ಟ್ವಿಟ್ಟರ್‌ನ ಕಚೇರಿಗಳು ತಾತ್ಕಾಲಿಕವಾಗಿ ಬಂದ್; ಉಳಿದಿರುವ ಸಿಬ್ಬಂದಿ ಎಷ್ಟು?

ಕ್ಯಾಲಿಫೋರ್ನಿಯಾ, ನ. 18: ಎಲಾನ್ ಮಸ್ಕ್ ನೇತೃತ್ವದಲ್ಲಿ ಟ್ವಿಟ್ಟರ್ ಕಂಪನಿ ಇನ್ನಿಲ್ಲದ ರೀತಿಯಲ್ಲಿ ಅಲುಗಾಡುತ್ತಿದೆ. ಬಿರುಗಾಳಿಯಂತೆ ಬಂದು ಟ್ವಿಟ್ಟರ್ ಅನ್ನು ಆವರಿಸಿದ ಮಸ್ಕ್ ಅವರು ಹಲವಾರು ಬದಲಾವಣೆಗಳನ್ನು ಮಾಡಹೊರಟಿದ್ದಾರೆ. ಟ್ವಿಟ್ಟರ್‌ನೊಳಗೆ ನಡೆದ ಹಲವು ಅಚ್ಚರಿಯ ಘಟನೆಗಳು ಮಾಧ್ಯಮಗಳಲ್ಲಿ ಜೋರು ಸುದ್ದಿಯಾದವು. ಬಾತ್‌ರೂಮ್ ಸಿಂಕ್ ಹಿಡಿದುಕೊಂಡು ಮಸ್ಕ್ ಟ್ವಿಟ್ಟರ್ ಕಚೇರಿಯಲ್ಲಿ ಸುತ್ತಾಡಿದ್ದು, ಟ್ವಿಟ್ಟರ್‌ನ ಟಾಪ್ ಎಕ್ಸಿಕ್ಯೂಟಿವ್‌ಗಳು ನಿರ್ಗಮನವಾಗಿದ್ದು, ಟ್ವಿಟ್ಟರ್ ಉದ್ಯೋಗಿಗಳು ಕೆಲಸ ಮಾಡಿ ಮಾಡಿ ಸುಸ್ತಾಗಿ ಕಚೇರಿಯಲ್ಲೇ ಮಲಗಿದ್ದು, ಇವೆಲ್ಲವೂ ಸುದ್ದಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದವು. ಇದೀಗ ಟ್ವಿಟ್ಟರ್‌ನ ಎಲ್ಲಾ ಕಚೇರಿಗಳು ತಾತ್ಕಾಲಿಕವಾಗಿ ಬಂದ್ ಅಗಿರುವುದು ತಿಳಿದುಬಂದಿದೆ. ವರದಿಗಳ ಪ್ರಕಾರ ನವೆಂಬರ್ 21ರವರೆಗೆ ಕಚೇರಿಗಳು ಬಾಗಿಲು ಮುಚ್ಚಿರುತ್ತವೆ.

ಇದೀಗ ಇಲಾನ್ ಮಸ್ಕ್ ಟ್ವಿಟ್ಟರ್‌ನಲ್ಲಿ ದಿನಕ್ಕೆ ಕನಿಷ್ಠ 12 ಗಂಟೆ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ನಿರ್ದೇಶನ ನೀಡಿದ್ಧಾರೆ. ಟ್ವಿಟ್ಟರ್‌ನಲ್ಲಿ ಹಾರ್ಡ್ ಕೋರ್ ಆಗಿ ಕೆಲಸ ಮಾಡುವುದಿದ್ದರೆ ಇರಿ ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗಿ ಎಂಬ ಎರಡು ಆಯ್ಕೆಯನ್ನು ಮಸ್ಕ್ ನೀಡಿ ನಿನ್ನೆ ಗುರುವಾರ 2 ಗಂಟೆಯವರೆಗೂ ಕಾಲಾವಕಾಶ ಕೊಟ್ಟಿದ್ದರೆನ್ನಲಾಗಿದೆ. ಏನು ನಿರ್ಧಾರವೆಂದು ಗೂಗಲ್ ಫಾರ್ಮ್‌ನಲ್ಲಿ ತಿಳಿಸುವಂತೆ ಸೂಚಿಸಲಾಗಿತ್ತು.

ಉದ್ಯೋಗಿಗಳ ಗುಡ್‌ಬೈ

ಉದ್ಯೋಗಿಗಳ ಗುಡ್‌ಬೈ

ಬಹಳ ಉದ್ಯೋಗಿಗಳು ಗೂಗಲ್ ಫಾರ್ಮ್‌ನಲ್ಲಿ ನಿರ್ಧಾರ ತಿಳಿಸುವ ಬದಲು ಟ್ವಿಟ್ಟರ್‌ನಲ್ಲೇ ಗುಡ್‌ಬೈ ಹೇಳಿ ಮೆಸೇಜ್ ಹಾಕಿ ಪೋಸ್ಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಟ್ವಿಟ್ಟರ್‌ನ ಕಚೇರಿಗಳು ಬಾಗಿಲು ಮುಚ್ಚಿವೆ.

"ಕೂಡಲೇ ಜಾರಿಯಾಗುವಂತೆ ನಮ್ಮ ಕಚೇರಿ ಕಟ್ಟಡಗಳನ್ನು ತಾತ್ಕಾಲಿಕವಾಗಿ ಮುಚ್ಚುತ್ತಿದ್ದೇವೆ. ಎಲ್ಲಾ ಬ್ಯಾಡ್ಜ್ ಅಕ್ಸೆಸ್ ಅನ್ನು ರದ್ದು ಮಾಡಲಾಗಿದೆ. ನವೆಂಬರ್ 21, ಸೋಮವಾರ ಕಚೇರಿಗಳು ಮತ್ತೆ ಬಾಗಿಲು ತೆರೆಯುತ್ತವೆ... ನಿಮ್ಮ ಹೊಂದಾಣಿಕೆಗೆ ನಮ್ಮ ಧನ್ಯವಾದ. ಕಂಪನಿಯ ಗೌಪ್ಯ ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲಾಗಲೀ, ಮಾಧ್ಯಮದಲ್ಲಾಗಲೀ ಅಥವಾ ಬೇರೆಲ್ಲಿಯಾಗಲೀ ಚರ್ಚಿಸದೆ ಕಂಪನಿಯ ನೀತಿಗೆ ಬದ್ಧತೆಯನ್ನು ಮುಂದುವವರಿಸಿರಿ.... ಟ್ವಿಟ್ಟರ್‌ನ ರೋಚಕ ಭವಿಷ್ಯಕ್ಕೆ ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ" ಎಂದು ಟ್ವಿಟ್ಟರ್‌ನ ಮ್ಯಾನೇಜ್ಮೆಂಟ್ ತನ್ನ ಉದ್ಯೋಗಿಗಳಿಗೆ ಮೆಸೇಜ್ ಕಳುಹಿಸಿದೆ.

 

ಸಹಿ ಹಾಕದವರಿಗೆ ಸಿವಿಯರೆನ್ಸ್ ಪ್ಯಾಕೇಜ್

ಸಹಿ ಹಾಕದವರಿಗೆ ಸಿವಿಯರೆನ್ಸ್ ಪ್ಯಾಕೇಜ್

ಕಂಪನಿಯಲ್ಲಿ ಇರಬೇಕೋ ಬೇಡವೋ ಎಂಬ ನಿರ್ಧಾರವನ್ನು ಪ್ರಕಟಿಸಲು ನವೆಂಬರ್ 17, ಅಂದರೆ ನಿನ್ನೆಯವರೆಗೂ ಕಾಲಾವಕಾಶ ಇತ್ತು. ಗೂಗಲ್ ಫಾರ್ಮ್‌ನಲ್ಲಿ ಸೈನಪ್ ಆಗದೇ ಹೋದವರು ರಾಜೀನಾಮೆ ಕೊಟ್ಟಂತೆಯೇ ಲೆಕ್ಕ. ಅಂಥವರಿಗೆ ಸಿವಿಯರೆನ್ಸ್ ಪ್ಯಾಕೇಜ್ ನೀಡಿ ಮನೆಗೆ ಕಳುಹಿಸಲಾಗುತ್ತದೆ. ಈ ಬೀಳ್ಕೊಡುಗೆ ಪ್ಯಾಕೇಜ್‌ನಲ್ಲಿ 3 ತಿಂಗಳ ವೇತನ ಕೊಡಲಾಗುತ್ತದೆ.

ಬಿಬಿಸಿ ವರದಿಯೊಂದನ್ನು ನಂಬುವುದಾದರೆ ಟ್ವಿಟ್ಟರ್‌ನಲ್ಲಿ ಸದ್ಯಕ್ಕೆ ಉಳಿಯಲಿರುವುದು 2 ಸಾವಿರ ಉದ್ಯೋಗಿಗಳು ಮಾತ್ರ. ಇಲಾನ್ ಮಸ್ಕ್ ಬರುವ ಮುನ್ನ ಟ್ವಿಟ್ಟರ್‌ನಲ್ಲಿ 7,500 ಉದ್ಯೋಗಿಗಳಿದ್ದರು. ಮಸ್ಕ್ ಬಂದಾಗಲೇ ಶೇ. 50ರಷ್ಟು ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾಗುತ್ತದೆ ಎಂಬ ಸುದ್ದಿ ಇತ್ತು. ಈಗ ಅದು ಬಹುತೇಕ ನಿಜವಾಗಿದೆ. ಶೇ. 70ರಷ್ಟು ಉದ್ಯೋಗಿಗಳು ಕೆಲಸ ಬಿಟ್ಟಿರುವಂತಿದೆ.

 

ಕಂಪನಿ ಕೂಡ ಹೆದರಿದೆಯಾ?

ಕಂಪನಿ ಕೂಡ ಹೆದರಿದೆಯಾ?

ಈಗ ಕಂಪನಿಯ ಹೊಸ ಮ್ಯಾನೇಜ್ಮೆಂಟ್‌ಗೆ ಯಾವ ಉದ್ಯೋಗಿಗಳ ಮೇಲೆ ನಂಬಿಕೆ ಹೋದಂತಿದೆ. ಯಾರಿಗೆ ಬ್ಯಾಡ್ಜ್ ಅಕ್ಸೆಸ್ ಕೊಟ್ಟರೆ ಏನು ಅನಾಹುತ ಆಗುತ್ತದೋ ಎಂದು ಎಲ್ಲರಿಗೂ ಬ್ಯಾಡ್ಜ್ ಅಕ್ಸೆಸ್ ರದ್ದು ಮಾಡಲಾಗಿದೆ. ಈಗ ಟ್ವಿಟ್ಟರ್‌ನಲ್ಲಿ ಕೆಲಸ ಮುಂದುವರಿಸಲು ನಿರ್ಧರಿಸುವ ಉದ್ಯೋಗಿಗಳ ಪೈಕಿ ಯಾರಿಗೆ ಬ್ಯಾಡ್ಜ್ ಅಕ್ಸೆಸ್ ಕೊಡಬೇಕೆಂದು ಸೋಮವಾರದ ಬಳಿಕ ನಿರ್ಧರಿಸುವ ಸಾಧ್ಯತೆ ಇದೆ.

ವರದಿಗಳ ಪ್ರಕಾರ, 2 ಸಾವಿರ ಮಂದಿ ಮಾತ್ರ ಕೆಲಸದಲ್ಲಿ ಮುಂದುವರಿಯಬಹುದು. ಟ್ವಿಟ್ಟರ್‌ನೊಳಗಿನ ವಿವಿಧ ತಂಡಗಳಲ್ಲಿ ಹೇಳುವವರು ಕೇಳುವವರು ಇಲ್ಲದಂತೇ ಆಗಿದೆ. ಟಾಪ್ ಎಕ್ಸಿಕ್ಯೂಟಿವ್‌ಗಳಿಲ್ಲ, ಟೀಮ್ ಲೀಡರ್‌ಗಳಿಲ್ಲ. ಎಲ್ಲರೂ ಕೆಲಸ ಬಿಟ್ಟಿದ್ದಾರೆ. ಉದ್ಯೋಗಿಗಳು ಮುಂದೇನು ಮಾಡಬೇಕೆಂಬುದು ಗೊತ್ತಾಗದ ಸ್ಥಿತಿಯಲ್ಲಿದ್ದಾರೆ. ದಿನಕ್ಕೆ 12 ಗಂಟೆಯಾದರೂ ಕೆಲಸ ಮಾಡಬೇಕೆಂದು ಮಸ್ಕ್ ತಾಕೀತು ಮಾಡಿರುವುದು ಹಲವರಿಗೆ ಕಿರಿಕಿರಿ ತಂದಿದೆ. ಬಹುತೇಕರು ಇದೇ ಕಾರಣಕ್ಕೆ ಕೆಲಸ ಬಿಡುವ ಹಾದಿಯಲ್ಲಿದ್ದಾರೆ.

ವಿಶ್ವದ ಅತಿ ದೊಡ್ಡ ಶ್ರೀಮಂತ ಎನಿಸಿರುವ ಎಲಾನ್ ಮಸ್ಕ್ ಕಳೆದ ತಿಂಗಳು 44 ಬಿಲಿಯನ್ ಡಾಲರ್ (3.5 ಲಕ್ಷ ಕೋಟಿ ರೂ) ಮೊತ್ತಕ್ಕೆ ಖರೀದಿ ಮಾಡಿದ್ದರು. ಅದಾದ ಬಳಿಕ ಸಿಇಒ ಪರಾಗ್ ಅಗರ್ವಾಲ್, ಲೀಗಲ್ ಮುಖ್ಯಸ್ಥೆ ವಿಜಯಾ ಗದ್ದೆ, ಸಿಟಿಒ ಮತ್ತಿತರ ಟಾಪ್ ಎಕ್ಸಿಕ್ಯೂಟಿವ್‌ಗಳನ್ನು ಮಸ್ಕ್ ಕೂಡಲೇ ಮನೆಗೆ ಕಳುಹಿಸಿದ್ದರು. ಇದೀಗ ಪಬ್ಲಿಕ್ ಲಿಸ್ಟ್‌ನಿಂದ ಹೊರಬಿದ್ದಿರುವ ಟ್ವಿಟ್ಟರ್ ಈಗ ಸಂಪೂರ್ಣ ಪ್ರೈವೇಟ್ ಕಂಪನಿಯಾಗಿ ಮಾರ್ಪಟ್ಟಿದೆ. ಇಡೀ ಆಡಳಿತ ಮಂಡಳಿಯೇ ವಜಾ ಆಗಿ ಮಸ್ಕ್ ಮಾತ್ರವೇ ಏಕಮಾತ್ರ ಸದಸ್ಯರಾಗಿದ್ದಾರೆ.

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+