ ಎಂದರೆ ತಪ್ಪಾಗಲ್ಲ. ಇತ್ತೀಚೆಗೆ ಕೇಂದ್ರ ರೈಲ್ವೆ ಇಲಾಖೆ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ನಡುವೆ ಹೊಸ ರೈಲು ಮಾರ್ಗವನ್ನು ಘೋಷಿಸಿತ್ತು. ಅಂದರೆ ತುಮಕೂರು ಹಾಗೂ ಆಂಧ್ರಪ್ರದೇಶದ ರಾಯದುರ್ಗವರೆಗೆ ಈ ರೈಲು ಮಾರ್ಗ. ಈಗ ಸಿಕ್ಕಿರುವ ಹೊಸ ಸುದ್ದಿ ಏನೆಂದರೆ, ಈಗ ಯೋಜನೆಯ ನಿರ್ಮಾಣ ಕಾರ್ಯ ಶುರುವಾಗಿದೆ.

ಹೌದು, ನೃಋತ್ಯ ರೈಲ್ವೆ ಅಧಿಕೃತ ಮಾಹಿತಿ ಪ್ರಕಾರ, ತುಮಕೂರಿನಿಂದ ರಾಯದುರ್ಗ ವರೆಗೆ ಒಟ್ಟು 206.53 ಕಿಲೋ ಮೀಟರ್ ಉದ್ದದ ಹೊಸ ರೈಲು ಮಾರ್ಗವನ್ನು ನಿರ್ಮಿಸಲಾಗುತ್ತಿದೆ. ಹಾಗೂ ಈ ಮಾರ್ಗ ಕಲ್ಯಾಣದುರ್ಗ ಮೂಲಕ ಸಾಗಲಿದೆ. ಇದರಿಂದ ಹಳ್ಳಿಗಳ ಸಂಪರ್ಕವೂ ಸುಧಾರಣೆಯಾಗುತ್ತದೆ ಹಾಗೂ ರಾಜ್ಯಗಳ ನಡುವೆ ಸುಗಮ ಸಂಚಾರಕ್ಕೂ ದಾರಿ ಸಿಕ್ಕಂತಾಗುತ್ತದೆ.
ಇನ್ನು ಈಗಾಗಲೇ 206.53 ಕಿಲೋ ಮೀಟರ್ ಮಾರ್ಗದಲ್ಲಿ 83 ಕಿಲೋ ಮೀಟರ್ ಭಾಗ ಪೂರ್ಣಗೊಂಡಿದೆ. ಹೀಗಾಗಿ ಈಗ ರೈಲುಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬಾಕಿ ಭಾಗದ ಕಾಮಗಾರಿ ಮುಂದುವರಿಯುತ್ತಿದ್ದು, ಪೂರ್ಣಗೊಂಡ ನಂತರ ಹೆಚ್ಚಿನ ರೈಲುಗಳನ್ನು ಸುಲಭವಾಗಿ ಓಡಿಸಲು ಅವಕಾಶ ಸಿಗಲಿದೆ.
ಪ್ರಯಾಣಿಕರಿಗೆ ಅನುಕೂಲ:
ಇನ್ನು ಈ ಹೊಸ ಮಾರ್ಗಕ್ಕೂ ಹಳೆಯ ಮಾರ್ಗಕ್ಕೂ ಏನು ವ್ಯತ್ಯಾಸ ಎಂದು ಕೇಳಬಹುದು. ಹಳೆಯ ಮಾರ್ಗಕ್ಕೆ ಹೋಲಿಸಿದರೆ, ಸುಮಾರು ಈ ಹೊಸ ಮಾರ್ಗದಲ್ಲಿ 140 ಕಿಲೋ ಮೀಟರ್ ಕಡಿಮೆ ದೂರವಾಗಿದೆ. ಇದರಿಂದ ಪ್ರಯಾಣಿಕರು ಕಡಿಮೆ ಸಮಯದಲ್ಲಿ ಗಮ್ಯಸ್ಥಾನಕ್ಕೆ ತಲುಪುತ್ತಾರೆ. ಹಳೆಯ ಮಾರ್ಗದಲ್ಲಿ ಹೋಲಿಕೆ ಮಾಡಿದರೆ ಪ್ರಯಾಣದ ವೆಚ್ಚವೂ ಕಡಿಮೆಯಾಗುತ್ತದೆ. ಈ ಮಾರ್ಗದಿಂದ ರೈಲು ಪ್ರಯಾಣ ವೇಗ ಹೆಚ್ಚುತ್ತಿದ್ದು, ಸರಕು ಸಾಗಣೆಗೂ ಸಹ ಅನುಕೂಲವಾಗಲಿದೆ.
ಸುತ್ತಮುತ್ತಲಿನ ಅಭಿವೃದ್ಧಿಗೆ ನೆರವು:
ಆಗಲೇ ಹೇಳಿದಂತೆ ತುಮಕೂರಿಗೆ ಬರುತ್ತಿರುವ ಯೋಜನೆಗಳು ಸ್ಥಳೀಯ ಅಭಿವೃದ್ಧಿಯನ್ನು ಕೂಡ ಹೆಚ್ಚಿಸುತ್ತವೆ. ಅಂದರೆ ಆಂಧ್ರಕ್ಕೆ ಸಂಪರ್ಕಿಸುವ ತುಮಕೂರು-ಕಲ್ಯಾಣದುರ್ಗ-ರಾಯದುರ್ಗ ಮಾರ್ಗವು ಗ್ರಾಮೀಣ ಪ್ರದೇಶಗಳ ಸಂಪರ್ಕವನ್ನು ಸುಧಾರಿಸುತ್ತದೆ. ಇದರಿಂದ ಹಳ್ಳಿಗಳ ವ್ಯಾಪಾರ, ಉದ್ಯೋಗಾವಕಾಶಗಳು ಹೆಚ್ಚುವಾಗುತ್ತವೆ. ಈ ಮಾರ್ಗದ ಪ್ರಯೋಜನದಿಂದ ಸ್ಥಳೀಯ ಹಣ್ಣು, ತರಕಾರಿ, ಉತ್ಪನ್ನಗಳ ಸಾಗಣೆ ಸುಗಮವಾಗಿ ನಡೆಯಲಿದೆ. ಹಳ್ಳಿಗಳು ಹೆಚ್ಚಿನ ಆರ್ಥಿಕ ಚೇತರಿಕೆಯನ್ನು ಕಾಣುತ್ತವೆ ಮತ್ತು ಗ್ರಾಮೀಣ ಭಾಗಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ವೇಗವು ಹೆಚ್ಚುತ್ತದೆ.
ಮೂಲ ಸೌಕರ್ಯಗಳ ನಿರ್ಮಾಣ:
ಇನ್ನು ಈ ಮಾರ್ಗದಲ್ಲಿ ರೈಲು ಮಾರ್ಗ ಕಾರ್ಯಾರಂಭ ಆಗುತ್ತಿರೋದ್ರಿಂದ ಹೊಸ ನಿಲ್ದಾಣಗಳು, ರಸ್ತೆ ಸೇತುವೆಗಳು, ನದಿ ಮೇಲಿನ ಸ್ಟೀಲ್ ಬ್ರಿಡ್ಜ್, ವಿದ್ಯುತ್ ಸಂಪರ್ಕ ವ್ಯವಸ್ಥೆ, ಸ್ಕೈವಾಕ್ ಮೊದಲಾದ ಮೂಲಸೌಕರ್ಯಗಳ ನಿರ್ಮಾಣ ಈಗಾಗಲೇ ಪ್ರಾರಂಭವಾಗಿದೆ. ಉಳಿದ ಮಾರ್ಗದಲ್ಲಿಯೂ ಇದೇ ರೀತಿಯ ಮೂಲಸೌಕರ್ಯಗಳ ನಿರ್ಮಾಣ ಹಗಲು-ರಾತ್ರಿ ನಡೆಯುತ್ತಿದೆ. ಇದರಿಂದ ಭದ್ರತೆ, ಸುಗಮ ಸಂಚಾರ ಮತ್ತು ಭವಿಷ್ಯದ ಹೆಚ್ಚು ರೈಲು ಸೇವೆಗಳಿಗೆ ಸಿದ್ಧತೆ ಉಂಟಾಗುತ್ತದೆ.
ಅಂದಹಾಗೆ ಈ ಹೊಸ ಮಾರ್ಗವು ಎರಡು ರಾಜ್ಯಗಳ ಮಧ್ಯೆ ಸಂಚಾರ ಮಾಡುವುದರಿಂದ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ಪ್ರೇರಣೆ ನೀಡುತ್ತದೆ. ಪ್ರಯಾಣಿಕರ ಸಮಯ ಉಳಿತಾಯ, ಸರಕು ಸಾಗಣೆ ವೇಗ, ಸ್ಥಳೀಯ ವ್ಯಾಪಾರ ವೃದ್ಧಿ, ಉದ್ಯೋಗಾವಕಾಶಗಳ ಸೃಷ್ಟಿ ಇವೆಲ್ಲಾ ನೇರ ಪ್ರಯೋಜನವಾಗಿದೆ. 2027ರೊಳಗೆ ಬಾಕಿ ಕಾಮಗಾರಿಗಳು ಪೂರ್ಣಗೊಂಡ ನಂತರ, ಈ ಮಾರ್ಗವು ಹೆಚ್ಚಿನ ಪ್ರಯಾಣಿಕರು ಮತ್ತು ಸರಕು ಸಾಗಣೆಗಾಗಿ ಪ್ರಮುಖ ಮಾರ್ಗವಾಗಲಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications