ದೇಶದಲ್ಲಿ ಹೊಸದಾಗಿ ಹಲವಾರು ಆಪ್‌ಗಳು ಪರಿಚಯಿಸಲಾಗುತ್ತಿದೆ. ಹಾಗೆಯೇ ಈ ಆಪ್‌ಗಳು ಶೀಘ್ರವೇ ಜನಪ್ರಿಯತೆಯನ್ನು ಕೂಡಾ ಗಳಿಸುತ್ತಿದೆ. ಆದರೂ ಹಳೆಯ ಆಪ್‌ಗಳು ಮಾತ್ರ ಜನಪ್ರಿಯತೆಯನ್ನು ಕಳೆದುಕೊಂಡಿಲ್ಲ. ದೇಶದ ಪ್ರಮುಖ ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್ ಆದ ಟ್ವಿಟ್ಟರ್ ಶೀಘ್ರವೇ ಟೆಲಿವಿಜನ್ (ಟಿವಿಗಾಗಿ) ವಿಡಿಯೋ ಆಪ್ ಅನ್ನು ಆರಂಭ ಮಾಡುವ ಸಾಧ್ಯತೆಯಿದೆ.
ಈ ಬಗ್ಗೆ ಟ್ವಿಟ್ಟರ್‌ನ ಮಾಲಿಕ ಎಲಾನ್ ಮಸ್ಕ್ ಪ್ರತಿಕ್ರಿಯೆ ನೀಡಿದ್ದಾರೆ. ವೆಬ್‌ಸೈಟ್‌ನಲ್ಲಿ ಟ್ವಟ್ಟರ್‌ನ ಮಾಲಿಕ ಎಲಾನ್ ಮಸ್ಕ್ ಆಪ್ ಬರುತ್ತಿದೆ ಎಂದು ತಿಳಿಸಿದ್ದಾರೆ. ಟ್ವಿಟ್ಟರ್‌ನ ಹೊಸ ಸಿಇಒ ಲಿಂಡಾ ಯಾಕರಿನೊ ಮತ್ತು ಎಲಾನ್ ಮಸ್ಕ್ ಡಿಜಿಟಲ್ ಜಾಹೀರಾತನ್ನು ಮೀರಿ ಸಾಮಾಜಿಕ ಮಾಧ್ಯಮ ಕಂಪನಿಯ ಆರ್ಥಿಕತೆಯನ್ನು ವಿಸ್ತರಣೆ ಮಾಡುವ ನಿಟ್ಟಿನಲ್ಲಿ ವಿಡಿಯೋ ಆಪ್ ಅನ್ನು ಆರಂಭ ಮಾಡುವ ಬಗ್ಗೆ ವಿವರಿಸಿದ್ದಾರೆ, ಈ ಆಪ್ ಬಗ್ಗೆ ನೀವು ತಿಳಿದಿರಬೇಕಾದ 5 ಪ್ರಮುಖ ಅಂಶಗಳು ಇಲ್ಲಿದೆ ಮುಂದೆ ಓದಿ....

1. ಯೂಟ್ಯೂಬ್‌ಗೆ ಪ್ರತಿಸ್ಪರ್ಧೆ ನೀಡುವ ಆಪ್
ನೀವುಬ ಪ್ರಸ್ತುತ ಟಿವಿಯಲ್ಲಿಯೂ ವಿಡಿಯೋಗಳನ್ನು ವೀಕ್ಷಣೆ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಟಿವಿ ಸೆಟ್‌ಗಳಲ್ಲಿ ಡಿಜಿಟಲ್ ಆಗಿ ನೀವು ವಿಡಿಯೋ ವೀಕ್ಷಣೆ ಮಾಡಬಹುದಾಗಿದೆ. ನೀವು ಸ್ಮಾರ್ಟ್ ಟಿವಿಗಳಲ್ಲಿ ಯೂಟ್ಯೂಬ್ ವಿಡಿಯೋ ಆಪ್ಲಿಕೇಶನ್‌ಗೆ ಹೋಗಿ, ನೀವು ನೋಡಲು ಬಯಸುವ ವಿಡಿಯೋವನ್ನು ಹುಡುಕಿ ನೋಡಬಹುದಾಗಿದೆ. ಆದರೆ ಈಗ ಎಲಾನ್ ಮಸ್ಕ್‌ನ ಟ್ವಿಟ್ಟರ್ ಪ್ರಸ್ತುತ ಇದೇ ರೀತಿಯ ಆಪ್ ಅನ್ನು ಆರಂಭ ಮಾಡಲಿದೆ.
ಟ್ವಿಟ್ಟರ್ ಶೀಘ್ರದಲ್ಲೇ ಯೂಟ್ಯೂಬ್‌ನ ಪ್ರತಿಸ್ಪರ್ಧಿ ಅಪ್ಲಿಕೇಶನ್ ಅನ್ನು ಪ್ರಾರಂಭಿಸಬಹುದು. "ನಾವು ಸ್ಮಾರ್ಟ್ ಟಿವಿಗಾಗಿ ಟ್ವಿಟ್ಟರ್ ವಿಡಿಯೋ ಆಪ್‌ನ ಅಗತ್ಯವನ್ನು ಹೊಂದಿದ್ದೇವೆ. ಟ್ವಿಟ್ಟರ್‌ನಲ್ಲಿ ಗಂಟೆಗಳಷ್ಟು ಇರುವ ವಿಡಿಯೋವನ್ನು ನೋಡಲು ಸಾಧ್ಯವಾಗುವುದಿಲ್ಲ," ಎಂದು ನೆಟ್ಟಿಗರು ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಎಲಾನ್ ಮಸ್ಕ್ "ಇದು ಬರುತ್ತಿದೆ," ಎಂದು ಹೇಳಿದ್ದಾರೆ.
2. ಎಲಾನ್ ಮಸ್ಕ್ ಹೊಸ ಹೊಸ ತಂತ್ರಜ್ಞಾನ ಅಳವಡಿಸಲು ಸಜ್ಜು
ರಾಯಿಟರ್ಸ್ ಅನ್ನು ಉಲ್ಲೇಖಿಸಿದ ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಎಲಾನ್ ಮಸ್ಕ್ ಟ್ವಿಟ್ಟರ್‌ನಲ್ಲಿ ಹಲವಾರು ವಿಷಯಗಳನ್ನು ಬದಲಾವಣೆ ಮಾಡುತ್ತಿದ್ದಾರೆ. ಅವುಗಳಲ್ಲಿ ಒಂದು ಸಾಮಾಜಿಕ ಮಾಧ್ಯಮದ ವಿಡಿಯೋ ಆಗಿದೆ. ಹೀಗೆಯೇ ಹಲವಾರು ಅಂಶಗಳನ್ನು ಬದಲಾವಣೆ ಮಾಡಲು ಎಲಾನ್ ಮಸ್ಕ್ ನಿರ್ಧಾರ ಮಾಡಿದ್ದಾರೆ.
3. ಬ್ಲ್ಯೂ ವೆರಿಫಿಕೇಷನ್ ಹೊಂದಿರುವವರಿಗೆ ಟ್ವಿಟ್ಟರ್‌ನ 2 ಗಂಟೆಯ ವಿಡಿಯೋ ಅಪ್‌ಲೋಡ್ ಸೌಲಭ್ಯ
ಇನ್ನು ಹೆಚ್ಚುವರಿಯಾಗಿ ಟ್ವಿಟ್ಟರ್ ಹೊಸ ಅಪ್‌ಗ್ರೇಡ್ ಅನ್ನು ಪರಿಚಯಿಸಿದೆ. ಟ್ವಿಟ್ಟರ್ ವೆರಿಫೈ ಮಾಡಿದ ಬಳಕೆದಾರರಿಗೆ ಸುಮಾರು 2 ಗಂಟೆಗಳವರೆಗಿನ ಚಲನಚಿತ್ರವನ್ನು ಅಪ್‌ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ. ಮಸ್ಕ್ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. "ಟ್ವಿಟ್ಟರ್‌ನ ಬ್ಲ್ಯೂ ವೆರಿಫಿಕೇಷನ್ ಚಂದಾದಾರರು ಈಗ 2-ಗಂಟೆಗಳ ವಿಡಿಯೋವನ್ನು (8GB) ಅಪ್‌ಲೋಡ್ ಮಾಡಬಹುದು!," ಎಂದು ಎಲಾನ್ ಮಸ್ಕ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
4. ವಿಡಿಯೋ ಕಂಟೆಂಟ್ ಮೇಲೆ ಟ್ವಿಟ್ಟರ್‌ನ ಗಮನ
ಇನ್ನು ರಾಯಿಟರ್ಸ್ ಪ್ರಕಾರ ಟ್ವಿಟ್ಟರ್ ಈಗ ಪ್ರಾಥಮಿಕವಾಗಿ ಡಿಜಿಟಲ್ ಜಾಹೀರಾತನ್ನು ಮೀರಿ ಸಾಮಾಜಿಕ ಮಾಧ್ಯಮ ಕಂಪನಿಯ ವ್ಯವಹಾರವನ್ನು ಪುನಶ್ಚೇತನಗೊಳಿಸಲು ವಿಡಿಯೋವನ್ನು ಆರಂಭ ಮಾಡುವ ನಿರ್ಧಾರ ಮಾಡಿದೆ. ಹೂಡಿಕೆದಾರರ ಪ್ರಸ್ತುತಿಯಲ್ಲಿ ಸುದ್ದಿ ಸಂಸ್ಥೆಯು ಈ ಮಾಹಿತಿಯನ್ನು ಪಡೆದುಕೊಂಡಿದೆ.
5. 'ಟಕರ್ ಆನ್ ಟ್ವಿಟರ್' ಶೋ
ಮಾಜಿ ಫಾಕ್ಸ್ ನ್ಯೂಸ್ ಆಂಕರ್ ಟಕರ್ ಕಾರ್ಲ್ಸನ್ ಕಳೆದ ತಿಂಗಳು ನೆಟ್‌ವರ್ಕ್‌ನಲ್ಲಿ "ಟಕರ್ ಆನ್ ಟ್ವಿಟರ್" ಎಂಬ ಹೊಚ್ಚಹೊಸ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಕಾರ್ಲ್ಸನ್ ಮತ್ತು ಇತರ ವಿಷಯ ನಿರ್ಮಾಪಕರ ವಿಡಿಯೋಗಳೊಂದಿಗೆ ಪ್ರಾಯೋಜಕತ್ವಗಳು ಮತ್ತು ಜಾಹೀರಾತುಗಳನ್ನು ಒದಗಿಸಲು ಟ್ವಿಟ್ವರ್ ಉದ್ದೇಶಿಸಿದೆ.


Click it and Unblock the Notifications