ಭಾರತೀಯ ರೈಲ್ವೇ (Indian Railways) ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ಸದಾ ಏನಾದರೊಂದು ಕಾರ್ಯಗಳನ್ನು ಕೈಗೊಳ್ಳುತ್ತಲೇ ಇರುತ್ತದೆ. ಅದರಲ್ಲೂ ಹೆಚ್ಚುವರಿ ರೈಲು, ವಿಶೇಷ ರೈಲು ಸೇವೆಗಳು ಕೆಲವು ಪ್ರದೇಶಗಳಿಗೆ ಬಹುಮುಖ್ಯವಾಗಿರುತ್ತದೆ. ಇದೀಗ ದಕ್ಷಿಣ ಪಶ್ಚಿಮ ರೈಲ್ವೇ (South Western Railway) ಅಧಿಕೃತ ಮಾಹಿತಿಯ ಪ್ರಕಾರ, ತುಮಕೂರು-ರಾಯದುರ್ಗ ಹೊಸ ರೈಲು ಮಾರ್ಗದ ಭಾಗವಾದ ತುಮಕೂರು-ಉರುಕೆರೆ ವಿಭಾಗದಲ್ಲಿ ಈಗಾಗಲೇ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿದೆ. ಈ ಪರಿಣಾಮ ಭಾನುವಾರ (ಮಾರ್ಚ್ 15) ಮತ್ತು ಸೋಮವಾರ (ಮಾರ್ಚ್ 16) ರಂದು ಹಲವು ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.

ಹೌದು, ರೈಲ್ವೇ ಇಲಾಖೆ ಕೈಗೊಂಡಿರುವ ನಿರ್ವಹಣಾ ಕಾರ್ಯದಿಂದ ಇದೀಗ ಸಂಚಾರದಲ್ಲಿ ವ್ಯತ್ಯಯವಾಗಲಿದ್ದು, ಹಲವು ರೈಲು ಸಂಚಾರಕ್ಕೆ ಬ್ರೇಕ್ ಬೀಳಲಿದೆ. ಈ ನಿರ್ವಹಣಾ ಕಾರ್ಯವು ತುಮಕೂರು-ರಾಯದುರ್ಗ ಹೊಸ ಲೈನ್ ಪ್ರಾಜೆಕ್ಟ್‌ನ ಭಾಗವಾಗಿದ್ದು, ಟ್ರ್ಯಾಕ್‌ಗಳು, ಸಿಗ್ನಲಿಂಗ್ ಮತ್ತು ಇತರ ಮೂಲಸೌಕರ್ಯ ಸುಧಾರಣೆಗಾಗಿ ಕೈಗೊಳ್ಳಲಾಗಿದೆ. ಆದ್ದರಿಂದ ಈ ಮಾರ್ಗದಲ್ಲಿ ಸಂಚಾರ ಮಾಡುವ ಹಲವು ರೈಲುಗಳ ಸಂಪೂರ್ಣವಾಗಿ ರದ್ದಾಗಲಿದೆ.
ಭಾನುವಾರ (ಮಾರ್ಚ್ 15) ರದ್ದಾಗಲಿರುವ ರೈಲುಗಳ ವಿವರ:
- ರೈಲು ಸಂಖ್ಯೆ 56202: ಮೈಸೂರು ಮತ್ತು ಚಾಮರಾಜನಗರ ನಡುವಿನ ಪ್ಯಾಸೆಂಜರ್ ಸರ್ವೀಸ್ ರೈಲು.
- ರೈಲು ಸಂಖ್ಯೆ 56281: ಚಾಮರಾಜನಗರ ಮತ್ತು ತುಮಕೂರು ನಡುವಿನ ಪ್ಯಾಸೆಂಜರ್ ಸರ್ವೀಸ್ ರೈಲು
- ರೈಲು ಸಂಖ್ಯೆ 16567: ತುಮಕೂರು ಮತ್ತು ಶಿವಮೊಗ್ಗ ನಡುವಿನ ಟೌನ್ ಎಕ್ಸ್‌ಪ್ರೆಸ್ ರೈಲು
- ರೈಲು ಸಂಖ್ಯೆ 66569: ಯಶವಂತಪುರದಿಂದ ತುಮಕೂರು ನಡುವಿನ ಮೆಮು ಸರ್ವೀಸ್ ರೈಲು.
ಸೋಮವಾರ (ಮಾರ್ಚ್ 16) ರದ್ದಾಗಲಿರುವ ರೈಲುಗಳು:
- ರೈಲು ಸಂಖ್ಯೆ 66570: ತುಮಕೂರು ಮತ್ತು ಯಶವಂತಪುರ ನಡುವಿನ ಮೆಮು ಸರ್ವೀಸ್ ರೈಲು.
- ರೈಲು ಸಂಖ್ಯೆ 66573: ಯಶವಂತಪುರ ಮತ್ತು ತುಮಕೂರು ನಡುವಿನ ಮೆಮು ರೈಲು
- ರೈಲು ಸಂಖ್ಯೆ 16568: ಶಿವಮೊಗ್ಗ ಟೌನ್ ಮತ್ತು ತುಮಕೂರು ಎಕ್ಸ್‌ಪ್ರೆಸ್.
ಎರಡೂ ದಿನಗಳಲ್ಲಿ ರದ್ದಾಗಲಿರುವ ರೈಲಿನ ವಿವರ:
ಕೆಲವು ರೈಲುಗಳು ಒಂದೇ ದಿನ ಮಾತ್ರ ರದ್ದಾಗಲಿದ್ದು, ಇನ್ನೂ ಕೆಲವು ರೈಲುಗಳು ಎರಡು ದಿನವೂ ಸಂಚಾರ ನಿಲ್ಲಿಸಲಿದೆ. ಆ ಪ್ರಕಾರ ರೈಲು ಸಂಖ್ಯೆ 56282, ತುಮಕೂರು ಮತ್ತು ಚಾಮರಾಜನಗರ ನಡುವಿನ ಪ್ಯಾಸೆಂಜರ್ ಸರ್ವೀಸ್ ರೈಲು ರದ್ದಾಗಲಿದೆ ಎಂದು ವರದಿಯಾಗಿದೆ.
ಪ್ರಯಾಣಿಕರಿಗೆ ರೈಲ್ವೇ ಇಲಾಖೆ ಸಲಹೆ:
ಇನ್ನು ಪ್ರಯಾಣಿಕರು ತಮ್ನ ರೈಲು ಎಲ್ಲಿದೆ? ಕ್ಯಾನ್ಸಲ್ ಆಗಿದೆಯಾ? ಇಲ್ವಾ? ಎಂದು ಭಾರತೀಯ ರೈಲ್ವೇಯ ಅಧಿಕೃತ ವೆಬ್‌ಸೈಟ್ irctc.co.in ನಲ್ಲಿ ನೋಡಬಹುದು. ಅಲ್ಲದೇ ಪರ್ಯಾಯ ಮಾರ್ಗಗಳ ಬಗ್ಗೆ ಮೊದಲೇ ಮಾಹಿತಿ ಪಡೆದುಕೊಂಡರೆ ಒಳ್ಳೆಯದು. ಅಲ್ಲದೇ ಈ ರೈಲುಗಳನ್ನು ನೀವು ಬುಕ್ ಮಾಡಿದ್ದು, ಕ್ಯಾನ್ಸಲ್ ಆಗಿದ್ದರೆ, ನೀವು ಟಿಕೆಟ್ ರಿಫಂಡ್‌ಗಾಗಿ ರೈಲ್ವೇ ನಿಯಮಗಳ ಅಡಿಯಲ್ಲಿ ರಿಫಂಡ್‌ಗೆ ಅರ್ಜಿ ಸಲ್ಲಿಸಬಹುದು. ಸದ್ಯ ಕಾಮಗಾರಿ ಹಿನ್ನೆಲೆ ಕೆಲವು ರೈಲುಗಳ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಆದ್ರೆ ನಿರ್ವಹಣಾ ಕಾರ್ಯ ಸಂಪೂರ್ಣವಾದ ಬಳಿಕ ಎಂದಿನಂತೆ ರೈಲು ಸೇವೆ ಆರಂಭವಾಗಲಿದೆ ಎಂದು ಹೇಳಲಾಗಿದೆ.


Click it and Unblock the Notifications