ದೇಶದ ಪ್ರಮುಖ ರಿಯಲ್ ಎಸ್ಟೇಟ್ ಡೆವಲಪರ್ ಆಗಿರುವ ಎಮರಾಲ್ಡ್ ಹೆವೆನ್ ರಿಯಾಲ್ಟಿ ಲಿಮಿಟೆಡ್ (ಟಿವಿಎಸ್ ಎಮರಾಲ್ಡ್) ಇತ್ತೀಚಿನ ಬೆಳವಣಿಗೆಯಲ್ಲಿ ಬೆಂಗಳೂರು ಮತ್ತು ಚೆನ್ನೈನಲ್ಲಿ ಮಹತ್ವದ ಭೂಸ್ವಾಧೀನ ಪ್ರಕ್ರಿಯೆಗಳನ್ನು ಮಾಡಿದೆ. ಎರಡೂ ನಗರಗಳಲ್ಲಿ ಒಟ್ಟು 900 ಕೋಟಿ ರೂಪಾಯಿ ಬೆಲೆ ಬಾಳುವ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ.
ಉತ್ತರ ಬೆಂಗಳೂರಿನ ಧಣಿಸಂದ್ರದಲ್ಲಿ 4 ಎಕರೆ ಲ್ಯಾಂಡ್ ಪಾರ್ಸೆಲ್ ಅನ್ನು ಸ್ವಾಧೀನಪಡಿಸಿಕೊಂಡಿದೆ. 500,000 ಚದರ ಅಡಿ ಭೂಮಿಯನ್ನು ₹600 ಕೋಟಿ ಬುಕಿಂಗ್ ಮೌಲ್ಯದ ಜೊತೆ ಸ್ವಾಧೀನಪಡಿಸಿಕೊಂಡಿದೆ. ಚೆನ್ನೈನ ಪಾದೂರ್‌ನಲ್ಲಿ 4 ಎಕರೆ ಜಮೀನನ್ನು ₹300 ಕೋಟಿ ಬುಕಿಂಗ್ ಮೌಲ್ಯದ ಸಾಮರ್ಥ್ಯದೊಂದಿಗೆ ಖರೀದಿ ಮಾಡಿದೆ.

ದಕ್ಷಿಣ ಭಾರತದ ಎರಡು ಪ್ರಮುಖ ನಗರಗಳಲ್ಲಿ ಟಿವಿಎಸ್ ಎಮರಾಲ್ಡ್ ತನ್ನ ಅಸ್ತಿತ್ವವನ್ನು ಮತ್ತಷ್ಟು ವಿಸ್ತರಣೆ ಮಾಡಿದೆ. ಎರಡೂ ನಗರಗಳಲ್ಲಿ ವಸತಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಹೊಂದಿದ್ದು, ಈ ಎರಡೂ ಯೋಜನೆಗಳಿಂದ ದೊಡ್ಡ ಮಟ್ಟದ ಲಾಭದ ನಿರೀಕ್ಷೆಯಲ್ಲಿದೆ.
ಬೆಂಗಳೂರಿನ ಥಣಿಸಂದ್ರ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದ್ದು, ಹೊರ ವರ್ತುಲ ರಸ್ತೆಗೆ ಹೊಂದಿಕೊಂಡಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೂಡ ಹತ್ತಿರದಲ್ಲೇ ಇರುವ ಕಾರಣ, ವಸತಿ ಖರೀದಿ ಮಾಡುವವರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ.
ಚೆನ್ನೈನ ಪಾದೂರ್‌ನಲ್ಲಿ ಕೂಡ 4 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದು ಪ್ರೀಮಿಯಂ ವಸತಿ ಸಮುಚ್ಛಯಗಳನ್ನು ನಿರ್ಮಾಣ ಮಾಡುವ ಯೋಜನೆ ರೂಪಿಸಿದೆ. ಪಾದೂರ್ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿರುವ ಕಾರಣ, ಐಷಾರಾಮಿ ಮನೆಗಳಿಗೆ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ.
ಸ್ವಾಧೀನದ ಬಗ್ಗೆ ಸಿಇಒ ಹೇಳಿದ್ದೇನು?
ಎರಡು ನಗರಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಿವಿಎಸ್ ಎಮರಾಲ್ಡ್‌ನ ನಿರ್ದೇಶಕ ಮತ್ತು ಸಿಇಒ ಶ್ರೀರಾಮ್ ಅಯ್ಯರ್, "ಉತ್ತರ ಬೆಂಗಳೂರಿನಲ್ಲಿ ಇದು ನಮ್ಮ ಎರಡನೇ ಯೋಜನೆಯಾಗಿದ್ದು, ವೇಗವಾಗಿ ಅಭಿವೃದ್ಧಿ ಹೊಂದಿತ್ತಿರುವ ಕಾರಣ ನಮ್ಮ ಯೋಜನೆ ಲಾಭದಾಯಕವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚೆನ್ನೈನ ಪಾದೂರಿನಲ್ಲಿ ವಸತಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಅದನ್ನು ಪೂರೈಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ದಿನೇ ದಿನೇ ಆಸ್ತಿ ಮೌಲ್ಯಗಳು ಗಗನಕ್ಕೇರುತ್ತಿದ್ದು, ಹೊಸ ಹೊಸ ವಸತಿ ಯೋಜನೆಗಳು ನಗರಕ್ಕೆ ಬರುತ್ತಲೇ ಇವೆ. ರಿಯಲ್ ಎಸ್ಟೇಟ್ ಹೂಡಿಕೆದಾರರಿಗೆ ಬೆಂಗಳೂರು ಯಾವಾಗಲೂ ಮೊದಲ ಆಯ್ಕೆಯಾಗಿಯೇ ಇರುತ್ತದೆ. ಐಷಾರಾಮಿ ಮನೆಗಳು, ವಿಲ್ಲಾ, ಪ್ಲಾಟ್‌ಗಳಿಗೆ ನಗರದಲ್ಲಿ ಎಂದಿಗೂ ಬೇಡಿಕೆ ಇದ್ದೇ ಇರುತ್ತದೆ. ದೇಶದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಗಳು ಕೂಡ ಇಂತಹ ಖರೀದಿದಾರರನ್ನು ಗುರಿಯಾಗಿಸಿಕೊಂಡೇ ಯೋಜನೆಗಳನ್ನು ರೂಪಿಸುತ್ತವೆ.
ಲ್ಯಾಂಡ್ ಪಾರ್ಸೆಲ್ ಎಂದರೇನು?
ಲ್ಯಾಂಡ್ ಪಾರ್ಸೆಲ್ ಎನ್ನುವುದು ಪ್ರಮುಖವಾಗಿ ರಿಯಲ್ ಎಸ್ಟೇಟ್‌ನಲ್ಲಿ ಕೇಳಿ ಬರುತ್ತದೆ. ನಿರ್ದಿಷ್ಟ ಮಾಲೀಕತ್ವವನ್ನು ಹೊಂದಿರುವ ಭೂಮಿಯನ್ನು ಮತ್ತೊಬ್ಬರು ಅಭಿವೃದ್ಧಿ ಪಡೆಸಲು ಒಪ್ಪಂದ ಮಾಡಿಕೊಳ್ಳುವುದನ್ನು ಲ್ಯಾಂಡಡ್ ಪಾರ್ಸೆಲ್ ಎಂದು ವ್ಯಾಖ್ಯಾನಿಸಬಹುದು. ಇದರಲ್ಲಿ ಭೂಮಾಲೀಕರು ಮತ್ತು ಡೆವಲಪರ್ ಗಳ ನಡುವೆ ಲಾಭದ ಹಂಚಿಕೆ ಬಗ್ಗೆ ಒಪ್ಪಂದವಾಗಿರುತ್ತದೆ.


Click it and Unblock the Notifications